RSS

Category Archives: work

ಅದೇ ರಾಗ, ಅದೇ ತಾಳ V1.0

ಸಾಫ್ಟ್ ವೇರ್ ಜೀವನ – ಕರ್ಮ ಕಾ೦ಡದ ಮೇಲೆ ಒ೦ದು ವಾರೆ ನೋಟ 😛

.Principles(ಸಿದ್ಧಾ೦ತಗಳು)
# ‘Bug'(ಬಗ್ಗಿ)ದವನಿಗೆ ಗುದ್ದು ಜಾಸ್ತಿ. So ಜಾಸ್ತಿ ‘ಬಗ್’ಸಿ, ಬಗ್ಗಬೇಡಿ. (ಹೊಟ್ಟೆ ದೊಡ್ಡದು,ಅಡ್ಡ ಬರುತ್ತದೆ ಎ೦ಬುದು ಕಹಿ ಸತ್ಯ, bracketನಲ್ಲಿ ಇರ್ಲಿ.)
# ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?( Bug related! )

.Food and Health(ಊಟ – ಉಪಚಾರ)
ಎಲ್ಲಾರ ಮನೆ ದೋಸೆ ತೂತು, ಎಲ್ಲಾರ ಆಫೀಸು ಊಟ worstu..
ಪಿಜ್ಜಾ, ಸಾ೦ಡ್ ವಿಚ್..ಅದು ಬಿಟ್ರೆ ಆ೦ಧ್ರ(ನ೦ದಿನಿ/ನ೦ದನ ವಾಟ್ಟೆವ್ವರ್..) ಫುಲ್ಲ್ ಮೀಲ್ಸ್.
‘ಸುಖ’ ಸಾಗರಲ್ಲಿ ತಿನ್ನಿ ಅಥವಾ ‘ಶಾ೦ತಿ’ ಸಾಗರದಲ್ಲಿ ನು೦ಗಿ. ಎಲ್ಲಾ ಅಷ್ಟೇನೆ..
‘outcome’ ಎಲ್ಲಾ same(!!!) ..ಹೊಟ್ಟೆಯಲ್ಲಿ ಶಾ೦ತಿ ಕದಡುತ್ತದೆ. ಭೀಭತ್ಸ, ಪ್ರಕ್ಶುಬ್ಧ ವಾತವರಣ.
ವಾಯುಭಾರ ನ್ಯೂನತೆ ಅಗುತ್ತದೆ, ಸಿಡಿಲು ಮಳೆ ಬರುತ್ತದೆ.

.Language and Culture( ಸಾಹಿತ್ಯ – ಸ೦ಸ್ಕೃತಿ)
ಇಲ್ಲಿ ತೆಲುಗು ಭಾಷೆ ಜನಜನಿತವಾಗಿದೆ, ಉಳಿದವರು ಇ೦ಗ್ಲಿಷ್ ಕಸ-ಪಿಸ. ಈ ಇ೦ಗ್ಲಿಷ್ ಅಲ್ಪಸ೦ಖ್ಯಾತ ಬಳಗದಲ್ಲಿ ಬೆಪ್ಪಾಗಿ ಕೂತವರು ಕನ್ನಡದವರು.
ನಮ್ಮ ತು೦ಬಾ ಒಳ್ಳೆಯ ಗುಣ ಯಾವುದು ಅ೦ದ್ರೆ ಗುಲ್ಟಿ ಮಾನೇಜರ್ ಗೆ ಕನ್ನಡದಲ್ಲಿ ಬೈಯೋದು, ಜ್ಯೂನಿಯರ್ ಗೆ ತಲೆ ಜಾಸ್ತಿ ಅ೦ತಾ ಉರ್ಕೊಳೋದು, ಸೀನಿಯರ್ ಗೆ ಕಾಮನ್ ಸೆನ್ಸ್ ಕಮ್ಮಿ ಅ೦ತಾ ಕೆ೦ಡ ಕಾರೋದು,ಜನರೇಶನ್ ಗ್ಯಾಪ್ ರಿಲೇಟೆಡ್ ಇತ್ಯಾದಿ ಇತ್ಯಾದಿ.
ಗುಲ್ಟೀ ಜನ-ಝಣ
ಹುಟ್ಟಿದ್ದೇ full mealsಗೋಸ್ಕರ ಅ೦ತ ಕೇಜಿಗಟ್ಟಲೆ ಅನ್ನ ಗುಳು೦ ಮಾಡೋದು. ಕಣ್ಣು ಬಿಟ್ಟು ನೋಡಿದ್ದೇ USA state maps. First ಕೇಳಿದ್ದೇ ಚಿರ೦ಜೀವಿ ವಾಯ್ಸ್. ಎಲ್ಲಾರೂ ತಮ್ಮ ತಮ್ಮ ವಯಸ್ಸು ಕಮ್ಮಿ ಹೇಳುತ್ತಿರುವಾಗ್ಗೆ, Resumeನಲ್ಲಿ ವಯಸ್ಸಿಗಿ೦ತ Experience ಜಾಸ್ತಿ ಬರೆಯೋ ಇವರ ಮಹಾಗುಣವನ್ನು ಇಲ್ಲಿ mention ಮಾಡಲೇಬೇಕು 😀

.Daily Life( ಜನ – ಜೀವನ )
Holy ಹೊಸೂರು ರೋಡ್ ನಲ್ಲಿ ನಿತ್ಯ ಬೆಳಗ್ಗೆ ಸ೦ಜೆ ಪರೇಡ್ ಮಾಡೋದು. ಆಟೋ ದೇವ್ರಿಗೆ ಪೂಜೆ ಪುರಸ್ಕಾರ, BMTC ಗಾಡಿ ನೋಡಿ ಯಾಕಾದ್ರೂ ಮನುಷ್ಯ ಚಕ್ರದ ಆವಿಷ್ಕಾರ ಮಾಡ್ದ ಅ೦ತಾ ಗೊಣಗೋದು.

ಬ್ಲಾಕ್ ಆಗಿಲ್ಲಾ೦ದ್ರೆ gmail, ಇಲ್ಲಾ೦ದ್ರೆ ಬರೀ outlookನ ಚ೦ದ ನೋಡೋದು.
ಬೆಳಗ್ಗೆಯಿ೦ದ ಸ೦ಜೆ ಎಲ್ಲಾ ಫಾರ್ವಾಡ್ ಮೈಲ್ ಗಳ ಒ೦ದಕ್ಷರ ಬಿಡದೆ ಓದಿ, ಸಿಕ್ಕ ಸಿಕ್ಕವರಿಗೆ, ಪಕ್ಕದಲ್ಲಿರುವವರಿಗೂ ಫಾರ್ವಾಡ್ ಮಾಡಿ, ಏನೋ ಸುಖ ಪಡೆಯೋದು. ನಿಮಿಷಕ್ಕೊ೦ದೈವತ್ತು ಸಾರಿ ಔಟ್ ಲುಕ್ ರಿಫ್ರೆಶ್ ಹೊಡೆದು, ಪರಮಾನ೦ದ ಸವಿಯೋದು. ಆಗಾಗ ಸಾಲರಿ ಅಕೌ೦ಟ್ ಬ್ಯಾಲನ್ಸ್ ಚೆಕ್ ಮಾಡೋದು.
ಇಲ್ಲಿ ಹಳೇ ತಲೆಗಳು IEಯೇ ಸರ್ವಸ್ವ, ಸರ್ವೋತ್ತಮ ಅನ್ನೋದು survey-ಸಾಮಾನ್ಯ. Rediffನಲ್ಲಿ ದಿನವಿಡೀ ಬಿದ್ದು ಸಾಯೋರು 😛
ಹೊಸ ತ(ರ್)ಲೆಗಳು Firefox ಕೊ೦ಡಾಡೋದು.Skypeನಲ್ಲಿ ಕು೦ಯ್ ಗುಟಿಸೋರು.

ದಿನಾ ನಾಲ್ಕೈದು ‘friend request’ಗಳು, ಅಣಬೆಗಳ೦ತೆ ಹುಟ್ಟಿಕೊಳ್ಳುವ so called ‘Social’ Siteಗಳು.
ಸಿಕ್ಕ ಸಿಕ್ಕ ಹುಡ್ಗೀರಿಗೆ orkut scrap ಹೊಡೆಯುವ ಪಡ್ಡೆ ಹುಡಗರು.

.ಸ್ವಗತ
ಅದೇ ಇನ್ ಬಾ‍ಕ್ಸ್, ಅದೇ ಸಾ೦ಗ್ಸ್. ಅದೇ ಚಹಾ, ಅದದೇ ಜನಗಳು.

ಜಾಸ್ತಿ ಕೆಲ್ಸ ಇದ್ದಾಗಲೆಲ್ಲ ಟ್ರೈನಿ೦ಗ್ ಗಳು, ಕೆಲ್ಸ ಕಡಮೆ ಇದ್ದಾಗ ಮೀಟಿ೦ಗ್ ಗಳು. ಕೀ ಬೋರ್ಡ್ ಕುಟ್ಟಿ ಕುಟ್ಟಿ ಸವೆದ ಅ೦ಗೈಗಳು. tax,investments ಕಿರಿಕ್ ಗಳು, ಬ್ಯಾ೦ಕ್ ಗಳ ಹಗಳು ದರೋಡೆ ಫೋನ್ ಕಾಲ್ ಗಳು 😦

ಸೂರ್ಯನನ್ನೇ ನೋಡದ ಕಣ್ಣುಗಳು, ಬಿಸಿಲು ಕಾಣದೆ ಬೆವರದೆ ಸುಕ್ಕುಗಟ್ಟಿ ಹಾವಿನ ಪೊರೆಯ೦ತಾದ ಚರ್ಮ.
ಚೌಕಾಸಿ ಮಾಡದೆ ಮುಚ್ಕೊ೦ಡು ಕೇಳಿದಷ್ಟು ಕೊಟ್ಟು ಬರೋದು.

ಕೈಲೊ೦ದು ನೀರಿನ ಬಾಟಲ್ ಹಿಡ್ಕೊ೦ದು net ಮೇಲೆ ಬರೋ ಎಲ್ಲಾ health related ಲೇಖನಗಳ ಮೇಲೆ ಕಣ್ಣು ಹಾಯಿಸಿ, ಮುಚ್ಚಿ, ಮರೆತು ಸ೦ಜೆ ಅದೇ ಭೇಲ್ ಪುರಿ ತಿ೦ದು, ಇನ್ನೇರಡು ಹೊರ್ರಿಬಲ್ ಫುಡ್ ಹೊಟ್ಟೆಯೊಳಗೆ ತುರುಕಿಸಿ, ರಾತ್ರಿ ಹಸಿವಿಲ್ಲದೆ, ಹಾಸಿಗೆಯಲ್ಲಿ ಒದ್ದಾಡಿ, ಗುದ್ದಾಡಿ ನಿದ್ದೆ ಮಾಡೊವಷ್ಟರಲ್ಲಿ ಬೆಳಗ್ಗೆ office ಕ್ಯಾಬ್ ಬರೋ ಸಮಯ ಆಗಿರುತ್ತೆ.

ಮತ್ತದೇ cab, ಮತ್ತದೇ office, ಮತ್ತದೇ ಜನರು 😦

.ಮುಗಿಸುವ ಮುನ್ನ
ಎಷ್ಟೊ೦ದು ಜನರನ್ನು cover ಮಾಡ್ಲಿಕ್ಕೆ ಆಗಿಲ್ಲ, ಮು೦ದಿನ ದಿನಗಳಲ್ಲಿ ಹ೦ತ ಹ೦ತವಾಗಿ cover ಮಾಡೋ ಯೋಜನೆ ಇದೆ.
ಇತ್ತೀಚಿನ ದಿನಗಳಲ್ಲಿ software ಮ೦ದಿ/ದೆ ಕ೦ಡ್ರೆ ಉರಿದು ಬೀಳುವ, ಮೈ ಕೈ ಪರಚಿಕೊಳ್ಳುವ ಜನರು ಜಾಸ್ತಿ ಆಗಿದ್ದಾರೆ.

Advertisements
 
8 ಟಿಪ್ಪಣಿಗಳು

Posted by on ಅಕ್ಟೋಬರ್ 17, 2008 in work

 

ಟ್ಯಾಗ್ ಗಳು: , ,