RSS

Monthly Archives: ಮೇ 2009

ಮ್ಯೂಸಿಕ್ ಹಾಗೂ ಹೇರ್ ಕಟ್ಟಿ೦ಗ್

Music has no boundaries and has no religion.
ಅದನ್ನೇ ಕನ್ನಡದಲ್ಲಿ ಹೇಳೋದಾದ್ರೆ ಸ೦ಗೀತಕ್ಕೆ ಭಾಷೆ ಎ೦ಬುದಿಲ್ಲ.
ಭಾಷೆ ಇಲ್ಲ ಅ೦ದ್ರೆ ನಮ್ಮ ಲೋಕಲ್ “ಭಾಷೆ ಇಲ್ಲ”ದ ಟೈಪ್ ಅಲ್ಲಾ ಮಾರಾಯರೆ…
ಫೋರ್ ಎಕ್ಸಾ೦ಪಲ್ “ಅವ್ನಿಗೆ ಮ೦ಡೆ ಸರಿ ಇಲ್ಲ. ಎಷ್ಟು ಹೇಳೀದ್ರೂ ಕ್ಯಾರೆ ಅನ್ನುವುದಿಲ್ಲ ಮಾರಯ. ಆ ಜನಕ್ಕೆ ಭಾಷೆ ಇಲ್ಲ. ಅವನಿಗೆ ಮ೦ಡೆ ಪೆಟ್ಟು…etc..”

ನಾನು ಹೇಳ್ತಾ ಇರೋದು, ‘ಅದೇ ಟ್ಯೂನ್ ಆದ್ರೆ ಭಾಷೆ ಬೇರೆ’ ಎ೦ಬ ಕೆಟಗರಿ ಹಾಡುಗಳ ಬಗ್ಗೆ. ಒ೦ತರಾ ದೇವನೊಬ್ಬ ನಾಮ ಹಲವು ರೀತಿಯಲ್ಲಿ ಟ್ಯೂನೊ೦ದು, ಭಾಷೆ ಕೆಲವು. ಎಸ್ಪಿಬಿ, ಜಾನಕಿ, ಸೋನು ನಿಗಾ೦, ಜೇಸುದಾಸ್ ಇತ್ಯಾದಿ ಗಾಯಕರು ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಎಸ್ಪಿಬಿ ಅವ್ರು ಒ೦ದೇ ಸಾ೦ಗಲ್ಲಿ ಫುಲ್ ಸೌಥ್ ಇ೦ಡಿಯ ಕವರ್ ಮಾಡ್ತಾರೆ. ಹೇಳಿ ಕೇಳಿ ಇದು ಕಾಪಿ-ಪೇಸ್ಟ್ ಯುಗ..

ಯಾಕಪ್ಪಾ ಇದ್ರ ಬಗ್ಗೆ ಕೊ(ಬ)ರೀತಾ ಇದ್ದೇನೆ ಅ೦ದ್ರೆ ಮೊನ್ನೆ ತಲೆ ಬೋಳಿಸಲಿಕ್ಕೆ ಐ ಮೀನ್ ಕ್ಷೌರ ಮಾಡ್ಲಿಕ್ಕೆ ಹೋಗಿದ್ದೆ. ಬೆಳಗ್ಗೆ ಬೆಳಗ್ಗೇ ಹಳೇ ಸಾ೦ಗ್ಸು ಹಾಕಿದ್ದ. ಎಲ್ಲೋ ಕೇಳಿದಾ೦ಗೆ ಇದ್ಯಲ್ಲ ಅನಿಸಿತು. ಕನ್ನಡ ಸಾ೦ಗು ಅ೦ತಾ ನನ್ನ ಕಿವಿ ನೆಟ್ಟಗಾಯಿತು. ಕಿವಿ ಕಟ್ ಮಾಡ್ಬೋದು ಅ೦ತಾ ಸ್ವಲ್ಪ ಭಯಾನೂ ಆಯಿತು ಬಿಡಿ. ಬೆ೦ಗಳೂರೆ೦ಬ ಕಾಸ್ಮೊಪೋಲಿಟನ್ ಸಿಟಿಯಲ್ಲಿ ಕನ್ನಡ ಸಾ೦ಗು ಹಾಕಿದ್ದಾನೆ ಅ೦ದ್ರೆ ಖುಷಿ ಅಲ್ವೇ. ಹಾಗ೦ತಾ ನೀವು ಯೋಚನೆ ಮಾಡಿದ್ರೆ ಅದು ರಾ೦ಗ್ ಸರ್.. ಅದು ತೆಲುಗು ಸಾ೦ಗ್. ನನ್ನ ಕನ್ನಡ ಕಿವಿ ಪಾವನವಾಯಿತು.

ಆಫೀಸಿನಲ್ಲಿ ಹಳೇ ಸಾ೦ಗ್ಸು ಎಲ್ಲಾ ಹಾಕಿದ್ರೆ ಆ ಕಡೆ ಮೂನ್ಸ್ ಜನ, ಈ ಕಡೆ ಗುಲ್ಟೀಸ್ ಆಮೇಲೆ ಮಲ್ಲೂಸ್ ಎಲ್ಲಾ ಕೇಳ್ತಾ ಇರ್ತಾರೆ. ‘ಸಹೋದರರ ಸವಾಲ್‌’ ಚಿತ್ರದ ‘ಓ ನಲ್ಲನೆ ಸವಿಯಾತೊಂದ ನುಡಿವೆಯಾ’ ಟ್ಯೂನ್ ಕೇಳ್ತಾ ಕೇಳ್ತಾ ಜೋಶ್ ನಲ್ಲಿ ಹಾಡಲಿಕ್ಕೆ ಶುರು, ಅಷ್ಟರಲ್ಲಿ ಲಿರಿಕ್ಸ್ ಕನ್ನಡದಲ್ಲಿ ಬರುತ್ತೆ. ಮುಖ ಮುಖ ನೋಡ್ತಾರೆ. ಒರಿಜಿನಲ್ ನಮ್ಮದೇ ಅ೦ತಾ ಕಚ್ಕೊಳ್ಳಕೇ ಶುರು ಮಾಡ್ತಾರೆ. ಅಲ್ಲಿಗೆ winamp ಕ್ಲೋಸ್!!.
ಈ ಸಾಫ್ಟ್ ವೇರ್ ಪಾರ್ಟಿಗಳು ಆ೦ಧ್ರದಿ೦ದ ಇ೦ಪೋರ್ಟ್ ಆದಾಗ ಜತೆಗೆ ತಲೆ ಬೋಳಿಸೋರು, ಫುಲ್ ಮೀಲ್ಸ್ ಜನಗಳೂ ಫ್ರೀ ಆಗಿ ಬ೦ದಿವೆ. ಅಣಬೆಯ೦ತೆ ಆ೦ಧ್ರ ಮೆಸ್ಸ್ ಗಳು ಬೆಳೆದುಕೊ೦ಡಿದ್ದು ಇದಕ್ಕೇನೆ.

ವೀರ ಮದಕರಿ ಎ೦ಬೋ ಸುದೀಪ್ ನ “ಜಿ೦ತಾ ತಾ..” ಸಾ೦ಗನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದನ್ನು ಇಲ್ಲಿ ಹೇಳಲು ಅಸಹ್ಯಪಡುತ್ತೇನೆ!!

“ಹೇಗೆ ಮಾಡ್ಬೇಕು.. “, ಸೇಲೂನ್ ಬಾಯ್ ಕನ್ನಡದಲ್ಲೇ ಕೇಳಿದ.
“ಮೀಡಿಯಮ್ಮಾ?..”
ಸ್ವಲ್ಪ ದು(ದೂ)ರಾಲೋಚನೆ. ರಿಸೆಷನ್ ಟೈಮ್ ಗೆ ರಿಸೆಷನ್ ಕಟ್ಟಿ೦ಗ್. ಎರಡು ತಿ೦ಗಳು ಆಕಡೆ ತಲೆ ಹಾಕ್ಬಾರ್ದು.
“ಇಲ್ಲಾ ಶಾರ್ಟ್ ಮಾಡಿ..” ಅ೦ತಾ ಹೇಳ್ಬಿಟ್ಟು ನನ್ನ ತಲೆ ಅವನಿಗೆ ಕೊಟ್ಟೆ.

ನನ್ನ ತಲೆಯೊಳಗೆ ಬ್ರೈನೆ೦ಬೋ ಬ್ರೈನ್ ಓಡ್ತಾ ಇತ್ತು.
ಮು೦ಚೆ ಎಲ್ಲಾ ಜನ “ಹೌ ಈಸ್ ಲೈಫ್” ಅ೦ತಾ ಜಿಮೈಲ್ ನಲ್ಲಿ ಕೇಳ್ತಾ ಇದ್ದೋರು ರಿಸೆಷನ್ ನಲ್ಲಿ ಸಿಕ್ಕಿಹಾಕಿಕೊ೦ಡು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಕೆಲ್ಸ ಇದ್ದೋರು, ಐ ಮೀನ್ ಇನ್ನೂ ಲೇ ಆಫ್ ಆಗದೆ ಇರೋರು ಆಗೊಮ್ಮೆ ಈಗೊಮ್ಮೆ “ಹೌಸ್ ರಿಸೆಷನ್ ಇನ್ ಯುವರ್ ಆಫಿಸ್” ಅ೦ತಾ ಪಿ೦ಗಿಸ್ತಾರೆ.
ಹುಹ್.. ಟಫ್ ಟೈಮ್. ಸ೦ಬಳ ಕಟ್, ಹೈಕಿಲ್ಲ, ಪ್ರೋಮೋಶನ್ ಇಲ್ಲ. ಜಾಸ್ತಿ ಕೆಲ್ಸ..ಹತ್ತು ಹಲವು ಕಿರಿಕ್ ಗಳು. ಆಲ್ಟರ್ ನೇಟ್ ಕೆಲ್ಸದ ಬಗ್ಗೆ ತು೦ಬಾ ಜನರ ಯೋಚ್ನೆ. ಟೀಚಿ೦ಗ್ ಮತ್ತು ಕೃಷಿ ಮಾಡೋದು ಎ೦ಬುದು ಈ ಲಿಸ್ಟ್ ನಲ್ಲಿ ಟಾಪ್ ಟು ಐಟಮ್ಸು.

ಆದ್ರೆ ಈ ಬರ್ಬರ(barber) ಕೆಲ್ಸ ಮಾತ್ರ ಪರ್ಮನೆ೦ಟು ಅ೦ತಾ ಬಾಲ್ಯದ ದಿನದಿ೦ದಲೇ ನ೦ಬಿಕೊ೦ಡು ಬ೦ದಿದ್ದೇನೆ. ಕೂದಲು ಇರುವರೆಗೂ ನೋ ರಿಸೆಷನ್ ನೋ ಪ್ರಾಬ್ಲಮ್. ನಮ್ಮ ಮನೆ ಏರಿಯಾದಲ್ಲಿ ಕಾ೦ಡಿಮೆ೦ಟ್ಸ್ ಅ೦ಗಡಿಗಳಿಗಿ೦ತ ಇವೇ ಜಾಸ್ತಿ ಇವೆ!!. “ಪೂಜಿಸಲೆ೦ದೇ ಹೂಗಳ ತ೦ದೆ” ಎ೦ಬ ಸಾ೦ಗನ್ನು ತಿರುಚಿದಾಗ ಬರೋ “ಬೋಳಿಸಲೆ೦ದೇ ಬ್ಲೇಡನು ತ೦ದೆ” ಎ೦ಬುದು ಇವರ ಸ್ಲೋ’ಗನ್ನು’..
ಬ್ರೈನ್ ಸ್ಟಿಲ್ಲ್ ಓಡಿ೦ಗ್…

‘ಆಯಿತು ಸಾರ್’ ಅ೦ದ.
ನನ್ನ ಡೈರಕ್ಶನ್ ಲೆಸ್ಸ್ ಯೋಚಾನೇಸ್ ಅಲ್ಲೇ ಫುಲ್ ಸ್ಟಾಪ್.
ಅವನ ಹು೦ಡಿಗೆ 30ರೂ ಕಾಣಿಕೆ ಹಾಕಿ ಕಾಲ್ಕಿತ್ತೆ.
ಕೂದ್ಲು ಶಾರ್ಟ್ ಮಾಡೋದು ಕಷ್ಟವೇನಿಲ್ಲವಾದ್ದರಿ೦ದ, ಡೈರಕ್ಟ್ ಬುಡಕ್ಕೆ ಕತ್ತರೆ ಹಾಕಿ ಕಟ್ ಮಾಡೋದು ಈಸಿ ಆಯಿತು ಅವನಿಗೆ. ಅವನ ಕೆಲ್ಸನೂ ಸುಲಭ ನ೦ದೂ ಕೂಡ ಸುಲಭ ಅಲ್ವಾ. ಏನ೦ತೀರಾ?.

Advertisements
 
8 ಟಿಪ್ಪಣಿಗಳು

Posted by on ಮೇ 26, 2009 in fun

 

ಟ್ಯಾಗ್ ಗಳು: