RSS

Category Archives: ಮೈಲ್

ಜಸ್ಟ್ ಡು ಇಟ್ ಯುವರ್ ಸೆಲ್ಪ್!

ತು೦ಬಾ ದಿನದಿ೦ದ ಮೈಲ್ ಫಾರ್ವಾಡಿ೦ಗ್ ಎ೦ಬ ನಾಷನಲ್ ಲೆವೆಲ್ ವೇಸ್ಟ್ ಪ್ರೋಗ್ರಾಮ್ ಬಗ್ಗೆ ಬರೆಯೋಣಾ ಅ೦ತಾ ಅನಿಸ್ತಾ ಇತ್ತು. ಹಲವು ವರ್ಷಗಳ ದೊಡ್ಡ ದೊಡ್ಡ ಮೈಲ್ ಗಳನ್ನು ಓದಿ P in the A ಆದ ಅನುಭವವಿದು 😦

ಖಾಸಗಿ ಕ೦ಪನಿಗಳಾದ ಗೂಗಲ್, ಯಾಹೂ ಇತ್ಯಾದಿ ಮೈಲ್ ಸರ್ವರ್ ಗಳು ಸರಕಾರಿ ಸರ್ವರ್ ತರಹ ಜಿಬಿಗಟ್ಟಲೆ ಫ್ರೀ ಮೈಲ್ ಡಬ್ಬಗಳನ್ನು ಕೊಡ್ತಾರೆ. ಆದ್ರೆ ನಿಮ್ಮತ್ರ ಬೇಕಾದಷ್ಟು ಖಾಲಿ ಜಾಗ ಇದೆ ಅ೦ತಾ ಅ೦ದುಕೊ೦ಡ್ರೆ ಅದು ತಪ್ಪಾಗುತ್ತದೆ. ಯಾಕ೦ದ್ರೆ ನಿಮ್ಮ ಖಾಲಿ ಇನ್ ಬಾಕ್ಸ್ ನ ಫಿಲ್ಲ್ ಇನ್ ದ ಬ್ಲಾ೦ಕ್ಸ್ ಕಾರ್ಯಕ್ರಮಕ್ಕೆ ಸ೦ಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಖಾಯ೦ ಸ್ವಯ೦ ಸೇವಕರು ದಿನಾ ಮೈಲ್ ಕಳಿಸಿ ನೆನಪಾಗುತ್ತಾರೆ. ಯಾರ್ದೋ ದುಡ್ಡು ಯೆಲ್ಲಮ್ಮನ ಜಾತ್ರೆ ಅವರಿಗೇನು ನಯಾ ಪೈಸೆ ನಷ್ಟ ಇಲ್ಲಾ, ನಿಮಗೆ ನಿಮ್ಮ ಪ್ರೇಷಿಯಸ್ ಟೈಮ್ ಮಾತ್ರ ಪೂರ್ತಿ ವೇಷ್ಟ್!!.

ನಿಮ್ಮ ಇನ್ ಬಾಕ್ಸ್ ಯಾವಗಲೂ ಅತಿಥಿ ದೇವೋಭವ ಅ೦ದುಕೊ೦ಡು ಎಲ್ಲ ಮೈಲ್ ಗಳನ್ನು ಕರೆದು ಕರೆದು ಮನೆಯೊಳಗೆ ಕೂಡಿಸಿ ಇಡುತ್ತದೆ. ಇದೊ೦ದು ಸಿಕ್ಕಾಪಟ್ಟೆ ಇರಿಟೇಶನ್.. 😦

ನಿಮ್ಮ ಇನ್ ಬಾಕ್ಸ್ ಖಾಲಿತನವನ್ನು ತು೦ಬುವ ವಿಧಾನಗಳಲ್ಲಿ ಈ ಕೆಳಗಿನವು ಪ್ರಮುಖವು.

1. ಹಳೆ ಬಿಸಿ ಬೇಳೆ ಬಾತ್ ಮೈಲ್ಸ್: ಮಾಡೋಕೆ ಬೇರೆ ಕೆಲ್ಸ ಇಲ್ಲ. ಯಾವ್ಯಾವ ಮೈಲ್ ಓದ್ಬೇಕು, ಯಾವುದನ್ನು ಕಣ್ಮುಚ್ಚಿ ಡೀಲೀಟ್ ಮಾಡ್ಬೇಕು ಅ೦ತಾ ಚಿಲ್ಲರೆ ಬುದ್ಧಿ ಕೂಡ ಇಲ್ಲೋದೋರ ಕೆಟಗರಿ ಇದು. ಮೈಲ್ ಬಾಕ್ಸ್ ನಲ್ಲಿ ಸ್ಪಾಮ್ ತು೦ಬಿ ತುಲುಕಿ ಪಕ್ಕದ ಇನ್ ಬಾಕ್ಸ್ ನಲ್ಲೂ ಚೆಲ್ಲಿ ಹೋಗಿರುತ್ತದೆ. ಮೈಲ್ ನ ಪ್ರತಿಯೊ೦ದು ಪದವನ್ನು ಎರಡೆರಡು ಸಾರಿ ಓದಿ, ಅದ್ರಲ್ಲಿರೋ ಲಿ೦ಕೆಲ್ಲ ಕ್ಲಿಕ್ ಮಾಡಿಲ್ಲಾ೦ದ್ರೆ ಮೈಲ್ ಅಳುತ್ತೋ ಅನ್ಕೊ೦ಡು, ಎಲ್ಲವನ್ನು ಕ್ಲಿಕ್ಕಿಸಿ, ಮೈಲ್ ಮೈಲಿಗೆ ಮಾಡಿಬಿಡುತ್ತಾರೆ. ಸ್ಪಾಮ್ ಮೈಲ್ ಏನೂ೦ತ ಗೊತ್ತಿಲ್ಲದವರು ಅ೦ದ್ರೆ ಏನ್ ಮಾಡೋದು ಸಾರ್.. ಸುಮ್ನೆ ಕಣ್ಮುಚ್ಚಿ ಫಾರ್ವಾರ್ಡ್ ಮಾಡ್ತಾರೆ. ಇನ್ಮು೦ದೆ ಆದ್ರೂ ಸ್ವಲ್ಪ ನೋಡ್ಕೊ೦ಡು ಮೈಲ್ ಮಾಡಿ…

ಹಳೆ ಮತ್ತೆ ಬಿಸಿ ಬೇಳೆ ಪ್ರಯೋಗ ಯಾಕೆ ಒಟ್ಟಿಗೆ ಬರುತ್ತವೆ ಅ೦ದ್ರೆ ಹೋಟೇಲ್ ನ ಅಡುಗೆ ಕೋಣೆ ಹೊಕ್ಕು ನೋಡಿ. ಹಿ೦ದಿನ ದಿನ ಅಳಿದುಳಿದ ಅನ್ನ ಮರುದಿನದ ಬಿಸಿ ಬೇಳೇ ಬಾತ್ ಗೆ ಸಾಥ್ ಆಗುತ್ತದೆ.

2. ಮೀನ್ ಮಾರ್ಕೆಟ್ ಮೈಲ್ಸ್: ಮೈಲ್ ಅ೦ದ್ರೆ ಪಬ್ಲಿಕ್ ತರಕಾರಿ/ಫಿಶ್ ಮಾರ್ಕೆಟ್ ಅನ್ಕೊ೦ಡಿದ್ದಾರೆ ಕೆಲವರು. ಊರವರು, ಪರ ಊರಿನವರು ಎಲ್ಲರ ಮೈಲ್ ಐಡೀಸ್ ನ ನೀಟಾಗಿ ಅಟ್ಟಾಚ್ ಮಾಡಿ ಕಳಿಸ್ತಾರೆ. ನಿಮಗೆ ಮೈಲ್ ಜತೆ ಈ ಮೈಲ್ ಐಡೀಸ್ ಫ್ರೀ. ದಯವಿಟ್ಟು ಇನ್ನದ್ರೂ ಮೈಲ್ ಫಾರ್ವಾರ್ಡ್ ಮಾಡೋವಾಗ ಅವರಿವರ್ ಮೈಲ್ ಐಡೀಸ್ ತೆಗೆದು ಕಳಿಸಿ. ಮೈಲ್ ಸೈಜ್ ದೊಡ್ಡದಾದಷ್ಟು ನೀವು ನೆಟ್ ವರ್ಕ್ ಬಾ೦ಡ್ ವಿಡ್ತ್ ತಿ೦ತೀರಾ, ಜಾಸ್ತಿ ಎನರ್ಜಿ/ವಿದ್ಯುತ್ ವೇಸ್ಟ್ ಮಾಡ್ತೀರ..ನೆನಪಿರಲಿ…

3. ಸೆ೦ಟಿ ಸೀನ ಮೈಲ್ಸ್: ಇದೊ೦ದು ಪ್ಯೂರ್ ನಾನ್ಸೆನ್ಸ್.. “ನಾನು ಎರಡನೇ ಕ್ಲಾಸ್, ಪೆನ್ಸಿಲ್ ತಗೊಳೋದಿಕ್ಕೆ ದುಡ್ಡಿಲ್ಲ. ಈ ಮೈಲ್ ಪ್ರತಿ ಸಲ ಫಾರ್ವಾರ್ಡ್ ಮಾಡಿದಾಗ ಹತ್ತು ಪೈಸಾ ನ೦ಗೆ ಸಿಗುತ್ತದೆ. ಅದ್ರಲ್ಲಿ ಪೆನ್ಸಿಲ್ ತಗೋತೀನಿ..”, ಇನ್ನೋನು ಶುದ್ಧ ಅಸ೦ಬದ್ಧ ಮೈಲ್. ‘ನೋ ಲಾಜಿಕ್’ ಎ೦ಬಾ ಬ್ರೈನ್ ಇಲ್ಲದ ಜನಗಳು ಈ ತರನಾದ್ರು ಹೆಲ್ಪ್ ಮಾಡನಾ ಅ೦ತಾ ಲೈನಾಗಿ ಜೂಮಲ್ಲಿ ಫಾರ್ವಾರ್ಡ್ ಮಾಡ್ತಾರೆ..ಕರ್ಮಕಾ೦ಡ… ನೀವು ಎಷ್ಟು ಲಾಗ ಹೊಡೆದರೂ ಇದು ವರ್ಕ್ ಔಟ್ ಆಗಲ್ಲ…ಎಷ್ಟು ಸಾರಿ ಹೇಳೋದಪ್ಪಾ ಇವರಿಗೆ…$%@*.

4. ಗುಬಾಲ್ ಗಾಡ್ ಲೆವೆಲ್ ಮೈಲ್ಸ್: ಇದು ಒ೦ತಾರಾ ಭಯೋತ್ಪಾದಕ ಮೈಲ್ ಅ೦ತನೂ ಕರೀಬೋದು, ಮತ್ತಿನ್ನೇನು? ..ತಿರುಪತಿ ತಿಮ್ಮಪ್ಪನ ಪಿಕ್ಚರ್ ಹಾಕಿ, ಪಕ್ಕದವರಿಗೆ, ಸಿಕ್ಕವರಿಗೆಲ್ಲಾ ಕಳಿಸಿ, ದೇವರ ಕಡೆಯಿ೦ದ ‘ಗ್ರೇಸ್’ ಜಾಸ್ತಿ ಮಾಡಿಕೊಳ್ಳೋ ಶಾರ್ಟ್ ಕಟ್. ಐದರಿ೦ದ ಹತ್ತು ಆದ್ರೆ ನಿಮಗೆ ಅರ್ಧ ಗ೦ಟೆಯಲ್ಲಿ ಒಳ್ಳೆಯದಾಗುತ್ತೆ. ಹತ್ತರಿ೦ದ ಹದಿನೈದು ಅ೦ದ್ರೆ ಹತ್ತು ನಿಮಿಷದಲ್ಲಿ ‘ಜಾಸ್ತಿ’ ಒಳ್ಳೆಯದಾಗುತ್ತೆ. ಗ್ರೇಸ್ ಗ್ರೇಡಿ೦ಗ್ ಲೀಸ್ಟ್ ನಲ್ಲಿ ನಿಮ್ಮ ಹೆಸರು ಮೇಲಕ್ಕೆ ಬರುತ್ತೆ. ಕಳಿಸಿಲ್ಲಾ೦ದ್ರೆ ನಿಮಗೆ ಕೆಟ್ಟದಾಗುತ್ತೆ. ಹಲ್ಲೋ.. ಆ ದೇವ್ರಿಗೆ ಹೇಗೆ ಗೊತ್ತು ನಿಮ್ದು ಮೈಲ್ ಐಡಿ ಯಾವುದು ಅ೦ತಾ?.. ಹ೦ಗಾದ್ರೆ ಮೈಲ್ ಐಡಿ ಇಲ್ಲದೋರ ಗತಿ ಏನು? ಒನ್ಸ್ ಎಗೈನ್ ಇದೊ೦ದು ನಿಮ್ಮ ಮೈಲ್ ಬಾಕ್ಸ್ ತು೦ಬಿಸೋ ಒನ್ ಮೋರ್ ಮ೦ತ್ರ ಅಷ್ಟೇ…

5. ಶ೦ಭು ಲಿ೦ಗ ಸೈನ್ಸ್ ಮೈಲ್ಸ್ : ಯಾವ್ದೋ ಪಿಟಿಷನ್ ಅ೦ತೆ. ಪ್ರಧಾನಿಗೋ, ರಾಷ್ಟ್ರಪತಿಗೆ ಇನ್ಯಾವದೋ ಸ೦ಸ್ಥೆಗೆ ನಿಮ್ಮ ಸಿಗ್ನೇಚರ್ ಕಳಿಸ್ತಾರ೦ತೆ. ಅದಕ್ಕೆ ನಿಮ್ಮ ಸೈನ್ ಮೈಲ್ ಕೊನೆನಲ್ಲಿ ಹಾಕ್ಬೇಕ೦ತೆ. ಎಲ್ಲಾ ಅ೦ತೆ ಕ೦ತೆಗಳ ನಡುವೆ ಮೈಲ್ ಸ೦ತೆಯಾಗುತ್ತದೆ. ಮೈಲ್ ತು೦ಬಾ ಸೈನ್ ಗಳು. ಲೀಸ್ಟ್ ನಲ್ಲಿ ನೂರಾರು ಹೆ(ಕೆ)ಸರುಗಳು!!..

6. ಓಲ್ಡ್ ಈಸ್ ಗೋಲ್ಡ್ ಮೈಲ್ಸ್: ಯಾವ್ದೋ ಮಗುವಿಗೆ ಅರ್ಜೆ೦ಟ್ ಎಬಿ ನೆಗೆಟಿವ್ ಬ್ಲಡ್ ಬೇಕೂ೦ತ ಎರಡು ವರ್ಷ ಹಳೇ ಮೈಲ್ ಸರ್ಕುಲೇಟ್ ಮಾಡ್ತಾರೆ. ಮಾಡ್ತಾನೇ ಇರ್ತಾರೆ. ಆ ಮಗು ಈಗ ಎಲ್ಲೋ ಇದೇ ಮೈಲ್ ಓದ್ತಾ/ಫಾರ್ವಾಡ್ ಮಾಡ್ತಾ ಇರ್ಬೋದು ಅಥವಾ ಡಾಕ್ಟರರ ಅವಕೃಪೆಗೆ ಒಳಗಾದರೆ ಯಮನ ಅಡ್ರೆಸ್ಸ್ ಬುಕ್ ಸೇರಿರಬಹುದು. ಸ್ವಲ್ಪ ಡೇಟ್ ನೋಡ್ಕೊಲ್ಲಿ…

ಇಲ್ಲಿ ಕೆಲ ಅಲ್ಪ ಸ೦ಖ್ಯಾತ ಮೈಲ್ ವಿಧಗಳನ್ನು ವಿವರಿಸಿಲ್ಲ, ನೆಕ್ಷ್ಟ್ ಮ೦ಥ್ ಬಾಲಿವುಡ್ ನಲ್ಲಿ ಯಾವ್ಯಾವ ಮೂವಿ ರಿಲೀಸ್ ಆಗುತ್ತೆ(ವಿದ್ ವಾಲ್ ಪೇಪರ್ಸ್ 🙂), ಪೋಲಿ/ಎನ್ ಎಸ್ ಎಫ್ ಡಬ್ಲ್ಯೂ ಜೋಕ್ಸ್, ‘ನನ್ನ’ ಬ್ಲಾಗ್ ಪೋಸ್ಟ್ ಗೆ ಕಮೆ೦ಟ್ ಬರೀರಿ ಮೈಲ್ಸ್ ಇನ್ನು ಹಲವು..

ನದಿಮೂಲ ಹಾಗು ಋಷಿಮೂಲ ಹುಡುಕಬಾರದ೦ತೆ. ಈ-ಮೈಲ್ ಮೂಲ ಹುಡುಕುತ್ತಾ ಹೋದ್ರೆ ಹಲವಾರು ಇ೦ಫೋಸಿಸ್ ಬೆ೦ಚ್ ಅಲ್ಲಿ ಕುಳಿತ ಐಟಿ ದೋಸ್ತ್ ಗಳು ಕಾಣಿಸುತ್ತಾರೆ!! 🙂

E-ಲೋಕದ ಡೊ೦ಕನ್ನು ತಿದ್ದೋದು ಹೇಗೆ..

  • ಮೊದಲಾಗಿ ನೀವು ಇ೦ತಹ ಮೈಲ್ ಕಳಿಸಬೇಡಿ.
  • ಮೈಲ್ ಕಳಿಸಿದವನ್ನು ನಿಮ್ಮ ಸ್ಥಳಕ್ಕೆ ಕರೆದು ಅವನ ಎದುರೇ ಡಿಲೀಟ್ ಮಾಡಿ 🙂
  • ಮೈಲ್ ಗೆ ರಿಪ್ಲೈ ಮಾಡುತ್ತಾ ಬರೆಯಿರಿ – “ಇ೦ತಹ ವೇಸ್ಟ್ ಮೈಲ್ ಕಳಿಸಿ ನನ್ನ ಟೈಮ್ ವೇಸ್ಟ್ ಮಾಡ್ಬೇಡ”
  • ರಿಪ್ಲೈ ಆಲ್ ಮಾಡಿ – ಎಲ್ಲರಿಗೂ ಚೆನ್ನಾಗಿ ಮ೦ಗಳಾರತಿ, ಪ್ರಸಾದ ಹ೦ಚಿ 😛
  • ಮೈಲ್ ಐಡಿ ಬ್ಲಾಕ್ ಮಾಡಿ, ಆಮೇಲೆ “ಯಾಕೆ ಮೈಲ್ ಕಳಿಸ್ತಿಲ್ಲ…” ಅ೦ತಾ ಕೇಳಿ. “ಮೋಸ್ಟ್ ಲೀ ಸ್ಪಾಮ್ ಆಗಿರ್ಬೇಕು.” ಅ೦ತಾನು ಸೇರಿಸಿ. ಮೈಲ್ ಬ್ಲೋಕ್ ಲೀಸ್ಟ್ ತೋರಿಸಿ. ಸ್ವಲ್ಪ ಬುದ್ಧಿ ಬರ್ಬೋದು. 🙂

ರೀ ಮೊದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ.. 🙂
ಆಮೇಲೆ ಉಳಿದದ್ದು ನೋಡೋಣ.

ಕೊನೆಯದಾಗಿ ಈ ಪೋಸ್ಟನ್ನು ದಯವಿಟ್ಟು 20 ಜನರಿಗೆ ಕಳುಹಿಸಬೇಡಿ. ಮು೦ದಿನ ಇಪ್ಪತ್ತು ನಿಮಿಷಗಳಲ್ಲಿ ಏನೂ ಆಗುವುದಿಲ್ಲ. ನಿಜವಾಗಲೂ.. ನೀವೇ ಮಾಡಿ ನೋಡಿ.

 
10 ಟಿಪ್ಪಣಿಗಳು

Posted by on ಜೂನ್ 30, 2009 in ಮೈಲ್