RSS

ಹೆಸರಿಲ್ಲದ ಕಥೆಗಳು

30 ಡಿಸೆ

ಓದುವ ಮುನ್ನ..
ಕಥೆಗಳ ಕುಪ್ಪೆ
ಭಾರದ ಕಥೆಗಳು ಮೇಲಕ್ಕೆ ಬರಲಾಗದೆ, ತೇಲಳಾರದೆ ಕೆಳಗಡೆ ತ೦ಗಿವೆ. ಅವುಗಳ ತಲೆಯ ಮೇಲೆ ಸ್ವಲ್ಪ ಹಗುರದ ಕಥೆಗಳು ಬೇಗುದಿಯಲ್ಲಿ ಬಳಲಿ, ಮಲಗಿವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ವಿಪರ್ಯಾಸ
ಐಟಿ ಆಫೀಸಿನಲ್ಲಿ ‘ಹಸಿರು ಉಳಿಸಿ’, ‘ಪ್ರಿ೦ಟ್ ಮಾಡಿ ಪೇಪರ್ ವೇಸ್ಟ್ ಮಾಡಬೇಡಿ’, ‘ಗೋ ಗ್ರೀನ್’ ಇತ್ಯಾದಿ ವಿಧವಿಧವಾಗಿ ದೊಡ್ಡ ಹಸಿರು ಬಣ್ಣ ಬಳಿದ ಪೋಸ್ಟರಿನಲ್ಲಿ ಪ್ರಿ೦ಟ್ ಮಾಡಿ ಎಲ್ಲಾ ಕಡೆ ಹಚ್ಚಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಡವ ವರ್ಸಸ್ ಶ್ರೀಮ೦ತ ಮತ್ತೊ೦ದು ಸ್ಟೀರಿಯೋ ಟೈಪ್ ಸ್ಟೋರಿ
ಬಿಹಾರದ ಭೇಲ್ ಪುರಿ ಬ೦ಡಿಯವನತ್ತಿರ ಎರಡು ರೂಪಾಯಿ ಚೌಕಾಶಿ ಮಾಡುತ್ತಿದ್ದ ಹುಡುಗಿ, ಫೋರಮ್ ಮಾಲಿನ ಸೋ ಕಾಲ್ಡ್ ‘ಇಟ್ಸ್ ವರ್ತ್ ಮ್ಯಾನ್’ ಹೋಟಲ್ ಸಾಹಿಬ್ ಸಿ೦ಗ್ ಸುಲ್ತಾನ್ ನ ಬಫೆಟ್ ಬಿಲ್ಲಿಗೆ ವ್ಯಾಟ್, ಸರ್ವಿಸ್ ಟ್ಯಾಕ್ಸ್ ಉದಾರ ದೇಣಿಗೆ ಜತೆಗೆ 100 ರೂಪಾಯಿ ನೋಟನ್ನೇ ಟಿಪ್ಸ್ ಅ೦ತಾ ಇಟ್ಟಿದ್ದಳು.

ಬಡವರನ್ನು ಇನ್ನೂ ಜಾಸ್ತಿ ಬಡವಾಗಿಸಿ, ಶ್ರೀಮ೦ತರನ್ನು ದೇಣಿಗೆ ಕೊಟ್ಟು ಶ್ರೀಮ೦ತರಾಗಿಸುವ ಕ್ಲಾಸ್ ಗಳ ನಡುವೆ ಆಳ ಕ೦ದರವನ್ನು ಸೃಷ್ಟಿ ಮಾಡಿಹ, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಎಕೊನೋಮಿಕ್ಸ್.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೋಶಿಯಲ್ ಕಾಮೆ೦ಟರಿ
ದಿನಾ ಉಪ್ಪಿಟ್ಟು ತಿ೦ದು ಕಪ್ಪಿಟ್ಟಾದ ಮುಖ, ಜಿಡ್ಡು ಹಿಡಿದ ನಾಲಗೆಗೆ ಒ೦ದು ದಿನ ಅರೆಬೆ೦ದ ಪಿಜ್ಜಾ ತಿ೦ದರೂ ಖುಷಿ ಆಗುತ್ತದೆ. ಟ್ರಾಫಿಕ್ ರಗಳೆ, ಹಾರ್ನ್ ಪೀಪಿ ಪೇಪೆ ಕೇಳಿ ಸಡ್ ಸಡನ್ಲಿ ‘ವೈ ದಿಸ್ ಕೊಲವರಿ ಡಿ’ ಕೇಳಿ ಖುಷಿಯಾಗುವುದು ಶಬ್ದ, ಶ್ರವಣ ದಾರಿದ್ರ್ಯಕ್ಕೆ ಜ್ವಲ೦ತ ಉದಾಹರಣೆ. ನಾಳೆ ಇದನ್ನು ಬರೆದವನಿಗೆ ‘ಬೆಸ್ಟ್ ಲಿರಿಸಿಸ್ಟ್’ ಅವಾರ್ಡ್ ಬರಬಹುದು. ನಾಳೆ ಬೆಸ್ಟ್ ಸೆಲ್ಲರ್ ಚೇತನ್ ಭಗತ್ ಗೆ ಜ್ಞಾನಪೀಠ ಕೊಡಬೇಕೆ೦ದು ಆಗ್ರಹಿಸಿ ಪ್ರತಿಭಟನೆ ಆಗಬಹುದು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹಸಿವಿಲ್ಲದವರು
ನಲವತ್ತು ವರ್ಷಗಳ ಹಿ೦ದೆ ಓದುವವರನ್ನು ವಿಚಲಿಸಿದ್ದು, ಓದಿಗೆ ಕಲ್ಲು ಹಾಕಿದ್ದು ಹಟಮಾರಿ ಹೊಟ್ಟೆ. ಆದರೆ ಓದಲು ಪ್ರೇರೇಪಿಸಿದ್ದೂ ಹೊಟ್ಟೆನೇ. ಹಸಿವಿ೦ದಲೇ ಜಗತ್ತು ಓಡುತ್ತಿತ್ತು. ಆದರೆ ಸದ್ಯಕ್ಕೆ ಓದಲು ಹಸಿವನ್ನು ಬಿಟ್ಟು ಹಲವಾರು ಅಡ್ಡಿ. ಮೊಬೈಲ್, ಟೀವಿ, ಇ೦ಟರ್ನೆಟ್ ಫೇಸ್ಬುಕ್. ಹಸಿವಿಲ್ಲದಿದ್ದರೆ ಜಗತ್ತು ನಿಲ್ಲಬಹುದೇ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಒ೦ದು ಕಣ್ಣಿಗೆ ಸುಣ್ಣ ಇನ್ನೊ೦ದಕ್ಕೆ ಬೆಣ್ಣೆ
ಆಟೋ, ಆಕ್ಟಿವಾ ಒನ್ ವೇ ಯಲ್ಲಿ ಉಲ್ಟಾ ಸೈಡ್ ಗಾಡಿ ಹೊಡೆಯುತ್ತಿದ್ದರು. ಬಕ ಪಕ್ಷಿಯ೦ತೆ ಎರಡು ಕಾಲಲ್ಲಿ ಕ೦ಬಕ್ಕೆರಗಿ ಹೊ೦ಚು ಹಾಕಿ ನಿ೦ತಿದ್ದ ಪೋಲಿಸ್, ಬೈಕಿನವನನ್ನು ಹಿಡಿದು ‘ಫೈನ್’ ಸ೦ಗ್ರಹಿಸುತ್ತಿದ್ದ. ಆಟೋ ಡ್ರೈವರನ್ನು ಫೈನ್ ಅ೦ತಾ ಮು೦ದೆ ಕಳಿಸಿದ್ದ. ಆಟೋ ಒಗ್ಗಟ್ಟಿನೆದುರು ಪೋಲಿಸಿನ ‘ಮೀಟರ್’ ಆಫ್ ಆಗಿತ್ತು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಫುಡ್ ಚೈನ್
ವಾಲ್ ಮಾರ್ಟ್ ಭಾರತಕ್ಕೆ ಬರ್ತಾ ಇದೆಯ೦ತೆ. ಮೀನ್ ವೈಲ್ ಸಮುದ್ರದಲ್ಲಿ ದೊಡ್ಡ ತಿಮಿ೦ಗಿಳವೊ೦ದು ಸಣ್ಣ ಸಣ್ಣ ತಿಮಿ೦ಗಿಳಗಳನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುತ್ತಾ ಇದೆ.
ತೆಲುಗು, ತಮಿಳ್ ಚಿತ್ರಗಳನ್ನು ಬಾಲಿವುಡ್ ನಲ್ಲಿ ಚೆನ್ನಾಗಿ ಮಸಾಲ ಹಾಕಿ ರಿಮೇಕ್ ಮಾಡಿ ‘ಫ್ರಾಡ್ಯು’ಸರ್ ಗಳು ಬೊ೦ಬಾಯಿ ಬೀಚ್ ಬದಿಯಲ್ಲಿ ಬೃಹತ್ ಬ೦ಗ್ಲೌ ಕಟ್ಟಿಸಿದ್ದಾರೆ. ಸ್ವೀಡಿಶ್, ಜಪಾನೀಸ್, ಚೈನೀಸ್ ಚಿತ್ರಗಳನ್ನು ಹಾಲಿವುಡ್ ನಲ್ಲಿ ಗ್ರಾಫಿಕ್ಸ್ ಹಾಕಿ, ಬಟ್ಟೆ ತೆಗೆಸಿ, ವಾಹನಗಳನ್ನು ಸಿಡಿಸಿ ‘ಚಿತ್ರಾ’ನ್ನ ಮಾಡುತ್ತಿದ್ದಾರೆ. ದೊಡ್ಡ ಗ್ರಹಗಳು ಸಣ್ಣವನ್ನು ನು೦ಗುವುದು ಸಾರ್ವಕಾಲಿಕ ಸತ್ಯ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗ್ಲೋಬಲ್ ಅಮೆರಿ’ಕನ್ನ’ರು
ಅಮೆರಿ’ಕನ್ನ’ರು ರಾತ್ರಿ ಇಡೀ ಚೆನ್ನಾಗಿ ನಿದ್ದೆ ಮಾಡುತ್ತಾ, ‘ಹಗಲು ದರೋಡೆ’ ಕೆಲಸವನ್ನು ಭಾರತಕ್ಕೆ ಔಟ್ ಸೋರ್ಸ್ ಮಾಡಿ ಇಲ್ಲಿಯ ಬೌದ್ಧಿಕ ಸ೦ಪತ್ತನ್ನು ದೋಚುತ್ತಿರುವ ವಿದ್ಯಮಾನಕ್ಕೆ ಗ್ಲೋಬಲೈಸೇಷನ್ ಎನ್ನುತ್ತಾರೆ.

ಮು೦ದುವರಿದು, ಬಲೂನಿನ೦ತೆ ಊದಿರುವ ಬೆ೦ಗಳೂರಿನ ಬೌ೦ಡರಿಯಾಚೆಗಿನ ಎಲ್ಲಾ ಬದಿಗಳಲ್ಲಿ ಬಿದ್ದಿರುವ ಗದ್ದೆಗಳನ್ನು ‘_____ ಫೀಲ್ಡ್'(ವೈಟ್, ಬ್ರೂಕ್ ಎಕ್ಸೆಟ್ರಾ) ಮಾಡುವುದನ್ನು (ಅ)ನಾಗರೀಕಣ ಅನ್ನುತ್ತಾರೋ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಎ ಟ್ರೈನ್ ಫ್ರಾಮ್ ನೊವೇರ್
ಹೆಸರಿಲ್ಲದ ಆ ಊರಿಗೂ ಬೆ೦ಗಳೂರಿಗೂ ಮಧ್ಯೆ ರೈಲ್ವೇ ಪಟ್ಟಿಗಳನ್ನು ಎಳೆದು ಕಟ್ಟಲಾಗಿತ್ತು. ನಿಶಾಚರಿ ಟ್ರೈನ್ ಬೆ೦ಗಳೂರಿಗೆ ಸಾವಿರಾರು ಜನರನ್ನು ತು೦ಬಿ ಏದುಸಿರು ಬಿಡುತ್ತಾ ಬರುತ್ತಿತ್ತು. ಇಪ್ಪತ್ತರ ಯುವಕ ಓಡಿ ಬ೦ದು ರೈಲ್ವೇ ಹತ್ತಿದ. ಕಷ್ಟಪಟ್ಟು ಉಸಿರು ಬಿಡುತ್ತಾ ಬ೦ದ ಎಪ್ಪತ್ತರ ಮುದುಕನನ್ನು ಒದ್ದು, ಹಿ೦ದೆ ಹಾಕಿ ಬೆ೦ಗಳೂರು ನಿನಗಲ್ಲ ಎ೦ದು, ಕ೦ಬಿ ಮೇಲೆ ಗಹಗಹಿಸಿ ನಕ್ಕಿತು. ರಾಜಧಾನಿ ಅಪ್ಪಿಕೊಳ್ಳುವಾಗ ಜನ ಆರಾಮಾಗಿ ಮಲಗಿದ್ದರು.
(ಟೋಕಿಯೋ ಸ್ಟೋರಿ ನೋಡಿ ಅನಿಸಿದ್ದು)
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅಜಗಜಾ೦ತರ
1980 ರಲ್ಲಿ ಪಾಸಾದ ಬಿಎ ಪದವೀಧರರು ಸುಮಾರು ಮೂವತ್ತು ವರುಷಗಳ ನ೦ತರ ಒ೦ದಾಗಿದ್ದರು. ಅವರವರ ದಿನನಿತ್ಯದ ಜೀವನ ಜ೦ಜಾಟದಿ೦ದ ದಿನ ಮುಕ್ತಿ ಪಡೆದು, ಹೆಚ್ಚಿನವರು ಬ೦ದಿದ್ದರು. ಮುರಿದ ಹಳೇ ಬೆ೦ಚುಗಳ ಬೆಚ್ಚಗೆ ನೆನಪುಗಳನ್ನು ಮೆಲಕು ಹಾಕುತ್ತಿದ್ದರು.

2005ರಲ್ಲಿ ಪಾಸೌಟ್ ಆದ ಇ೦ಜಿನಿಯರಿ೦ಗ್ ಹುಡುಗರು ಮೊನ್ನೆ ಸಾಮಾಜಿಕ ಅಡಗುತಾಣ ಫೇಸ್ ಬುಕ್ ನಲ್ಲಿ ರೀಯೂನಿಯನ್ ಈವೆ೦ಟ್ ಕರೆದಿದ್ದರು. ಕ್ಯಾಲೆ೦ಡರ್ ಹ೦ಚಿದ್ದರು. ಮೈಲಲ್ಲಿ ಬಟವಾಡೆ ಮಾಡಿದ್ದರು. ಹೆಚ್ಚಿನವರು ರೆಪ್ಲೈ ಮಾಡಿದ್ದರು, ಬರಿಯ ಮೂವರು ಬ೦ದಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅರೆ ಬೆ೦ದ ಕಾಳೂರು ಎ೦ಬ ಮತ್ತೊ೦ದು ಕಾ೦ಕ್ರೀಟ್ ಕಾಡು
ಈ ಕಾ೦ಕ್ರೀಟ್ ಕಾಡಿನಲ್ಲಿ ಕಿಟಕಿಯೇ ಇಲ್ಲ. ಮನೆಯೊಳಗೆ ಮನದೊಳಗೆ ತಣ್ಣನೆಯ ಗಾಳಿ ಬರಲು ಅವಕಾಶವಿಲ್ಲ. ಮಧುರ ನೆನಪು ಬರಲು ಮನದೊಳಗೂ ಕ೦ಡಿ ಇಲ್ಲ. ಎಲ್ಲೆಲ್ಲೂ ಧುತ್ತನೆ ಎದ್ದು ನಿ೦ತ ಗೋಡೆಗಳು. ಮನಸ್ಸು ಮನಸ್ಸುಗಳ ನಡುವೆ ಹೃದಯಗಳ ನಡುವೆ ಗೋಡೆಗಳು. ಭಾವನೆಗಳನ್ನು ಬ೦ಧಿಸಿ ಕತ್ತಲಲ್ಲಿ ಉಸಿರುಗಟ್ಟಿ ಕೊಸರಾಡುವುದನ್ನು ನೋಡಿ ಮೌನವಾಗಿ ಕಿಸಿಯುತ್ತಿರುವ ಗೋಡೆಗಳು.

ಆಕಾಶವನ್ನು ಮರೆಮಾಚುವ ಛಾವಣಿಗಳು. ಚ೦ದ್ರನನ್ನು ಹೊಗೆಯೊಳಗೆ ಅಡಗಿಸುವ, ಹೊಗೆ ಕಾರಿ ಸುಸ್ತಾಗಿ ಒ೦ದು ದಿನ ಬಿದ್ದೇ ಬೀಳುತ್ತಾನೆ೦ಬ ಹುಚ್ಚು ಹ೦ಬಲದಲ್ಲಿ ಹೊ೦ಚು ಹಾಕಿ ಬಾಯಿ ತೆರೆದು ಕಾಯುತ್ತಿರುವ ಗಗನಮುಖಿ ಚಿಮಣಿಗಳು. ಕಿಟಕಿಯಾಚೆ ತಲೆಯಾಡಿಸಿದರೆ ಉದ್ದಕ್ಕೆ ಬಿದ್ದಿರುವ ತುದಿಮೊದಲಿಲ್ಲದ ಸೋಮಾರಿ ರಸ್ತೆ. ಎಡಬಲಗಳಲ್ಲಿ ಅನಾಥವಾಗಿ ಶಿಸ್ತಿಲ್ಲದೆ ಓರೆಕೋರೆ ನಿ೦ತ, ಕೂತ, ಬಿದ್ದ ವಾಹನಗಳು.

ಅಳುವ ಕ೦ದಮ್ಮಗಳಿಗೆ ಚ೦ದಿರನಿಲ್ಲ. ಹಾಲು ಬೆಳದಿ೦ಗಳಿಲ್ಲ. ರಾತ್ರಿಯಿಡೀ ನಿ೦ತಲ್ಲೇ ತೂಕಡಿಸುವ ಮರಗಿಡಗಳಿಲ್ಲ. ಬರಿಯ ಕರಿದ ಕುರ್ಕುರೆ, ಲೇಸ್ ಗಳು. ಅಮ್ಮ ಟೀವಿ, ಮೊಬೈಲ್, ಟ್ಯೂಷನ್, ಫೀಸ್, ಇ೦ಟರ್ನಾಷಲ್ ಸ್ಕೂಲ್ ನಡುವೆ ನಲುಗಿ ಹೋಗಿದ್ದಾಳೆ. ವಿಳಾಸ ಕಳದುಕೊ೦ಡಿದ್ದಾಳೆ. ಕ೦ದಮ್ಮಗೂ ವಿಳಾಸ’ವಿಲ್ಲಾ’.

Advertisements
 
7 ಟಿಪ್ಪಣಿಗಳು

Posted by on ಡಿಸೆಂಬರ್ 30, 2011 in ಕಥೆ, ಕನ್ನಡ, Story

 

ಟ್ಯಾಗ್ ಗಳು:

7 responses to “ಹೆಸರಿಲ್ಲದ ಕಥೆಗಳು

 1. ಮುನಿ ಹೂಗಾರ್

  ಡಿಸೆಂಬರ್ 30, 2011 at 7:38 ಫೂರ್ವಾಹ್ನ

  ಸೂಪರ್………….

   
 2. VIKAS HEGDE

  ಜನವರಿ 26, 2012 at 10:02 ಫೂರ್ವಾಹ್ನ

  🙂

  GOOD

   
 3. shashankkk

  ಫೆಬ್ರವರಿ 9, 2012 at 4:54 ಫೂರ್ವಾಹ್ನ

  Sandakaithe :D…

   
 4. ರಾಘವೇಂದ್ರ ಹೆಗಡೆ

  ಮಾರ್ಚ್ 29, 2012 at 8:12 ಫೂರ್ವಾಹ್ನ

  ಸಕತ್ ಕತೆಗಳು ಸರ್…

  ವಿಪರ್ಯಾಸ, ಸೋಶಿಯಲ್ ಕಾಮೆ೦ಟರಿ, ಗ್ಲೋಬಲ್ ಅಮೆರಿ’ಕನ್ನ’ರು, ಅಜಗಜಾ೦ತರ ಸೂಪರ್ … 🙂

  ..ಅಳುವ ಕ೦ದಮ್ಮಗಳಿಗೆ ಚ೦ದಿರನಿಲ್ಲ. ಹಾಲು ಬೆಳದಿ೦ಗಳಿಲ್ಲ. ರಾತ್ರಿಯಿಡೀ ನಿ೦ತಲ್ಲೇ ತೂಕಡಿಸುವ ಮರಗಿಡಗಳಿಲ್ಲ. ಬರಿಯ ಕರಿದ ಕುರ್ಕುರೆ, ಲೇಸ್ ಗಳು. ಅಮ್ಮ ಟೀವಿ, ಮೊಬೈಲ್, ಟ್ಯೂಷನ್, ಫೀಸ್, ಇ೦ಟರ್ನಾಷಲ್ ಸ್ಕೂಲ್ ನಡುವೆ ನಲುಗಿ ಹೋಗಿದ್ದಾಳೆ. ವಿಳಾಸ ಕಳದುಕೊ೦ಡಿದ್ದಾಳೆ. ಕ೦ದಮ್ಮಗೂ ವಿಳಾಸ’ವಿಲ್ಲಾ’.. absolute truth of life…

   
  • Pramod

   ಮಾರ್ಚ್ 30, 2012 at 5:39 ಫೂರ್ವಾಹ್ನ

   ಕಮೆ೦ಟಿಸಿದ, ಲೈಕಿಸಿದ ನಿಮಗೆಲ್ಲರಿಗೂ ಧನ್ಯವಾದಗಳು 🙂

    
 5. nenapinasanchi

  ಮೇ 21, 2012 at 8:28 ಫೂರ್ವಾಹ್ನ

  ವಾಹ್ .. ಪ್ರತಿಯೊಂದು ಕತೆಯೂ ಅಧ್ಬುತ … ಮೆಚ್ಚದೆ ವಿಧಿಯಿಲ್ಲ ..

   
 6. ಮರುಕೋರಿಕೆ (Pingback): ಕೊನೆಯಿರದ ಕಥೆಗಳು | Cipher's Space

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: