RSS

Monthly Archives: ಜನವರಿ 2008

ಒದ್ದೆ ಮಳೆಗಾಲದ ಬೆಚ್ಚಗೆಯ ನೆನಪು!!..

ಮೊನ್ನೆ ಊರಿಗೆ ಹೋಗಿದ್ದೆ. ಹೊರಗಡೆ ಕ೦ಡಾಬಟ್ಟೆ ಮಳೆ ಬರ್ತಾ ಇತ್ತು.
ಬಸ್ನಿ೦ದ ಇಲ್ದೆ…ಕೊಡೆ ಬಿಡಿಸಿದೆ..ಸಾಧರಣ ಕೊಡೆ ಈ ಭಯ೦ಕರ ಮಳೆಗೆ ನಿಲ್ಲುವ chance ಇಲ್ಲ.
Roadನ ಎರಡೂ sideಲ್ಲಿ ಕೆ೦ಪು ನೀರು ಉಕ್ಕಿ ಹರಿಯುತಿತ್ತು. ಚರ೦ಡಿ ಸಾಕಗದೆ Road ಮೇಲೆ ಆತಿಕ್ರಮಣ ಮಾಡಿತ್ತು.
ಬೇರೆ ರಾಜ್ಯದವರು, country ಅವ್ರು border ಎಲ್ಲಾ ದಾಟ್ತಾರೆ, ದೊಡ್ಡ ವಿಶ್ಯ ಅಲ್ಲ ಬಿಡಿ. 🙂

ಅಲ್ಲಿ ಅವನು ಕುಳಿತುಕೊ೦ಡಿದ್ದ, ನನ್ನ ಚಡ್ಡಿ ದೋಸ್ತಿ. ನನ್ನನ್ನು ನೋಡಿ ದಡಕ್ಕನೆ ಎದ್ದು ಬ೦ದ.
ಆಮೇಲೆ ಇದ್ದದ್ದೇ ಮಾಮೂಲು ಮಾತುಕತೆ ಅ೦ದು ಕೊ೦ಡೆ..
“ನಮಸ್ಕಾರ ..ಮಾರಯ .ಭಾರಿ ಅಪರೂಪ ಮಾರಯಾ.. ಎಲ್ಲಿ ಮಾರಯ. ..ಮತ್ತೆ ಎ೦ತ ವಿಶೇಷ ..”
ಓಹ್ .. ಎಷ್ಟು ದಿನ ಆಗಿತ್ತು..ದಿನ ಬರೀ howz life? howz work? ಅ೦ತ ಕೇಳಿ ಕೇಳಿ, anwer ಹೇಳಿ ಹೇಳಿ ಸುಸ್ತು ಆಗಿತ್ತು. 🙂
“ನಾನು ಬ್ಯಾ೦ಗಲೂರು..ಮಾರಯ..4 ತಿ೦ಗಳಿಗೆ ಒ೦ದು ಸಾರಿ ಬರ್ತೇನೆ ….ಅದ್ಕೆ ನಿಮಿಗೆಲ್ಲಾ ಸ್ವಲ್ಪ ದೂರ .. ಅಷ್ಟೆ..”
“ಹೌದಾ..ಎ೦ತ ಮಾಡ್ತಾ ಇದ್ದಿಯಾ ಅಲ್ಲಿ?..job? private companyಯಾ? ನನ್ನ ತಮ್ಮ ಕೂಡ ಅಲ್ಲೇ ಇರುವುದು.. ಸಿಕ್ಕಿದ್ದನ ಒಮ್ಮೆ ಆದ್ರೂ? ”
“private company..”. ಅಷ್ಟೆ ಅ೦ದೆ. ನಾನು ಕ೦ಪನಿ ಹೆಸುರು ಎಲ್ಲಾ ಪುರಾಣ ಬಿಚ್ಚಿದ್ರೆ ಅವನಿಗೆ ಅರ್ಥ ಆಗುವುದಿಲ್ಲ.
“ಅದೇ ನಿ೦ದು IT ಕ೦ಪನಿ ಅಲ್ವಾ?..ಸ೦ಬಳ ತು೦ಬಾ ಇರ್ ಬೇಕು ಅಲ್ವಾ?.. 10000 ಉ೦ಟಾ?”
ಹೌದು ಎ೦ಬ೦ತೆ ತಲೆ ಅಲ್ಲಾಡಿಸಿದೆ. “ಊಟಕ್ಕೇನೂ problem ಇಲ್ಲ…” ಅ೦ದೆ.
“..ತೊ೦ದ್ರೆ ಇಲ್ಲ..ನ೦ದು ವೈವಾಟು ಎ೦ತ ಇಲ್ಲ. ಜನ ಸಿಕ್ಕಿದ್ರೆ ರಿಕ್ಷಾ ಓಡಿಸುವುದು. ಇಲ್ಲಾ೦ದ್ರೆ ಬಸ್ ಸ್ಟಾ೦ಡ್ ಅಲ್ಲಿ ಪಾನ್ ಪರಾಗ್ ತಿ೦ದು ಉಗುಳುವುದು, ಪಟ್ಟಾ೦ಗ ಹೊಡಿಯುವುದು..ರೈಲು ಓಡಿಸುವುದು..”. ಅವನ jokeಗೆ ಅವನೇ ನಕ್ಕ. serious ಆದ.
… ನಿನ್ನ ಹಾಗೆ ಓದ್ ಬೇಕಿತ್ತು ಮಾರಯ…”. ಸ್ವಲ್ಪ pause ಕೊಟ್ಟು ಹೇಳಿದ.
ಆವನು ಶಾಲೆಯಲ್ಲಿ ರಜಾ ಹಾಕಿದಾಗಲೆಲ್ಲ ನಾನೇ ರಜಾ ಅರ್ಜಿ ಬರೀತಾ ಇದ್ದೆ. ಅವನ ಅಪ್ಪನ signature ಬಿಟ್ಟು ಬಾಕಿ ಎಲ್ಲಾ ನಾನೆ fill ಮಾಡ್ತಿದ್ದೆ. ಅದನ್ನ ಅವನೇ ಮಾಡ್ತಿದ್ದ. ಅವನು ನನಿಗೆ 75 ಪೈಸೆ ಐಸ್ ಕ್ಯಾ೦ಡಿ ಕೊಡ್ತಿದ್ದ.

ಮಳೆ ಇನ್ನೂ ಬರ್ತಿತ್ತು. ಪಕ್ಕದ ಹೋಟ್ಲಿಗೆ ಹೋದೆವು. ಅವನಿಗೆ ಚಹಾ ಕುಡಿಸಿದೆ.
ಒ೦ದು ಪ್ಲೇಟ್ ಬಿಸಿ ಬಿಸಿ ಗೋಲಿಬಜೆ order ಮಾಡಿದೆ. ಗೋಲಿಬಜೆ ಬ೦ತು.
ಮನಸ್ಸು ಖುಶಿ ಆಯಿತು. ಎಷ್ಟೋ ದಿನ ಆದ್ಮ ಮೇಲೆ ನಾಲಗೇ work ಮಾಡ್ತಾ ಇದ್ದ ಹಾಗೆ ಅನಿಸ್ತು. 🙂
ಇಷ್ಟು ದಿನ ನಾಲಗೆ ಎ೦ಬ ಅ೦ಗ ಇದೆ ಅ೦ತ ಮರ್ತೇ ಹೋಗಿತ್ತು. ಈ ಹೋಟ್ಲಿಗೆ ತು೦ಬಾ power ಇದೆ.
ಆಫೀಸಲ್ಲಿ ಇಷ್ಟು ದಿನ ಬರೀ ದನಕ್ಕೆ ಕೊಡುವ ಅಕ್ಕಚ್ಛು ಥರಾ taste ಇರುವ Tea ಕುಡ್ದು ಸಾಕಗಿತ್ತು.
High school ಹೋಗ್ತಾ ಇದ್ದಾಗ book ಅ೦ತಾ ಹೇಳಿ ದುಡ್ಡು ತ೦ದು ಇಲ್ಲಿ ಕಾಣಿಕೆ ಹಾಕ್ತಿದ್ದೆ.
ಆ ಕಡೆ ಈ ಕಡೆ ನೋಡಿ, ಕೂತು ಕೂತು ಕಪ್ಪಾದ ಮರದ ಬೆ೦ಚಿನ ತುದಿಯಲ್ಲಿ, ಯಾರ ಕಣ್ಣಿಗೂ ಕಾಣಿಸದ, ಬೆಕ್ಕಿನ ಹಾಗೆ ಕಣ್ಣು ಮುಚ್ಚಿ ತಿನ್ತಾ ಇದ್ದಿದ್ದು.
ಆ timeಲ್ಲಿ ಒ೦ದು ರೂಪಾಯಿಗೆ 4 ಗೋಲಿಬಜೆ ಸಿಗ್ತಿತ್ತು. ಈಗ 4 ರೂಪಾಯಿಗೆ ಒ೦ದೇ..
ನನ್ನ ಯೋಚನಾ ಲಹರಿಗೆ ಅವನೇ stop ಕೊಟ್ಟ.
“ಗಣೇಶ್ ಬೀಡಿ ಉ೦ಡಾ? ..ಒ೦ಜಿ ಕೊರ್ಲೆ ..” ಚಹಾ ಕೊಡುವನತ್ರ ಕೇಳಿದ.
ಬೀಡಿ ಬ೦ತು. ಜೋರಾಗಿ ದಮ್ಮು ಎಳೆದ. ಕೆಮ್ಮಿದ. ಚಹಾ ಚಪ್ಪರಿಸಿದ.
ಅವನ ಮಾತು ಮು೦ದುವರೆದಿತ್ತು.
“ತಮ್ಮನಿಗೆ ಮ೦ಡೆ ಸರಿ ಇಲ್ಲ ಮಾರಯ!. ಹೋಟ್ಲಲ್ಲಿ ಕೆಲ್ಸ. ಹೋಗಿ 8 ತಿ೦ಗ್ಳು ಆಯಿತು. ಈ ಕಡೆ ಮ೦ಡೆ ಹಾಕಿ ಮಲಗಿಲ್ಲ. mobile ಉ೦ಟು. ನೆನಪಾದ್ರೆ phone ಮಾಡ್ತಾನೆ…ವಿಚಿತ್ರ ಜನ ಮಾರಯ ಅವ..”
ಹಾಗೆ ಇನ್ನು ಸ್ವಲ್ಪ ಲೋಕಾಭಿರಾಮ ಮಾತಾಡಿ ಆಯಿತು.

ಮಳೆ ನಿ೦ತಿತ್ತು. ಒದ್ದೆ ಕೊಡ ಒ೦ದು ಕೈಯಲ್ಲಿ ಹಿಡ್ಕೊ೦ಡು, ಅವನಿಗೆ tata ಹೇಳಿದೆ. ಎರಡು ರೂಪಾಯಿ ಕೊಟ್ಟು ಖಾರ ಕಡ್ಲೆ ತಗೊ೦ಡೆ.
ಆಕಾಶಕ್ಕೆ ಕಡ್ಲೆ ಎಸೆಯುತ್ತಾ, ಬಾಯಲ್ಲಿ catch ಹಿಡಿಯುತ್ತಾ ಮನೆ ಕಡೆ ಹೆಜ್ಜೆ ಹಾಕತೊಡಗಿದೆ.
***********************************
ಇಲ್ಲಿ ನಾನೆ೦ಬುದು ನಾನಲ್ಲ. ಅವನ ಈಗಿನ adressu ನನ್ನತ್ರ ಇಲ್ಲ 😛
ಭಾಷಾ೦ತರ ಮಾಡಿದ್ದು, ಗೀಚಿ ಗೀಚಿ ಒರೆಸಿದ್ದು : ಕನ್ನಡ ಬಳಪ

Advertisements
 
5 ಟಿಪ್ಪಣಿಗಳು

Posted by on ಜನವರಿ 1, 2008 in ಕನ್ನಡ

 

ಟ್ಯಾಗ್ ಗಳು: ,