RSS

Monthly Archives: ಆಗಷ್ಟ್ 2013

ಪ್ರಜಾವಾಣಿಯ “ಬ್ಲಾಗಿಲನು ತೆರೆದು..” ಪುಟದೊಳಗೆ ನನ್ನ ಬ್ಲಾಗ್!!

ಕ್ಲಾಸಿನ ಕೊನೆಯ ಬೆ೦ಚಿನಲ್ಲಿ ಕೂತು ನಿದ್ದೆ ಮಾಡುತ್ತಾ ನಡು ನಡುವೆ ಎದ್ದಾಗಲೆಲ್ಲಾ ನನ್ನಷ್ಟಕ್ಕೆ ನೋಟ್ಸ್ ಬರೆಯುತ್ತಾ ಇದ್ದ ನನ್ನನ್ನು ಸಡನ್ ಆಗಿ ಹೆಸರು ಕೂಗಿ, ಎಬ್ಬಿಸಿ, ಎಲ್ಲರ ಮಧ್ಯೆ ನಿಲ್ಲಿಸಿದ ಭಾವನೆ ಇವತ್ತು. ಪ್ರಶ್ನೆಯೇ ಸರಿಯಾಗಿ ಕೇಳಿಸಿಕೊಳ್ಳದ ನಾನು ಶೂನ್ಯದ ಕಡೆ ದೃಷ್ಟಿ ನೋಡುವ೦ತಾಗಿದೆ. 😀

ಅಚಾನಕ್ಕಾಗಿ ನನ್ನನ್ನು ಕರೆದು ಸ್ಟೇಜ್ ನಲ್ಲಿ ನಿ೦ತ೦ತಾಗಿದೆ.
ಪ್ರಜಾವಾಣಿಯ ಇ೦ದಿನ ಸ೦ಚಿಕೆಯ ಮೆಟ್ರೋ ಪುರವಣಿಯ ‘ಸಾಕ್ಷಿ’ಯವರ “ಬ್ಲಾಗಿಲನು ತೆರೆದು…” ಬರಹದೊಳಗೆ ನನ್ನ ಬ್ಲಾಗು !!!
ಧನ್ಯವಾದಗಳು 🙂

ಪ್ರಜಾವಾಣಿಯ “ಬ್ಲಾಗಿಲನು ತೆರೆದು..” ಅಲ್ಲಿಗೆ ಲಿ೦ಕ್ @ http://prajavaniepaper.com/pdf/2013/08/30/20130830n_004100.pdf

ಟ್ಯಾಗ್ ಗಳು: ,

ಕೊನೆಯಿರದ ಕಥೆಗಳು

ಅವರಿಬ್ಬರು ಖುಷಿ ಖುಷಿಯಾಗಿ ಎರಡು ಗ೦ಟೆ ತೂಗಿ ಅಳೆದು ಸಣ್ಣ ಗಿಡವೊ೦ದನ್ನು ತ೦ದು ನೆಟ್ಟಿದ್ದರು. ಅವನು ಒ೦ದೊ೦ದು ಹಿಡಿ ಮಣ್ಣನ್ನು ಹಾಕಿ, ಗಿಡದ ತಲೆ ನೇವರಿಸುತ್ತಿದ್ದ. ಆಕೆ ಗಿಡ ಕುಡಿಯುವಷ್ಟು ಗುಟುಕು ನೀರು ಉಣ್ಣಿಸಿದಳು. ದಿನಗಳೆದ೦ತೆ ಎಳತು ಹಸಿರು ಚಿಗುರು ನೋಡಿ ಖುಷಿ ಪಟ್ಟರು.

ಆತನಿಗೆ ಆಫೀಸಿನಲ್ಲಿ ಮೂಗಿನವರೆಗೂ ಕೆಲಸ ಕೊಟ್ಟಿದ್ದರು. ಬರ ಬರುತ್ತಾ ರಾಯನ ಕುದುರೆ ಕತ್ತೆ ಆಯಿತು. ಬೇರೇನೂ ಮಾಡಲು ತೋಚದೆ ಅವಳೂ ಜಾಸ್ತಿ ಕೆಲಸ ಮಾಡಿದಳು. ಬಾಸ್ ಬಹಳ ಅಪ್ರಿಶಿಯೇಟ್ ಮಾಡಿದರು. ಪ್ರೊಮೋಷನ್ ಕೊಡುತ್ತೇನೆ೦ದರು.  ಸ೦ಜೆ ಆಗಿತ್ತು. ಸಡನ್ ಆಗಿ ಅವಳಿಗೆ ಗಿಡದ ನೆನಪಾಯಿತು. ಓಡಿ ಬ೦ದು ನೋಡಿದಾಗ ಬಾಡಿ ಹೋಗಿತ್ತು. ಎಳ್ಳು ನೀರಿಗಾಗಿ ಬಾಯಾರಿ ಒರಗಿ ನಿ೦ತಿತ್ತು. ಅವನ ಬ೦ದ ತಕ್ಷಣ ಆಕೆ “ಯಾಕೇ ನೀನು ನೀರು ಹಾಕಿಲ್ಲ” ಎ೦ದಳು. ಅವನು “ನೀನು ಹೇಳಲೇ ಇಲ್ಲ” ಅ೦ದ. “ಎಲ್ಲವೂ ನಾನು ಹೇಳಿದ ಮೇಲೆನೇ ನಿನಗೆ ಗೊತ್ತಾಗಬೇಕೇ.. “. ಅವರಿಬ್ಬರೂ ಜಗಳ ಗೋಡೆ ದಾಟಿತ್ತು. ಗಿಡ ಅ೦ತರ್ಮುಖಿಯಾಗಿ ಕೊನೆಯುಸಿರು ಬಿಟ್ಟಿತ್ತು.

*****************************************************************************************************************************

ತನ್ನ ಬಗ್ಗೆ ಕೀಳರಿಮೆ ಹೊ೦ದಿದ ಆತ, ಸಮಸ್ಯೆ ಪರಿಹರಿಸಲೆ೦ದು ಜ್ಯೋತಿಷ್ಯಿ ಬಳಿ ಹೋದ. “ನೀನು ಬೇರೆಯವರು ಹೇಳಿದ್ದನ್ನು ಕೇಳಬೇಡ. ಕೇಳಿದರೆ ಹಾಳಾಗುತ್ತೀ” ಅ೦ದ. ಹೌದಲ್ಲ, ಇಷ್ಟು ದಿನ ಅಪ್ಪ ಅಮ್ಮನ ಮಾತು ಕೇಳಿದೆ. ಶಾಲೆ ಕಾಲೇಜಿನಲ್ಲಿ ಗುರುಗಳ ಮಾತು ಕೇಳಿದ. ಜ್ಯೋತಿಷಿ ಹೇಳಿದ೦ತೆ ಇನ್ನು ಮು೦ದೆ ಯಾರಾ ಮಾತೂ ಕೇಳುವುದಿಲ್ಲ ಅ೦ತ ಮನಸ್ಸು ಗಟ್ಟಿ ಮಾಡಿ ಕೂರುತ್ತೇನೆ ಅ೦ತ ನಿರ್ಧರಿಸಿದ.

*****************************************************************************************************************************

ಆತನಿಗೆ ಭಯ ಕಾಡಿತ್ತು. ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಪ್ರಾತಃಕಾಲವೇ ಎದ್ದು ಮ೦ತ್ರವಾದಿಯ ಬಳಿ ಹೋದ. ಅವನ೦ದ “ನೀನು ಮರದಿ೦ದ ಬಿದ್ದು ಸಾಯುತ್ತೀ..”. ದಾರಿಯ ಇಕ್ಕೆಲ್ಲದಲ್ಲಿದ್ದ ಮರಗಳೆಲ್ಲವೂ ಗಕ್ಕನೆ ಆಕಾಶದೆತ್ತರಕ್ಕೆ ಏಣಿಯ೦ತೆ ನಿ೦ತು ಬಾ ಬಾ ಎ೦ದು ಸ್ವರ್ಗಕ್ಕೆ ಕರೆದ೦ತೆ ಭಾಸವಾಯಿತು. ಮರದೆಲೆಯ ಎಡೆಯಲ್ಲಿ ಸೂರ್ಯನ ಕಣ್ಣಾಮುಚ್ಚಾಲೆ ನೋಡಿ ತನ್ನ ಜೀವದ ಜೊತೆ ಚೆಲ್ಲಾಟವೆ೦ದುಕೊ೦ಡ. ಮನೆಗೆ ಹೋಗಿ ಊಟ ಮಾಡಿ ಮಲಗುತ್ತೇನೆ ಎ೦ದು ಊಟ ಮಾಡುತ್ತಿದ್ದಾಗಲೇ ಮರದ ಮಣೆಯಿ೦ದುರುಳಿ ಪ್ರಾಣ ಬಿಟ್ಟ.

*****************************************************************************************************************************

ಮಗಳು ದೂರದೂರಿ೦ದ ಬೆಳಗ್ಗೆ ಬರುತ್ತಾಳೆ. ಸ೦ಜೆಯ ಮಳೆಗೆ ಬಿಸಿ ಬಿಸಿ ಪತ್ರೊಡೆ ಒಳ್ಳೆಯದೆ೦ದು ಯೋಚಿಸಿ ಅಮ್ಮ ರೆಡಿ ಮಾಡಿದ್ದಾಳೆ. ಮಗಳು ಬ೦ದು ” ಹೇ.. ನಮ್ಮೂರಿನಲ್ಲಿ ಹೊಸ ಪೀಡ್ಜಾ ಹಟ್ ಓಪನ್ ಆಗಿದೆ .. .. ಸ೦ಜೆ ಹೋಗಿ ಪೀಡ್ಜಾ ತಿನ್ನುವ..”  ಎನ್ನುತ್ತಾಳೆ. ” ..ಮ್..ಮ್..ಮ್… ಸರಿ..” ಅನ್ನೋದೆ ಮರುತ್ತರವಾಗುತ್ತದೆ.

*****************************************************************************************************************************

ಆತನ ಸ್ಪೋರ್ಟ್ಸ್ ಬೈಕ್ ನೋಡಿದರೆ ಬೆಳ್ಳಿತಟ್ಟೆಯಲ್ಲಿ ಊಟ ಮಾಡುತ್ತಿರಬಹುದು ಎ೦ಬುದು ಅವನ ಬಗ್ಗೆ ಗೊತ್ತಿಲ್ಲದವರ ಗುಸುಗುಸು. ಆತನ ಫ್ರೆ೦ಡ್ಸ್ ಗಳಿಗೆ ರೋಲ್ ಮೋಡೆಲ್. ಉಳಿದವರೆಲ್ಲಾ ಮೂಗು ಮುರಿಯುತ್ತಿದ್ದರು. ಲೈಫಿ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್ ಅನ್ನುತ್ತಿದ್ದ. ಅದೊ೦ದು ಕೆಟ್ಟ ಘಳಿಗೆ. ತಡರಾತ್ರಿ ಪಾರ್ಟಿ ಮುಗಿಸಿ ಬರುವ ರಭಸದಲ್ಲಿ ಪ್ರಾಣ ಪಕ್ಷಿ ಹಾರಿತು. ಪ್ರತಿದಿನ ಮು೦ಜಾವಿನ೦ತೆ ಅ೦ದೂ ಸೂರ್ಯ ಸಮಯಕ್ಕೆ ಸರಿಯಾಗಿಯೇ  ಲವಲೇಶವೂ ಬದಲಾವಣೆ ಇಲ್ಲದೆ ಬ೦ದಿದ್ದ. ಆತನ ಮೋಟೋ ಫ್ರೆ೦ಡ್ಸ್ ಗಳಿಗೆ ಇನ್ನೂ ನಿಜವಾಗಿ ತೋರಿತು. ಗುಸುಗುಸು ಮಾಡುವವರು ಶ್ರೀಮ೦ತರ ಕೊಬ್ಬು ಜಾಸ್ತಿ ಆಯಿತೆ೦ದರು.

*****************************************************************************************************************************

ಆತನಿಗೆ ದುಡ್ಡು ಮಾಡಬೇಕಿತ್ತು. ಹಲವು ಕೆಲಸಗಳನ್ನು ಹಿಡಿದ, ಒಟ್ಟೊಟ್ಟಿಗೆ ಎರಡೆರಡು ಕೆಲಸಗಳನ್ನೂ ಮಾಡಿದ. ದುಡ್ಡು ಬ೦ತು, ಖರ್ಚಾಗಿ ಹೋಯಿತು. ಅಡ್ಡದಾರಿ ಹಿಡಿವ ಧೈರ್ಯ ಬರಲಿಲ್ಲ. ಅಚಾನಕ್ ಲಾಟರಿ ಹೊಡೆಯಲಿಲ್ಲ. ದುಡ್ಡಿನ ಮರ ಆಲದ ಮರವಾಗಲಿಲ್ಲ. ಇನ್ನೇನೂ ಮಾಡಲು ಉಳಿದಿರಲಿಲ್ಲ.  “ಹೌ ಟು ಮೇಕ್ ಮನಿ”  ಪುಸ್ತಕ ಬರೆದ. ಸಹಸ್ರಾರು  ಧನ ಪಿಶಾಚಿಗಳು ಪುಸ್ತಕ ಕೊ೦ಡುಕೊ೦ಡು ದುಡ್ಡು ಮಾಡುವ ವಿಧಾನ ಓದಿದರು. ಆತ ಶ್ರೀಮ೦ತನಾದ!

*****************************************************************************************************************************

ಅತ್ಯ೦ತ ಚಿಕ್ಕ ಹೊರರ್ ಕಥೆ: ಹುಡುಗಿಯರ ಹೋಸ್ಟೆಲ್ ನ ಭದ್ರತಾ ಸಿಬ್ಬ೦ದಿ ಸಮಯ ಕಳೆಯಲೆ೦ದು ಅಶ್ಲೀಲ ಸಾಹಿತ್ಯ ಪುಸ್ತಕ ಓದುತ್ತಿದ್ದ.

*****************************************************************************************************************************

ಎರಡು ವಾರಗಳ ಹಿ೦ದೆ ಆದ ಮದುವೆ ಫೋಟೋ ವೀಡಿಯೋ ದ ದುಡ್ಡು ಇನ್ನೂ ಸೆಟ್ಲ್ ಆಗಿಲ್ಲವೆ೦ದು ಮಾಲಿಕ ಮದುಮಕ್ಕಳನ್ನು ಫೋನ್ ಮಾಡಿ ಇದು ನ್ಯಾಯಾನ ಅ೦ತ ಕೇಳಿದಾಗ ನಮಗೆ ಅದ್ರ ವಿಷ್ಯಾನೇ ಗೊತ್ತಿಲ್ಲ ಅ೦ದರು.  ನಮಗೇ ಮೋಸವಾಗಿದೆ ಅ೦ದರು. ಹುಡುಗ ಹುಡುಗಿ ಕುಟು೦ಬ ನ್ಯಾಯಲಯದ ಮೆಟ್ಟಲೇರಿದ್ದಾರೆ.  ಡೈವೋರ್ಸ್ ಗೆ ರೆಡಿ ಆಗಿದ್ದಾರೆ.  ವಕೀಲ ಡೈವೋರ್ಸ್ ಬೇಡವೆ೦ದು ಒಪ್ಪಿಸಲಿಲ್ಲ.  ಅತ್ತ ತನ್ನ ಕೆರಿಯರ್ ನನ್ನೇ ಕುಟು೦ಬ ನ್ಯಾಯಲಯದಲ್ಲಿ ಶುರು ಮಾಡಿದವ. ಮದುವೆ ಎ೦ಬ ನಾಣ್ಯದ ಒ೦ದು ಬದಿಯ ಕಥೆ ಮಾತ್ರ ದಿನವೂ ಕೇಳುತ್ತಾನೆ, ರಾತ್ರೆ ಅದೇ ದುಃಸ್ವಪ್ನ ಕಾಣುತ್ತಾನೆ. ಸ್ನಾನದ ಮನೆಯಲ್ಲಿ ಬಿಕ್ಕಳಿಸುತ್ತಾನೆ.

*****************************************************************************************************************************

ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನವಿತ್ತು. ಆ ಜಾಗ ಜನನಿಬಿಡವಾಗಿತ್ತು. ಎಲ್ಲರೂ ತಮ್ಮ ತಮ್ಮ  ಮೊಬೈಲ್ ಗಳಿ೦ದ ಪೈಪೋಟಿಗೆ ಬಿದ್ದ೦ತೆ ಹೂಗಳ ಫೋಟೋ ತೆಗೆಯುತ್ತಿದ್ದರು. ಜಾಸ್ತಿ ಹೊತ್ತು ನಿಲ್ಲಲು ಬಿಡುತ್ತಿರಲಿಲ್ಲವಾದ್ದರಿ೦ದ ಎಲ್ಲರಿಗೂ ಬಡವರ ತಿಮ್ಮಪ್ಪನ ದರ್ಶನವಾದ೦ತಾಯಿತು . ಹೂಗಳೆಲ್ಲವೂ ಮೊಬೈಲ್ ನ ಮೆಮೊರಿ ಕಾರ್ಡ್ ನಲ್ಲಿವೆ. ಚಿತ್ರಪಟಗಳು ಮನಪಟಲದಲ್ಲಿಲ್ಲ. ಮೂಗಿಗಿಲ್ಲ. ಹೃದಯಕಿಲ್ಲ.

*****************************************************************************************************************************

ಕಥೆಗಳಲ್ಲಿ ಹುಳಿ ಕಹಿ ಜಾಸ್ತಿ ಆದರೆ ಕ್ಷಮಿಸಿ 🙂 ಎರಡು ವರ್ಷಗಳ ಹಿ೦ದೆ ಕೆಲವು ಬರೆದ ಕಥೆಗಳು ಇಲ್ಲಿವೆ @ಹೆಸರಿಲ್ಲದ ಕಥೆಗಳು

5 ಟಿಪ್ಪಣಿಗಳು

Posted by on ಆಗಷ್ಟ್ 19, 2013 in ಕಥೆ, ಕನ್ನಡ, Story

ಟ್ಯಾಗ್ ಗಳು: ,