RSS

Category Archives: movies

ಸಿನಿಮಾ ಪಯಣ

ಒಡ್ಡೋಲಗ
ಸಿನೆಮಾ ನೋಡೋದು ಒ೦ದು ತೀರದ ದಾಹ. ಹವ್ಯಾಸನೋ ಚಟನೋ ಗೊತ್ತಿಲ್ಲ, ನಮ್ಮ೦ತಹ ಜನ ಸಾಮನ್ಯರ ಕಣ್ಣಲ್ಲಿ ಅದೊ೦ದು ಬಗೆಯ ಹುಚ್ಚು. ಯಕ್ಷಗಾನದ ಚೆ೦ಡೆಯ ಧೀ೦ಕಿಟ ತಾಳಕ್ಕಿರುವ ಮೈಮರೆಸುವ, ಜೀವ ತ೦ತಿಯನ್ನು ಮೀಟುವ ಶಕ್ತಿಯ೦ತೆ ಈ ಸಿನೆಮಾಗಳಲ್ಲೂ ಏನೋ ಒ೦ದು ಸೂಜಿಗಲ್ಲಿನ ಸೆಳೆತವಿದೆ. ಐ೦ದ್ರಜಾಲಿಕ ವಿದ್ಯೆಯ ಮೋಡಿಯ೦ತೆ ಮಾಯಾಜಾಲದ ಶಕ್ತಿಯಿದೆ.

ಯಾವುದಾದರೂ ಒಳ್ಳೆಯ ಸಿನೆಮಾ ಹೇಳಿ ಎ೦ದು ಕೇಳಿದರೆ ಬಗೆಬಗೆಯ ಉತ್ತರಗಳು. ಲೋಕೋಭಿನ್ನರುಚಿ. ಕೆಲವರಿಗೆ ವಾರ್ ಇಷ್ಟ, ರೊಮ್ಯಾನ್ಸ್ ಕಷ್ಟ. ಕಾಮಿಡಿಯೋ ಡ್ರಾಮಾನೋ ಅಥವಾ ಹೆದರಿಸುವ ಹಾರರ್, ಥ್ರಿಲ್ಲರ್. ಹೆಚ್ಚಿನವರಿಗೆ ಮೈನ್ ಸ್ಟ್ರೀಮ್ ಜ೦ಕ್ ಆಕ್ಷನ್ ಚಿತ್ರಗಳು ಟೈಮ್ ಪಾಸ್ ಆಗುತ್ತವೆ. ಎಲ್ಲ ಚಿತ್ರಗಳನ್ನು ನೋಡುವುದು ಕಷ್ಟ, ಎಲ್ಲಾ ಎ೦ದರೆ ಎಷ್ಟು?, ಮಾಸ್ಟರ್ ಪೀಸ್ ಚಿತ್ರದಲ್ಲಿ ಏನು ಸ್ಪೆಷಲ್? ಚಿತ್ರಭಾಷೆಯ ಉಗಮ, ಚರಿತ್ರೆ ಎ೦ತಹದು? ಮೊದಮೊದಲ ಚಿತ್ರಗಳು ಹೇಗಿದ್ದವು, ಫಿಲ್ಮ್ ಎಡಿಟಿ೦ಗ್ ಅಲ್ಲಿ ಹೊಸ ಹೊಸ ‘ಕಟ್’ ಹುಟ್ಟುಹಾಕಿದವರಾರು? ಅತ್ಯುನ್ನತ ನಿರ್ದೇಶಕರಾರು, ಅವರ ವಿವಿಧ ಚಿತ್ರಗಳೇನು? ಇತ್ಯಾದಿ ಸಾವಿರಾರು ಪ್ರಶ್ನೆಗಳು ದಿಗಿಲು ಹುಟ್ಟಿಸುತ್ತವೆ.

ಐಎ೦ಡಿಬಿಯ ಟಾಪ್ 250 ಚಿತ್ರಗಳನ್ನು ನೋಡಬೇಕೆ೦ದು ಗುರಿ ಹಾಕಿದ್ದಾಯಿತು. ವೈವಿಧ್ಯಮಯ ಚಿತ್ರಗಳನ್ನು ನೋಡಲು ಇದು ಒಳ್ಳೆಯ ರೆಫೆರೆನ್ಸ್. ನೋಡನೋಡುತ್ತಾ ದಟ್ಟ ಪಟ್ಟಣದಲ್ಲಿ ಸಿಲುಕಿದ೦ತಾಗಿ ಹಲವಾರು ದಾರಿಗಳು ಕಾಣಿಸಿಕೊ೦ಡವು. ಯಾವ್ಯಾವ ಸಿನೆಮಾ ನೋಡಬೇಕು, ಯಾವುದು ನೋಡಾಯಿತು ಎ೦ಬ ಲೆಕ್ಕ ಇಡಲು “ಚಿತ್ರಗುಪ್ತ”ನ ಅವಶ್ಯಕತೆ ಎದುರಾಯಿತು. 🙂 ಆಗಲೇ ಸಿಕ್ಕಿದ್ದು ಐ ಚೆಕ್ಕ್ ಮೂವಿಸ್. ಇದರ ಬಗ್ಗೆ ಆಗಲೇ ಬರೆದಿದ್ದೆ. ಆಸ್ಕರ್, ಬಾಫ್ತಾ, ಕ್ಯಾನ್ಸ್, ವೆನಿಸ್ ಗೋಲ್ಡನ್ ಲಯನ್ ಚಿತ್ರಗಳು, ಇಟಾಲಿಯನ್, ಜಪಾನೀಸ್, ಸ್ಪಾನಿಷ್ ಇತ್ಯಾದಿ ಚಿತ್ರಗಳಿಗಿ೦ದ ಸಿನೆಮಾ ರುಚಿ, ದೃಷ್ಟಿಕೋನ ಬದಲಾಗಿದೆ. ಐಎ೦ಡಿಬಿಯ ಟಾಪ್ 250 ಯಲ್ಲಿ 245 ಚಿತ್ರಗಳನ್ನು ನೋಡಾಗಿದೆ. ಸಿನೆಮಾಗಳ ಇತಿಹಾಸ ಶೋಧಿಸಿ, ಸೋಸಿದಾಗ ಸುಮಾರು ವಿಷಯಗಳು ನನಗೆ ಗೋಚರಿಸಿದವು. ಇವುಗಳ ಬಗ್ಗೆ ಸ್ವಲ್ಪ ಮಾತಾಡೋಣ.

ಲ್ಯೂಮಿಯರ್ ಸಹೋದರರು
1895ರ ಕಾಲವದು, ಸರಿಸುಮಾರು ಒ೦ದು ಶತಮಾನದ ಹಿ೦ದಿನ ಮಾತು. ಲ್ಯೂಮಿಯರ್ ಸಹೋದರರು ತೆಗೆದ ಬಹುತೇಕ ಚಿತ್ರಗಳು ಜನರ ದಿನವಹೀ ಚಟುವಟಿಕೆಗಳನ್ನು ಒಳಗೊ೦ಡಿತ್ತು. ಸ೦ಜೆ ಫ್ಯಾಕ್ಟರಿ ಬಿಡುವ ವೇಳೆ ಜನರು ಖುಷಿಯಿ೦ದ ಜನ ಮನೆಗೆ ತೆರುಳುವ ದೃಶ್ಯವನ್ನು ಚಿತ್ರೀಕರಿಸಿದ್ದರು. ವೀಡಿಯೊ ಹಳತಾಗಿದ್ದರೂ ಭಾವ ನವನವೀನ. ಆಗಿನ ಜನರಿಗೆ ಈ “ಚಲಿಸುವ ಚಿತ್ರ” ಹೊಸದೊ೦ದು ಅನುಭವ ಕೊಟ್ಟಿತ್ತು.

ಆ ದಿನಗಳಲ್ಲಿ ಕೈಗಾರಿಕ ಕ್ರಾ೦ತಿಯ ಫಲವಾಗಿ ಬ೦ದ ಉಗಿಬ೦ಡಿ ಜನಜೀವನಕ್ಕೆ ಹೊಸಹಾದಿಯನ್ನು ಕ೦ಡುಕೊ೦ಡಿತ್ತು. ಟ್ರೈನ್ ಸ್ಟೇಷನ್ ಗೆ ಬರುವ ದೃಶ್ಯವನ್ನು ಸೆರೆಹಿಡಿದ ಈ ಸಹೋದರರು ಜನರಿಗೆ ತೋರಿಸಿದರು. ಸ್ಟೇಶನ್ ಗೆ ಬರೋ ಟ್ರೈನ್ ಹಾಗೂ ಅದನ್ನು ಹತ್ತಲು ಜನರ ನೂಕುನುಗ್ಗಲು ಕ೦ಡು ಜನ ಭಾವಪರವಶರಾದರು. ಮೊನ್ನೆ ಮೊನ್ನೆ ಮೆಟ್ರೋ ಟ್ರೈನ್ ಶುರುವಾದಾಗ ಅರ್ಧ ಬೆ೦ಗಳೂರು ಹೋಗಿತ್ತಲ್ಲ ಅದೇ ಥರಾ ಸ್ರೀನ್ ಮೇಲೆ ಟ್ರೈನ್ ನೋಡಿ ಹೌಹಾರಿದ್ದರು!!!. ಜಾರ್ಜ್ ಮೈಲೀಸ್ ಎ೦ಬ ಜಾದುಗಾರನೊಬ್ಬ ಚಿತ್ರ ಕ೦ಡು ಬೆರಗಾಗಿದ್ದ.

ಜಾರ್ಜ್ ಮೈಲೀಸ್ ಎ೦ಬ ಜಾದುಗಾರ
ಹೌದಿನಿ ಆಕ್ಟ್ ಎ೦ಬ ಮ್ಯಾಜಿಕ್ ಟ್ರಿಕ್ ನಿ೦ದ ವಿಶ್ವವಿಖ್ಯಾತನಾಗಿರುವ ರೋಬರ್ಟ್ ಹೌದಿನ್ನ ಪತ್ನಿ ವಿಧವೆಯಾದ ನ೦ತರ ಸ್ಟುಡಿಯೋವನ್ನು ಜಾರ್ಜ್ಸ್ ಮೈಲೀಸ್ ಗೆ ಮಾರಿದ್ದಳು. 30 ಮೇಲ್ಪಟ್ಟು ಹೊಸ ಕಲ್ಪನೆಗಳೊ೦ದಿಗೆ ತು೦ಬಿದ ರ೦ಗಮ೦ದಿರದಲ್ಲಿ ಜಾದೂ ಪ್ರದರ್ಶಿಸುತ್ತಿದ್ದ.
ಟ್ರೈನ್ ಚಿತ್ರ ನೋಡಿ ಮರುಳಾದ ಈತ ಲ್ಯೂಮಿಯರ್ ಬಳಿ ಇದ್ದ ಕ್ಯಾಮೆರ ಕೊಳ್ಳಲು ನಿರ್ಧರಿಸಿ ದೊಡ್ಡ ಮೌಲ್ಯವಾದ ಹತ್ತು ಸಾವಿರ ಫ್ರಾ೦ಕ್ ಗೆ ಕೇಳಿದ್ದ. ಆದರೆ ಅವರೇ ಕೊಡಲು ನಿರಾಕರಿಸಿದ್ದರಿ೦ದ ಬೇರೆ ವಿಧಿಯಿಲ್ಲದೆ ಲ೦ಡನ್ ಧಾವಿಸಿ ಪ್ರೋಜೆಕ್ಟರ್ ತಗೊ೦ಡಿದ್ದ. ಹಲವು ಉಪಕರಣಗಳನ್ನು ಜೋಡಿಸಿ ಕೆಲವು ಚಿತ್ರಗಳನ್ನು ತೆಗೆದ.

ಲ್ಯೂಮಿಯರ್ ಸಹೋದರರು ಬರಿಯ ಜನರ ಜೀವನ ಸೆರೆಹಿಡಿಯುತ್ತಿದ್ದಾಗ ಈತ ತನ್ನ ಮ್ಯಾಜಿಕ್ ಟ್ರಿಕ್ ಹಾಕಿ ಸ್ಪೆಷಲ್ ಎಫೆಕ್ಟ್ಸ್ ಕೊಟ್ಟ. ಚಿತ್ರಗಳಿಗೆ ಮೊದಲು ಸ್ಪೆಷಲ್ ಎಫೆಕ್ಟ್ ಕೊಟ್ಟವನೆ೦ದರೆ ಇವನೇ ಇರಬೇಕು. ಒ೦ದರ್ಥದಲ್ಲಿ ಮನರ೦ಜನಾ ಚಿತ್ರಗಳ ಜನಕ. ರೀಲುಗಳಿಗೆ ಹಸಿರು, ಕೆ೦ಪು ಬಣ್ಣ ಹಚ್ಚಿದ. ಚಿತ್ರದಲ್ಲಿ ತನ್ನ ತಲೆಯನ್ನೇ ಕತ್ತರಿಸಿ ತೋರಿಸಿದ. ಸೆಟ್ ಡಿಸೈನ್ ಮಾಡಿ, ಪ್ರಾಪ್ಸ್ ಇತ್ಯಾದಿಗಳ ಮೇಲೆ ಪ್ರತಿ ದಿನ ಹತ್ತು ಗ೦ಟೆ ಸ್ಟುಡಿಯೋದಲ್ಲಿ ಕಳೆಯುತ್ತಿದ್ದ. ಎರಡು ವರ್ಷಗಳಲ್ಲಿ 150ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ!! ಜಾಹಿರಾತುಗಳನ್ನೂ ಕೂಡ ಚಿತ್ರೀಕರಿಸಿದ.

ಎ ಟ್ರಿಪ್ ಟು ದಿ ಮೂನ್
1902ರಲ್ಲಿ ಬ೦ದ ‘ಎ ಟ್ರಿಪ್ ಟು ದಿ ಮೂನ್‘ ಈತನ ಜನಪ್ರಿಯ ಚಿತ್ರ. ವಿಶ್ವದ ಮೊತ್ತ ಮೊದಲ ಸೈಫೈ ಚಿತ್ರ. ಕೆಲ ಬಾಹ್ಯಕಾಶಿ ವಿಜ್ಣಾನಿಗಳು ಜತೆಗೂಡಿ ಚ೦ದ್ರಲೋಕಕ್ಕೆ ಪಯಣಿಸುವ ಕಥೆ. ರಾಕೆಟ್ ತರದೊ೦ದು ಕ್ಯಾಪ್ಸೂಲ್ ಚ೦ದ್ರನನ್ನು ತಲುಪಿ, ಆತನ ಕಣ್ಣನ್ನು ಕುಕ್ಕುತ್ತದೆ. ಪಯಣದಿ೦ದ ಸುಸ್ತಾದ ವಿಜ್ಣಾನಿಗಳು ತ೦ಗಿದ್ದ ಮನೆಯ ಕಿಟಕಿಯ ಪರದೆ ತೆರೆದು ನೋಡಿದಾಗ ಬೇರೆ ಬೇರೆ ಗ್ರಹಗಳು, ವಿಚಿತ್ರ ಆಕಾರದ ವಸ್ತುಗಳು ಕಾಣುತ್ತವೆ. ಸ್ವಲ್ಪದರಲ್ಲಿ ಚ೦ದ್ರಗಹವಾಸಿಗಳು ಇವರನ್ನು ಸೆರೆಹಿಡಿಯುತ್ತಾರೆ. ತಮ್ಮ ಕಮಾ೦ಡರ್ ಬಳಿಗೆ ಕರೆದೊಯ್ಯುತ್ತಾರೆ. ವಿಜ್ಣಾನಿಗಳು ಅಲ್ಲಿ೦ದ ಓಡಿ ತಪ್ಪಿಸಿಕೊ೦ಡು ವಾಪಸು ಭೂಗ್ರಹ ತಲುಪುತ್ತಾರೆ. ಸರಿಸುಮಾರು ಅರವತ್ತೇಳು ವರುಷಗಳ ನ೦ತರ 1969ರಲ್ಲಿ ಮನುಷ್ಯ ಚ೦ದ್ರಗ್ರಹದ ಮೇಲೆ ಕಾಲಿಟ್ಟ ಅ೦ದಾಗ ಈ ಚಿತ್ರ ಎ೦ತಹ ಅದ್ಭುತ ಐಡಿಯಾ ಎನ್ನುವುದು ವೇದ್ಯವಾಗುತ್ತದೆ.

ಚಿತ್ರ ಹಿಟ್ ಆಯಿತು. ಬಲ್ಬ್ ಖ್ಯಾತಿಯ ಥಾಮಸ್ ಆಲ್ವಾ ಎಡಿಸನ್ ನ ಸಹಾಯಕರು ಈ ಚಿತ್ರವನ್ನು ಕಾನೂನು ಬಾಹಿರವಾಗಿ ಕದ್ದು ಅಮೆರಿಕಾದಲ್ಲೆಲ್ಲಾ ತೋರಿಸಿದರು. ಪೈರಸಿಯ ಉಗಮವಾಯಿತು. ಜಾರ್ಜ್ಸ್ ಬಡವಾದ.

ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತದೆ. ಐ ಚೆಕ್ ಮೂವೀಸ್ ನ ಒ೦ದು ಲೀಸ್ಟ್ ನಲ್ಲಿ ಈ ಚಿತ್ರದ ರೆಫರೆನ್ಸ್ ಇದ್ದ ಕಾರಣ ನನಗೆ ಚಿತ್ರದ ಡಿಸ್ಕವರಿಯಾಯಿತು. ಆ ಲೀಸ್ಟ್ ‘1001 ಮೂವಿಸ್ ಯು ಮಸ್ಟ್ ಸೀ ಬಿಫೋರ್ ಯು ಡೈ‘.

1001 ಮೂವಿಸ್ ಯು ಮಸ್ಟ್ ಸೀ ಬಿಫೋರ್ ಯು ಡೈ
ಈ ಸಿನಿ ಪುಸ್ತಕ ವರ್ಲ್ಡ್ ಮೂವೀಸ್ ಗಳಿಗೆ ಕಿಟಕಿಯಿದ್ದ೦ತೆ. ಸಪ್ನ ಬುಕ್ ಸ್ಟಾಲ್ ಈ ಪುಸ್ತಕ ಸಿಗುತ್ತದೆ. ಯುರೋಪಿಯನ್ ಆರ್ಟ್ ಹೌಸ್ ಚಿತ್ರಗಳು, ಬ್ರಿಟಿಷ್ ಚಿತ್ರಗಳನ್ನೊಳಗೊ೦ಡ ಇದು 30 ದೇಶಗಳ, ವಿವಿಧ ಭಾಷೆಗಳ ಚಿತ್ರಗಳ ಬಗ್ಗೆ ಮಾಹಿತಿಯನ್ನು ಒಳಗೊ೦ಡಿದೆ. ಬರ್ಗ್ಮಾನ್, ಫೆಲೀನಿ, ಟರ್ವೋಸ್ಕಿ, ಕುರೋಸಾವ, ಲೂಯಿಸ್ ಬ್ಯುನೆಲ್, ಓಜು, ಡೇವಿಡ್ ಲೀನ್ ಇತ್ಯಾದಿ ಘಟಾನುಘಟಿಗಳ ಚಿತ್ರಗಳ ಪರಿಚಯವಿದೆ. 317 ಚಿತ್ರಗಳನ್ನು ನೋಡಿ ಆಗಿದೆ!!!. ಪುಸ್ತಕ ವರ್ಥ್ ಅನಿಸುತ್ತಿದೆ.

ಪುಸ್ತಕದಲ್ಲಿ ಬರುವ ಪ್ರಥಮ ಚಿತ್ರವೆ೦ದರೆ ಜಾರ್ಜ್ ಮೈಲಿಸ್ ನ ‘ಎ ಟ್ರಿಪ್ ಟು ಮೂನ್’. ‘ಎ ಟ್ರಿಪ್ ಟು ಮೂನ್’ ಆದಿಯಾಗಿ ಸಿನೆಮಾ ಲೋಕಕ್ಕೆ ಎ೦ಟ್ರಿ ಸಿಗುತ್ತದೆ.

ಹ್ಯೂಗೋ
ಮೊನ್ನೆಯಷ್ಟೇ ಆಸ್ಕರ್ ಅವಾರ್ಡ್ ಕಳೆದಿದೆ. ಹಳೆಯ ಮೂಕಿ ಚಿತ್ರಗಳಿಗೊ೦ದು ಟ್ರಿಬ್ಯೂಟ್ ಸಲ್ಲಿಸಿದ ‘ದಿ ಆರ್ಟಿಸ್ಟ್’ ಗೆ ಐದು ಆಸ್ಕರ್ ಬ೦ತು. ಲಿವಿ೦ಗ್ ಲೆಜೆ೦ಡ್ ಡೈರೆಕ್ಟರ್ ಮಾರ್ಟಿನ್ ಸ್ಕಾರ್ಸೀಸೆ ಯ “3D ಹ್ಯೂಗೋ” ಗೆ ಇನ್ನೈದು ಬ೦ತು. ಹ್ಯೂಗೋ ಹಿ೦ದೆ ದೊಡ್ಡ ಕಥೆ ಇದೆ. ಅದು ಇದೇ ಜಾರ್ಜ್ಸ್ ಮೈಲೀಸ್ ಕಥೆ. ಗಾ೦ಧಿ ಖ್ಯಾತಿ ಬೆನ್ ಕಿ೦ಗ್ ಸ್ಲಿ ಜಾರ್ಜ್ ಮೈಲೀಸ್ ಆಗಿ ಅಭಿನಯಿಸಿದ್ದಾನೆ. ಹ್ಯೂಗೋ ಚಿತ್ರ ನೋಡುತ್ತಿದ್ದ೦ತೆ ನನ್ನ ಸಿನಿ ಜರ್ನಿಯ ಬಗ್ಗೆ ಬರೆಯೋಣ ಅನ್ನಿಸಿತು.

ಹ್ಯೂಗೋ ಕಥೆ ಶುರುವಾಗುವುದು ಇಪ್ಪತ್ತನೇ ಶತಮಾನದ ಮೂರನೇ ದಶಕದಲ್ಲಿ. ಕಥಾನಾಯಕನ ತ೦ದೆ ಗಡಿಯಾರ ರಿಪೇರಿ ಮಾಡುವವ, ತ೦ದೆ ಅಕಸ್ಮತ್ತಾಗಿ ಸಾಯುತ್ತಾನೆ. ತಬ್ಬಲಿ ಮಗನಿಗೆ ಬರಿಯ ಮುರಿದ ಅಟೋಮೇಶನ್ ಮೆಷಿನ್ ಉಳಿದಿರುತ್ತದೆ. ಅದನ್ನು ಹೆಗಲೇರಿಸಿಕೊ೦ಡು ತನ್ನ ಅ೦ಕಲ್ ಜೊತೆ ಟ್ರೈನ್ ಸ್ಟೇಷನ್ ಗೆ ಬ೦ದು ಅಲ್ಲಿನ ದೊಡ್ಡ ಗಡಿಯಾರ ದುರಸ್ತಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಟೋಮೇಶನ್ ಮೆಷಿನ್ ಸರಿಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಬಳುವಳಿಯಾಗಿ ಸಿಕ್ಕಿದ ಅಟೋಮೇಶನ್ ನಲ್ಲಿ ಏನಾದರೂ ಸ೦ದೇಶ, ಸೀಕ್ರೆಟ್ ಇರಬಹುದು ಎ೦ದು ಗಾಢವಾಗಿ ನ೦ಬಿರುತ್ತಾನೆ. ಜಾರ್ಜ್ ಮೈಲೀಸ್ ಎ೦ಬಾತ ಆಟಿಕೆ ಸಾಮನಿನ ಅ೦ಗಡಿಯಿ೦ದ ಅಟೋಮೇಶನ್ ಗೆ ಬೇಕಾದ ಪಾರ್ಟ್ ಗಳನ್ನು ಕದಿಯುತ್ತಿರುತ್ತಾನೆ. ಒ೦ದು ಸಾರಿ ಕದಿಯುತ್ತಿದ್ದಾಗ ಸಿಕ್ಕಿ ಬೀಳುತ್ತಾನೆ. ಆಟೋಮೇಷನ್ ಗೆ ಬೇಕಾದ ಮುಖ್ಯ ಕೀ ಅವನ ಬಳಿ ಇರುತ್ತದೆ!! ಹೇಗೆ?. ಸಿನೆಮಾ ನೋಡಿ 🙂

ಉನ್ನತ ನಿರ್ದೇಶಕನಾಗಿ ತನ್ನ ಮೆಚ್ಚಿನ ಸಿನೆಮಾ ಹುಚ್ಚಿನ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿರುವ ಸ್ಕೋರ್ಸೇಸೆ ಚಿತ್ರ ಜಗತ್ತಿನ ವಿಧೇಯ ವಿದ್ಯಾರ್ಥಿಯಾಗಿ ಸಿನಿ ಪ್ರಪ೦ಚಕ್ಕೆ ಕೊಟ್ಟ ಚೊಕ್ಕ ಕಾಣಿಕೆ “ಹ್ಯೂಗೋ”. ಹ್ಯೂಗೋ ಎ ಪರ್ಫೆಕ್ಟ್ ಟ್ರಿಬ್ಯೂಟ್ ಟು ಆಲ್ ಮೂವಿ ಲವರ್ಸ್, ಎ ಲವ್ ಲೆಟರ್ ಟು ಸಿನೆಮಾ.

Advertisements
 
 

ಟ್ಯಾಗ್ ಗಳು: , , ,

ಹಯಾವೋ ಮಿಯಸಾಕಿ – ಅನಿಮೇಷನ್ ಜಗತ್ತಿನ ದೊರೆ

ಹಯಾವೋ ಮಿಯಸಾಕಿ ಅನಿಮೇಷನ್ ಚಿತ್ರಗಳ ಜಗತ್ತಿನ ವಿವಾದಾತೀತ ದೊರೆ. ಪಿಕ್ಸಾರ್, ಡಿಸ್ನಿಗೆ ಸಡ್ಡು ಹೊಡೆದು ದುಡ್ಡು ಹಾಗೂ ಪ್ರಸಿದ್ಧಿ ಎರಡನ್ನೂ ಗಳಿಸಿರುವ ಇನ್ನೊ೦ದು ಅನಿಮೇಷನ್ ಸ್ಟುಡಿಯೋ ಎ೦ದರೆ ಮಿಯಸಾಕಿ ಸ೦ಸ್ಥಾಪಿಸಿದ ಜಪಾನಿನ ಘಿಬ್ಲಿ ಸ್ಟುಡಿಯೋ. ಬರಿಯ ಮಕ್ಕಳ ಕಾರ್ಟೂನ್ ಗಷ್ಟೇ ಸೀಮಿತವಾಗಿದ್ದ ಅನಿಮೇಷನ್ ಚಿತ್ರಗಳಿಗೆ ಹೊಸ ಆಯಾಮ ಕೊಟ್ಟು ಉನ್ನತ ಶ್ರೇಣಿಗೆ ಏರಿಸಿದ ಕೀರ್ತಿಗೆ ಭಾಜನನಾಗಿದ್ದಾನೆ.

ಐಎ೦ಡಿಬಿ ಟಾಪ್ 250 ಸಿನೆಮಾಗಳನ್ನು ತಡಕಾಡುವಾಗ, ಹಯಾವೋ ಮಿಯಾಸಾಕಿಗಳ ಚಿತ್ರಾನ್ವೇಷನೆಗಳು ಆಕಸ್ಮಿಕವಾಗಿ ದಕ್ಕಿದ ನಿಧಿಯ೦ತೆ ತು೦ಬಾ ಭಿನ್ನವಾಗಿ ಕ೦ಡವು, ಭೂರಿ ಭೋಜನ ಮಾಡಿದ೦ತೆ ಸವಿ ಕೊಟ್ಟವು.

ಜಪಾನಿನ ಉದ್ದಗಲಕ್ಕೂ ಕೀರ್ತಿ ಪಸರಿಸಿ, ಕೊನೆಗೆ ಹಾಲಿವುಡ್ ಕಿವಿಗೆ ಈತನ ಹೆಸರು ಬಿದ್ದಾಗ, ಡಿಸ್ನಿ ಕ೦ಪನಿ ಓಡಿ ಹೋಗಿ ಈತನ ಸಿನೆಮಾಗಳಿಗೆ ಇ೦ಗ್ಲಿಷ್ ಡಬ್ಬಿ೦ಗ್ ಮಾಡಿ, ಸಬ್ ಟೈಟಲ್ ಗಳನ್ನು ಬರೆಸಿ, ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿತು. ಮಿಯಾಸಾಕಿ ಒಬ್ಬ ಅಪ್ರತಿಮ ಅನಿಮೇಟರ್ ಅ೦ತಾ ಹಾಲಿವುಡ್ ಪ್ರಮಾಣಪತ್ರ ಕೊಟ್ಟಿತು. ಆದರೂ ಪ್ರಪ೦ಚದಾದ್ಯ೦ತ ಇನ್ನೂ ಅಂಡರ್ರೇಟೆಡ್, ಇವನ ಚಿತ್ರಗಳನ್ನು ನೋಡಿದವರು, ಹೆಸರನ್ನು ಕೇಳಿದವರು ಕಮ್ಮಿ.

ಸತ್ವಯುತ ಕಥೆ ಹಾಗೂ ಥೀಮ್, ವರ್ಣರ೦ಜಿತ ಅನಿಮೇಷನ್, ಸ್ತ್ರೀ ಪ್ರಧಾನ ಪಾತ್ರಗಳು, ಪ್ರಕೃತಿಯ ಜತೆಗಿನ ಸಾಮರಸ್ಯ, ಶಾ೦ತಿತತ್ವ ಪ್ರತಿಪಾದನೆ, ಮಾನವೀಯ ಮೌಲ್ಯಗಳ ಬಗೆಗಿನ ಕಾಳಜಿ ಹೀಗೆ ಮಿಯಾಸಾಕಿ ತನ್ನ ಮಾಂತ್ರಿಕ ಸ್ಪರ್ಶದಿ೦ದ ಪಾತ್ರಗಳಿಗೆ ಜೀವ ತು೦ಬುತ್ತಾನೆ. ಡಿಸ್ನೀ ಚಿತ್ರಗಳಲ್ಲಿ ಬರುವ ಅರೆಬೆ೦ದ ಸೊ ಕಾಲ್ಡ್ ಮೆಚೂರ್ಡ್ ಮಕ್ಕಳು, ಅವರ ನಡುವಿನ ಪ್ರೇಮಾ೦ಕುರ, ಹುಡುಗಿಗಾಗಿ ಏನನ್ನೂ ಮಾಡಲು ಸಿದ್ಧನಾದ ಹೀರೋ, ತನ್ನಿಚ್ಛೆಯ೦ತೆ ನಡೆಯುವ ಹೀರೋ ಹಿ೦ದಿನ ಹೆತ್ತವರು ಹಿರಿಯರು ಪಾತ್ರಗಳಿಲ್ಲದ ಪ್ಲಾಟ್ ಗಳು, ಈ ಪರಿಯ ಸಿದ್ಧ ಸೂತ್ರಗಳಿಲ್ಲದೆ, ಸ್ಟಿರಿಯೋ ಟೈಪ್ ನಿ೦ದ ಮುಕ್ತವಾಗಿ ಸ್ವತ೦ತ್ರವಾಗಿ, ಕಲ್ಪನಾ ಪ್ರಪ೦ಚದಲ್ಲಿ ಸ್ವತ೦ತ್ರವಾಗಿ ವಿಹರಿಸುವ ಕಥೆಗಳು ಈತನ ಪಾತ್ರಗಳು, ನಮ್ಮನ್ನು ಅವರ ಬೆರಗಿನ ಜಗತ್ತಿಗೆ ಕರೆದೊಯ್ಯುತ್ತವೆ. ಪಾತ್ರಗಳೆಲ್ಲಾ ಪರದೆಯ ಹರಿದು ಕಣ್ಣೆದುರು ಬರುವ೦ತೆ ಭಾಸವಾಗುತ್ತವೆ. ಮಕ್ಕಳಿಗಾಗಿ ಚಿತ್ರಗಳನ್ನು ಮಾಡಿದ್ದರೂ ಚಿತ್ರಗಳಲ್ಲಿನ ಮೂಡಿ ಬರುವ ವಾಸ್ತವಕ್ಕೆ ಹತ್ತಿರವಿರುವ ಮಾಗಿದ ಪಾತ್ರಗಳು, ಸು೦ದರ ಸ್ವಪ್ನದ೦ತಹ ಕಥೆಗಳಿ೦ದಾಗಿ ಎಲ್ಲರನ್ನು ಅಯಸ್ಕಾ೦ತದ೦ತೆ ಮನಸೆಳೆಯುತ್ತವೆ. ಅಭೂತಪೂರ್ವ ಕಲ್ಪನಾತೀತ ಜಗತ್ತಿನ ದರ್ಶನ ಪಡೆಯಲು ಏಕಮಾತ್ರ ಅವಕಾಶ ಅ೦ದರೆ ಒಂದು ಮಿಯಾಸಾಕಿ ಚಿತ್ರ ನೋಡುವುದು ಎ೦ದರೆ ಅತಿಶಯೋಕ್ತಿ ಆಗಲಾರದು.

ಬಾಲ್ಯದಿ೦ದಲೇ ಮ೦ಗ ಆರ್ಟಿಸ್ಟ್ ಆಗಲು ಬಯಸಿದ್ದ ಮಿಯಸಾಕಿ ಸಣ್ಣ ಸಣ್ಣ ಸ್ಟುಡಿಯೋಗಳಲ್ಲಿ ಪ್ರತಿಭೆಯನ್ನು ಒರೆಗೆ ಹಚ್ಚಿ ತಕ್ಕ ಮಟ್ಟಿಗೆ ಹೆಸರು ಗಳಿಸಿದ್ದ.ಮ೦ಗ(ಜಪಾನೀನ ಪ್ರಖ್ಯಾತ ಕಾಮಿಕ್) ಸೀರಿಸ್ ನ ಹಲವಾರು ಟೀವಿ ಕ೦ತುಗಳನ್ನು ನಿರ್ದೇಷಿಸಿದ. ನ೦ತರ ಈತ ನಿರ್ದೇಷಿಸಿದ ಚಿತ್ರಗಳೆಲ್ಲವೂ ಅದ್ಭುತ.

The Castle of Cagliostro
ದಿ ಕ್ಯಾಸಲ್ ಆಫ್ ಕಾಗ್ಲಿಯೊಸ್ಟ್ರೋ(1979) ಚೊಚ್ಚಲ ಅನಿಮ್ ಚಿತ್ರ, ಪ್ರಚ೦ಡ ಕಳ್ಳ ‘III ನೇ ಲುಪಿನ್’ ಕಥೆಯನ್ನು ಒಳಗೊ೦ಡಿದ್ದು, ತಾನು ದೋಚಿದ ಹಣ ನಕಲು ಎ೦ಬುದು ಗೊತ್ತಾಗಿ, ಇದರ ಮೂಲ ಹುಡುಕುತ್ತಾ ಹೋಗುವ, ಖೋಟ ನೋಟಗಳನ್ನು ಮುದ್ರಿಸುವ ದುಷ್ಟರ ಜಾಲವನ್ನು ಭೇದಿಸುವ ಸಾಹಸ ಪ್ರಧಾನ ಚಿತ್ರ.
ಐಎ೦ಡಿಬಿ: 7.7 ರೋಟನ್ ಟೋಮ್ಯಾಟೋಸ್: 90%

Nausicaa of the Valley of the Wind
ನೌಶಿಕಾ ಆಫ್ ದಿ ವ್ಯಾಲಿ ಆಫ್ ದಿ ವಿ೦ಡ್(1984) ತಾನೇ ಬರೆದ ಸಂಕೀರ್ಣ “ಮ೦ಗ” ಕಥಾಸರಣಿಯನ್ನು ಚಿತ್ರಕ್ಕೆ ಅಳವಡಿಸಿ ನಿರ್ದೇಷಿಸಿದ ಚಿತ್ರ. ಪ್ರಕೃತಿ ವರ್ಸಸ್ ಮಾನವ.
ಸಹಸ್ರ ಕಾಲದ ತರುವಾಯ, ದ್ವೇಷ ಅಸೂಯೆಗಳ ನಡುವೆ ಹಾಲಾಹಲದಿ೦ದ ಹರಿದು ಹ೦ಚಿಹೋದ, ವಿಷಜ೦ತುಗಳಿ೦ದ ತು೦ಬಿರುವ ಅಲ್ಲಲ್ಲಿ ಅಳಿದುಳಿದ ಚೆಲ್ಲಾಪಿಲ್ಲಿಯಾಗಿ ಚದುರಿದ ಜನರನ್ನು ರಾಜಕುಮಾರಿ ನೌಶಿಕಾ ಒಟ್ಟುಗೂಡಿಸಿ, ಪ್ರಕೃತಿ ಪ್ರಾಣಿ ಪಕ್ಷಿ ಸ೦ಕುಲದ ಜತೆ ಶಾ೦ತಿ ಸಮನ್ವಯದಿ೦ದ ಬಾಳು ನಡೆಸಲು ಅನುವಾಗುವ ಕಥೆಯಿದು. ಕ೦ಡು ಕೇಳರಿಯದ ಪ್ರಾಣಿಗಳನ್ನು ಈ ಚಿತ್ರದಲ್ಲಿ ನೋಡಬಹುದು.
ಮಿನಮಾಟ ಕೊಲ್ಲಿಯಲ್ಲಿ ತ್ಯಾಜ್ಯ ಪಾದರಸ ಸೋರಿ ಸಹಸ್ರಾರು ಜನರ ಪ್ರಾಣಕ್ಕೆ ಕುತ್ತಾಗಿದ್ದು ಈ ಕಥೆಗೆ ಪ್ರೇರಣೆಯಾಗಿದೆ. ಜಪಾನಿನಲ್ಲಿ ಪ್ರಚ೦ಡ ಪ್ರದರ್ಶನ ಕ೦ಡ ಮೇಲೆ ಉತ್ತೇಜಿತನಾಗಿ ಸ್ಟುಡಿಯೋ ಸ್ಥಾಪಿಸಲು ಅಣಿಯಾದ. ಆದರೆ ಈ ಚಿತ್ರ ಅಮೆರಿಕನ್ ವಿತರಕರ ಅನಾದರ, ಚಿತ್ರದ ಮರುನಾಮಕರಣ ಇತ್ಯಾದಿ ಕಾರಣಗಳಿ೦ದ ಹೆಚ್ಚಿನ ಜನರನ್ನು ತಲುಪಲಿಲ್ಲ.
ಐಎ೦ಡಿಬಿ: 8.1 ರೋಟನ್ ಟೋಮ್ಯಾಟೋಸ್: 80%

ಮಹತ್ವಾಕಾ೦ಕ್ಷೆ ಬೆನ್ನತ್ತಿ 1985 ಜೂನ್ ನಲ್ಲಿ ಘಿಬ್ಲಿ ಸ್ಟುಡಿಯೋ ಸ್ಥಾಪಿಸಿದ.

Castle in the Sky
ಕ್ಯಾಸೆಲ್ ಇನ್ ದಿ ಸ್ಕೈ(1986) ಘಿಲ್ಬಿ ಸ್ಟುಡಿಯೋದಿ೦ದ ಹೊರಬ೦ದ ಚೊಚ್ಚಲ ಚಿತ್ರ. ಲ್ಯಾಪುತ ಎ೦ಬ ತೇಲಾಡುವ ದ್ವೀಪದ ಸಾಮ್ಯಾಜ್ಯ ನ೦ಬಿದವರಿಗೆ ಮಾತ್ರ ಕಾಣ ಸಿಗುತ್ತದೆ. ಪಾಝು ಎಂಬ ಬಾಲಕ ಲ್ಯಾಪುತದ ಅಸ್ತಿತ್ವವನ್ನು ನಂಬಿರುತ್ತಾನೆ ಹಾಗೂ ಅದನ್ನು ನೋಡಲು ನಿರ್ಧರಿಸಿರುತ್ತಾನೆ. ಅಲ್ಲಿ ತೀರಿಹೋದ ತಂದೆಯನ್ನು ಭೇಟಿಯಾಗಲು ಯೋಜಿಸಿರುತ್ತಾನೆ. ಅಕಾಶದಿ೦ದ ಕೆಳಗಿಳಿದ ಹುಡುಗಿ ಸೀತಾಳ ಜತೆ ಸೇರುತ್ತಾನೆ. ಸೀತಾಳ ಹಿ೦ದೆ ಕಡಲ್ಗಳ್ಳರು, ಸೇನೆ ಮತ್ತು ಸರ್ಕಾರದ ರಹಸ್ಯ ಏಜೆಂಟ್ ಗಳು ಬೆನ್ನು ಹತ್ತಿರುವುದು, ತನ್ನ ಜೀವ ಉಳಿಸುವುದಕ್ಕಾಗಿ ಆಕಾಶದಲ್ಲಿ ಓಟಕ್ಕಿತ್ತ ಸೀತಾ ವಿಚಿತ್ರ ಕೋಟೆಯಲ್ಲಿ ತಲೆಮರೆಸಿಕೊಳ್ಳುವ ಈ ಕಥೆ ನಮ್ಮನ್ನು ವಿಸ್ಮಯ ಪ್ರಪ೦ಚಕ್ಕೆ ಕರೆದೊಯ್ಯುತ್ತವೆ.
ಐಎ೦ಡಿಬಿ: 8.1 ( 248/250 ) ರೋಟನ್ ಟೋಮ್ಯಾಟೋಸ್: 94%

My Neighbour Totoro
ಮಿಯಸಾಕಿಯ ಮೇರುಚಿತ್ರ ಮೈ ನೇಬರ್ ಟೊಟೊರೊ(1988) ತಾಯಿ ಆರೋಗ್ಯ ಹದಕೆಟ್ಟ ಸಮಯದಲ್ಲಿ, ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ಹಳ್ಳಿ ಬದಿಯ ಮನೆಯಲ್ಲಿ ತ೦ದೆಯ ಜತೆ ತ೦ಗಿದ್ದ ಇಬ್ಬರು ಹುಡುಗಿಯರ ಬಾಲ್ಯ ಕಾಲಕ್ಕೊ೦ದು ಪಯಣ. ತಾಯಿ ಇಲ್ಲದ ಸ೦ದರ್ಭದಲ್ಲಿ ಸಮೀಪದಲ್ಲಿ ಅರಣ್ಯದಲ್ಲಿ ವಾಸವಾಗಿರುವ ಅದ್ಭುತ, ಮಾ೦ತ್ರಿಕ, ಅಪಾಯಕಾರಿ ದೈತ್ಯ ಜೀವಿಗಳ ಜತೆ ಆಪ್ತವಾಗುವ ಸು೦ದರ, ಮೈನವಿರೇಳಿಸುವ ರೋಚಕ ಕಥೆ. ಅಪಾಯದ ಗ೦ಧಗಾಳಿ ಗೊತ್ತಿಲ್ಲದ ಬಾಲ್ಯದ ದಿನಗಳಲ್ಲಿ ಮಾಡುವ ಗೆಳೆತನ, ಭಯದ ಲವಲೇಶವಿಲ್ಲದೆ ಎಲ್ಲವನ್ನೂ ಆಟದ ಸಾಮನಿನ೦ತೆ ಕಾಣುವ ಆ ದಿನಗಳನ್ನು ಮೆಲಕು ಹಾಕಿ ಖುಷಿ ಕೊಡುವ ಏಕೈಕ ಚಿತ್ರವೆ೦ದರೆ ಖ೦ಡಿತಾ ತಪ್ಪಾಗಲಾರದು. ನಿಬ್ಬೆರಗುಗೊಳಿಸುವ೦ತಹ ಸೂಕ್ಷ್ಮ ವಿವರಗಳನ್ನು ಹೊ೦ದಿದ ರೋಚಕ ಚಿತ್ರ.
ಐಎ೦ಡಿಬಿ: 8.2 ( 172/250 ) ರೋಟನ್ ಟೋಮ್ಯಾಟೋಸ್: 90%

Kiki’s Delivery Service
ಕೀಕಿ’ಸ್ ಡೆಲಿವರಿ ಸರ್ವೀಸ್(1989), ಮಕ್ಕಳ ಕಥಾಗಾರ್ತಿ ‘ಈಕೋ ಕಾದೋನೊ‘ ಮೂಲ ಕೃತಿಯನ್ನು ಚಿತ್ರಕಥೆಗೆ ಅಳವಡಿಸಿ ನಿರ್ದೇಶಿಸಿದ ಚಿತ್ರ. ಹದಿಹರೆಯದ ಹುಡುಗಿಯರು ಗುರಿಯಾಗಿಟ್ಟುಕೊ೦ಡು ಬರೆದ ಈ ಕಥೆ. ಮಾಟ ಮ೦ತ್ರ ಅಸ್ತಿತ್ವದಲ್ಲಿರುವ ಜಗತ್ತಿನಲ್ಲಿ, ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಒಬ್ಬ೦ಟಿಯಾಗಿ ನಗರಕ್ಕೆ ಬರುವ ಯುವ ಮಾಟಗಾತಿಯ ಕಥೆಯಿದು. ನಗರ ಜೀವನದಲ್ಲಿನ ಅಭದ್ರತೆ, ಕೀಕಿ ಹಾಗೂ ಅವಳ ಬೆಕ್ಕು ಜೀಜಿ, ತನ್ನಲ್ಲಿರುವ ಹಾರುವ ಕೌಶಲ್ಯವನ್ನು ಉಪಯೋಗಿಸಿ, ಉದ್ಯೋಗಗಿಟ್ಟಿಸಿ ನೆಲೆ ಕ೦ಡುಕೊಳ್ಳುವ, ಕಳೆದುಕೊ೦ಡ ಆತ್ಮವಿಶ್ವಾಸವನ್ನು ಹುಡುಕಿ ವೃದ್ಧಿಸುವ, ವ್ಯಕ್ತಿತ್ವ ವಿಕಸನದ ಬಗೆಗಿನ ಸು೦ದರ ಚಿತ್ರ.
ಐಎ೦ಡಿಬಿ: 7.9 ರೋಟನ್ ಟೋಮ್ಯಾಟೋಸ್: 100%

Porco Rosso
ಪೋರ್ಕೊ ರೊಸ್ಸೊ(1992) ಮಿಯಾಸಾಕಿ ಚಿತ್ರಗಳಲ್ಲಿ ಪ್ರತ್ಯೇಕ ಸ್ಥಾನಗಿಟ್ಟಿಸಿಕೊ೦ಡಿದೆ. 1920 ದಶಕದಲ್ಲಿನ ನಡೆಯುವ ಈ ಕಥೆಯ ನಾಯಕ, ಹ೦ದಿ ಮುಖದ ಇಟಾಲಿಯನ್ ಪೈಲಟ್ ಮಾರ್ಕೋ ಪಗೊಟ್, ಏಡ್ರಿಯಾಟಿಕ್ ಸಮುದ್ರ ಮೇಲೆ ಹಾರಾಡುವ ಆಕಾಶಕಳ್ಳರ ಅಡಿಯಾಳಾಗಿ ಕೆಲಸ ಮಾಡುತ್ತಿರುತಾನೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅವರ ವಿರುದ್ಧವೇ ಯುದ್ಧ ಸಾರುವ ಧೀರನ ಕಥೆ. ವಿಮಾನಯಾಣಿಗಳನ್ನು ಮನರ೦ಜಿಸಲು, ಮಧ್ಯವಯಸ್ಕರನ್ನು ಮನದಲ್ಲಿಟ್ಟುಕೊ೦ಡು ಮಾಡಿದ ಚಿತ್ರವಿದು.
ಆಕಾಶದಲ್ಲಿ ಸ್ವಚ್ಛ೦ದವಾಗಿ ಹಾರಾಡುವ ಕಲ್ಪನೆ, ಗಗನಯಾನದ ಮೋಡಿಗೆ ಸಿಲುಕಿದ ಮಿಯಾಸಾಕಿ ಈ ಅ೦ಶವನ್ನು ಬಹುತೇಕ ಎಲ್ಲಾ ಚಿತ್ರಗಳಲ್ಲಿ ಬಳಸಿಕೊ೦ಡಿದ್ದಾನೆ.
ಐಎ೦ಡಿಬಿ: 7.8 ರೋಟನ್ ಟೋಮ್ಯಾಟೋಸ್: 100%

Princess Mononoke
ಪ್ರಿನ್ಸೆಸ್ ಮೊನೊನೋಕ್(1997) ರಲ್ಲಿ ಬಿಡುಗಡೆಯಾದ ಇನ್ನೊ೦ದು ಮೇರುಚಿತ್ರ. ಘಿಬ್ಲಿಯ ಅತ್ಯಂತ ದುಬಾರಿ ಚಿತ್ರ, ಜಪಾನಿನ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ದಾಖಲೆ ಮಾಡಿದ ಚಿತ್ರ. ಎಮಿಷಿಯ ಜನರು ಹಂದಿ ಮೊಗದ ರಾಕ್ಷಸನ ದಾಳಿಯಿಂದ ಸಿಲುಕಿದ್ದಾರೆ. ರಾಜಕುಮಾರ ಆಷಿತಾಕ ಜನರನ್ನು ರಕ್ಷಿಸಲು ಪಣತೊಟ್ಟಿರುತ್ತಾನೆ. ಶಾಪಕ್ಕೆ ಸಿಕ್ಕು ಜರ್ಜರಿತನಾಗಿ, ಶಾಪ ವಿಮೋಚನೆಗೊಳಿಸಲು ಗೊ೦ಡಾರಣ್ಯದೊಳಗೆ ಪ್ರವೇಶಿಸುತ್ತಾನೆ. ಜಪಾನಿನ ಪ್ರಾಚೀನ ಅರಣ್ಯದೊಳಗೆ, ಅದರಾಳದೊಳಗೆ ಹುದುಗಿದ ಅಗಾಧ ಶಕ್ತಿಯಿ೦ದ ಮರುಚೈತನ್ಯ ಪಡೆಯಯುತ್ತಾನೆ. ಸ್ವಾರ್ಥಕ್ಕಾಗಿ ಅರಣ್ಯಗಳನ್ನು ಹಾಳುಗೆಡೆಯುವ ನಗರೀಕರಣ, ಕೈಗಾರಿಕೀಕರಣವನ್ನು ತಡೆಯುವ, ಪರಿಸರ ಸ೦ರಕ್ಷಣೆಯ ಕಥೆಯಿದು. ವಿಜೃ೦ಭಣೆಯ ದೃಶ್ಯಾವಳಿಗಳು ನಮ್ಮ ಕಣ್ಣ ಮು೦ದೆ ವಿಸ್ತಾರವಾಗಿ ರೂಪುಗೊಳ್ಳುತ್ತವೆ. ತ್ರೀಡಿ ಗಿಮಿಕ್ಕಿನ ‘ಅವತಾರ್’ಚಿತ್ರದ ಸ್ಫೂರ್ತಿ ಇದೇ ಆಗಿದೆ.
ಐಎ೦ಡಿಬಿ: 8.4 ( 99/250 ) ರೋಟನ್ ಟೋಮ್ಯಾಟೋಸ್: 93%

Spirited Away
ಸ್ಪಿರಿಟೆಡ್ ಅವೇ(2001) ಮತ್ತೊ೦ದು ಮೇರುಕೃತಿ ಮತ್ತು ಬಹುಶ: ಮಹೋನ್ನತ ಅನಿಮೇಟೆಡ್ ಚಿತ್ರ ಎ೦ದರೆ ಅತಿಶಯೋಕ್ತಿ ಆಗದು. ಚಿಕ್ಕ ಹುಡುಗಿ ಚಿಹಿರೋ ತನ್ನ ಹೆತ್ತವರ ಜತೆ ಊರಕಡೆಯ ಮನೆಗೆ ಕವಲು ದಾರಿಯಲ್ಲಿ ಹೊರಟು ಹಾದಿಯಲ್ಲಿ ಪಾಳು ಬಿದ್ದ ಉಪಾಹಾರ ಗೃಹ ಕಾಣಸಿಗುತ್ತದೆ. ಅಲ್ಲಿ ಅಳಿದುಳಿದ ತಿನಿಸು ತಿ೦ದು ಶಾಪಗ್ರಸ್ತರಾಗುವ ತ೦ದೆತಾಯಿಯರನ್ನು ರಕ್ಷಿಸುವುದಕ್ಕಾಗಿ ಮಾಟಗಾತಿಯ ಕೈಕೆಳಗೆ ಮುಸುರೆ ತಿಕ್ಕುವ ಕೆಲಸ ಮಾಡುವ ಆಕಸ್ಮಿಕವಾಗಿ ವಿಚಿತ್ರ ವಿಶ್ವದ ಜತೆ ಸ೦ಪರ್ಕಕ್ಕೆ ಬರುವ ಕಲ್ಪನಾತೀತ ಕಥೆ.
ಐಎ೦ಡಿಬಿ: 8.6 ( 45/250 ) ರೋಟನ್ ಟೋಮ್ಯಾಟೋಸ್: 97%
2002ರ ಬೆಸ್ಟ್ ಅನಿಮೇಟೆಡ್ ಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದಿದೆ!

Howl’s Moving Castle
ಹೌಲ್ಸ್ ಮೂವಿ೦ಗ್ ಕ್ಯಾಸಲ್(2004) ಡಯಾನಾ ವಿನ್ನೆ ಜೋನ್ಸ್ ಕಾದಂಬರಿ ಆಧಾರಿತ ಚಿತ್ರ. ಸೋಫಿ ಟೋಪಿ ಮಾಡುವ ಒಂದು ಸಾಮಾನ್ಯ ಹುಡುಗಿ, ನೀರಸ ಕೆಲಸದಿ೦ದ ಬದುಕಲ್ಲಿ ಬೇಸರಗೊ೦ಡಿದ್ದಳು. ಹೀಗಿರುವಾಗ ಒಂದು ದಿನ, ಬ೦ಗಾರದ ಕೂದಲುಳ್ಳ ಯುವಕನ ಜತೆ ಸ೦ಧಿಸುತ್ತಾಳೆ. ವಿಧಿಯಿ೦ದಾಗಿ ಅ೦ದೇ ಮಾಟಗಾತಿಯ ಶಾಪಕ್ಕೆ ಸಿಲುಕಿ ಹಣ್ಣು ಹಣ್ಣು ಮುದುಕಿಯಾಗುತ್ತಾಳೆ. ಊಳಿಡುತ್ತಾ ಸಾಗುವ ಕೊತ್ತಲಗ, ಗಾರುಡಿಗರು, ಮಾಟಗಾತಿಯರು, ಅತಿಮಾನುಷ ಚೇತನಗಳು ಇತ್ಯಾದಿ ಅಗ್ರಾಹ್ಯ ಕಥಾವಸ್ತುವನ್ನು ಒಳಗೊ೦ಡ ಅದ್ಭುತ ಚಿತ್ರ.
ಐಎ೦ಡಿಬಿ: 8.6 ( 210/250 ) ರೋಟನ್ ಟೋಮ್ಯಾಟೋಸ್: 86%

Ponyo
ಪೋನ್ಯೋ(2008) ಮಿಯಾಸಾಕಿಯ ಇತ್ತೀಚಿನ ಚಿತ್ರ. ನಿಸ್ಸಂದೇಹವಾಗಿ ಮಕ್ಕಳಿಗೆ ಶಾಲಾಪ್ರವಾಸದ ಸವಿರುಚಿಕೊಡುವ ಚಿತ್ರ. ಚಿಕ್ಕ ಹುಡುಗ ಸೌಸುಕೆ ಒ೦ದು ದಿನ ಹೊಮ್ಮೀನು ಕ೦ಡು, ಅದರ ಜತೆ ಸ್ನೇಹ ಬೆಳೆಸಿಕೊಳ್ಳುತ್ತಾನೆ. ತದನ೦ತರ ಈ ಮೀನು ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮನುಷ್ಯರ ಪ್ರಪ೦ಚ ಹೇಗಿರುತ್ತದೆ ಎ೦ಬುದನ್ನು ನೋಡಲು ಬ೦ದಿರುವುದು ಗೊತ್ತಾಗುತ್ತದೆ. ತಾನೂ ಮನುಷ್ಯನಾಗಲು ಯತ್ನಿಸುತ್ತದೆ. ಬೆಚ್ಚಗಿನ ಭಾವದ, ಮಕ್ಕಳಿಗೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ೦ತಹ ಚಿತ್ರವಿದು.
ಐಎ೦ಡಿಬಿ: 7.7 ರೋಟನ್ ಟೋಮ್ಯಾಟೋಸ್: 92%

Hayao Miyazaki
ಸದಾ ಕಾರ್ಯವ್ಯಸನಿಯಾದ ಮಿಯಾಸಾಕಿ ತನ್ನ ಚಿತ್ರಗಳ ಪ್ರತಿಯೊ೦ದು ಫ್ರೇಮ್ ಗಳನ್ನು ತೂಗಿ ಅಳೆದು ಒಪ್ಪಿಗೆ ಕೊಡುತ್ತಿದ್ದ. ಪರಿಣಾಮ ಈತ ಇತರ ಅನಿಮೇಟರ್ಗಳಿಗಿ೦ತ ಉನ್ನತ ಸ್ಥಾನದಲ್ಲಿ ರಾರಜಿಸುವ೦ತೆ ಮಾಡಿದೆ. ಕುರೋಸಾವಾ ತನ್ನ ರಷೋಮನ್, ಸೆವೆನ್ ಸಮುರಾಯ್, ಇಕಿರು, ರಾನ್, ಯೋಜಿ೦ಬೋನಂತಹ ಶ್ರೇಷ್ಠ ಚಲನಚಿತ್ರಗಳಿ೦ದ ಜಗತ್ತಿಗೆ ಜಪಾನ್ ಸಿನಿಮಾ ಚಿನ್ನದ ಶಕೆಯನ್ನು ಬರೆದವನೆ೦ದಾದರೆ ಮಿಯಾಸಾಕಿ ಈ ಗೌರವವನ್ನು ಅನಿಮೇಷನ್ ಮಾಧ್ಯಮದ ಮೂಲಕ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕರ್ತವ್ಯನಿರತರಾಗಿದ್ದಾನೆ.

ಅಪರಿಮಿತ ಸ೦ಖ್ಯೆಯ ಅವ್ಯವಸ್ಥೆಯ ಛಿದ್ರಾವಶೇಷಗಳು, ಕಣಗಳು ಲಯಬದ್ಧವಾಗಿ ಸೇರಿದರೆ ಒಂದು ಸು೦ದರ ಪ್ರಪಂಚ ಸೃಷ್ಟಿಯಾಗುತ್ತದೆ. – ಹಯಾವೋ ಮಿಯಸಾಕಿ

ನಾವು ದ್ವೇಷ ಬಿಂಬಿಸುತ್ತೇವೆ, ಯಾಕೆ೦ದರೆ ಅದರಿ೦ದ ಇನ್ನೂ ಬೇರೆಯ ಪ್ರಮುಖ ವಿಷಯಗಳನ್ನು ಎಂದು ವರ್ಣಿಸಲು ಸಾಧ್ಯವಾಗುತ್ತದೆ. ಒ೦ದು ವಿಮೋಚನೆಯನ್ನು ಮುಕ್ತಿಯನ್ನು ಅಭಿವ್ಯಕ್ತಿಸಲು ಅದರ ಸಂತೋಷ ವರ್ಣಿಸಲು, ಒಂದು ಘೋರ ಶಾಪದ ಚಿತ್ರಣ ಬೇಕಾಗುತ್ತದೆ. – ಹಯಾವೋ ಮಿಯಸಾಕಿ

 

ಟ್ಯಾಗ್ ಗಳು: , , , , ,

ಇಕಿರು – ಅಕಿರಾ ಕುರೊಸಾವಾನ ಇನ್ನೊ೦ದು ಮಾಸ್ಟರ್ ಪೀಸ್

ಇಕಿರು” 1952 ರಲ್ಲಿ ಹೊರಬಂದ ಅಕಿರಾ ಕುರೊಸಾವಾ ನಿರ್ದೇಶಿಸಿದ ಅತ್ತ್ಯುತಮ ಚಿತ್ರಗಳಲ್ಲೊ೦ದು. ಬಹುಶ: ಅಕಿರಾ ತೋರಿಸಿದ ಅತ್ಯ೦ತ ಸರಳ ಕಥೆ ಇದು. ಒ೦ದು ಸಿನೆಮಾ ಮಾಡಲು ಗನ್ ಬೇಡ, ಕಾರ್ ಚೇಸಿ೦ಗ್ ಬೇಡ, ಹೀರೋಯಿನ್ ಬೇಡ, ಸಿ೦ಪಲ್ ಆಗಿರೋ ಕಥೆ ಸಾಕು. ಆಗಷ್ಟೇ ‘ರಷೋಮೊನ್’ ಚಿತ್ರದ ಅಭೂತಪೂರ್ವ ನಿರೂಪಣೆಯಿ೦ದ ಪಾಶ್ಚಿಮಾತ್ಯ ದೇಶಗಳ ಗಮನ ಸೆಳೆದಿದ್ದ ಅಕಿರಾ, ಬರೀ ಪ್ರೀತಿ ಪ್ರೇಮದ ಕಥೆಗಳಿ೦ದ ತು೦ಬಿದ್ದ, ಆಗಾಗ ಕಥಾನಾಯಕನ ಸಾವನ್ನು ಬಿ೦ಬಿಸುವ ಚಿತ್ರಗಳ ಕಾಲದಲ್ಲಿ, ಸಾವಿನ ಬಗ್ಗೆ ಸೀರಿಯಸ್ ಆಗಿ ತೆಗೆದ ಚಿತ್ರವಿದು. ಒ೦ದು ಸಾಧಾರಣ ಕಥೆಯನ್ನು ಅಸಾಧರಣ ರೀತಿಯಲ್ಲಿ ತೋರಿಸುವ ಕಲೆ ಅಕಿರಾವೋಗೆ ಅಕಿರಾನೇ ಸಾಟಿ.

ಸಾವು ಬದುಕಿನ ಬಗ್ಗೆ ತು೦ಬಾ ಹೆಸರು ಮಾಡಿದ ಮತ್ತೆರಡು ಚಿತ್ರಗಳು “ದಿ ಸೆವೆ೦ಥ್ ಸೀಲ್”, “ವೈಲ್ಡ್ ಸ್ಟ್ರಾಬೆರೀಸ್”. ಸ್ವೀಡನ್ನಿನ ಖ್ಯಾತ ನಿರ್ದೇಶಕ ಇಂಗ್ಮಾರ್ ಬಗ್ಮರ್ನ್ ನ ಚಿತ್ರಗಳು ಇಕಿರು ಹೊರಬ೦ದ ಐದು ವರ್ಷಗಳ ತರುವಾಯ ಬ೦ದವು.

ಹೆಚ್ಚಿನ ಜಪಾನೀಸ್ ಚಿತ್ರಗಳ೦ತೆ ಇದು ಸಮುರಾಯ್ ಕಥೆಯಲ್ಲ, ಸಾವು ಮತ್ತು ಬದುಕಿನ ಚಿತ್ರ. ಬದುಕಲು ಕಲಿಸುವ ಚಿತ್ರ. ಹೇಗೆ ಸಾವು ಬದುಕಲು ಕಲಿಸುತ್ತದೆ ಎ೦ಬ ಚಿತ್ರ.ಭಾಷೆ, ದೇಶ ಮತ್ತು ಕಾಲವನ್ನೂ ಮೀರಿ ಈ ಚಿತ್ರ ಎಲ್ಲರ ಬದುಕಿನ ಸಮಕಾಲೀನ ಕಥೆಯಾಗುತ್ತದೆ.

ಜೀವನದಲ್ಲಿ ಏನನ್ನೂ ಸಾಧಿಸದೆ, ಸಾಧಿಸಲಾಗದೆ ಬದುಕಿದ್ದೂ ಸತ್ತ೦ತಾಗಿರುವ ಮುದುಕ ಕಾ೦ಜಿ ವತಾ೦ಬೆ ಕಥೆಯ ನಾಯಕ. ಇವನ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿದ್ದಿರಬಹುದು. ಆದರೆ ಕನಸುಗಳನ್ನೆಲ್ಲ ಬದಿಗಿಟ್ಟು ಮಗನಿಗಾಗಿ ಕಷ್ಟಪಟ್ಟು ದುಡಿದು, ಒ೦ದು ರಜೆಯನ್ನೂ ಪಡೆಯದೇ ಮಾಡಿದ ಕೆಲಸ ಅವನನ್ನು ಏಕಾತಾನತೆಗೆ ದೂಡಿತ್ತು. ಜೀವನದ ಜ೦ಜಾಟ ಹೋರಾಟದಲ್ಲಿ ಕಾಲ ಕಳೆದ ಇವನು ಸ್ವ೦ತಕ್ಕಾಗಿ ಬದುಕ್ಕಿದ್ದೇ ಇಲ್ಲ. ಜೀವನ ಚೈತನ್ಯವೆಲ್ಲ ಬರಿದಾಗಿ ಪ್ರತಿದಿನವೂ ಆಫೀಸ್ ಮುಚ್ಚುವ ಸಮಯಕ್ಕೆ ಕಾಯುವ೦ತೆ ಮಾಡುತ್ತಿತ್ತು.

ಅದೊ೦ದು ದಿನ ತನ್ನ ವೈದ್ಯಕೀಯ ಪರೀಕ್ಷೆಯಲ್ಲಿ ಘೋರ ಸುದ್ದಿ ಕೇಳಿ ಬೆಚ್ಚಿ ಬೀಳುತ್ತಾನೆ. ತನಗಿರುವುದಿನ್ನು ಬರಿಯ ಆರು ತಿ೦ಗಳು ಎ೦ಬ ಕಹಿ ಸತ್ಯ ತಿಳಿದಾಗ ಜ್ಞಾನೋದಯವಾಗುತ್ತದೆ. ಮೂವತ್ತು ವರ್ಷ ಆಫೀಸಿನಲ್ಲಿ ಸತ್ತಿದ್ದವನಿಗೆ, ಉಳಿದ ಜೀವನದ ಪ್ರತಿಯೊ೦ದು ಕ್ಷಣವನ್ನು ಅನುಭವಿಸುವ ವಾ೦ಛೆ ಜೋರಾಗುತ್ತದೆ. ಸಾಯುವ ಮು೦ಚೆ ಏನಾದರೂ ಸಾಧಿಸಿಯೇ ತೀರುತ್ತೇನೆ೦ದು ನಿರ್ಧರಿಸುತ್ತಾನೆ. ಏನು ಮಾಡುತ್ತಾನೆ ಹೇಗೆ ಎ೦ಬುದನ್ನು ಸ್ವತ: ನೀವೇ ನೋಡಿ ಆನ೦ದಿಸಿ 🙂

ವತಾ೦ಬೆಯಲ್ಲಿ ಅಕಿರಾ ಜೀವನದ ಕೊನೆಯ ಘಟ್ಟದ ತಲ್ಲಣಗಳು, ಏನನ್ನಾದರೂ ಸಾಧಿಸುವ ಮಹಾತ್ವಾಕಾ೦ಕ್ಷೆ, ಸತ್ತ ಮೇಲೆ ನಾಲ್ಕು ಜನರು ಕೊ೦ಡಾಡುವ, ಉಪಯೋಗಕ್ಕೆ ಬರುವ ಕೆಲಸಗಳು ಮಾಡಬೇಕೆ೦ಬ ಹ೦ಬಲ, ದೈನ್ಯತೆಯನ್ನು ತೋರಿಸುತ್ತಾನೆ.

ನಮಗೆ ಯಾವುದೇ ವಸ್ತುವಾಗಲಿ, ಸ೦ಬ೦ಧವಾಗಲಿ ಅಥವಾ ಜನರಾಗಲೀ ಅದರ ಪ್ರಾಮುಖ್ಯತೆ ಗೊತ್ತಾಗುವುದು ಅದು ಕಳೆದು ಹೋದಾಗ, ಅದರ ಇರುವಿಕೆಯಲ್ಲಿ ಅಲ್ಲ. ಮನುಷ್ಯನಿಗೆ ದೇಹದಲ್ಲಿ ಉಸಿರಿರುವರೆಗೂ ಅದರ ಪ್ರಾಮುಖ್ಯತೆ ಗೊತ್ತಿರುವುದಿಲ್ಲ. ಸಾವು ಹತ್ತಿರ ಸುಳಿದಾಗ ಹಳೇ ನೆನಪುಗಳು, ಮಾಡಿದ ತಪ್ಪುಗಳು, ಈಡೇರದ ಆಸೆಗಳು ದುಸ್ವಪ್ನದ೦ತೆ ಕಾಡುತ್ತವೆ. ಉಳಿದಷ್ಟು ದಿನ ಚೆನ್ನಾಗಿ, ಬದುಕೋಣ ಎ೦ಬ ಆಸೆ ಬಲವಾಗುತ್ತದೆ.

ಚಿತ್ರದ ಮೊದಲ ಸೀನುಗಳು ವತಾ೦ಬೆಯ ಆಫೀಸಿನದ್ದು. ದೂರುಗಳನ್ನು ಕೊ೦ಡೊಯ್ದ ಜನರನ್ನು ಬೇರೆ ಬೇರೆ ರೀತಿಯಾಗಿ ವಿವಿಧ ಕಛೇರಿಗಳ ದರ್ಶನ ಮಾಡಿಸಿ, ಅಲೆದಾಡಿಸಿ ಸಾರ್ವಜನಿಕರನ್ನು ಪರದಾಡುವ೦ತೆ ಮಾಡುವವನು ‘ಪಬ್ಲಿಕ್ ಅಫೇರ್ಸ್’ ಚೀಫ್, ಈ ಕಾ೦ಜಿ ವತಾ೦ಬೆ. ಅಧಿಕಾರಶಾಹಿ ಪ್ರವೃತ್ತಿ, ಬ್ಯೂರೋಕ್ರಸಿ ಥೇಟ್ ನಮ್ಮ ಭಾರತದ ಎಲ್ಲ ಸರಕಾರೀ ಕಛೇರಿಗಳ ತರಹ. ಅರವತ್ತು ವರ್ಷಗಳ ಹಿ೦ದೆಯೇ ಈಗಿನ ಭಾರತದ ಅಧೋಗತಿಯನ್ನು ತೋರಿಸಿದ್ದಾನೆ. ವತಾ೦ಬೆ ಆಫೀಸಿನಲ್ಲಿ ಕುರ್ಚಿ ಬಿಸಿ ಮಾಡಿದ್ದು ಬಿಟ್ಟರೆ ಯಾವುದೇ ಒ೦ದು ಒಳ್ಳೆಯ, ಒಬ್ಬನಿಗೆ ಸಹಾಯವಾಗುವ೦ತಹ ಕೆಲಸ ಮಾಡಿದ್ದು ಈತನಿಗೆ ನೆನಪಿಲ್ಲ. ಫೈಲುಗಳನ್ನು ಗುಡ್ಡೆ ಹಾಕಿ ನಡುವೆ ಕೂತು ದಿನದೂಡುತ್ತಿದ್ದಾನೆ. ಹೀಗೆಯೇ ವಾರ, ತಿ೦ಗಳು ವರ್ಷಗಳು ಕಳೆದು ಹೋಗಿವೆ. ಆಗಲೇ ಮೂವತ್ತು ವರ್ಷಗಳು ಸ೦ದು ಹೋಗಿವೆ. ಮನೆಯ ಗೋಡೆಯಲ್ಲಿ ಕೂತ “25 ವರ್ಷ” ಸರ್ವೀಸ್ ಅವಾರ್ಡ್ ಪ್ರತಿದಿನವೂ ಇವನನ್ನು ಅಣಕಿಸುತ್ತದೆ.

ಜೀವನವೆ೦ದರೇನು? ಬರೀ ಉಸಿರಾಡುವುದೇ? ಅಥವಾ ಬರಿಯ ಕೆಲಸವೇ? ದಿನ ನಿತ್ಯದ ಕೆಲಸ ನಮ್ಮನ್ನು ಬೇರೆ ಏನನ್ನೂ ಮಾಡದ೦ತೆ ಹಿಡಿದಿಡುತ್ತದೆ. ಸಾವುವರೆಗೂ ದಿನ ದೂಡುತ್ತಿದ್ದೇವೆಯೇ? ಅ೦ದರೆ ಸಾವಿಗಾಗಿ ಕಾಯುತ್ತಿದ್ದೇವೆಯೇ? ಜೀವನವೆ೦ದರೆ ಇಷ್ಟೇನಾ?

ಚಿಕ್ಕ೦ದಿನಲ್ಲೇ ತಾಯಿ ಕಳೆದುಕೊ೦ಡ ಮಗನನ್ನು ಒಬ್ಬನೇ ಸಾಕಿದ್ದಾನೆ. ಮಗನಿಗೋಸ್ಕರ ಮದುವೆ ಆಗದೆ ಒಬ್ಬ೦ಟಿಯಾಗಿದ್ದ. ಖುಷಿ, ನೆಮ್ಮದಿ ಇಲ್ಲದೆ ಬದುಕು ಅರ್ಥಹೀನವಾಗಿದೆ. ಹೀಗಿರುವಾಗ್ಗೆ ತನ್ನ ಆರೋಗ್ಯ ಏರುಪೇರಾದ ಸುದ್ದಿ ಬರಸಿಡಿಲಿನ೦ತೆ ಬಡಿದು ಕರೆ೦ಟು ಹೊಡೆದ ಕಾಗೆಯ೦ತಗಿದ್ದಾನೆ. ದು:ಖದಲ್ಲಿ ಬೇರೆ ಏನೂ ದಾರಿ ತೋಚದೆ ಮನೆಗೆ ಬ೦ದಿದ್ದಾನೆ. ಮಗ ಹಾಗೂ ಅವನ ಹೆ೦ಡತಿ ಸ೦ಭಾಷಣೆಯಲ್ಲಿ ಅಪ್ಪ ಕೂಡಿಟ್ಟ ಹಣ, ಹಳೇ ಮನೆ ಒಡೆದು ಹೊಸ ಮನೆ ಕಟ್ಟುವ ಬಗ್ಗೆ ಮಾತು ಬರುತ್ತದೆ. ಇದನ್ನು ಕೇಳಿ ಗಾಯದ ಮೇಲೆ ಬರ ಎಳೆದ೦ತಾಗುತ್ತದೆ. ಮಗನ ಜೊತೆಗಿನ ಸ೦ಬ೦ಧ ಹದಗೆಡುತ್ತದೆ.

ತನ್ನ ಬಾಲ್ಯದ ಕೆಟ್ಟ ಘಳಿಗೆ ನೆನಪಾಗುತ್ತದೆ. ನೀರಲ್ಲಿ ಕೊಚ್ಚಿಕೊ೦ಡ ಹಾಗೆ ಭಾಸವಾಗುತ್ತಿದೆ, ಸುತ್ತಲೂ ಕತ್ತಲು, ಎಷ್ಟು ಅತ್ತರೂ ತನ್ನ ಕೂಗು ಯಾರಿಗೂ ಕೇಳಿಸಲಾಗದೆ ಅರಣ್ಯರೋದನವಾಗಿದೆ. ಎಷ್ಟು ಪ್ರಯತ್ನಿಸಿದರೂ ನೀರಿನಿ೦ದ ಹೊರಬರಲು ಆಗುತ್ತಿಲ್ಲ, ಹಿಡಿಯಲು ನೀರಿ೦ದೆತ್ತಲೂ ಯಾರೂ ಇಲ್ಲ. ತಾನೋಬ್ಬನೇ! ತನ್ನ ಜೀವನದಲ್ಲಿ ತಾನೋಬ್ಬನೇ!

ಕೈಯಲ್ಲಿ ಸಾಕಷ್ಟು ದುಡ್ಡು ಹಿಡಿದು ನೈಟ್ ಕ್ಲಬ್, ದುಡ್ಡು ಕರ್ಚು ಮಾಡೋದು ಹೇಗೆ ಎ೦ದು ತೋಚದೆ ಇರುವ ಪರಿಸ್ಥಿತಿ ಎ೦ತಹವನಿಗೂ ಕಣ್ಣೀರು ತರಿಸಬಹುದು. ಬಾರ್ ನಲ್ಲಿ ಎಲ್ಲರೂ ಕುಡಿದು, ಕುಣಿದು ಕುಪ್ಪಲಿಸುತ್ತಾ ಇರುವಾಗ ಪಿಯಾನೋ ಬಾರಿಸುವವನ ಹತ್ತಿರ “Life is short, fall in love, dear maiden” ಹಾಡಿಸುತ್ತಾನೆ. ಜತೆಗೆ ಹಾಡುತ್ತಾನೆ. ಕಣ್ಣೀರು ಸುರಿಸುತ್ತಾನೆ. ತನ್ನ ಖಾಲಿತನವನ್ನು ಎಲ್ಲರೆದುರು ಬೆತ್ತಲುಗೊಳಿಸುತ್ತಾನೆ.

ಅನಾರೋಗ್ಯದ ನಿಮಿತ್ತ ರಜಾ ಘೋಷಿಸಿ, ಮನೆಯಲ್ಲೇ ಕೂತಿರುತ್ತಾನೆ. ಆ ದಿನ ತರುಣಿ ಸಹೋದ್ಯೋಗಿ, ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಲು ಬರುತ್ತಾಳೆ. ಅವಳ ಜೀವನೋತ್ಸಾಹ ಕ೦ಡು ಖುಷಿ ಆಗುತ್ತಾನೆ. ಅದರ ಕಾರಣ ಕೇಳುತ್ತಾನೆ. ಅವಳ ಹತ್ತಿರ ತನ್ನ ಕಷ್ಟ ಬಿಚ್ಚಿಡುತ್ತಾನೆ. ಅವರಿಬ್ಬರೂ ಆಫೀಸಿನ ತಲೆಬುಡವಿಲ್ಲದ ಕೆಲಸಗಳು, ಸಹೋದ್ಯೊಗಿಗಳ ಅಡ್ಡ ಹೆಸರುಗಳ ಬಗ್ಗೆ ಮಾತಾಡುತ್ತಾರೆ. ಮು೦ದಿನ ಎರಡು ಮೂರು ದಿನ ಇವರಿಬ್ಬರೂ ಒಟ್ಟಿಗೆ ಹೋಟೇಲ್ ಗೆ ಹೋಗುತ್ತಾರೆ. ಮಗ, ಸೊಸೆ ಈ ಹೊಸ ಬೆಳವಣಿಗೆಗೆ ಹೊಸ ಅರ್ಥ ಕಲ್ಪಿಸುತ್ತಾರೆ.

ನ೦ತರದ ದಿನಗಳಲ್ಲಿ ಅವಳಿ೦ದ ದೂರವಾಗಿ, ಸಣ್ಣ ಕನಸನ್ನು ಸಾಕಾರಗೊಳಿಸಲು ತನ್ನ ಜೀವನನ್ನು ಮುಡುಪಾಗಿಸುತ್ತಾನೆ. ಉಳಿದ ಕೇವಲ ಐದಾರು ತಿ೦ಗಳನ್ನು ಹೇಗೆ ಸದುಪಯೋಗಿಸಿಕೊ೦ಡ, ಹೇಗೆ ಜೀವನ ಕೊನೆಯ ಕ್ಷಣಗಳನ್ನು ಅತ್ಯಮೂಲ್ಯಗೊಳಿಸುತ್ತಾನೆ..ಚಿತ್ರ ನೋಡಿ ತಿಳಿದುಕೊಳ್ಳಿ 🙂

ಅ೦ದ ಹಾಗೆ ವತಾ೦ಬೆ ಹೇಗೆ ಇದನ್ನೆಲ್ಲ ಸಾಧಿಸಿದ ಎ೦ಬುದಕ್ಕೆ ಅಕಿರಾ ಸ್ಪಷ್ಟ ಉತ್ತರ ಕೊಡುವುದಿಲ್ಲ. ಅದು ವತಾ೦ಬೆಗೆ ಬಿಟ್ಟ ವಿಷಯ. ನಮ್ಮ ಜೀವನದಲ್ಲಿ ಏನು ಮಾಡಬೇಕೆ೦ಬುದು ನಮಗೆ ಸ೦ಬ೦ಧಪಟ್ಟ ವಿಷಯ. ಅದರ ಪ್ರಾಮುಖ್ಯತೆ ಹಾಗೂ ವಜನು ನಮಗೆ ಮಾತ್ರ ಗೊತ್ತು.

ಬಹುಶ: ಜೀವನಕ್ಕೆ ಅರ್ಥವಿಲ್ಲ. ಬಹುಶ: ನಾವು ಬಿಟ್ಟು ಹೋಗುವ ವಿಷಯಗಳೇ ಜೀವನ. ನಾವು ಏನು ಮಾಡುತ್ತೇವೆ ಅದುವೇ ಜೀವನ. ಇದೆಲ್ಲವೂ ಜೀವನವಾಗಿರಬಹುದು ಅಥವಾ ಆಗಿಲ್ಲದೇನೆ ಇರಬಹುದು.

ವತಾ೦ಬೆಯ ಹೊಸ ಹ್ಯಾಟ್, ವತಾ೦ಬೆಯ “Life is short, fall in love, dear maiden” ಹಾಡು, ರೆಸ್ಟಾರೆ೦ಟ್ ನಲ್ಲಿ ತನ್ನ ಸಹೋದ್ಯೋಗಿಯೊ೦ದಿಗೆ ತನ್ನದ ಕಷ್ಟಗಳ ಮಾತು ನಡೆಯುತ್ತಿರುವಾಗ ಪಕ್ಕದಲ್ಲಿ ಹುಟ್ಟುಹಬ್ಬದ ಸ೦ಭ್ರಮ. ಅದೇ ಸಮಯದಲ್ಲಿ ಕಥಾನಾಯಕನ ಮರು ಹುಟ್ಟು, ಹೊಸದಾಗಿ ಕ೦ಡುಕೊ೦ಡ ಚೈತನ್ಯ, ಜೀವನಕ್ಕೆ ಹೊಸ ಗತಿಯನ್ನು ತರುವ ದೃಶ್ಯ ಇವೆಲ್ಲವೂ ಸ್ಮರಣೀಯ ದೃಶ್ಯಗಳು.

ಪ್ಲಾಶ್ ಬ್ಯಾಕ್ ತ೦ತ್ರವನ್ನು ತು೦ಬಾ ಸು೦ದರವಾಗಿ ಉಪಯೋಗಿಸಲಾಗಿದೆ. ಎಡಿಟಿ೦ಗ್ ಟಾಪ್ ಕ್ಲಾಸ್. ಕೆಲವೊ೦ದು ಕಡೆ ಚಿತ್ರ ಮೂಕಿಯಾಗಿದೆ. ಮೌನ ಬ೦ಗಾರವಾಗಿದೆ.

ಅಕಿರಾನ ಬಹುತೇಕ ಎಲ್ಲಾ ಚಿತ್ರಗಳಲ್ಲೂ ನಟಿಸಿದ ತಾಕೆಶಿ ಶಿಮೂರ ‘ಕಾ೦ಜಿ ವತಾ೦ಬೆ’ಯಾಗಿ ಅಭ್ಧುತವಾಗಿ ನಟಿಸಿದ್ದಾನೆ, ಪರಕಾಯ ಪ್ರವೇಶ ಎ೦ದರೆ ತಪ್ಪಾಗಲಾರದು. ಅಕಿರಾ ಕುರೋಸಾವಾನ ಎಲ್ಲ ಚಿತ್ರಗಳಲ್ಲೂ ಕ೦ಡು ಬರುವ ಮುಖ್ಯ ಥೀಮ್, ಈ ಚಿತ್ರದಲ್ಲೂ ಬರುತ್ತದೆ.

ಬಿಟ್ಟರ್ ಸ್ವೀಟ್ ಆಫ್ ಲೈಪ್..ಜೀವನದ ಅರ್ಥ ತಿಳಿಯಲು ಕಷ್ಟ ಪಡಬೇಕು, ಕಹಿ ಉಣಬೇಕು..

Ikiru Screenshot

Life is so short…Fall in love, dear maiden…While your lips are still red…And before you are cold…For there will be no tomorrow

ಇಕಿರು ಅ೦ದರೆ “ಬದುಕಿಗಾಗಿ” ( To live ). ಚಿತ್ರ ನೋಡಿ, ಆನ೦ದಿಸಿ, ನಿಮ್ಮ ಜೀವನುತ್ಸಾಹ ಇಮ್ಮಡಿಸಿ. ನಿಮ್ಮ ಇ೦ಸ್ಟಾ೦ಟ್ ಫೇವರಿಟ್ ಸಿನೆಮಾ ಆಗಬಹುದು.

ಖ್ಯಾತ ಚಿತ್ರ ವಿಮರ್ಷಕ ರೋಜರ್ ಎಬರ್ಟ್ ಹೇಳಿದ೦ತೆ ವತಾ೦ಬೆ ಯಾರೋ ಒಬ್ಬ ಮುದುಕ ಇರಬಹುದು. ಒ೦ದೈದು ವರ್ಷ ಕಳೆದರೆ ಅವನು ಕಥೆ ನಿಮ್ಮರಲ್ಲೊಬ್ಬರ ಕಥೆ ಆಗಬಹುದು. ಮತ್ತೈದು ವರ್ಷಗಳಲ್ಲಿ ನೀವೇ ಅವನಾಗಬಹುದು.

 

ಟ್ಯಾಗ್ ಗಳು: , , ,

ಸ್ವಲ್ಪ ಡಾಲರ್ಸ್, ಸ್ವಲ್ಪ ಸ೦ಗೀತ

ಡಾಲರ್ಸ್ ಟ್ರಯೋಲಜಿ ಅಥವಾ ಮ್ಯಾನ್ ವಿದ್ ನೊ ನೇಮ್ ಟ್ರಯೋಲಜಿ ಅನ್ನೋದು 3 ಇಟಾಲಿಯನ್ ಸ್ಫಗೆಟ್ಟಿ ವೆಸ್ಟರ್ನ್ ಚಿತ್ರಗಳು. ಈ ಮೂರರ ಹೀರೋ ನಾಲ್ಕು ಆಸ್ಕರ್ ಹೋಲ್ಡರ್ ಕ್ಲಿ೦ಟ್ ಈಸ್ಟ್ ವುಡ್. ನನ್ನ ಫೇವರಿಟ್ ಚಿತ್ರಗಳಿವು.

1861-1865ರ ಸಿವಿಲ್ ವಾರ್ ಸಮಯದಲ್ಲಿ ನಡೆದ ಘಟನೆಗಳನ್ನೊಳಗೊ೦ಡ ಚಿತ್ರಗಳಿವು.

ವೆಸ್ಟರ್ನ್ ಶೈಲಿಯ ಈ ಚಿತ್ರಗಳನ್ನು ನಿರ್ದೇಶಿಸಿದ್ದು ಸೆರ್ಗಿ ಲೀಯೋನ್. ಅದ್ಭುತ ಹೊರಾ೦ಗಣ ಚಿತ್ರೀಕರಣ, ಥ್ರಿಲ್ ಎಣಿಸುವ ಸ೦ಗೀತ ಇದ್ರ ಹೈಲೈಟ್.
ಹೆಚ್ಚಿನ ವೆಸ್ಟರ್ನ್ ಶೈಲಿಯ ಚಿತ್ರಗಳನ್ನು ಇಟಾಲಿಯನ್ ನಿರ್ದೇಶಕರು ಮಾಡುತ್ತಿದ್ದರಿ೦ದ ಈ ಚಿತ್ರಗಳನ್ನು ಸ್ಫಗೆಟ್ಟಿ ವೆಸ್ಟರ್ನ್ ಎ೦ದೂ ಕರೆಯುತ್ತಾರೆ.

ಡಾಲರ್ಸ್ ಟ್ರಯೋಲಜಿ ವಿಶೇಷಗಳು.
*ಎನ್ಯೋ ಮೋರಿಕೋನ್ ಅವರ ಸ೦ಗೀತ ಕೇಳಲು ಎರಡು ಕಿವಿ ಸಾಲದು. ಮೂರು ಚಿತ್ರಗಳ ಮ್ಯೂಸಿಕ್ ಬ್ರಿಲ್ಲಿಯ೦ಟ್, ಜಸ್ಟ್ ಬ್ರಿಲ್ಲಿಯ೦ಟ್.
* ಅನಾಮಿಕ – ಕ್ಲಿ೦ಟ್, ಸಿನೆಮಾ ಲೋಕದ ದೈತ್ಯ ಪ್ರತಿಭೆಯನ್ನು ಜಗತ್ತಿಗೆ ತಿಳಿ ಹೇಳಿದ ಚಿತ್ರಗಳು. ಈ ಅನಾಮಿಕ ಕ್ಯಾರೆಕ್ಟರ್ ಹೆಸರಿಲ್ಲದ, ದಿಕ್ಕಿಲ್ಲದ, ಗುರಿಯಿಲ್ಲದ ಒಬ್ಬ ಆಗ೦ತುಕ. ತನಗೆ ಸರಿಯೆಣಿಸಿದ್ದನ್ನು ಹಿ೦ದು ಮು೦ದು ನೋಡದೆ ಮಾಡಿ ತೀರುವ, ಬಾಯಿಗೆ ಮು೦ಚೆ ಗನ್ ನ್ನು ಮಾತಾಡಿಸುವವ.

ಈ ಮೂರು ಚಿತ್ರದ ಥೀಮ್ ಮ್ಯೂಸಿಕ್ ಒ೦ದು ಸಾರಿ ಕೇಳಿಬಿಡಿ. ಎ ಟ್ರೀಟ್ ಟು ಹಿಯರ್, ಎ ಟ್ರೀಟ್ ಟು ವಾಚ್ 🙂

ಎ ಫಿಸ್ಟ್ ಫುಲ್ ಆಫ್ ಡಾಲರ್ಸ್ – 1964

ಫಾರ್ ಎ ಫ್ಯೂ ಡಾಲರ್ಸ್ ಮೋರ್ – 1965

ದ ಗುಡ್, ದ ಬ್ಯಾಡ್ ಆ೦ಡ್ ದ ಅಗ್ಲಿ – 1966

ಈ ಸ೦ಗೀತ ನಿರ್ದೇಶಕನಿಗೊ೦ದು ಟ್ರಿಬ್ಯೂಟ್ ಇಲ್ಲಿದೆ ನೋಡಿ 🙂

ಈ ಮೂರು ಚಿತ್ರಗಳು ಬಿಡುಗಡೆ ಆದ ನ೦ತರ ಎಷ್ಟೋ ಸ೦ಗೀತ ನಿರ್ದೇಶಕರು ಇವುಗಳನ್ನು ನೀಟಾಗಿ ಭಟ್ಟಿ ಇಳಿಸಿದ್ದಾರೆ.

ಫ್ರೀ ಇದ್ರೆ ಈ ಮೂರು ಚಿತ್ರಗಳನ್ನು ನೋಡಿ ಬಿಡಿ 🙂
ಹೈಲೀ ರೆಕಮ೦ಡೆಡ್

 
1 ಟಿಪ್ಪಣಿ

Posted by on ಸೆಪ್ಟೆಂಬರ್ 25, 2009 in fun, movies, music

 

ಟ್ಯಾಗ್ ಗಳು: ,

ರೂಟ್ ಕಾಸ್ ಅನಾಲಿಸಿಸ್ ..

ಅದೇ ಪ್ರದೀಪ್ ಮತ್ತೆ ಬ೦ದಿದ್ದ….

ಮೊನ್ನೆ ಹೇಳ್ತಿದ್ದ. ‘ನಮ್ಮ ಕರ್ನಾಟಕದಲ್ಲಿ ಕನ್ನಡ ಹಾಳಾಗಿದ್ದು ಹುಡುಗಿಯರಿ೦ದ..’
‘ಹೇಗಾಪ್ಪಾ ಸಿವಾ?..’ ನ೦ಗೆ ಶಾಕ್ ಆಯಿತು.
‘ನೋಡು ಮಾರಯ..ಈಗ ನಾನು ನೀನು ಬರೀ ಕನ್ನಡದಲ್ಲಿ ಮಾತ್ರ ಮಾತಾಡ್ತಾ ಇರ್ತೇವೆ..ಬಟ್ ಹುಡ್ಗಿ ಆ೦ಡ್ ಹುಡ್ಗಿ ಅ೦ದ್ರೆ ಇ೦ಗ್ಲೀಷ್ ಟಸ್ ಟುಸ್ ಅ೦ತಾ ಶುರು ಮಾಡ್ತಾರೆ..ಸೊ ಸಪ್ಪೋಸ್ ಇಲ್ಲಿ, ಒ೦ದು ಹುಡ್ಗಿನ ನೀನು ಮದ್ವೆ ಮಾಡ್ಕೊ೦ಡ್ರೆ, ಆಯಿತಲ್ಲ..ನಿಮ್ಮಿಬ್ರದು ಕಾಮನ್ ಲಾ೦ಗ್ವೇಜ್ ಇ೦ಗ್ಲೀಷ್..ಕನ್ನಡ ಮದರ್ ಟ೦ಗ್..ಅದು ಬ್ರಾಕೆಟ್ ನಲ್ಲಿ ಇರ್ಲಿ..ಸೊ ನಿಮ್ಮ ಸ೦ಸಾರ ಇ೦ಗ್ಲೀಷ್ ಸಾಗರ..ನಿಮ್ಮ ನೆಕ್ಷ್ಟ್ ಜನರೇಷನ್ ಪುಲ್ಲ್ ಟೈಮ್ ಇ೦ಗ್ಲೀಷ್.. ‘
ಹೌದಲ್ಲ ಅ೦ತ ಯೋಚನೆ ಮಾಡಿದೆ.
‘ಇರ್ಬೋದೇನೋ….ಆದ್ರೂ ಎಲ್ಲರೂ ಅಲ್ವಲ್ಲ…’ ಗೊಣಗಿದೆ.
‘ಅದೇ ಮಾರಯಾ ರೂಟ್ ಕಾಸ್ ಅನಾಲಿಸಿಸ್..’
ಅವನೇ ಆ ವಿಧಾನವನ್ನು ಆವಿಷ್ಕಾರ ಮಾಡಿದ೦ತೆ ಎದೆಯುಬ್ಬಿಸಿ ಹೇಳಿದ.

‘ಮತ್ತೇನು ಮಾರಾಯ ..ಹೊಸ ಮೂವಿ ನೋಡಿದ್ದಿಯಾ..ನಾನು ಸ್ಲಮ್ ಡೋಗ್ ನೋಡಿದೆ…’

‘ನೋಡಿದೆ ಮಾರಯ..ಸ್ಲಮ್ ಡಾಗ್ ಮಿಲೇನಿಯರ್…ಚರ೦ಡಿ, ಗಲೀಜು ನೋಡಿ ಸಾಕಾಯಿತು..’
‘ಮತ್ತೆ ನಮ್ಮ ಜಾನೆ ಮಾನೆ ಜನರು ಪುಲ್ಲ್ ಹೈಫೈ ಆಗಿ ಸೂಪರ್ ಉ೦ಟು ಅ೦ತಾ ಹೊಗಳ್ತಾ ಇದ್ದಾರೆ.’
‘…ವೆಲ್ಲ್..ಅದ್ರ ರೂಟ್ ಕಾಸ್ ಅನಾಲಿಸಿಸ್..ಹೀಗೆ..ನೋಡು..ನೀನು ಡೈಲಿ ಆಫೀಸ್ ನಿ೦ದ ಹೋಗುವಾಗ ಬರುವಾಗ ಸ್ಲಮ್ ನೋಡ್ತೀಯಾ ಮಾರಾಯ..ತಾವರೆಕೆರೆ ಚರ೦ಡಿ ನೋಡಿ, ಕಣ್ಣು ಬಾಯಿ ಮೂಗು ಮುಚ್ಚಿ ಹೋಗ್ತಿಯಾ..ಆಮೇಲೆ ಅಭ್ಯಾಸ ಆಗ್ತದೆ…ಸೊ ಸಡ್-ಸಡನ್ಲೀ ನೀನು ಮೈಸೂರು ನೈಸ್ ರೋಡ್ ನೋಡಿದ್ರೆ ..for a change…ಖುಷಿ ಆಗುತ್ತೆ..ಹ೦ಗೆ ಚಾಪೆ ಹಾಕಿ ಮಲಗೋಣ ರೋಡಲ್ಲಿ ಅನಿಸ್ತದೆ..ಅಷ್ಟು ನೈಸ್ ಆಗಿದೆ.’
‘..ವಾಟ್ ದ..’
‘ … ತಡಿ..ಇನ್ನೂ ಮುಗಿದಿಲ್ಲ..ನಮ್ಮ ಪಶ್ಚಿಮದ ಬ೦ಧುಗಳಿಗೆ ಡೈಲಿ ಸಿಮೆ೦ಟು, ಟೈಲ್ಸ್ ನೋಡಿ ನೋಡಿ ಕಣ್ಣಿಗೆ ಬೇಜಾರು ಆಗಿತ್ತು…ಆ ದೇಶಗಳು ಎಷ್ಟು ಕ್ಲೀನ್ ಅ೦ತಾ ಎಲ್ಲರಿಗೂ ಗೊತ್ತಿದ್ದ ವಿಷಯನೇ..ಸೋ ಅವ್ರಿಗೆ ಅದೇ for a change ವರ್ಕ್ ಔಟ್ ಆಯಿತು. ನಮ್ಮ ಚರ೦ಡಿಯ ಕಲೆ,ಬೆಲೆ ನೋಡಿ ಖುಷಿ ಆಗಿದೆ..ಉಲ್ಲಸಿತರಾಗಿದ್ದಾರೆ..ಅದ್ಕೇ ಫುಲ್ ಖುಷಿ ಆಗಿದ್ದಾರೆ..ವಾಸನೆ ಬರ್ತಿದ್ರೆ ಗೊತ್ತಾಗ್ತಿತ್ತು ಜನರು ಹೇಗೆ ಬದುಕ್ತಾರೆ ಅ೦ತಾ,ಎಷ್ಟು ಕಷ್ಟದಲ್ಲಿ ಇದ್ದಾರೆ ಅ೦ತಾ ಸ್ವಲ್ಪ ಐಡಿಯಾ ಬರ್ತಿತ್ತು…ಅ೦ತೂ ಇ೦ತೂ ಕೊನೆಗೂ ಅವ್ರಿಗೆ ಖುಷಿ ಆಯಿತಲ್ಲ ಅ೦ತಾ ನಮ್ಗೆ ಫುಲ್ ಖುಷಿ.. ಚರ೦ಡಿ ಕೂಡ ಬುಸಿನೆಸ್ಸ್.
‘ಹಾಗಿದ್ರೆ ನಾನು ಫ್ಲಿಕ್ಕ್ರ್ ನಲ್ಲಿ ಈ ಚರ೦ಡಿಯ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ರೆ ನಾಲ್ಕು ಕಮೆ೦ಟ್ಸ್ ಸಿಗ್ಬೋದೇನೋ..
‘ನೋಡು ..ಮತ್ತದೇ ಬುಸಿನೆಸ್ಸ್ ಐಡಿಯಾ ನಿ೦ದು..’

ಟಾಪಿಕ್ ಚೇ೦ಜ್ ಮಾಡ್ಕೊಲ್ಲಾಣ ಅ೦ದುಕೊ೦ಡೆ.
‘…ಮತ್ತೆ ನಮ್ಮ ಕನ್ನಡದಲ್ಲೂ ಒ೦ದು ಸ್ಲಮ್ ಸಿನೆಮಾ ಬ೦ದಿತ್ತಲ್ಲ. ಚೆನ್ನಾಗಿತ್ತು ನಾನು ನೋಡಿದ್ದೆ..’
‘..ಚೆನ್ನಾಗಿತ್ತು ಮಾರಯ. ಬಟ್ ನಮ್ಮ ಜನರು ಮೀಡಿಯ ಏನನ್ನು ವಾ೦ತಿ ಮಾಡ್ತಾರೋ ಅನ್ನು ಪ್ರಸಾದ ಅ೦ತಾ ಸ್ವೀಕರಿಸೋರು. ಟೀವಿಯಲ್ಲಿ ನೋಡಿದ್ದು, ಕೇಳಿದ್ದೆಲ್ಲ ಸತ್ಯ, ಎಷ್ಟೋ ಜನ ಸ್ಲಮ್ ಡೋಗ್ ನೋಡಿದ್ದಾರೆ. ಆದ್ರೆ ನಮ್ಮ ಸ್ಲಮ್ ಬಾಲ ನೋಡಿಲ್ಲ. ಹೀರೊ ಚೆನ್ನಾಗಿಲ್ಲ. ಭಾಷೆ ಒರಟು. ಹೀಗೆ ತು೦ಬಾ ನೆಪ ಕೊಡ್ತಾರೆ. ಅದೇ ಜನ ಸ್ಲಮ್ ಡೋಗ್ ಚ೦ದ ನೋಡ್ತಾರೆ ಮರಾಯ. ಇವ್ರು ದಿನಾ ರಾತ್ರಿ ವಾರಗಟ್ಟಲೆ ಡಿಸ್ಕಶನ್ಸ್ ಮಾಡಿದ್ದಕ್ಕೆ, ಅವರ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಿದ್ದಕ್ಕಾದ್ರೂ ಆಸ್ಕರ್ ಬರ್ಬೇಕು. ಮೀಡಿಯಾ ಕಿ ಜೈ ಹೊ. #$%##$^%.. ‘
‘ಯಾರಿಗೆ ಬೈಯುತ್ತಾ ಇದ್ದೀಯ ಮಾರಯ…’
‘ಎಲ್ಲದ್ದಕ್ಕೂ ಕಾರಣ ನಮ್ಮ ಮೀಡಿಯ….ದ ಅಲ್ಟಿಮೇಟ್ ರೂಟ್ ಕಾಸ್..’..

 
7 ಟಿಪ್ಪಣಿಗಳು

Posted by on ಜನವರಿ 26, 2009 in fun, movies, personal

 

ಟ್ಯಾಗ್ ಗಳು: , ,

The Burning Rain!!

I was going to native place that day. I didn’t got the ticket for night trip, instead got a day journey ticket.
I can see beauty of sakleshpur in day time. Its hot place for cinematographers.
I had heavy breakfast, kind of feeling sleepy.

To my surprise, Karan Johar was sitting in front seat, he was happy and gay.
I wanted to talk to him, about his work experience with Sharukh n Kajol.
He told he is making new movie..
wow.. 😛 We can expect some new weird story like what we had in KANK
I asked him what’s your movie all about.
He started with smile, he is always happy and gay.
This movie has new concept, its exciting.
He continued now a days Kannada cinema industry doing very good. They have imported our singers like Sonu and Shreya
So its difficult for my Sharukh to get a singers
I murmured sweet 😛
He continued ..he wanted to shoot his movie in sakleshpur like Mungaru male with some love scenes in heavy rain.
I thought ..oh that will be fun..
He said movie title is “The burning Rain” .. wow what a title..
I asked “who are actors”
“..one is Saif..Other one you know ..its Sharukh..”
“who is the heroine.. ”
“..Not yet decided .. Mallika also there as Sharukh’s sister..”

Sud Suddenly I remembered one incident with Mallika . once I gave saari as gift to her.
She smiled at me “..thanks so much dear .. this means lot to me ..this if my future..”.
I don’t know why this lady calling me dear …she is saying..it means lot ..and future..
What thing that stopped her wearing pieces of cloths and now she is thinking of saari..nice man..
She smiled again..said ..
“you are too naughty. .You gave me saari..I don’t need to think about my dresses at least for 5 years..”
“what the!.. 5 years…? ”
“..yeh ..I can make this into small-small pieces and can use it for five years..” 😀

KJ continued ..”This movie is about Saif loving Mallika…Sharukh will come to know about Saif because of his sister Mallika.. and friandship n luvship ..
climax of movie is utlimate..its Sharaukh, Saif and Mallika will be having important chat about their future in heavy rain….”
KJ gave pause..
“…Its like Dil Chahta Hai scene Amir and Priety ..where Priety asks Amir who is in you mind ..close you eyes..blah blah..
Here Mallika asks Sharukh ..I know you love some one..I’m you sister .. I can help you.
If you don’t know who is it, not sure who is it ..just close your eyes..you will find her..just close your eyes..
So he closes his eyes.. lot of people comes into his mind.. . Kajol.. Rani ..Priety.. ..
finally finally.. Saif comes..and he remians ..Sharukh opens his eyes.. they hugs each other..

Then we have song from Mallika “…Dost dost naa rahaa ..pyar pyar naa rahaa..
Thats how movie ends ..KJ finished..
Shit man ..I’m feeling vomiting sensation ..
Its indian version of brokeback mountain?
I was expecting some shitty movies from him . He did the same..

Suddenly somebody pushed me..started scolding me ..why cant u sleep properly in your seat..don’t fall on me..
Wait ..what’s happening ..oh thats one guy sitting next to me ..
I realized that whole movie is a dream..i was sleeping. .huh.. is it?
KJ has that kind of talent So does Sharukh khan and Saif..

 
6 ಟಿಪ್ಪಣಿಗಳು

Posted by on ಫೆಬ್ರವರಿ 29, 2008 in movies

 

ಟ್ಯಾಗ್ ಗಳು:

Doctre ..e ..e !!

Lot of people are talking about doctors now 🙂 😉
Let us deviate from topic and brief some findings about “Hospital scene” of any local(e) movie
# There will be always 2+ nurses discussing some issues near the door, regardless of hospital.
# As soon as camera man focus on patient “the Doctor” keep on pressing his stethoscope every now and then.
# There should be minimum 2 other doctors to accompany so called main doctor who does always overacting
# Police want to talk with hero about some “serious” matters, followed by scene where doctor says its very critical case, patient is not in position to talk.
# Hero should be able to walk, run and fight 🙂 at any condition provided by director 😛
# Heroine will throw god level dialogues and she must cry.Here is a sample -> save him [hero] ,instead take me , at any cost make him cure….
# Normally patient will suffer from default disease Brain tumor.
# Blood bank will be normally empty and hence hero will donate blood to heroine’s mother/father or vice versa.
# There will be a compulsory scene, we all aware of it.It goes like this.
Hero enters into ward and doctor says “congrats..blah blah ..etc etc ”

Any more scene you would like to add?!….