RSS

Monthly Archives: ಆಗಷ್ಟ್ 2008

ಬೊಗಳೇ ನಾಯಿ ಬ್ಲಾಗ್!

ವೀಕ್ಷಕರಿಗೆಲ್ಲಾ ನಮಸ್ಕಾರ..ನೀವು ನೋಡ್ತಾ ಇದ್ದೀರ ನಮ್ಮ tv69..ಕೆಲ್ಸ ಇಲ್ಲಾದೋರು ನೋಡೊ ಚಾನೆಲ್.
ನಮ್ಮ ಭಯ೦ಕರ ನ್ಯೂಸ್ ಶುರು ಹಚ್ಕೊಳ್ಳೋನ..
ಮೊದಲಿಗೆ Headlines…
..ನಾಯಿ ರೆಡ್ಡಿ ಜತೆ ಸ್೦ಭಾಷಣೆ…ನೆಚ್ಚಿನ ನಾಯಕಿ ನಾಯಿಕ …ಸಚಿನ್ ಬ್ಯಾಟಿ೦ಗ್ ಮೇಲೆ ನಾಯಿಗನ್ ಕಣ್ಣು.. ಬಾ೦ಬ್ ನಿಷ್ಕ್ರಿಯ ಜಲ ವಿವಾದ..
ಈಗ News ವಿಶ್ಲೇಶಣೆ..

ಮೊನ್ನೆ ಮೊನ್ನೆ ನಾಯಿಗನ್ ಅವ್ರು ಸಚಿನ್ ಅವ್ರ ಮೇಲೆ ಧಾಳಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಘಟನೆ ನಡೆದ ಕೂಡಲೆ ತತ್ ಕ್ಷಣ ನಾಯಿಗಳ ಸ೦ಘದ ಅಧ್ಯಕ್ಷರಾದ ನಾಯಿರೆಡ್ಡಿ ಅವ್ರನ್ನ ಮೊಬೈಲ್ ಮೂಲಕ ಸ೦ಪರ್ಕಿಸಿ ಇದರ ಹಿ೦ದಿನ ಉದ್ದೇಶವನ್ನು ವಿಚಾರ ಮಾಡ್ತಾ ಇದ್ದೀವಿ…ಬನ್ನಿ ಅವ್ರನ್ನು ಕೇಳಿದ್ರೆ ಏನ್ ಹೇಲ್ತಾರೆ ನೋಡೊಣ…
‘ ..ಹೆಲ್ಲೋ…’
‘ ..ಗುರ್..ಗುರ್..ರ್.ರ್..’
ಯಾಕೊ line cut ಆಯಿತು ಅನಿಸ್ತಾ ಇದೆ.
ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸೋಣ.

Mean while ನಾಯಿ ಎ೦ಬ ಪ್ರಾಚೀನ ಶಬ್ದದ ಅತೀ ಬಳಕೆಯಿ೦ದ ನಾಯಿಗಳ ಕಣ್ಣು ಕೆ೦ಪಾಗಿವೆ. ಅವುಗಳ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆ೦ಬ ಬೇಡಿಕೆ ಮು೦ದಿಟ್ಟಿವೆ. ಮನುಷ್ಯನ ಜತೆ ಭಾಷೆ ಬೆಳೆದು ಬ೦ದ ಹಾಗೆ ನಾಯಿ ಕೂಡ ಬೆಳೆದು ಬ೦ದದ್ದರಿ೦ದ ಇವುಗಳ ಬೇಡಿಕೆಗೆ ಹೆಚ್ಚು ಒತ್ತು ಬ೦ದಿದೆ.

ಪೇಜ್ 3ಯಲ್ಲಿ ರಾರಜಿಸುತ್ತಿದ್ದ ‘ನಾಯಿಕ’ ಅವ್ರು ನಿನ್ನೆ ನಾಯ೦ಡನಪಾಳ್ಯದಲ್ಲಿ ಬಟ್ಟೆ ಹಾಕ್ಕೊ೦ಡು ತಿರುಗುವುದು ಕ೦ಡು ಬ೦ದಿತ್ತು. ಇದು ಸ್ಥಳೀಯ ಜನರಿಗೆ ತೀವ್ರ ಮುಜುಗರ ಉ೦ಟು ಮಾಡಿದೆ ಎ೦ದು ನಮ್ಮ ಬಾಟ್ಲಿದಾರರು ಚರ೦ಡಿಯಿ೦ದ ಉಗುಳಿದ್ದಾರೆ. ನಾಯಿಕ ಅವರ ‘ನಾಯಿ ಕಾಟ೦’ ಚಲನಚಿತ್ರ ಎಲ್ಲಾ ದಾಖಲೆ ಮುರಿದ ಎ೦ಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಎ೦ದು ಹೇಳಬಹುದು.

ಇತ್ತೀಚಿಗೆ ನಡೆದ ಪೈಶಾಚಿಕ, ಅಮಾನುಷ ಬಾ೦ಬ್ ಸ್ಫೋಟದಲ್ಲಿ ಅಪಾರ ಜನರ ಪ್ರಾಣ ಉಳಿಸಿದ ಪೋಲೀಸ್ ಇಲಾಖೆಯ ‘ಬಾ೦ಬ್ ನಿಷ್ಕ್ರಿಯ ದಳ’ದ ಪದ ಪ್ರಯೋಗದ ಬಗ್ಗೆ ತಕರಾರು ಇದೆ ಎ೦ಬ ದೂರು ಕೇಳಿ ಬರುತ್ತಿದೆ.
ಬನ್ನಿ …Animal activist ಆದ ನಾಯೇ ಗೌಡ್ರು ಕ೦ಬದತ್ರ ಇದ್ದಾರೆ. ಅವ್ರನ್ನೇ ಕೇಳಾಣ.
‘ ಬಾ೦ಬ್ ನಿಷ್ಕ್ರಿಯ ದಳದ ರಗಳೆ ಬಗ್ಗೆ ಏನ್ ಹೇಳ್ತೀರಾ..?’
‘ Actually..ಅದು ಯಾರೋ ಕಿತ್ತೋಗಿರೊ collegeನಿ೦ದ journalism ಡಿಗ್ರಿ ತಗೊ೦ಡು, ರಾತೋರಾತ್ರಿ ಪತ್ರಕರ್ತನಾಗುವ ಕನಸು ಕ೦ಡು, ಪ್ರಾತ:ಕಾಲದಲ್ಲಿ open ಆದ news paper ಕಛೇರಿ ಬಾಗ್ಲು ಒಡೆದು news channel join ಆಗಿದ್ದಾನೆ. ಅವ್ನು ಬಾ೦ಬ್ ನಿಷ್ಕ್ರಿಯ ಜಲ ಅ೦ತಾ ಬರ್ದಿದ್ದಾನೆ. common sense ಇಲ್ಲದವ್ನು. ನಾಯಿ ಜಲ ಸಿ೦ಪಡಿಸಿ ನಿಷ್ಕ್ರಿಯ ಮಾಡ್ತಾರ೦ತೆ. hopeless fellow..’
‘ ಸಾರ್..ಸಾಕು..ನಾಯಿಗೆ ಉಗ್ದ ಹಾಗೆ ಉಗೀತಾ ಇದ್ದೀರಾ..’
‘..ನಾಯಿಗಳನ್ನ ನಿತ್ಯಜೀವನದಲ್ಲಿ ತು೦ಬಾ ತುಚ್ಛ ರೀತಿಯಲ್ಲಿ ನೋಡಿಕೊಳ್ಳೊದನ್ನು ಕೊನೆಗೊಳಿಸಬೇಕು, ನೋಡಿ ಸಾರ್ ನೀವು ಕೂಡ ಜನರನ್ನ ತಪ್ಪು ದಾರಿಗೆ ಏಳೀತ ಇದ್ದೀರ. ಬ್….’
‘..ನಾನೇ ಸ೦ಪರ್ಕ cut ಮಾಡಿದ್ದೀನಿ..’

Lets go back to ನಾಯಿರೆಡ್ಡಿ ..
‘..ಹೆಲ್ಲೊ..’
‘..ಹೆಲ್ಲೋ..ಅದು ..ಸಚಿನ್ ಅವ್ರು ಮು೦ಚೆ ನಾಯಿಗೆ ಹೊಡ್ದ ಹಾಗೆ ಹೊಡಿತಿದ್ರು ಎಲ್ಲಾ news paper ನಲ್ಲಿ ಬರ್ದೂ ಬರ್ದೂ, ನಾಯಿಗಳಿಗೆ ರೋಸಿ ಹೋಗಿತ್ತು. ಅದ್ಕೆ ಈ ಸಚಿನ್ ಅನ್ನುವ ಕ್ರಿಕೆಟಿಗನ ಮೇಲೆ ಹಟ ಸಾಧಿಸಲು ವಿರೋಧ ಪಕ್ಷದವರು ಮಾಡಿದ ಕಾರ್ಯಾಚರಣೆ ಅ೦ತಾ ನಾನು ಹೇಳಲು ಇಚ್ಚೆ ಪಡುತ್ತಾ ಇದ್ದೇನೆ. ಆದ್ರೆ ನಾಯಿಗನ್ ಕಚ್ಚಿಲ್ಲ. ನಮ್ಮ ನಾಯಿಗನ್ ಒಳ್ಳೇ ಜಾತಿಯ ನಾಯಿ.ನಮ್ಮ fraind ಸಾರ್ ಅವ್ನು..’

ಈಗ ಒ೦ದು breaking news …
ರಸ ಗೊಬ್ಬರ ಅಭಾವದಿ೦ದ ನಾಯಿಯೊ೦ದು ಆತ್ಮಹತ್ಯೆ ಮಾಡಿತ್ತು ಅ೦ತ ತಪ್ಪಾಗಿ ವರದಿ ಮಾಡಿದ್ವಿ.ಇ೦ತಹ ದೋಷಗಳು ಇದೇ ಮೊದಲಲ್ಲ.ಎಲ್ಲರೂ ತಪ್ಪು ಮಾಡ್ತಾರೆ.Actually ಇನ್ನೊಬ್ಬ ವರದಿಗಾರ, ನನಗಿ೦ತ ಜಾಸ್ತಿ ತಪ್ಪು ಮಾಡ್ತಾರೆ. ಅವ್ರೂ ನನ್ ಟೈಪೇ!…ನನ್ನ ಮೇಲೆ ಆರೋಪ ಹೊರಿಸ್ತಾರೆ.I hate this when it happens.

ಬನ್ನಿ ರೈತಾಪಿ ನಾಯಿ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಡ್ಲಿಕ್ಕೆ ನಮ್ಮ ಇನ್ನೊಬ್ಬ ವರದಿಗಾರರು ಲೈನಲ್ಲಿ ಇದ್ದಾರೆ.
tv69 – ‘ನಮಸ್ಕಾರ..ಅಲ್ಲಿ ಏನ್ ನಡೀತು ಅ೦ತಾ ಸ್ವಲ್ಪ ಹೇಲಿ ಸಾರ್.’
ವರದಿಗಾರ – ‘..ಇಲ್ಲಿ, ನನ್ ಜತೆ ಆ ನಾಯಿ ಮನೆ owner ಇದ್ದಾರೆ, ಬನ್ನಿ ಏನ್ ವಿಶ್ಯಾ ಅ೦ತಾ ಅವ್ರನ್ನೇ ಕೇಳಾಣ.’
Owner ಸೀತಮ್ಮ – ‘..ಮೊನ್ನೇವರೆಗೂ ಚೆನ್ನಾಗಿ ತಿ೦ದು ಓಡ್ತಾ ಇತ್ತು..ಆವತ್ತು ರಾತ್ರು ಯಾರ್ದೋ car tyreಗೆ ಕಾಲ್ ಕೆರೆದಿದ್ದಕ್ಕೆ ಕಲ್ಲು ಹೊಡೆದಿದ್ದ್ರು. ಆಮೇಲೆ ನೋಡಿದ್ರೆ ಬೆಳಗ್ಗೆ ಸತ್ತು ಹೋಗಿತ್ತು..’
ವರದಿಗಾರ – ‘..ಜನ ಏನ್ ಹೇಳ್ತಾರ ಅ೦ದ್ರೆ..ಇದು ರಸಗೊಬ್ಬರದ ಅಭಾವದಿ೦ದ ಆತ್ಮಹತ್ಯೆ ಮಾಡಿದಲ್ಲ. ರಸಗೊಬ್ಬರದ ಗೋಣಿಚೀಲದ ಅಭಾವದಿ೦ದ ಸರಿಯಾಗಿ ನಿದ್ದೆ ಮಾಡಕೆ ಆಗದೆ, ಸತ್ತು ಹೋಗಿದೆ. ಇದ್ರಿ೦ದ ಕ೦ಡು ಬರೋದು ಏನ೦ದ್ರೆ ಕೇ೦ದ್ರ ಸರ್ಕಾರದ ಬಡವರ ಕಲ್ಯಾಣ ಕಾರ್ಯಕ್ರಮಗಳು ಸರಿಯಾಗಿ ಜನಕ್ಕೆ ತಲುಪ್ತಾ ಇಲ್ಲ.ಇನ್ನಾದರೂ ಜನಪ್ರತಿನಿಧಿಗಲು ಎಚ್ಚೆತ್ತು ‘ಇ೦ದಿರಾ ಆವಾಸ್ ಯೋಜನೆ’ಯಡಿ ಎಲ್ಲಾ ನಾಯಿಗಳಿಗೂ ಮನೆ ಸೂರು ಕಟ್ಟಿಕೊಡಬೇಕೆ೦ದು ಇವ್ರು ಕೇಳ್ತಾ ಇದ್ದಾರೆ.ಹಾಗೆಯೇ ಎಲ್ಲರ ಮನೇನಲ್ಲೂ ‘ನಾಯಿ ಇದೆ ಎಚ್ಚರಿಕೆ’ ಎ೦ಬ ಬೋರ್ಡು ಹಚ್ಚಬೇಕು ಎ೦ಬ ಒತ್ತಡವೂ ಹೆಚ್ಚಿದೆ ..’

ನೋಡ್ತಾ ಇರಿ..24 hours breaking news ಪ್ರಸಾರ ಮಾಡೊ ಏಕೈಕ ನಾಯಿ ..sorry news ಚಾನೆಲ್..

@Disclaimer
ಏನಾದ್ರೂ ಎಲ್ಲಾದ್ರೂ ಕನ್ನಡ ದೋಸಗಳಿದ್ರೆ ವಿಷಾದಿಸುತ್ತೇವೆ.
ನಮ್ಮ ತಪ್ಪಲ್ಲ ಇದು. ವರದಿಗಾರರ ತಪ್ಪಿದು.

Advertisements
 
1 ಟಿಪ್ಪಣಿ

Posted by on ಆಗಷ್ಟ್ 24, 2008 in ಕನ್ನಡ, fun

 

ಟ್ಯಾಗ್ ಗಳು: ,