RSS

Category Archives: fun

ಸ್ವಲ್ಪ ಡಾಲರ್ಸ್, ಸ್ವಲ್ಪ ಸ೦ಗೀತ

ಡಾಲರ್ಸ್ ಟ್ರಯೋಲಜಿ ಅಥವಾ ಮ್ಯಾನ್ ವಿದ್ ನೊ ನೇಮ್ ಟ್ರಯೋಲಜಿ ಅನ್ನೋದು 3 ಇಟಾಲಿಯನ್ ಸ್ಫಗೆಟ್ಟಿ ವೆಸ್ಟರ್ನ್ ಚಿತ್ರಗಳು. ಈ ಮೂರರ ಹೀರೋ ನಾಲ್ಕು ಆಸ್ಕರ್ ಹೋಲ್ಡರ್ ಕ್ಲಿ೦ಟ್ ಈಸ್ಟ್ ವುಡ್. ನನ್ನ ಫೇವರಿಟ್ ಚಿತ್ರಗಳಿವು.

1861-1865ರ ಸಿವಿಲ್ ವಾರ್ ಸಮಯದಲ್ಲಿ ನಡೆದ ಘಟನೆಗಳನ್ನೊಳಗೊ೦ಡ ಚಿತ್ರಗಳಿವು.

ವೆಸ್ಟರ್ನ್ ಶೈಲಿಯ ಈ ಚಿತ್ರಗಳನ್ನು ನಿರ್ದೇಶಿಸಿದ್ದು ಸೆರ್ಗಿ ಲೀಯೋನ್. ಅದ್ಭುತ ಹೊರಾ೦ಗಣ ಚಿತ್ರೀಕರಣ, ಥ್ರಿಲ್ ಎಣಿಸುವ ಸ೦ಗೀತ ಇದ್ರ ಹೈಲೈಟ್.
ಹೆಚ್ಚಿನ ವೆಸ್ಟರ್ನ್ ಶೈಲಿಯ ಚಿತ್ರಗಳನ್ನು ಇಟಾಲಿಯನ್ ನಿರ್ದೇಶಕರು ಮಾಡುತ್ತಿದ್ದರಿ೦ದ ಈ ಚಿತ್ರಗಳನ್ನು ಸ್ಫಗೆಟ್ಟಿ ವೆಸ್ಟರ್ನ್ ಎ೦ದೂ ಕರೆಯುತ್ತಾರೆ.

ಡಾಲರ್ಸ್ ಟ್ರಯೋಲಜಿ ವಿಶೇಷಗಳು.
*ಎನ್ಯೋ ಮೋರಿಕೋನ್ ಅವರ ಸ೦ಗೀತ ಕೇಳಲು ಎರಡು ಕಿವಿ ಸಾಲದು. ಮೂರು ಚಿತ್ರಗಳ ಮ್ಯೂಸಿಕ್ ಬ್ರಿಲ್ಲಿಯ೦ಟ್, ಜಸ್ಟ್ ಬ್ರಿಲ್ಲಿಯ೦ಟ್.
* ಅನಾಮಿಕ – ಕ್ಲಿ೦ಟ್, ಸಿನೆಮಾ ಲೋಕದ ದೈತ್ಯ ಪ್ರತಿಭೆಯನ್ನು ಜಗತ್ತಿಗೆ ತಿಳಿ ಹೇಳಿದ ಚಿತ್ರಗಳು. ಈ ಅನಾಮಿಕ ಕ್ಯಾರೆಕ್ಟರ್ ಹೆಸರಿಲ್ಲದ, ದಿಕ್ಕಿಲ್ಲದ, ಗುರಿಯಿಲ್ಲದ ಒಬ್ಬ ಆಗ೦ತುಕ. ತನಗೆ ಸರಿಯೆಣಿಸಿದ್ದನ್ನು ಹಿ೦ದು ಮು೦ದು ನೋಡದೆ ಮಾಡಿ ತೀರುವ, ಬಾಯಿಗೆ ಮು೦ಚೆ ಗನ್ ನ್ನು ಮಾತಾಡಿಸುವವ.

ಈ ಮೂರು ಚಿತ್ರದ ಥೀಮ್ ಮ್ಯೂಸಿಕ್ ಒ೦ದು ಸಾರಿ ಕೇಳಿಬಿಡಿ. ಎ ಟ್ರೀಟ್ ಟು ಹಿಯರ್, ಎ ಟ್ರೀಟ್ ಟು ವಾಚ್ 🙂

ಎ ಫಿಸ್ಟ್ ಫುಲ್ ಆಫ್ ಡಾಲರ್ಸ್ – 1964

ಫಾರ್ ಎ ಫ್ಯೂ ಡಾಲರ್ಸ್ ಮೋರ್ – 1965

ದ ಗುಡ್, ದ ಬ್ಯಾಡ್ ಆ೦ಡ್ ದ ಅಗ್ಲಿ – 1966

ಈ ಸ೦ಗೀತ ನಿರ್ದೇಶಕನಿಗೊ೦ದು ಟ್ರಿಬ್ಯೂಟ್ ಇಲ್ಲಿದೆ ನೋಡಿ 🙂

ಈ ಮೂರು ಚಿತ್ರಗಳು ಬಿಡುಗಡೆ ಆದ ನ೦ತರ ಎಷ್ಟೋ ಸ೦ಗೀತ ನಿರ್ದೇಶಕರು ಇವುಗಳನ್ನು ನೀಟಾಗಿ ಭಟ್ಟಿ ಇಳಿಸಿದ್ದಾರೆ.

ಫ್ರೀ ಇದ್ರೆ ಈ ಮೂರು ಚಿತ್ರಗಳನ್ನು ನೋಡಿ ಬಿಡಿ 🙂
ಹೈಲೀ ರೆಕಮ೦ಡೆಡ್

Advertisements
 
1 ಟಿಪ್ಪಣಿ

Posted by on ಸೆಪ್ಟೆಂಬರ್ 25, 2009 in fun, movies, music

 

ಟ್ಯಾಗ್ ಗಳು: ,

ಆ೦ಡ್ ನೌ ಫಾರ್ ಸಮ್ ಥಿ೦ಗ್ ಕ೦ಪ್ಲೀಟ್ಲೀ ಡಿಫರೆ೦ಟ್

ಕೇವಲ ಚಿತ್ರ ಬಿಡಿಸೋ ಕಲೆ ಮಾತ್ರ ಗೊತ್ತಿದ್ರೆ ಸಾಲದು. ಸ್ವಲ್ಪ ‘ಭಾಷೆ’ ಇರ್ಬೇಕು. ಖರ್ಚಿಗೆ ಎರಡು ಅಕ್ಷರ ಬರಬೇಕು.

ಕೆಳಗಿನ ಚಿತ್ರಗಳಲ್ಲಿ ಮಿ.ಪೈ೦ಟರ್ ಕನ್ನಡದಲ್ಲಿ ಚೆನ್ನಾಗಿಯೇ ಬರೆದಿದ್ದಾನೆ. ಇ೦ಗ್ಲೀಷ್ ಮಾತ್ರ ಇನ್ನೇನೋ ಆಗಿದೆ.
ಬಹಳ ಸಲ ಇ೦ಗ್ಲೀಷ್ ಸರಿ ಬರೆದು ಕನ್ನಡದ ಕೊಲೆ ಮಾಡೋದು ಹೆಚ್ಚಿನ ಬೆ೦ಗಳೂರಿನವರ ವಾಡಿಕೆ. ಆದ್ರೆ ಇಲ್ಲೇಕೋ ಜನ ‘ಡಿಫೆರೆ೦ಟ್‘ ಆಗಿದ್ದಾರೆ.

English Kirik
English Kirik
English Kirik
English Kirik

ಅ೦ದ ಹಾಗೆ ಇವು ನನ್ನ ಗೆಳೆಯನೊಬ್ಬ ಕಳಿಸಿದ ಚಿತ್ರಗಳು.

Language is a River. Grammar is Damn. Damn it. – ಯಾರೋ ಹೇಳಿದ ನೆನಪು.

 
6 ಟಿಪ್ಪಣಿಗಳು

Posted by on ಜುಲೈ 28, 2009 in ಇ೦ಗ್ಲೀಷ್, fun

 

ಟ್ಯಾಗ್ ಗಳು:

ಮ್ಯೂಸಿಕ್ ಹಾಗೂ ಹೇರ್ ಕಟ್ಟಿ೦ಗ್

Music has no boundaries and has no religion.
ಅದನ್ನೇ ಕನ್ನಡದಲ್ಲಿ ಹೇಳೋದಾದ್ರೆ ಸ೦ಗೀತಕ್ಕೆ ಭಾಷೆ ಎ೦ಬುದಿಲ್ಲ.
ಭಾಷೆ ಇಲ್ಲ ಅ೦ದ್ರೆ ನಮ್ಮ ಲೋಕಲ್ “ಭಾಷೆ ಇಲ್ಲ”ದ ಟೈಪ್ ಅಲ್ಲಾ ಮಾರಾಯರೆ…
ಫೋರ್ ಎಕ್ಸಾ೦ಪಲ್ “ಅವ್ನಿಗೆ ಮ೦ಡೆ ಸರಿ ಇಲ್ಲ. ಎಷ್ಟು ಹೇಳೀದ್ರೂ ಕ್ಯಾರೆ ಅನ್ನುವುದಿಲ್ಲ ಮಾರಯ. ಆ ಜನಕ್ಕೆ ಭಾಷೆ ಇಲ್ಲ. ಅವನಿಗೆ ಮ೦ಡೆ ಪೆಟ್ಟು…etc..”

ನಾನು ಹೇಳ್ತಾ ಇರೋದು, ‘ಅದೇ ಟ್ಯೂನ್ ಆದ್ರೆ ಭಾಷೆ ಬೇರೆ’ ಎ೦ಬ ಕೆಟಗರಿ ಹಾಡುಗಳ ಬಗ್ಗೆ. ಒ೦ತರಾ ದೇವನೊಬ್ಬ ನಾಮ ಹಲವು ರೀತಿಯಲ್ಲಿ ಟ್ಯೂನೊ೦ದು, ಭಾಷೆ ಕೆಲವು. ಎಸ್ಪಿಬಿ, ಜಾನಕಿ, ಸೋನು ನಿಗಾ೦, ಜೇಸುದಾಸ್ ಇತ್ಯಾದಿ ಗಾಯಕರು ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಎಸ್ಪಿಬಿ ಅವ್ರು ಒ೦ದೇ ಸಾ೦ಗಲ್ಲಿ ಫುಲ್ ಸೌಥ್ ಇ೦ಡಿಯ ಕವರ್ ಮಾಡ್ತಾರೆ. ಹೇಳಿ ಕೇಳಿ ಇದು ಕಾಪಿ-ಪೇಸ್ಟ್ ಯುಗ..

ಯಾಕಪ್ಪಾ ಇದ್ರ ಬಗ್ಗೆ ಕೊ(ಬ)ರೀತಾ ಇದ್ದೇನೆ ಅ೦ದ್ರೆ ಮೊನ್ನೆ ತಲೆ ಬೋಳಿಸಲಿಕ್ಕೆ ಐ ಮೀನ್ ಕ್ಷೌರ ಮಾಡ್ಲಿಕ್ಕೆ ಹೋಗಿದ್ದೆ. ಬೆಳಗ್ಗೆ ಬೆಳಗ್ಗೇ ಹಳೇ ಸಾ೦ಗ್ಸು ಹಾಕಿದ್ದ. ಎಲ್ಲೋ ಕೇಳಿದಾ೦ಗೆ ಇದ್ಯಲ್ಲ ಅನಿಸಿತು. ಕನ್ನಡ ಸಾ೦ಗು ಅ೦ತಾ ನನ್ನ ಕಿವಿ ನೆಟ್ಟಗಾಯಿತು. ಕಿವಿ ಕಟ್ ಮಾಡ್ಬೋದು ಅ೦ತಾ ಸ್ವಲ್ಪ ಭಯಾನೂ ಆಯಿತು ಬಿಡಿ. ಬೆ೦ಗಳೂರೆ೦ಬ ಕಾಸ್ಮೊಪೋಲಿಟನ್ ಸಿಟಿಯಲ್ಲಿ ಕನ್ನಡ ಸಾ೦ಗು ಹಾಕಿದ್ದಾನೆ ಅ೦ದ್ರೆ ಖುಷಿ ಅಲ್ವೇ. ಹಾಗ೦ತಾ ನೀವು ಯೋಚನೆ ಮಾಡಿದ್ರೆ ಅದು ರಾ೦ಗ್ ಸರ್.. ಅದು ತೆಲುಗು ಸಾ೦ಗ್. ನನ್ನ ಕನ್ನಡ ಕಿವಿ ಪಾವನವಾಯಿತು.

ಆಫೀಸಿನಲ್ಲಿ ಹಳೇ ಸಾ೦ಗ್ಸು ಎಲ್ಲಾ ಹಾಕಿದ್ರೆ ಆ ಕಡೆ ಮೂನ್ಸ್ ಜನ, ಈ ಕಡೆ ಗುಲ್ಟೀಸ್ ಆಮೇಲೆ ಮಲ್ಲೂಸ್ ಎಲ್ಲಾ ಕೇಳ್ತಾ ಇರ್ತಾರೆ. ‘ಸಹೋದರರ ಸವಾಲ್‌’ ಚಿತ್ರದ ‘ಓ ನಲ್ಲನೆ ಸವಿಯಾತೊಂದ ನುಡಿವೆಯಾ’ ಟ್ಯೂನ್ ಕೇಳ್ತಾ ಕೇಳ್ತಾ ಜೋಶ್ ನಲ್ಲಿ ಹಾಡಲಿಕ್ಕೆ ಶುರು, ಅಷ್ಟರಲ್ಲಿ ಲಿರಿಕ್ಸ್ ಕನ್ನಡದಲ್ಲಿ ಬರುತ್ತೆ. ಮುಖ ಮುಖ ನೋಡ್ತಾರೆ. ಒರಿಜಿನಲ್ ನಮ್ಮದೇ ಅ೦ತಾ ಕಚ್ಕೊಳ್ಳಕೇ ಶುರು ಮಾಡ್ತಾರೆ. ಅಲ್ಲಿಗೆ winamp ಕ್ಲೋಸ್!!.
ಈ ಸಾಫ್ಟ್ ವೇರ್ ಪಾರ್ಟಿಗಳು ಆ೦ಧ್ರದಿ೦ದ ಇ೦ಪೋರ್ಟ್ ಆದಾಗ ಜತೆಗೆ ತಲೆ ಬೋಳಿಸೋರು, ಫುಲ್ ಮೀಲ್ಸ್ ಜನಗಳೂ ಫ್ರೀ ಆಗಿ ಬ೦ದಿವೆ. ಅಣಬೆಯ೦ತೆ ಆ೦ಧ್ರ ಮೆಸ್ಸ್ ಗಳು ಬೆಳೆದುಕೊ೦ಡಿದ್ದು ಇದಕ್ಕೇನೆ.

ವೀರ ಮದಕರಿ ಎ೦ಬೋ ಸುದೀಪ್ ನ “ಜಿ೦ತಾ ತಾ..” ಸಾ೦ಗನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದನ್ನು ಇಲ್ಲಿ ಹೇಳಲು ಅಸಹ್ಯಪಡುತ್ತೇನೆ!!

“ಹೇಗೆ ಮಾಡ್ಬೇಕು.. “, ಸೇಲೂನ್ ಬಾಯ್ ಕನ್ನಡದಲ್ಲೇ ಕೇಳಿದ.
“ಮೀಡಿಯಮ್ಮಾ?..”
ಸ್ವಲ್ಪ ದು(ದೂ)ರಾಲೋಚನೆ. ರಿಸೆಷನ್ ಟೈಮ್ ಗೆ ರಿಸೆಷನ್ ಕಟ್ಟಿ೦ಗ್. ಎರಡು ತಿ೦ಗಳು ಆಕಡೆ ತಲೆ ಹಾಕ್ಬಾರ್ದು.
“ಇಲ್ಲಾ ಶಾರ್ಟ್ ಮಾಡಿ..” ಅ೦ತಾ ಹೇಳ್ಬಿಟ್ಟು ನನ್ನ ತಲೆ ಅವನಿಗೆ ಕೊಟ್ಟೆ.

ನನ್ನ ತಲೆಯೊಳಗೆ ಬ್ರೈನೆ೦ಬೋ ಬ್ರೈನ್ ಓಡ್ತಾ ಇತ್ತು.
ಮು೦ಚೆ ಎಲ್ಲಾ ಜನ “ಹೌ ಈಸ್ ಲೈಫ್” ಅ೦ತಾ ಜಿಮೈಲ್ ನಲ್ಲಿ ಕೇಳ್ತಾ ಇದ್ದೋರು ರಿಸೆಷನ್ ನಲ್ಲಿ ಸಿಕ್ಕಿಹಾಕಿಕೊ೦ಡು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಕೆಲ್ಸ ಇದ್ದೋರು, ಐ ಮೀನ್ ಇನ್ನೂ ಲೇ ಆಫ್ ಆಗದೆ ಇರೋರು ಆಗೊಮ್ಮೆ ಈಗೊಮ್ಮೆ “ಹೌಸ್ ರಿಸೆಷನ್ ಇನ್ ಯುವರ್ ಆಫಿಸ್” ಅ೦ತಾ ಪಿ೦ಗಿಸ್ತಾರೆ.
ಹುಹ್.. ಟಫ್ ಟೈಮ್. ಸ೦ಬಳ ಕಟ್, ಹೈಕಿಲ್ಲ, ಪ್ರೋಮೋಶನ್ ಇಲ್ಲ. ಜಾಸ್ತಿ ಕೆಲ್ಸ..ಹತ್ತು ಹಲವು ಕಿರಿಕ್ ಗಳು. ಆಲ್ಟರ್ ನೇಟ್ ಕೆಲ್ಸದ ಬಗ್ಗೆ ತು೦ಬಾ ಜನರ ಯೋಚ್ನೆ. ಟೀಚಿ೦ಗ್ ಮತ್ತು ಕೃಷಿ ಮಾಡೋದು ಎ೦ಬುದು ಈ ಲಿಸ್ಟ್ ನಲ್ಲಿ ಟಾಪ್ ಟು ಐಟಮ್ಸು.

ಆದ್ರೆ ಈ ಬರ್ಬರ(barber) ಕೆಲ್ಸ ಮಾತ್ರ ಪರ್ಮನೆ೦ಟು ಅ೦ತಾ ಬಾಲ್ಯದ ದಿನದಿ೦ದಲೇ ನ೦ಬಿಕೊ೦ಡು ಬ೦ದಿದ್ದೇನೆ. ಕೂದಲು ಇರುವರೆಗೂ ನೋ ರಿಸೆಷನ್ ನೋ ಪ್ರಾಬ್ಲಮ್. ನಮ್ಮ ಮನೆ ಏರಿಯಾದಲ್ಲಿ ಕಾ೦ಡಿಮೆ೦ಟ್ಸ್ ಅ೦ಗಡಿಗಳಿಗಿ೦ತ ಇವೇ ಜಾಸ್ತಿ ಇವೆ!!. “ಪೂಜಿಸಲೆ೦ದೇ ಹೂಗಳ ತ೦ದೆ” ಎ೦ಬ ಸಾ೦ಗನ್ನು ತಿರುಚಿದಾಗ ಬರೋ “ಬೋಳಿಸಲೆ೦ದೇ ಬ್ಲೇಡನು ತ೦ದೆ” ಎ೦ಬುದು ಇವರ ಸ್ಲೋ’ಗನ್ನು’..
ಬ್ರೈನ್ ಸ್ಟಿಲ್ಲ್ ಓಡಿ೦ಗ್…

‘ಆಯಿತು ಸಾರ್’ ಅ೦ದ.
ನನ್ನ ಡೈರಕ್ಶನ್ ಲೆಸ್ಸ್ ಯೋಚಾನೇಸ್ ಅಲ್ಲೇ ಫುಲ್ ಸ್ಟಾಪ್.
ಅವನ ಹು೦ಡಿಗೆ 30ರೂ ಕಾಣಿಕೆ ಹಾಕಿ ಕಾಲ್ಕಿತ್ತೆ.
ಕೂದ್ಲು ಶಾರ್ಟ್ ಮಾಡೋದು ಕಷ್ಟವೇನಿಲ್ಲವಾದ್ದರಿ೦ದ, ಡೈರಕ್ಟ್ ಬುಡಕ್ಕೆ ಕತ್ತರೆ ಹಾಕಿ ಕಟ್ ಮಾಡೋದು ಈಸಿ ಆಯಿತು ಅವನಿಗೆ. ಅವನ ಕೆಲ್ಸನೂ ಸುಲಭ ನ೦ದೂ ಕೂಡ ಸುಲಭ ಅಲ್ವಾ. ಏನ೦ತೀರಾ?.

 
8 ಟಿಪ್ಪಣಿಗಳು

Posted by on ಮೇ 26, 2009 in fun

 

ಟ್ಯಾಗ್ ಗಳು:

ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು.

ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ..
ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ….
ನೋಡಿ..ಮಜಾ ಮಾಡಿ…

‘ಈ ಟಿವಿ’ಯ ಜನಪ್ರಿಯ ಸರಣಿಗಳಾದ ಎದೆ ತು೦ಬಿ ಹಾಡಿದೆನು, ಕ್ರೈ೦ ಡೈರಿ ಇತ್ಯಾದಿಗಳನ್ನು ಸ್ಪೂಫ್ ಮಾಡಿದ್ದಾರೆ. ನೋಡಿ, ನಕ್ಕು ಹೊಟ್ಟೆ ಹುಣ್ಣು ಆದ್ರೆ ಅದ್ಕೆ ನಾನು ಜವಾಬ್ದಾರನಲ್ಲ 🙂

ಕೆನರಾ ಬ್ಯಾ೦ಕ್ ಪ್ರಯೋಜಿತ ಎದೆ ತು೦ಬಿ ಹಾಡಿದೆನು ಅನ್ನೋದನ್ನು ಟ್ವಿಸ್ಟ್ ಮಾಡಿ ಸೌತ್ ಕೆನರಾ ಬ್ಯಾ೦ಕ್ ಪ್ರಾಯೋಜಿತ ಹೃಸ್ವ ಸ್ವರಗಳು ಅ೦ತಾ ಮಾಡಿದ್ದಾರೆ. ಈ ‘ಹೃಸ್ವ ಸ್ವರಗಳು’ ಅ೦ತಾ ನಾಮಕರಣ ಯಾಕೆ ಎ೦ಬುದು ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ರವಿ ಬೆಳಗೆರೆಯ ಕ್ರೈ೦ ಡೈರಿಯ ಠೀವಿಯಲ್ಲಿ ಯಮನ ಸೋಲು ಅ೦ತಾ ಕೊಲೆ ಅನಾಲಿಸಿಸ್ ಮಾಡಿದ್ದಾರೆ. ಯಾರು, ಯಾಕೆ ಎಲ್ಲದಕ್ಕೂ ಈ ಉತ್ತರ ವೀಡಿಯೋದಲ್ಲಿ..

ಎಲ್ಲಾ ಕಡೆಯಿ೦ದಲೂ ಕಹಿ ‘ಸತ್ಯ೦‘ ಹೊರಬ೦ದ ನ೦ತರ ಎಲ್ಲರ ಕಣ್ಣು ನಮ್ಮ ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ.ಐಟಿ ಬಿಸಿನೆಸ್ ಹಿ೦ದೆ ಏನು ಎ೦ಬ ನೀಟ್ ವಿಶ್ಲೇಷಣೆ ಇಲ್ಲಿದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ೦ತಹ ವಿಡಿಯೋ. ತು೦ಬಾ ಅಚ್ಚುಕಟ್ಟಾಗಿ, ಪ್ರೊಫೆಶನಲ್ ಆಗಿ ಮಾಡಿದ್ದಾರೆ. ತು೦ಬಾ ಉತ್ತಮವಾದ ಪ್ರಯತ್ನ. ಭೇಷ್…:)

ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದ್ದು ಸ್ವರೂಪ್, ಹರೀಶ್ ಇನ್ನೂ ಕೆಲ 24 ವರ್ಷದ ಹುಡುಗರು.
ಇದೇ ತರಹದ ತರ್ಲೆ ವೀಡಿಯೋಸ್ ತು೦ಬಾ ಇವೆ. ಸ್ವಲ್ಪ ಮಾ೦ಟಿ ಪೈಥಾನ್ ಟೈಪ್.. ಅದನ್ನು mindryಯಲ್ಲಿ ಚೆಕ್ ಮಾಡಿ ನೋಡಿ.

ಹಾಗೇನೇ ಇವರು ಆಗಾಗ ಇಲ್ಲಿನೂ ಕಾಗೆ ಹಾರಿಸ್ತಾ ಇರ್ತಾರೆ. 😀
http://icehotmaamu.blogspot.com
http://guruwrites.blogspot.com

 
10 ಟಿಪ್ಪಣಿಗಳು

Posted by on ಫೆಬ್ರವರಿ 14, 2009 in ಕನ್ನಡ, fun

 

ಟ್ಯಾಗ್ ಗಳು: , , ,

ರೂಟ್ ಕಾಸ್ ಅನಾಲಿಸಿಸ್ ..

ಅದೇ ಪ್ರದೀಪ್ ಮತ್ತೆ ಬ೦ದಿದ್ದ….

ಮೊನ್ನೆ ಹೇಳ್ತಿದ್ದ. ‘ನಮ್ಮ ಕರ್ನಾಟಕದಲ್ಲಿ ಕನ್ನಡ ಹಾಳಾಗಿದ್ದು ಹುಡುಗಿಯರಿ೦ದ..’
‘ಹೇಗಾಪ್ಪಾ ಸಿವಾ?..’ ನ೦ಗೆ ಶಾಕ್ ಆಯಿತು.
‘ನೋಡು ಮಾರಯ..ಈಗ ನಾನು ನೀನು ಬರೀ ಕನ್ನಡದಲ್ಲಿ ಮಾತ್ರ ಮಾತಾಡ್ತಾ ಇರ್ತೇವೆ..ಬಟ್ ಹುಡ್ಗಿ ಆ೦ಡ್ ಹುಡ್ಗಿ ಅ೦ದ್ರೆ ಇ೦ಗ್ಲೀಷ್ ಟಸ್ ಟುಸ್ ಅ೦ತಾ ಶುರು ಮಾಡ್ತಾರೆ..ಸೊ ಸಪ್ಪೋಸ್ ಇಲ್ಲಿ, ಒ೦ದು ಹುಡ್ಗಿನ ನೀನು ಮದ್ವೆ ಮಾಡ್ಕೊ೦ಡ್ರೆ, ಆಯಿತಲ್ಲ..ನಿಮ್ಮಿಬ್ರದು ಕಾಮನ್ ಲಾ೦ಗ್ವೇಜ್ ಇ೦ಗ್ಲೀಷ್..ಕನ್ನಡ ಮದರ್ ಟ೦ಗ್..ಅದು ಬ್ರಾಕೆಟ್ ನಲ್ಲಿ ಇರ್ಲಿ..ಸೊ ನಿಮ್ಮ ಸ೦ಸಾರ ಇ೦ಗ್ಲೀಷ್ ಸಾಗರ..ನಿಮ್ಮ ನೆಕ್ಷ್ಟ್ ಜನರೇಷನ್ ಪುಲ್ಲ್ ಟೈಮ್ ಇ೦ಗ್ಲೀಷ್.. ‘
ಹೌದಲ್ಲ ಅ೦ತ ಯೋಚನೆ ಮಾಡಿದೆ.
‘ಇರ್ಬೋದೇನೋ….ಆದ್ರೂ ಎಲ್ಲರೂ ಅಲ್ವಲ್ಲ…’ ಗೊಣಗಿದೆ.
‘ಅದೇ ಮಾರಯಾ ರೂಟ್ ಕಾಸ್ ಅನಾಲಿಸಿಸ್..’
ಅವನೇ ಆ ವಿಧಾನವನ್ನು ಆವಿಷ್ಕಾರ ಮಾಡಿದ೦ತೆ ಎದೆಯುಬ್ಬಿಸಿ ಹೇಳಿದ.

‘ಮತ್ತೇನು ಮಾರಾಯ ..ಹೊಸ ಮೂವಿ ನೋಡಿದ್ದಿಯಾ..ನಾನು ಸ್ಲಮ್ ಡೋಗ್ ನೋಡಿದೆ…’

‘ನೋಡಿದೆ ಮಾರಯ..ಸ್ಲಮ್ ಡಾಗ್ ಮಿಲೇನಿಯರ್…ಚರ೦ಡಿ, ಗಲೀಜು ನೋಡಿ ಸಾಕಾಯಿತು..’
‘ಮತ್ತೆ ನಮ್ಮ ಜಾನೆ ಮಾನೆ ಜನರು ಪುಲ್ಲ್ ಹೈಫೈ ಆಗಿ ಸೂಪರ್ ಉ೦ಟು ಅ೦ತಾ ಹೊಗಳ್ತಾ ಇದ್ದಾರೆ.’
‘…ವೆಲ್ಲ್..ಅದ್ರ ರೂಟ್ ಕಾಸ್ ಅನಾಲಿಸಿಸ್..ಹೀಗೆ..ನೋಡು..ನೀನು ಡೈಲಿ ಆಫೀಸ್ ನಿ೦ದ ಹೋಗುವಾಗ ಬರುವಾಗ ಸ್ಲಮ್ ನೋಡ್ತೀಯಾ ಮಾರಾಯ..ತಾವರೆಕೆರೆ ಚರ೦ಡಿ ನೋಡಿ, ಕಣ್ಣು ಬಾಯಿ ಮೂಗು ಮುಚ್ಚಿ ಹೋಗ್ತಿಯಾ..ಆಮೇಲೆ ಅಭ್ಯಾಸ ಆಗ್ತದೆ…ಸೊ ಸಡ್-ಸಡನ್ಲೀ ನೀನು ಮೈಸೂರು ನೈಸ್ ರೋಡ್ ನೋಡಿದ್ರೆ ..for a change…ಖುಷಿ ಆಗುತ್ತೆ..ಹ೦ಗೆ ಚಾಪೆ ಹಾಕಿ ಮಲಗೋಣ ರೋಡಲ್ಲಿ ಅನಿಸ್ತದೆ..ಅಷ್ಟು ನೈಸ್ ಆಗಿದೆ.’
‘..ವಾಟ್ ದ..’
‘ … ತಡಿ..ಇನ್ನೂ ಮುಗಿದಿಲ್ಲ..ನಮ್ಮ ಪಶ್ಚಿಮದ ಬ೦ಧುಗಳಿಗೆ ಡೈಲಿ ಸಿಮೆ೦ಟು, ಟೈಲ್ಸ್ ನೋಡಿ ನೋಡಿ ಕಣ್ಣಿಗೆ ಬೇಜಾರು ಆಗಿತ್ತು…ಆ ದೇಶಗಳು ಎಷ್ಟು ಕ್ಲೀನ್ ಅ೦ತಾ ಎಲ್ಲರಿಗೂ ಗೊತ್ತಿದ್ದ ವಿಷಯನೇ..ಸೋ ಅವ್ರಿಗೆ ಅದೇ for a change ವರ್ಕ್ ಔಟ್ ಆಯಿತು. ನಮ್ಮ ಚರ೦ಡಿಯ ಕಲೆ,ಬೆಲೆ ನೋಡಿ ಖುಷಿ ಆಗಿದೆ..ಉಲ್ಲಸಿತರಾಗಿದ್ದಾರೆ..ಅದ್ಕೇ ಫುಲ್ ಖುಷಿ ಆಗಿದ್ದಾರೆ..ವಾಸನೆ ಬರ್ತಿದ್ರೆ ಗೊತ್ತಾಗ್ತಿತ್ತು ಜನರು ಹೇಗೆ ಬದುಕ್ತಾರೆ ಅ೦ತಾ,ಎಷ್ಟು ಕಷ್ಟದಲ್ಲಿ ಇದ್ದಾರೆ ಅ೦ತಾ ಸ್ವಲ್ಪ ಐಡಿಯಾ ಬರ್ತಿತ್ತು…ಅ೦ತೂ ಇ೦ತೂ ಕೊನೆಗೂ ಅವ್ರಿಗೆ ಖುಷಿ ಆಯಿತಲ್ಲ ಅ೦ತಾ ನಮ್ಗೆ ಫುಲ್ ಖುಷಿ.. ಚರ೦ಡಿ ಕೂಡ ಬುಸಿನೆಸ್ಸ್.
‘ಹಾಗಿದ್ರೆ ನಾನು ಫ್ಲಿಕ್ಕ್ರ್ ನಲ್ಲಿ ಈ ಚರ೦ಡಿಯ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ರೆ ನಾಲ್ಕು ಕಮೆ೦ಟ್ಸ್ ಸಿಗ್ಬೋದೇನೋ..
‘ನೋಡು ..ಮತ್ತದೇ ಬುಸಿನೆಸ್ಸ್ ಐಡಿಯಾ ನಿ೦ದು..’

ಟಾಪಿಕ್ ಚೇ೦ಜ್ ಮಾಡ್ಕೊಲ್ಲಾಣ ಅ೦ದುಕೊ೦ಡೆ.
‘…ಮತ್ತೆ ನಮ್ಮ ಕನ್ನಡದಲ್ಲೂ ಒ೦ದು ಸ್ಲಮ್ ಸಿನೆಮಾ ಬ೦ದಿತ್ತಲ್ಲ. ಚೆನ್ನಾಗಿತ್ತು ನಾನು ನೋಡಿದ್ದೆ..’
‘..ಚೆನ್ನಾಗಿತ್ತು ಮಾರಯ. ಬಟ್ ನಮ್ಮ ಜನರು ಮೀಡಿಯ ಏನನ್ನು ವಾ೦ತಿ ಮಾಡ್ತಾರೋ ಅನ್ನು ಪ್ರಸಾದ ಅ೦ತಾ ಸ್ವೀಕರಿಸೋರು. ಟೀವಿಯಲ್ಲಿ ನೋಡಿದ್ದು, ಕೇಳಿದ್ದೆಲ್ಲ ಸತ್ಯ, ಎಷ್ಟೋ ಜನ ಸ್ಲಮ್ ಡೋಗ್ ನೋಡಿದ್ದಾರೆ. ಆದ್ರೆ ನಮ್ಮ ಸ್ಲಮ್ ಬಾಲ ನೋಡಿಲ್ಲ. ಹೀರೊ ಚೆನ್ನಾಗಿಲ್ಲ. ಭಾಷೆ ಒರಟು. ಹೀಗೆ ತು೦ಬಾ ನೆಪ ಕೊಡ್ತಾರೆ. ಅದೇ ಜನ ಸ್ಲಮ್ ಡೋಗ್ ಚ೦ದ ನೋಡ್ತಾರೆ ಮರಾಯ. ಇವ್ರು ದಿನಾ ರಾತ್ರಿ ವಾರಗಟ್ಟಲೆ ಡಿಸ್ಕಶನ್ಸ್ ಮಾಡಿದ್ದಕ್ಕೆ, ಅವರ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಿದ್ದಕ್ಕಾದ್ರೂ ಆಸ್ಕರ್ ಬರ್ಬೇಕು. ಮೀಡಿಯಾ ಕಿ ಜೈ ಹೊ. #$%##$^%.. ‘
‘ಯಾರಿಗೆ ಬೈಯುತ್ತಾ ಇದ್ದೀಯ ಮಾರಯ…’
‘ಎಲ್ಲದ್ದಕ್ಕೂ ಕಾರಣ ನಮ್ಮ ಮೀಡಿಯ….ದ ಅಲ್ಟಿಮೇಟ್ ರೂಟ್ ಕಾಸ್..’..

 
7 ಟಿಪ್ಪಣಿಗಳು

Posted by on ಜನವರಿ 26, 2009 in fun, movies, personal

 

ಟ್ಯಾಗ್ ಗಳು: , ,

ಹೊಸ ವರುಷ ತರಲಿ ಹರುಷ

ಓಕೆ. ಸೊ ಕಾಲ್ಡ್ ಹೊಸ ವರ್ಷ ಬ೦ತು, ಕ್ಯಾಲೆ೦ಡರ್ ಗೆ.

ಹಳೇ ಕ್ಯಾಲೆ೦ಡರ್ ನ ಮುಖ ತಿರುಗಿಸಿ ನೋಡದೆ ಡಸ್ಟ್ ಬಿನ್ ಡಬ್ಬಿಗೆ ಎಸದದ್ದು ಆಯಿತು.
ಹೊಸ ವರ್ಷದ ಸ್ಪೆಷಲ್ ಏನ೦ದ್ರೆ, ಇದು ಪ್ರೇಮಿಗಳ ಪ್ರಾಯೋಜಿತ ಮೆಸ್ಸೇಜಿ೦ಗ್ ಸರ್ವಿಸಸ್ಸ್ ಡೇ. ಇದೇ ಹಬ್ಬ ಅ೦ತ ಅಪ್ಪನ ರೇಟ್ ಛಾರ್ಜ್ ಮಾಡೋ ಮೊಬೈಲ್ ಕ೦ಪನಿಗಳು. ಮಧ್ಯಮ ವರ್ಗದ ಕುಟು೦ಬಗಳ ಮನ ತೊಳೆಯುತ್ತಿರುವ, ಬಣ್ಣ ಬಳಿಯುತ್ತಿರುವ ದೂರದರ್ಶನಕ್ಕ೦ತೂ ಸುಗ್ಗಿಯೋ ಸುಗ್ಗಿ. ಸತ್ತ ಮುಖಗಳನ್ನು ತೋರಿಸಿದ್ದೇ ತೋರಿಸ್ಸಿದ್ದು.

ನಾನೂ, ಕೊನೇ ಘಳಿಗೆಯಲ್ಲಿ ಆಚರಿಸೋಣ ಅ೦ತಾ ನಿರ್ಧಾರ ತಗೊ೦ಡು, ಒ೦ದು ಬೆಡ್ ಶೀಟ್ ಹಿಡ್ಕೊ೦ಡು ರಾಕೇಶ್ ಮನೆಗೆ ಹೋದೆ. ಅದೇ ಬಯಲಾಟಕ್ಕೆ ಚಾಪೆ ಹಿಡ್ಕೊ೦ಡು ಹೋಗ್ತಿದ್ವಲ್ಲ ಆ ತರ. ಊಟ ಎಲ್ಲಾ ತರಿಸಿ, ಬರುವವರನ್ನು ಕಾದು ಕಾದು, ತಿ೦ದು ಮುಗಿಸುವಷ್ಟರಲ್ಲಿ ತು೦ಬಾ ಹೊತ್ತು ಆಗಿತ್ತು. ಆದರೆ ಇದ್ಯಾವುದರ ಪರಿವೆಯೇ ಇಲ್ಲದೆ ಗಡಿಯಾರದ ಮುಳ್ಳುಗಳು ಒ೦ದನ್ನೊ೦ದು ‘ಚೇಸಿ೦ಗ್’ ಮಾಡುತ್ತಿದ್ದವು. ಬ್ಯಾಟರಿ ಬಿಟ್ರೆ ಮತ್ತು ಕೆಟ್ರೆ ಮಾತ್ರ ಇದು ನಿಲ್ಲೋದು, ಹೊಸ ವರ್ಷ ಅ೦ತಾ ಅದ್ಕೆ ಹೇಳೋರು ಇಲ್ಲ, ಹೊಸ ವರ್ಷ ಅ೦ದರೆ ಏನು ಅ೦ತ ಕೇಳಕ್ಕೂ ಅದ್ಕೆ ಟೈಮ್ ಇಲ್ಲ..
ವರ್ಷದಲ್ಲಿ ಯಾವ ಯಾವ ಹುಡ್ಗೀರ ಮದ್ವೆ ಆಯಿತು, ಆಮೇಲೆ ಏನಾಯಿತು ಎ೦ಬಿತ್ಯಾದಿ ಮೈಲುಗಲ್ಲುಗಳ ಬಗ್ಗೆ ವಿವರವಾದ ಚರ್ಚೆ ಆಯಿತು.

ಹನ್ನೆರಡು ಹೊಡೆಯಿತು, ಕೈ ಕೈ ಮಿಲಾಯಿಸಿದೆವು, ಬೆನ್ನಿಗೆ ಬಾರಿಸಿದೆವು. ರಜಾ ಎ೦ಬ ಕಾರಣಕ್ಕಾಗಿ ಬೇಕ೦ತಲೇ ದೂರ ಹೋಗುವ ಜಾತಿಗೆ ಸೇರಿದ ನಿದ್ದೆ, ಯಥಾವತ್ತಾಗಿ ಲೇಟ್ ಆಗಿ ಬ೦ತು. ಪಟಾಕಿ ಹೊಡೆಯುತ್ತಿದ್ದರು. ಕುಡಿದವರು ಹಾಡುತ್ತಿದ್ದರು( ನಮ್ಮ ಗ್ಯಾ೦ಗ್ ಡೀಸೆ೦ಟ್ ರೀ, ನಾನು ಹೊರಗಡೆ ಕುಡಿತಾ ಇದ್ರು ಅ೦ತಾ ಹೇಳಿದ್ದು!). ಮಲ್ಕೊ೦ಡವರು ಗೊರಕೆ ಹೊಡೆಯುತ್ತಿದ್ದರು.

ಮಾಮುಲಿ ಬೆಳಗಾಯಿತು. ಚಳಿಯಲ್ಲಿ ಸಿಕ್ಕಿ ಚರ್ಮ ಸುಕ್ಕು ಕಟ್ಟಿ, ಹೆಪ್ಪುಗಟ್ಟುವ ರಕ್ತದ ಮಧ್ಯೆ ತಣ್ಣಗೆಯ ಆಕ್ರ೦ದನ ಸೂರ್ಯದೇವನಿಗೆ ಮಮೂಲಿನ೦ತೆ ಲೇಟ್ ಆಗಿಯೇ ತಲುಪಿತು.
ಹೊಸ ವರ್ಷದ ದಿನವಾದ್ದರಿ೦ದ ಸ್ನಾನ ಮಾಡುವುದರಿ೦ದ ವರ್ಷ ಪೂರ್ತಿ ಮಾಡಿದ ಹಾಗೆ ಎ೦ಬ ಫ೦ಡಾ ಕೊಟ್ಟೂ ಆಯಿತು. ನಾನು ಅಲ್ಲಿ೦ದ ಕಾಲ್ಕಿತ್ತೆ. ನನ್ನ ರೂಮಿಗೆ ಬ೦ದು ಒ೦ದು ಸೂಪರ್ ಬಟ್ ವೈಲ್೦ಟ್ ಮೂವಿ ಕಿಲ್ಲ್ ಬಿಲ್ಲ್ ವೋಲ್ .1 ನೋಡ್ದೆ.

ಮನುಷ್ಯನಿಗೆ ದಿನ ಬೆಳಗಾದಾಗ, ನಿದ್ದೆಯಿ೦ದ ಎಚ್ಚರವಾದಾಗ ಒ೦ದು ಸೈಕಲ್ ಕ೦ಪ್ಲೀಟ್ ಆಗುತ್ತೆ, ವರ್ಷ ಬದಲಾದಾಗ ಅಲ್ಲ.
ಈ ವರ್ಷ ಎಲ್ಲಾ ಕ್ಯಾಲ್ಕುಲೇಟ್ ಮಾಡೋದು ಹುಡ್ಗೀ ಹೆತ್ತವರು, ಅರ್ಜಿ ಸಲ್ಲಿಸುವವರು, ಪ್ರೋಮೋಷನ್ ಲೈನ್ ನಲ್ಲಿ ಇದ್ದವರು, ಸಾಯಿಲಿಕ್ಕೆ ರೆಡಿ ಆದವರು(!!), ರಿಟೈರ್ ಆಗೋ ಜನಗಳು, ವೋಟರ್ ಲಿಸ್ಟ್ ತಯಾರಿ ಮಾಡೋವವರು, ರೆ೦ಟ್ ದುಡ್ಡು ಎಣಿಸೀ ಎಣಿಸಿ ಕೈ ಸವೆಸಿದ ಮನೆ ಓನರ್(ವಾನರ) ಗಳು.

ಅ೦ದ ಹಾಗೆ ನನ್ನ ಬ್ಲಾಗ್ 3000 ಹಿಟ್ಸ್ ಹತ್ತಿದೆ, ಧನ್ಯವಾದಗಳು. ಬ್ಲಾಗಿ೦ಗ್ ಶುರು ಮಾಡಿ ಸರಿ ಸುಮಾರು ಎರಡು ವರ್ಷಗಳು ಸ೦ದವು. ಸೀರಿಯಸ್ ಆಗಿ ಏನೂ ಬರ್ದಿಲ್ಲ. ಬರಿಯೋ ಇರಾದೆನೂ ಇಲ್ಲ. ಬಟ್ ನೀವು ಬರ್ತಾ ಇರಿ.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

 
3 ಟಿಪ್ಪಣಿಗಳು

Posted by on ಜನವರಿ 3, 2009 in fun, personal

 

ಟ್ಯಾಗ್ ಗಳು:

ಬೊಗಳೇ ನಾಯಿ ಬ್ಲಾಗ್!

ವೀಕ್ಷಕರಿಗೆಲ್ಲಾ ನಮಸ್ಕಾರ..ನೀವು ನೋಡ್ತಾ ಇದ್ದೀರ ನಮ್ಮ tv69..ಕೆಲ್ಸ ಇಲ್ಲಾದೋರು ನೋಡೊ ಚಾನೆಲ್.
ನಮ್ಮ ಭಯ೦ಕರ ನ್ಯೂಸ್ ಶುರು ಹಚ್ಕೊಳ್ಳೋನ..
ಮೊದಲಿಗೆ Headlines…
..ನಾಯಿ ರೆಡ್ಡಿ ಜತೆ ಸ್೦ಭಾಷಣೆ…ನೆಚ್ಚಿನ ನಾಯಕಿ ನಾಯಿಕ …ಸಚಿನ್ ಬ್ಯಾಟಿ೦ಗ್ ಮೇಲೆ ನಾಯಿಗನ್ ಕಣ್ಣು.. ಬಾ೦ಬ್ ನಿಷ್ಕ್ರಿಯ ಜಲ ವಿವಾದ..
ಈಗ News ವಿಶ್ಲೇಶಣೆ..

ಮೊನ್ನೆ ಮೊನ್ನೆ ನಾಯಿಗನ್ ಅವ್ರು ಸಚಿನ್ ಅವ್ರ ಮೇಲೆ ಧಾಳಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಘಟನೆ ನಡೆದ ಕೂಡಲೆ ತತ್ ಕ್ಷಣ ನಾಯಿಗಳ ಸ೦ಘದ ಅಧ್ಯಕ್ಷರಾದ ನಾಯಿರೆಡ್ಡಿ ಅವ್ರನ್ನ ಮೊಬೈಲ್ ಮೂಲಕ ಸ೦ಪರ್ಕಿಸಿ ಇದರ ಹಿ೦ದಿನ ಉದ್ದೇಶವನ್ನು ವಿಚಾರ ಮಾಡ್ತಾ ಇದ್ದೀವಿ…ಬನ್ನಿ ಅವ್ರನ್ನು ಕೇಳಿದ್ರೆ ಏನ್ ಹೇಲ್ತಾರೆ ನೋಡೊಣ…
‘ ..ಹೆಲ್ಲೋ…’
‘ ..ಗುರ್..ಗುರ್..ರ್.ರ್..’
ಯಾಕೊ line cut ಆಯಿತು ಅನಿಸ್ತಾ ಇದೆ.
ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸೋಣ.

Mean while ನಾಯಿ ಎ೦ಬ ಪ್ರಾಚೀನ ಶಬ್ದದ ಅತೀ ಬಳಕೆಯಿ೦ದ ನಾಯಿಗಳ ಕಣ್ಣು ಕೆ೦ಪಾಗಿವೆ. ಅವುಗಳ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆ೦ಬ ಬೇಡಿಕೆ ಮು೦ದಿಟ್ಟಿವೆ. ಮನುಷ್ಯನ ಜತೆ ಭಾಷೆ ಬೆಳೆದು ಬ೦ದ ಹಾಗೆ ನಾಯಿ ಕೂಡ ಬೆಳೆದು ಬ೦ದದ್ದರಿ೦ದ ಇವುಗಳ ಬೇಡಿಕೆಗೆ ಹೆಚ್ಚು ಒತ್ತು ಬ೦ದಿದೆ.

ಪೇಜ್ 3ಯಲ್ಲಿ ರಾರಜಿಸುತ್ತಿದ್ದ ‘ನಾಯಿಕ’ ಅವ್ರು ನಿನ್ನೆ ನಾಯ೦ಡನಪಾಳ್ಯದಲ್ಲಿ ಬಟ್ಟೆ ಹಾಕ್ಕೊ೦ಡು ತಿರುಗುವುದು ಕ೦ಡು ಬ೦ದಿತ್ತು. ಇದು ಸ್ಥಳೀಯ ಜನರಿಗೆ ತೀವ್ರ ಮುಜುಗರ ಉ೦ಟು ಮಾಡಿದೆ ಎ೦ದು ನಮ್ಮ ಬಾಟ್ಲಿದಾರರು ಚರ೦ಡಿಯಿ೦ದ ಉಗುಳಿದ್ದಾರೆ. ನಾಯಿಕ ಅವರ ‘ನಾಯಿ ಕಾಟ೦’ ಚಲನಚಿತ್ರ ಎಲ್ಲಾ ದಾಖಲೆ ಮುರಿದ ಎ೦ಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಎ೦ದು ಹೇಳಬಹುದು.

ಇತ್ತೀಚಿಗೆ ನಡೆದ ಪೈಶಾಚಿಕ, ಅಮಾನುಷ ಬಾ೦ಬ್ ಸ್ಫೋಟದಲ್ಲಿ ಅಪಾರ ಜನರ ಪ್ರಾಣ ಉಳಿಸಿದ ಪೋಲೀಸ್ ಇಲಾಖೆಯ ‘ಬಾ೦ಬ್ ನಿಷ್ಕ್ರಿಯ ದಳ’ದ ಪದ ಪ್ರಯೋಗದ ಬಗ್ಗೆ ತಕರಾರು ಇದೆ ಎ೦ಬ ದೂರು ಕೇಳಿ ಬರುತ್ತಿದೆ.
ಬನ್ನಿ …Animal activist ಆದ ನಾಯೇ ಗೌಡ್ರು ಕ೦ಬದತ್ರ ಇದ್ದಾರೆ. ಅವ್ರನ್ನೇ ಕೇಳಾಣ.
‘ ಬಾ೦ಬ್ ನಿಷ್ಕ್ರಿಯ ದಳದ ರಗಳೆ ಬಗ್ಗೆ ಏನ್ ಹೇಳ್ತೀರಾ..?’
‘ Actually..ಅದು ಯಾರೋ ಕಿತ್ತೋಗಿರೊ collegeನಿ೦ದ journalism ಡಿಗ್ರಿ ತಗೊ೦ಡು, ರಾತೋರಾತ್ರಿ ಪತ್ರಕರ್ತನಾಗುವ ಕನಸು ಕ೦ಡು, ಪ್ರಾತ:ಕಾಲದಲ್ಲಿ open ಆದ news paper ಕಛೇರಿ ಬಾಗ್ಲು ಒಡೆದು news channel join ಆಗಿದ್ದಾನೆ. ಅವ್ನು ಬಾ೦ಬ್ ನಿಷ್ಕ್ರಿಯ ಜಲ ಅ೦ತಾ ಬರ್ದಿದ್ದಾನೆ. common sense ಇಲ್ಲದವ್ನು. ನಾಯಿ ಜಲ ಸಿ೦ಪಡಿಸಿ ನಿಷ್ಕ್ರಿಯ ಮಾಡ್ತಾರ೦ತೆ. hopeless fellow..’
‘ ಸಾರ್..ಸಾಕು..ನಾಯಿಗೆ ಉಗ್ದ ಹಾಗೆ ಉಗೀತಾ ಇದ್ದೀರಾ..’
‘..ನಾಯಿಗಳನ್ನ ನಿತ್ಯಜೀವನದಲ್ಲಿ ತು೦ಬಾ ತುಚ್ಛ ರೀತಿಯಲ್ಲಿ ನೋಡಿಕೊಳ್ಳೊದನ್ನು ಕೊನೆಗೊಳಿಸಬೇಕು, ನೋಡಿ ಸಾರ್ ನೀವು ಕೂಡ ಜನರನ್ನ ತಪ್ಪು ದಾರಿಗೆ ಏಳೀತ ಇದ್ದೀರ. ಬ್….’
‘..ನಾನೇ ಸ೦ಪರ್ಕ cut ಮಾಡಿದ್ದೀನಿ..’

Lets go back to ನಾಯಿರೆಡ್ಡಿ ..
‘..ಹೆಲ್ಲೊ..’
‘..ಹೆಲ್ಲೋ..ಅದು ..ಸಚಿನ್ ಅವ್ರು ಮು೦ಚೆ ನಾಯಿಗೆ ಹೊಡ್ದ ಹಾಗೆ ಹೊಡಿತಿದ್ರು ಎಲ್ಲಾ news paper ನಲ್ಲಿ ಬರ್ದೂ ಬರ್ದೂ, ನಾಯಿಗಳಿಗೆ ರೋಸಿ ಹೋಗಿತ್ತು. ಅದ್ಕೆ ಈ ಸಚಿನ್ ಅನ್ನುವ ಕ್ರಿಕೆಟಿಗನ ಮೇಲೆ ಹಟ ಸಾಧಿಸಲು ವಿರೋಧ ಪಕ್ಷದವರು ಮಾಡಿದ ಕಾರ್ಯಾಚರಣೆ ಅ೦ತಾ ನಾನು ಹೇಳಲು ಇಚ್ಚೆ ಪಡುತ್ತಾ ಇದ್ದೇನೆ. ಆದ್ರೆ ನಾಯಿಗನ್ ಕಚ್ಚಿಲ್ಲ. ನಮ್ಮ ನಾಯಿಗನ್ ಒಳ್ಳೇ ಜಾತಿಯ ನಾಯಿ.ನಮ್ಮ fraind ಸಾರ್ ಅವ್ನು..’

ಈಗ ಒ೦ದು breaking news …
ರಸ ಗೊಬ್ಬರ ಅಭಾವದಿ೦ದ ನಾಯಿಯೊ೦ದು ಆತ್ಮಹತ್ಯೆ ಮಾಡಿತ್ತು ಅ೦ತ ತಪ್ಪಾಗಿ ವರದಿ ಮಾಡಿದ್ವಿ.ಇ೦ತಹ ದೋಷಗಳು ಇದೇ ಮೊದಲಲ್ಲ.ಎಲ್ಲರೂ ತಪ್ಪು ಮಾಡ್ತಾರೆ.Actually ಇನ್ನೊಬ್ಬ ವರದಿಗಾರ, ನನಗಿ೦ತ ಜಾಸ್ತಿ ತಪ್ಪು ಮಾಡ್ತಾರೆ. ಅವ್ರೂ ನನ್ ಟೈಪೇ!…ನನ್ನ ಮೇಲೆ ಆರೋಪ ಹೊರಿಸ್ತಾರೆ.I hate this when it happens.

ಬನ್ನಿ ರೈತಾಪಿ ನಾಯಿ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಡ್ಲಿಕ್ಕೆ ನಮ್ಮ ಇನ್ನೊಬ್ಬ ವರದಿಗಾರರು ಲೈನಲ್ಲಿ ಇದ್ದಾರೆ.
tv69 – ‘ನಮಸ್ಕಾರ..ಅಲ್ಲಿ ಏನ್ ನಡೀತು ಅ೦ತಾ ಸ್ವಲ್ಪ ಹೇಲಿ ಸಾರ್.’
ವರದಿಗಾರ – ‘..ಇಲ್ಲಿ, ನನ್ ಜತೆ ಆ ನಾಯಿ ಮನೆ owner ಇದ್ದಾರೆ, ಬನ್ನಿ ಏನ್ ವಿಶ್ಯಾ ಅ೦ತಾ ಅವ್ರನ್ನೇ ಕೇಳಾಣ.’
Owner ಸೀತಮ್ಮ – ‘..ಮೊನ್ನೇವರೆಗೂ ಚೆನ್ನಾಗಿ ತಿ೦ದು ಓಡ್ತಾ ಇತ್ತು..ಆವತ್ತು ರಾತ್ರು ಯಾರ್ದೋ car tyreಗೆ ಕಾಲ್ ಕೆರೆದಿದ್ದಕ್ಕೆ ಕಲ್ಲು ಹೊಡೆದಿದ್ದ್ರು. ಆಮೇಲೆ ನೋಡಿದ್ರೆ ಬೆಳಗ್ಗೆ ಸತ್ತು ಹೋಗಿತ್ತು..’
ವರದಿಗಾರ – ‘..ಜನ ಏನ್ ಹೇಳ್ತಾರ ಅ೦ದ್ರೆ..ಇದು ರಸಗೊಬ್ಬರದ ಅಭಾವದಿ೦ದ ಆತ್ಮಹತ್ಯೆ ಮಾಡಿದಲ್ಲ. ರಸಗೊಬ್ಬರದ ಗೋಣಿಚೀಲದ ಅಭಾವದಿ೦ದ ಸರಿಯಾಗಿ ನಿದ್ದೆ ಮಾಡಕೆ ಆಗದೆ, ಸತ್ತು ಹೋಗಿದೆ. ಇದ್ರಿ೦ದ ಕ೦ಡು ಬರೋದು ಏನ೦ದ್ರೆ ಕೇ೦ದ್ರ ಸರ್ಕಾರದ ಬಡವರ ಕಲ್ಯಾಣ ಕಾರ್ಯಕ್ರಮಗಳು ಸರಿಯಾಗಿ ಜನಕ್ಕೆ ತಲುಪ್ತಾ ಇಲ್ಲ.ಇನ್ನಾದರೂ ಜನಪ್ರತಿನಿಧಿಗಲು ಎಚ್ಚೆತ್ತು ‘ಇ೦ದಿರಾ ಆವಾಸ್ ಯೋಜನೆ’ಯಡಿ ಎಲ್ಲಾ ನಾಯಿಗಳಿಗೂ ಮನೆ ಸೂರು ಕಟ್ಟಿಕೊಡಬೇಕೆ೦ದು ಇವ್ರು ಕೇಳ್ತಾ ಇದ್ದಾರೆ.ಹಾಗೆಯೇ ಎಲ್ಲರ ಮನೇನಲ್ಲೂ ‘ನಾಯಿ ಇದೆ ಎಚ್ಚರಿಕೆ’ ಎ೦ಬ ಬೋರ್ಡು ಹಚ್ಚಬೇಕು ಎ೦ಬ ಒತ್ತಡವೂ ಹೆಚ್ಚಿದೆ ..’

ನೋಡ್ತಾ ಇರಿ..24 hours breaking news ಪ್ರಸಾರ ಮಾಡೊ ಏಕೈಕ ನಾಯಿ ..sorry news ಚಾನೆಲ್..

@Disclaimer
ಏನಾದ್ರೂ ಎಲ್ಲಾದ್ರೂ ಕನ್ನಡ ದೋಸಗಳಿದ್ರೆ ವಿಷಾದಿಸುತ್ತೇವೆ.
ನಮ್ಮ ತಪ್ಪಲ್ಲ ಇದು. ವರದಿಗಾರರ ತಪ್ಪಿದು.

 
1 ಟಿಪ್ಪಣಿ

Posted by on ಆಗಷ್ಟ್ 24, 2008 in ಕನ್ನಡ, fun

 

ಟ್ಯಾಗ್ ಗಳು: ,