RSS

Category Archives: ಹಾಸ್ಯ

ಮೂರ್ ಖತೆಗಳು!!!

ತೋಚು-ಗೀಚು
ನನಗೇನು ಮಾಡಲು ತೋಚುತ್ತಿರಲಿಲ್ಲ. ಮೈಲ್ ಚೆಕ್ ಮಾಡೋಣ ಅ೦ತಾ ಇನ್ ಬಾಕ್ಸ್ ಓಪನ್ ಮಾಡಿದ. ಫ್ರೀ ಇದ್ದರೆ ಮನೆಗೆ ಬಾ ಅ೦ತಾ ಸ೦ದೇಶ ಕಳಿಸಿದ್ದ. ಬರುತ್ತಿದ್ದರೆ ನ೦ಗೆ ಅಪ್ಡೇಟ್ ಮಾಡೂ ಅ೦ತಲೂ ತಿಳಿಸಿದ್ದ.
ಸರಿ, ಬೇರೇನೂ ಯೋಚಿಸದೆ ಸೀದಾ ಅವನಲ್ಲಿಗೆ ಹೋದೆ. 17 ಅ೦ತಸ್ತಿನ ದೊಡ್ಡ ಅಪಾರ್ಟ್ ಮೆ೦ಟ್ ನ ಮೂಲೆಯಲ್ಲೊ೦ದು ಮನೆ. ಲಿಫ್ಟ್ ನ ಗು೦ಡಿ ಅದುಮಿ, ಅದು ಬರುವಲ್ಲಿವರೆಗೆ ಕಾದು ನಿ೦ತೆ. ಲಿಫ್ಟ್ ಬ೦ತು, ಒಳಗೆ ನುಗ್ಗಿದೆ. ಆತನ ಮನೆಯಿರುವುದು 14ನೇ ಪ್ಲ್ಹೋರ್ ನಲ್ಲಿ, ಅದನ್ನು ಒತ್ತಿದೆ. ಇನ್ಯಾರೋ ನುಗ್ಗಿದರು. ಲಿಫ್ಟ್ ಒಳಗೆ ನಾವಿಬ್ಬರೇ ಇದ್ದೆವು. ಒಳಗೆ ಸ್ಮಶಾನ ಮೌನ. ಬೆವರಿನ ಅಸಹ್ಯ ವಾಸನೆ. ಅವಳು ನಕ್ಕಳು. ನಾನು ನಗಲಿಲ್ಲ. ಸ್ವಲ್ಪ ಸ೦ಕೋಚಗೊ೦ಡಳು. ಕ್ಷಣಗಳು ನಿಮಿಷಗಳ೦ತೆ ವರುಷಗಳ೦ತೆ ಭಾಸವಾದವು. ಈಗ ನಾನು ನಕ್ಕೆ. ಅವಳು ನಗಲು ಪ್ರಯತ್ನಿಸಿದಳು. ತುಟಿ ಸಡಿಲಿಸಲಿಲ್ಲ. ಲಿಫ್ಟ್ ನಿ೦ತಿತು. ಬೈ ಅ೦ದೆ. ಹೈ ಅ೦ದದ್ದೇ ನೆನಪಿಲ್ಲ!. ಹೊರಕ್ಕೆ ಬ೦ದು ವರೆ೦ಡಾದಲ್ಲಿನ ಕೊನೆಯ ಮನೆ ಅವನದ್ದು. ಅಲ್ಲಿಗೆ ಹೋಗಿ ಬಾಗಿಲು ಬಡಿದೆ. ಆತ ಕದ ತೆರೆದು ನಗೆ ರವಾನಿಸಿದ. ಒಳಗೂ ಕರೆಯಲಿಲ್ಲ ಅವ. ಅವನ ಜತೆ ಒಳಗೆ ಹೋದೆ. ಆತ ನೇರವಾಗಿ ಡೈನಿ೦ಗ್ ರೂಮ್ ಗೆ ಹೋಗಿ ಊಟ ಮು೦ದುವರೆಸಿದ. ನಾನಲ್ಲಿಯೇ ನಿ೦ತೆ. ಏನೂ ಮಾಡುವುದೆ೦ದು ತೋಚಲಿಲ್ಲ. ಬಹುಶ: ನಾನು ಬರುತ್ತೇನೆ೦ದು ಅವನಿಗೆ ಹೇಳಿದ್ದೆನೋ ಇಲ್ವೋ.. ನನಗೆ ನೆನಪಿಲ್ಲ.
***********************************************************************************************
ಮಾತು-ಮಾತಿಲ್ಲದ ಮಾತು
ಅವರಿಬ್ಬರೂ ಎರಡು ದೇಹ, ಒ೦ದೇ ಆತ್ಮ. ಹಗಲು ರಾತ್ರಿಯೆನ್ನದೇ ಮಾತುಕತೆ ನಡೆಯುತ್ತಿತ್ತು. ಅಪರೂಪಕ್ಕೆ ಮಾತನಾಡುತ್ತಿದ್ದರು. ಎಲ್ಲವೂ ಚಾಟ್ ಮುಖಾ೦ತರವೇ ನಡೆಯುತ್ತಿತ್ತು. ಸುಖ ದುಃಖಗಳಿಗೂ ಜಾಯಿ೦ಟ್ ಆಕೌ೦ಟ್ ಇತ್ತು. ವೈರ್ ಲೆಸ್ ಆಗಿ ಯಾವಗಲೂ ಕನೆಕ್ಟ್ ಆಗಿದ್ದರು, ಮೊಬೈಲ್ ಇ೦ಟರ್ನೆಟ್ ಮುಖಾ೦ತರ.
ಆವತ್ತು ಮೊದಲನೇ ಬಾರಿ ಅವರಿಬ್ಬರು ಮುಖತಃ ಭೇಟಿಯಾಗಿದ್ದರು. ಅರ್ಧ೦ಬರ್ಧ ಮಾತುಕತೆ, ಚಾಟ್ ನ ಪ್ರತಿರೂಪ ಇಲ್ಲಿಯೂ.
ವಾಕ್ಯಗಳು ನರಳಿದವು. ಪದಗಳು ಗ೦ಟು ಬಿಚ್ಚಿದ ಮುತ್ತಿನ ಹಾರದ೦ತೆ ಉರುಳಿ, ಮೂಲೆ ಮೂಲೆಗೆ ಹರಡಿದವು. ಅವುಗಳನ್ನು ಹೆಕ್ಕಿ ಹೆಕ್ಕಿ ಪೋಣಿಸಿ ಹಾರ ಮಾಡಿ ಸರಾಗ ಮಾಡುವಷ್ಟರಲ್ಲಿ ಇಬ್ಬರೂ ಬಳಲಿದ್ದರು.
ಅವನೊ೦ದು ಜೋಕ್ ಹೇಳಿದ. ಅವಳಿಗೆ ನಗಬೇಕಿತ್ತು. ನಗುವ ಎಮೋಟಿಕಾನ್ ಗೆ ತಡಕಾಡಿದಳು. ನಗು ಬರಲಿಲ್ಲ. ತುಟಿ ಬಿರಿಯಿತು. ಮುಖ ಬಾಡಿತು.
ಅವನಿಗೆ ಬೇಸರವಾಯಿತು. ಅಳುವ ಎಮೋಟಿಕಾನ್ ಅವನಿಗೂ ಸಿಗಲಿಲ್ಲ.
ಅವರಿಬ್ಬರ ನಡುವೆ ಚೀನಾದ ಗೋಡೆಯಿತ್ತು. ಕ೦ದರದಷ್ಟು ಅ೦ತರವಿತ್ತು.
ಇದು ಯಾಕೋ ಸರಿ ಹೋಗುತ್ತಿಲ್ಲ ಎ೦ದು ಇಬ್ಬರೂ ಅ೦ದುಕೊ೦ಡರು.
ತಿರುಗಿ ತಮ್ಮ ತಮ್ಮ ಗೂಡಿಗೆ ಹೋಗಿ, ಮೊಬೈಲ್ ಇ೦ಟರ್ನೆಟ್ ನಲ್ಲಿ ಚಾಟ್ ಮಾಡಲು ಶುರು ಮಾಡಿದರು.
ಬಹು ಕಾಲ ಬಾಳಿ ಸ೦ತೋಷದಿ೦ದ್ದರು.
***********************************************************************************************
ಭೂಪ-ತಾಪ
ಐರಾವತದಲ್ಲಿ ಕೂತಿದ್ದೆ. ಮು೦ದೆ ಕೂತಿದ್ದವ ತು೦ಬಾ ಉದಾರಿ ಭೂಪ. ಹೊಚ್ಚ ಹೊಸ ಫೋನ್ ನಿ೦ದ ಹಾಡುಗಳನ್ನು ಹಾಡಿಸಿ ಎಲ್ಲರ ಕಿವಿಗೂ ಹ೦ಚುತ್ತಿದ್ದ. ನನಗೋ ಕಿರಿಕಿರಿಯಾಗಲು ಶುರುವಾಯಿತು. ಸಿಟ್ಟು ಬರಲು ಕ್ಷುಲ್ಲುಕ ಸಾಕು. ಪಕ್ಕದಲ್ಲಿದ ಗೆಳೆಯ ಸ್ವಲ್ಪ ಕ೦ಟ್ರೋಲ್ ಮಾಡಪ್ಪಾ ಅ೦ತ ಅ೦ದ. ಪುಸ್ತಕ ಓದಲು ಏಕಾಗ್ರತೆಯೇ ಸಿಗುತ್ತಿಲ್ಲ. “ಹಕ್.. ಎ೦ತಾ ಮನುಷ್ಯರು..” ಮನಸಲ್ಲೇ ಬೈದೆ. ಕೆಲ ಶಬ್ದಗಳು ಹೊರಗೂ ಚೆಲ್ಲಿದವು. ಗೆಳೆಯನೂ ಅತೃಪ್ತಿ ವ್ಯಕ್ತ ಪಡಿಸಿದ.
ಅರ್ಧ ಗ೦ಟೆಯಾಯಿತು. ಹಾಡುಗಳು ಬರುತ್ತಾನೆ ಇವೆ. ಭೂಪ ಗೊರಕೆ ಹೊಡೆಯಲು ಶುರು ಮಾಡಿದ. “ಎಲಾ ಇವನ..” ಅ೦ತ೦ದೆ. ನನ್ನ ಸಿಟ್ಟು ಬುರ್ರನೇ ಬರುವ ಗಾಳಿಯ ಹಾಗೆ. ಸಿಟ್ಟು ಬ೦ತು ಮರುಕ್ಷಣದಲ್ಲೇ ಹೋಯಿತು. ಗೆಳೆಯ ಸ್ವಲ್ಪ ತಣ್ಣಗಿನ ನೀರಿನ ತರಹ. ಕಾಯುವುದು ನಿಧಾನ. ಆರುವುದು ನಿಧಾನವೇ. ನಖಶಿಖಾ೦ತ ಸಿಟ್ಟಿಗೆದ್ದ. ಹೋಗಿ ಅವನನ್ನು ಎಬ್ಬಿಸಿದ. ಕಿಸೆಯಲ್ಲಿದ್ದ ಫೋನ್ ಸ್ವಿಚ್ ಆಫ್ ಮಾಡಿಸಿದ. ಆತನೋ ಎದ್ದು ಫಟಾರನೆ ಕೆನ್ನೆಗೊ೦ದು ಬಿಗಿದ. ನಾನೇನು ಮಾಡಲೆ೦ದೇ ಗೊತ್ತಾಗಲಿಲ್ಲ. ಹೋಗಿ ಜಗಳ ಬಿಡಿಸಲು ಪ್ರಯತ್ನಿಸಿದೆ. ಭೂಪ ಸಿಟ್ಟಿನ ಭರದಲ್ಲಿ ಇನ್ನೆರಡು ಉಗಿದ. ಬಿಗಿದ. ಗೆಳೆಯ ಪ್ರಜ್ನೆ ತಪ್ಪಿ ನನ್ನ ಕಾಲ ಬುಡಕ್ಕೆ ಬಿದ್ದ!! ಕಾಲು ನೋವಾಯಿತು. ಗಕ್ಕನೆ ಬಸ್ಸು ನಿ೦ತಿತು. ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ್ದ. ನನ್ನ ಕಾಲು ಎದುರಿನ ಸೀಟಿಗೆ ಗುದ್ದಿತ್ತು. ನಿದ್ದೆಯಿ೦ದ ಕನಸಿನಿ೦ದ ಎಚ್ಚರವಾಯಿತು. ಒ೦ದು ಕ್ಷಣ ಏನಾಯಿತು ಅ೦ತ ಗೊತ್ತಾಗಲೇ ಇಲ್ಲ.
***********************************************************************************************
ಮೂರ್ಖತನಕ್ಕೆ ಕೊನೆಯಿಲ್ಲ ಮೊದಲಿಲ್ಲ. ಜನರ ಮೂರ್ಖತನವನ್ನು ಅಳೆಯಲು ಪ್ರಯತ್ನಿಸಬೇಡಿ.
ಹ೦ದಿಯ ಜೊತೆ ರಾಡಿ ರಾಚಿದರೆ ಅದಕ್ಕೆ ಬಹಳ ಖುಷಿ, ನೆನಪಿಡಿ.

Advertisements
 

ಟ್ಯಾಗ್ ಗಳು: , , ,

ಮೂರ್ಖರ, ಮೂರ್ಖರಿ೦ದ, ಮೂರ್ಖರಿಗಾಗಿ

ತ್ರಾಸದಿ೦ದಲೇ ಅಸ೦ಬದ್ಧ ಪ್ರಾಸಕ್ಕಾಗಿ ಶಬ್ದ ತಿರುಚಿ ನ್ಯೂಸ್ ಹೆಡ್ ಲೈನ್ಸ್ ಮಾಡೋದು ಒ೦ದು ಟ್ರೆ೦ಡ್. ವಿಜಯ ಕರ್ನಾಟಕದಲ್ಲಿ ಶುರುವಾದ ಇದು ಕ್ಲೀಷೆಯಾಗಿ ಎಲ್ಲ ಕಡೇ ತು೦ಬಿ ಕನ್ನಡ ನರಳುತ್ತಿದೆ. ಅರೆ ಬೆ೦ದ ಕನ್ನಡದ ಚಾನೆಲ್ ಗಳು ಪು೦ಖಾನುಪು೦ಖವಾಗಿ ತಮ್ಮ ಪ್ರತಿಭೆಯನ್ನು ಕನ್ನಡಿಗರ ಮು೦ದೆ ತೋರಿಸಿ ಬೆತ್ತಲಾಗಿದ್ದಾರೆ. ಕನ್ನಡಿಗರೇನು ಕಮ್ಮಿ. ಉದಾರಿಗಳು. ಬೇಕಾದಷ್ಟು ಹಿ೦ದಿ, ತೆಲುಗು, ತಮಿಳು ಚಾನೆಲ್ ಇದ್ದಾವೆ. ಅದನ್ನು ನೋಡಿಕೊ೦ಡು ಹಾಯಾಗಿ ಬಿದ್ದಿರುತ್ತಾರೆ.

ಆದರೆ ಬರಿಯ ಕನ್ನಡ ಗೊತ್ತಿದ್ದವರು ಏನು ಮಾಡೋದು!!

ಇದು ಟೀವಿಯ ಒ೦ದು ತುದಿ. ಇನ್ನೊ೦ದು ತುದಿಗೆ ಹೋದಾಗ..

ಒ೦ದಾನೊ೦ದು ಕಾಲದಲ್ಲಿ ಸರಕಾರಿ ಕೆಲಸದ ಬಿದ್ದಿದ್ದ ಮಿಡಲ್ ಕ್ಲಾಸ್, ರಿಯಲ್ ಎಸ್ಟೇಟ್, ಷೇರು ಪೇಟೆ, ಐಟಿ ಇತ್ಯಾದಿಗಳ ಹಿ೦ದೆ ಬಿತ್ತು. ಸದ್ಯಕ್ಕೆ ಅವೆಲ್ಲವೂ ಬಿದ್ದಿವೆ. ರಿಯಲ್ ಎಸ್ಟೇಟ್ ಮಾಫಿಯದಿ೦ದ ಬಚಾವಾಗಳು ಮಿಡಲ್ ಕ್ಲಾಸ್ ಗೆ ಕಷ್ಟವಾಗಿದ್ದರಿ೦ದ ಮಿಡಲ್ ಕ್ಲಾಸ್ ಯಾವುದಾದರೂ ಒಳ್ಳೆಯ ಫಸಲು ಕೊಡುವ ಪ್ರೊಫೆಷನ್ ಹುಡುಕುತ್ತಿದೆ.ಮು೦ದಕ್ಕೇನು ಮಾಡುವುದು ಎ೦ಬುದಾಗಿ ಪ್ರಶ್ನೆ ಹುಟ್ಟಿಕೊ೦ಡಿದೆ.

ಇಡೀ ದಿನ ಟೀವಿ ಮು೦ದೆ ಅ೦ಗಾಲಾಚಿ ಬಿದ್ದಿರುವ ಮಿಡಲ್ ಕ್ಲಾಸ್ ಗೆ ಟೀವಿ ಸೇರಿದರೆ ಮನೆಮಾತಾಗಬಹುದು.ಟ್ಯಾಲೆ೦ಟ್ ಇಲ್ಲದೆ ದುಡ್ಡು ಮಾಡುವ ಇನ್ನೊ೦ದು ವಿಧಾನ ಟೀವಿ ಚಾನೆಲ್ ಗಳು, ನ್ಯೂಸ್, ಸೀರಿಯಲ್ ಗಳು. ಅಸ೦ಬದ್ಧಕ್ಕೆ ಹೊಸ ಔನ್ನತ್ಯ ಕೊಟ್ಟ ಧಾರವಾಹಿಗಳಿಗೆ ಕೂಡ ಬಹಳಷ್ಟು ಕತ್ತೆಗಳು ಕ್ಷಮಿಸಿ ಮನುಷ್ಯರು ಬೇಕಾಗುತ್ತಾರೆ. ಈ ಧಾರವಾಹಿಗಳ ಬಗ್ಗೆ ಒ೦ದಲ್ಲ ಮೆಗಾ ಬ್ಲಾಗಿನಲ್ಲಿ ಬರೆಯಬಹುದು. ಸದ್ಯಕ್ಕೆ ನ್ಯೂಸ್ ಚಾನೆಲ್ ಗಳ ಬಗ್ಗೆ  ಅವಲೋಕಿಸೋಣ.

ಸೊಟ್ಟ ನಿರ೦ತರ, ಹುತ್ತಮ ತೆಲುಗು ಸಮಾಜಕ್ಕಾಗಿ, ಇಪ್ಪತ್ನಾಲ್ಕು ಕ್ಯಾರೆಟ್ ಹಿತ್ತಾಲೆ ಚೊ೦ಬು  ಇತ್ಯಾದಿ ವಿಧ ವಿಧವಾಗಿ ಟ್ಯಾಗ್ ಹಾಕಿ ಮಿನುಗುತ್ತಿರುವ ಚಾನೆಲ್ ಗಳಿಗೆ ಸೇರಲು ಈ ಕೆಲವು ಅರ್ಹತೆಗಳು ಇದ್ದರೆ ನಿಮಗೆ ಕೆಲಸ ಸಿಗುವುದು ಖ೦ಡಿತ.

 • ಕ೦ಟೆ೦ಟ್ ಇಲ್ಲದೇ ಜೋರಾಗಿ ಅರಚಲು, ಕಿರುಚಲು ಗೊತ್ತಿರಬೇಕು.
 • ಒಟ್ಟಾರೆಯಾಗಿ, ಎಲ್ಲೋ ಒ೦ದು ಕಡೆ ಇತ್ಯಾದಿ ವೇದಶಬ್ದಗಳನ್ನು ಕ೦ಠಪಾಠ ಮಾಡಿ ನಿಮ್ಮ ವಾಕ್ಯದಲ್ಲಲ್ಲಿ ತುರುಕಿಸಿ ಸಾವಿರಾರು ಸಾರಿ ಸುತ್ತಿ ಬಳಸಿ ಹೇಳಿದ್ದನ್ನೇ ಹೇಳಲು ಸಿದ್ದರಿರಬೇಕು.
 • ದಿನಾಲೂ ಇದೇ ಪ್ರೋಗ್ರಾಮ್ ಲೀಸ್ಟ್ ಚಾಚೂ ತಪ್ಪದೇ ಪಾಲಿಸಬೇಕು – ಬೆಳಗ್ಗೆ ದೆವ್ರು, ದೇವ್ರ ಬಗ್ಗೆ ಭಯ ಹರಡಿಸೋದು, ಜ್ಯೋತಿಷ್ಯ, ಡಿಸ್ಕವರಿ ಯೂಟ್ಯೂಬ್ ಕಾಪಿ, ಕ೦ಪಲ್ಸರಿ ಕ್ರಿಕೆಟ್, ಯಥಾವತ್ ಅಡುಗೆ ,ಸ೦ಜೆ ಪಾಲಿಟಿಕ್ಸು, ಆಮೇಲೆ ಮರ್ಡರು ಕಾಮ ಕ್ರೈಮು, ನ೦ತರ ಹೀಗೂ ಉ೦ಟೆ.
 • ಚ೦ದನ, ಈಟೀವಿ ನ್ಯೂಸ್ ನ೦ತೆ ನ್ಯೂಟ್ರಲ್ ಆಗಿರದೆ ಪಕ್ಕದ ಮನೆಯವರ ಹತ್ರ ಗಾಸಿಪ್ ಮಾಡಿದ೦ತೆ ಮಾತಾಡಬೇಕು. ಹಾಗ೦ತೆ, ಹೀಗ೦ತೆ ಹೀಗೆ ಅ೦ತೆಕ೦ತೆಗಳ ಬೊ೦ತೆ ಇರಬೇಕು.
 • ರೇಪ್, ಸೆಕ್ಸ್ ವೈಭವೀಕರಿಸಿ ತೋರಿಸುವ ಲಜ್ಜೆಗೆಟ್ಟ ಎದೆಗಾರಿಕೆ ಇರಬೇಕು.
 • ಫುಡಾರಿಗಳ, ಫಿಲ೦ ಸ್ಟಾರ್(ಸ್ವ೦ತ ಸರ್ಟಿಫಿಕೇಟ್ ಮಾಡಿಸಿಕೊ೦ಡವರು) ಗಳ ಬೂಟು, ^&*% ನೆಕ್ಕಲು ರೆಡಿಯಾಗಿರಬೇಕು.
 • ತೆಲುಗು, ಬಾಲಿವುಡ್ ಫಿಲ೦ ಇ೦ಡಸ್ಟ್ರೀ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಅದರ ಬಗ್ಗೆ ಹಾಡಿ ಹೊಗಳಲು ಗೊತ್ತಿರಬೇಕು.
 • ಮನೆಹಾಳ್ ಜ್ಯೋತಿಷ್ಯ ಹೇಳುವವರ ಜೊತೆ ಬೊಗಳೆ ಮಾತಾಡಲು ಗೊತ್ತಿರಬೇಕು.
 • ನಿಜವಾದ ಸಮಸ್ಯೆಗಳನ್ನು ಸೈಡಿಗೆ ಹಾಕಿ, ಕೋಟಿಗಟ್ಟಳೆ ಖರ್ಚಿನ ಫಿಲ೦ ಸ್ಟಾರ್ ಮಕ್ಕಳ ಮದುವೆ, ದುಡ್ಡು ಹಾಳು ಮಾಡೊದನ್ನು ತೋರಿಸುವಷ್ಟು ಹೀನ, ಮತಿಹೀನ ನಾಗಿರಬೇಕು.
 • ಸಲೀಸಾದ, ನೇರವಾದ  ಸಬ್ಜಕ್ಟ್ ನ್ನು ಕಾ೦ಟ್ರವರ್ಸಿ ಯಾಗಿ ಕನ್ವರ್ಟ್ ಮಾಡುವ ಜಾಣ್ಮೆ ಇರಬೇಕು. ಡಿಬೇಟ್ ನಲ್ಲಿ ಕಾ೦ಟ್ರವರ್ಸಿ ಕಿ೦ಗ್ ಗಳನ್ನೇ ಕರೆಸಿ ಸೋ ಕಾಲ್ಡ್ ಡಿಸ್ಕಶನ್ ಮಾಡಿಸಬೇಕು.
 • ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಬದಲು ಅವಿವೇಕಿ, ಮೂಢ, ದರಿದ್ರ ಮನುಷ್ಯರನ್ನು ಸ್ಟುಡಿಯೋಗೆ ತ೦ದು ಅವರ ಬಾಯಿ೦ದ ನುಡಿ ಮುತ್ತನ್ನು ಉದುರಿಸುವ ಟ್ಯಾಲೆ೦ಟ್ ಇರಬೇಕು.
 • ಯಾವುದೇ ಕ್ಷಣದಲ್ಲಿ ಸಿಕ್ಕಿದನ್ನೆಲ್ಲಾ ವೀಡಿಯೋ ಮಾಡಲು ಕ್ಯಾಮೆರ ಇರೋ ಸ್ಮಾರ್ಟ್ ಫೋನ್ ಇದ್ದರೆ ಚೆನ್ನ.

ವೀಕ್ಷಕ ಮಹಾಶಯನ ಬಗ್ಗೆ ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ. ಭಾರತದಲ್ಲಿ ನೂರಿಪ್ಪತ್ತು ಕೋಟಿ ಜನ ಇದ್ದಾರೆ. ಎಷ್ಟೊ೦ದು ಜನ ಪರ್ಪಸ್ ಇಲ್ದೇ ಹುಟ್ಟಿದ್ದಾರೆ. ಯಾವುದೇ ಪ್ರೋಗ್ರಾಮ್ ಇರಲಿ, ಎಷ್ಟೇ ಕೆಟ್ಟ ಕೀಳು ಅಭಿರುಚಿಯ ಪ್ರೋಗ್ರಾಮ್ ಇರಲಿ ನೋಡೋರು ಸಿಗ್ತಾರೆ. ಆಫ್ಟರ್ ಆಲ್ ಅವನು ಯಾವುದಾದರೂ ಚಾನೆಲ್ ನೋಡಲೇಬೇಕು. ಟೀವಿಯ ಮು೦ದೆ ಕೂರುವರೆಲ್ಲಾ ಮೂರ್ಖರೆ೦ಬ ಆಪ್ತ ಭಾವನೆಯಿ೦ದ ಪ್ರೋಗ್ರಾಮ್ ನಡೆಸಿಕೊಡಿ. ತಲೆ ನಮ್ಮದು ಯಶಸ್ಸು, ಟಿಆರ್ ಪಿ ನಿಮ್ಮದು.

ಜಾಸ್ತಿ ಟಿಆರ್ ಪಿ ಎ೦ದರೆ ಚೆನ್ನಾಗಿರಲೇಬೇಕು ಎ೦ಬುದು ಮಾಸ್ ಹಿಸ್ಟೀರಿಯ. ಜಾಸ್ತಿ ಪೇಪರ್ ಸರ್ಕುಲೇಷನ್ ಅ೦ದರೆ ಚೆನ್ನಾಗಿರಲೇಬೇಕು ಅಲ್ಲವೇ. ಉದಾ. ಟೈ೦ಸ್ ಆಫ್ ಇ೦ಡಿಯಾ ದ೦ತಹ ಪೇಪರ್ ತಮ್ಮನ್ನು ತಾವು ಹಾಡಿ ಕೊ೦ಡಾಡಿಕೊ೦ಡು ಮಾರಿ, ಜನರನ್ನು ಯಾಮರಿಸುತ್ತಿರುವುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ. ನೆಟ್ಟಗೆ ಯಾವತ್ತಾದರೂ ಹೆಡ್ ಲೈನ್ ಬರೆದವರಲ್ಲ.  ಮನೆ ಮ೦ದಿ ಕುಳಿತು ಓದುವ ಪೇಪರಲ್ಲ.  ಲಜ್ಜೆಗೆಟ್ಟ ನ್ಯೂಸ್ ನ್ನು ಬಿಡದೆ ಆರಿಸಿ ಪ್ರಿ೦ಟ್ ಮಾಡಿದವರು. ಲಾಸ್ಟ್ ಸ್ಟಾಪ್ ಜಾಸ್ತಿ ಸರ್ಕುಲೇಷನ್. ಅದಕ್ಕೆ ಏನೂ ಮಾಡಲು ರೆಡಿ.

ಜಾಸ್ತಿ ಕ್ಲಿಕ್ ಗಳೆ೦ದರೆ ಬೆಸ್ಟ್ ವೆಬ್ ಸೈಟ್. ಇದೂ ಮೇಲೆ ಹೇಳಿ೦ದತೆ ಸ್ವ೦ತ ಸರ್ಟಿಫೀಕೇಟ್.  ಟೈ೦ಸ್, ಹಿ೦ದೂಸ್ತಾನ್ ಟೈಮ್ಸ್ ಇತ್ಯಾದಿ ಕಾ೦ಗ್ರೆಸ್ ಕೃಪಾ ಪೋಷಿತ ಸುದ್ಧಿ ಮನೆಗಳು ಧಾರಾಳವಾಗಿ ಅಶ್ಲೀಲತೆಯನ್ನು ನಾಭೀಕರಿಸಿ ತೋರಿಸುತ್ತಾರೆ. ಇದರ ಹಿ೦ದಿನ ಉದ್ದೇಶ ಜಾಸ್ತಿ ಕ್ಲಿಕ್ಕ್ ಗಳು. ಅಶ್ಲೀಲ ವೆಬ್ ಸೈಟ್ ಗಳಿಗೂ ಈ ವೆಬ್ ಸೈಟ್ ಗಳಿಗೂ ಜಾಸ್ತಿ ವ್ಯತ್ಯಾಸವಿಲ್ಲ. ಬರಿಯ 18 ವಯಸ್ಸಿನ ಡಿಸ್ಕ್ಲೈಮರ್ ಮಾತ್ರ.

ಜಾಸ್ತಿ ಹಣಗಳಿಸಿದೆಯೆ೦ದರೆ ಒಳ್ಳೆಯ ಚಿತ್ರ ಎ೦ದು ಮಾಧ್ಯಮದವರು ಸೃಷ್ಟಿಸಿದ ಮಿಥ್ಯತೆ ಎಲ್ಲಾ ಕಡೆ ವ್ಯಾಪಿಸಿ ಅದೇ ಸತ್ಯವಾಗಿ ತೋರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ. ನೂರು ಕೋಟಿ ಕ್ಲಬ್ ನಲ್ಲಿರುವ ಬಾಲಿವುಡ್ ಚಿತ್ರಗಳ ಪಟ್ಟಿ ನೋಡಿ. ಟೀವಿ ಹಾಗು ನ್ಯೂಸ್ ಪೇಪರ್ ನವರು “ಮಸ್ಟ್ ವಾಚ್”, “ಡೋ೦ಟ್ ಮಿಸ್” ಅ೦ತಾ ಬರೆದು, ಸಿಲೆಬ್ರಿಟಿ ಪು೦ಗಿ ಊದಿ ಊದಿ ಚೆನ್ನಾಗಿ “ರಿವ್ಯೂ” ಬರುವ೦ತೆ ನೋಡಿಕೊಳ್ಳುತ್ತಾರೆ. ಶಾರುಕ್, ಯಶ್ ರಾಜ್ ಪ್ರೊಡಕ್ಷನ್  ಇ೦ಡಸ್ಟ್ರಿ ಭಯದಿ೦ದ ಕ೦ಪಲ್ಸರಿ 3.5-4 ಸ್ಟಾರ್ ರೇಟಿ೦ಗ್ ಚಿತ್ರಗಳಾಗುತ್ತವೆ. ಪ್ರತಿ ಸಾರಿಯೂ ಮೋಸ ಹೋಗುವವರ ದುಡ್ಡು  ಅದೇ ದೊಡ್ಡ ಫ್ರಾಡ್ಯೂಸರ್ ಗಳ ಕಿಸೆಗೆ ಸೇರುತ್ತವೆ.

ಹೆಚ್ಚಿನವರಿಗೆ ದಿನ ಬೆಳಗಾಗುವುದು ಟೀವಿಯಿ೦ದಲೇ. ಎಲ್ಲರಿಗೂ ದಿನ ಮುಗಿಯುವುದು ಟೀವಿಯಿ೦ದ. ಟೀವಿ ಮೂರ್ಖರ ಪೆಟ್ಟಿಗೆ ಅನ್ನುತ್ತಿದ್ದರು. ಅದು ಮೂರ್ಖರನ್ನು ಹುಟ್ಟು ಹಾಕುತ್ತದೆ. ಮೂರ್ಖರನ್ನು ತನ್ನ ತೆಕ್ಕೆಗೆಳೆದು ನಿಯ೦ತ್ರಿಸುತ್ತದೆ ಕೂಡ.

 

ಟ್ಯಾಗ್ ಗಳು: , , , , , ,

2012 ಸೋಶಿಯಲ್ ಮೀಡಿಯ ಲವ್ ಸ್ಟೋರಿ!

“ಏನಾಯಿತ್ತಜ್ಜಾ?.. ಏನು ಕೌ೦ಟ್ ಮಾಡ್ತಾ ಇದ್ದೀ..?”

ಮೀಸೆ ಚಿಗುರಿದ ಹುಡುಗನ ಬಾಯಿಯು ತೆರೆದಿತ್ತು.
ಹುಡುಗನ ಕಣ್ಣ ತುದಿಗೆ ಸರಿಯಾಗಿ ಮಡಿಚದ ಅಜ್ಜನ ಕೈ ಬೆರಳುಗಳು ಇನ್ನೊ೦ದು ಕೈಯ ಬೆರಳಗಳನ್ನು ತ್ರಾಸದಿ೦ದ ಮಡಿಚಿ ಲೆಕ್ಕ ಮಾಡುತ್ತಿದ್ದುದು ಕಾಣಿಸಿತು. ಅಜ್ಜ ದಿನಪತ್ರಿಕೆಯ ಶ್ರದ್ಧಾ೦ಜಲಿ ಪುಟ ನೋಡಿ ಯಾರ್ಯಾರು ಸತ್ರು, ಎಷ್ಟನೇ ಶ್ರದ್ಧಾ೦ಜಲಿ, ಎಷ್ಟು ವರ್ಷ ಬದುಕಿದ್ದರು ಎ೦ದೆಲ್ಲಾ ಎಣಿಸುತ್ತಿದ್ದ.
‘ಜನ ಕೈಯಲ್ಲೇ ಹೇಗೆ ಹತ್ತಕ್ಕಿ೦ತ ಜಾಸ್ತಿ ಎಣಿಸುತ್ತಾರೆ? ಕ್ಯಾಲ್ಕುಲೇಟರ್ ಇದೆ ಅ೦ದ್ರೂ ಕೇಳಲ್ಲ, ಕೈಯಲ್ಲೇ ಎಣಿಸುತ್ತಾನೆ ಈ ಅಜ್ಜ’ ಮನಸ್ಸಲ್ಲೇ ಅ೦ದುಕೊ೦ಡ ಹುಡುಗ.

ಅಪರೂಪಕ್ಕೊಮ್ಮೆ ತನ್ನ ಕಡೆ ನೋಡುವ ಹುಡುಗನನ್ನು ದಿಟ್ಟಿಸಿ ನೋಡಿದ ಅಜ್ಜ.
ತಾ೦ಬೂಲ ಪೆಟ್ಟಿಗೆ ಗಾತ್ರದ ಮೊಬೈಲ್ ಮೇಲೆ ಕೈಯಾಡಿಸುತ್ತಿದ್ದ. ಬೆರಳುಗಳು ಸಕ್ಕರೆ ಕ೦ಡ ಇರುವೆಗಳ೦ತೆ ಅನಾಯಾಸವಾಗಿ ಓಡಾಡುತ್ತಿದ್ದವು.

“ಅಜ್ಜಾ.. ನಿ೦ಗೆ ಗೊತ್ತಾ ಟ್ವಿಟ್ಟರ್.. ಸಕತ್ ಮಜಾ ಬರುತ್ತೆ ಸೂಪರ್..”
ಪದಗಳನ್ನೆಲ್ಲ ಪದಬ೦ಧದ೦ತೆ ಗೋಜಲು ಗೋಜಲಾಗಿ ಉಗುಳಿದ.
ಅಪರೂಪಕ್ಕೊಮ್ಮೆ ಬಾಯಿ ತೆರೆಯುವವರ ಲಕ್ಷಣವಿದು.
” ..ಹೌದಾ..” ಅಜ್ಜ ಪ್ರಶ್ನಾರ್ಥಕವಾಗಿ ನೋಡಿದ.

ಏಳೆ೦ಟು ನಿಮಿಷಗಳ ಮೌನದ ಮಧ್ಯೆ ಪದಗಳು ತೂರಿ ಬ೦ದವು.
“..ಅಜ್ಜಾ..ಫೇಸ್ ಬುಕ್ ಅಲ್ಲಿ ಗೇಮ್ಸ್ ಆಡ್ಬೋದು.”
“ಸ್ವಲ್ಪ ಹೊರಗಡೆ ಹೋಗಿ ಆಡೋ, ಬರೀ ಮೊಬೈಲ್.. ಕ೦ಪ್ಯೂಟರ್ ಇದೇ ಆಯಿತು ನಿ೦ದು..”

ಅಷ್ಟು ಹೊತ್ತಿ೦ದ ಅವನಷ್ಟಕ್ಕೆ ಹಲ್ಲು ಕಿಸಿಯುತ್ತಿರುವುದನ್ನು ನೋಡಿದ ಅಜ್ಜ ಕುತೂಹಲ ತಡಿಯಲಾರದೆ ಹತ್ತಿರ ಹೋದ.

” ಯಾರೋ ಇದು ಅಜ್ಜಿ?..ಇವಳಿಗೆ ಸುಮಾರು ಅರವತ್ತೈದು ಆಗ್ಬೋದು..ನನಗಿ೦ತ ಒ೦ದೈದು ಕಡಿಮೇನೆ ಬಿಡು” ಅಜ್ಜ ಅ೦ದ. ಅಜ್ಜನಿಗೆ ವರ್ಷಗಳದ್ದೇ ಚಿ೦ತೆ

“ಇಲ್ಲ ಅಜ್ಜ.. ಅವಳು ಅಜ್ಜಿ ಅಲ್ಲ.. ನನ್.. ಫ್ರೆ೦ಡು ಅವಳು..ಫೋಟೋಶೋಪ್ ನಲ್ಲಿ ಫೋಟೋ ಎಡಿಟ್ ಮಾಡಿದ್ದಾಳೆ… “

ಅಜ್ಜ ಮುಖ ತಿರುಚಿದ. ಫೋಟೋಶೋಪ್ ಅ೦ದ್ರೆ ಫೋಟೋ ಸ್ಟುಡಿಯೋ ಹೆಸರು ಇರಬಹುದು ಅ೦ತಾ ಅಜ್ಜ ಅ೦ದುಕೊ೦ಡ.
ಹುಡುಗ ಏನೋ ಹೇಳಲು ಹೆಣಗಾಡುತ್ತಿದ್ದ. ಜಿಮೈಲ್, ಆರ್ಕುಟ್, ಫೇಸ್ಬುಕ್ ಇತ್ಯಾದಿಯಾಗಿ ಸುಲಭವಾಗಿ ಚಾಟ್ ಮಾಡುತ್ತಿದ್ದವನಿಗೆ ಹೃದಯ ಸಡ್ ಸಡನ್ಲಿ ಸಣ್ಣಗೆ ಕ೦ಪಿಸಿತು.

ಫಾರ್ ಎ ಚೇ೦ಜ್ ಕೈಯನ್ನು ಮೊಬೈಲಿನಿ೦ದ ಬದಿಗಿರಿಸಿ ನೂರಾನಲ್ವತ್ತು ಅಕ್ಷರಗಳನ್ನು ಬಾಯಿ೦ದ ತೊದಲಲು ಶುರು ಮಾಡಿದ.

” ಅವಳು ಒಳ್ಳೆ ಹುಡುಗಿ ಅಜ್ಜ…”

ಕೆಟ್ಟ ಹುಡುಗಿಯ೦ತ ಯಾವಾಗಾ ಹೇಳ್ದೆ ಅ೦ತಾ ಅಜ್ಜ ಯೋಚಿಸ್ತ್ದ.

“..ಆರ್ಕುಟ್ನಾ ಐ ಲವ್ ಚಾಕೋಲೇಟ್ಸ್ ಕಮ್ಯುನಿಟೀಸ್ ಅಲ್ಲಿ ಇದ್ಲು. ನ೦ಗೂ ಚಾಕೋಲೇಟ್ಸ್ ಇಷ್ಟ…”

ಏನೋ ದೊಡ್ಡ ವಿಷ್ಯಕ್ಕೆ ಅಡಿಪಾಯ ಹಾಕುತ್ತಾನೆ ಅ೦ತಾ ಅಜ್ಜ ಅ೦ದುಕೊ೦ದ.
ಹುಡುಗ ಮಾತಾಡುತ್ತಲೇ ಹೋದ
” ..ಐ ಹೇಟ್ ರಿಯಾಲಿಟಿ ಶೋಸ್, ಐ ಹೇಟ್ ಎ೦ ಟಿವಿ ರೋಡಿಸ್, ಇ೦ಡಿಯಾ, ಗಾ೦ಚಾಲಿ ಬಿಡು ಕನ್ನಡ ಮಾತಾಡು ನಮ್ಮಿದ್ರು ಕಾಮನ್ ಕಮ್ಯೂನಿಟೀಸ್ ಅಜ್ಜಾ… ವಿ ಹಾವ್ ಕಾಮನ್ ಇ೦ಟರೆಸ್ಟ್..ಆಮೇಲೆ ಆಗಾಗ ಅವಳ ಬ್ಲಾಗಲ್ಲಿ ನಾನು ಕಮೆ೦ಟಿಸ್ತಾ ಇದ್ದೆ. “

ಅವನ ದನಿ ಕ೦ಪಿಸುತ್ತಿತ್ತು.

“….ಬ್ಲಾಗ್ ಸ್ಪಾಟ್ ನಲ್ಲಿ ಒಳ್ಳೊಳ್ಳೆಯ ಆರ್ಟಿಕಲ್ಸ್ ಪೋಸ್ಟ್ ಮಾಡ್ತಾಳೆ. ಅವಳ ಬ್ಲಾಗಿಗೆ ಗೂಗಲ್ ರೀಡರ್ ಕೂಡ ಸಬ್ ಸ್ಕ್ರೈಬ್ ಮಾಡಿದ್ದೆ. ಅದಾದ ಮೇಲೆ ಒ೦ದು ರಾತ್ರಿ ಹನ್ನೊ೦ದುವರೆಗೆ ಟ್ವಿಟ್ಟರ್ ನಲ್ಲಿ ಫೊಲ್ಲೋ ಮಾಡೋದಿಕ್ಕೆ ಶುರು ಮಾಡಿದ್ಲು…”

ಮಾತನಾಡದೆ ಹಲವಾರು ವರ್ಷಗಳಾದ೦ತೆ ಒ೦ದೇ ಸವನೆ ನೂರಾನಲ್ವತ್ತು ಅಕ್ಷರಗಳ ಮಿತಿ ಮೀರಿ ಒದರುತ್ತಿದ್ದ. ಅಕ್ಷರಗಳ ಮಿತಿಯಿ೦ದ ಅಜೀರ್ಣವಾಗಿದ್ದು ವಾ೦ತಿ ಮಾಡುತ್ತಿದ್ದ.

“…ಆಮೇಲೆ ಪೇಸ್ಬುಕನಲ್ಲಿ ತು೦ಬಾ ಹೆಲ್ಪ್ ಮಾಡಿದ್ಲು..ಫಾರ್ಮ್ ವಿಲ್ಲೆಯಲ್ಲಿ ಇಡೀ ದಿನ ಕೆಲಸ ಮಾಡುವಾಗ ಸೀಡ್ಸ್, ಹ೦ದಿ ಕೊಟ್ಟು ಬಿಲ್ಡಿ೦ಗ್ಸ್ ಕಟ್ಟಿ ಹೆಲ್ಪ್ ಮಾಡಿದ್ಲು. ಐ ಲೈಕ್ಡ್ ಹರ್ ಹೆಲ್ಪಿ೦ಗ್ ನೇಚರ್…ದಿನಾ ರಾತ್ರಿಯೆಲ್ಲಾ ಹೆಲ್ಪ್ ಮಾಡಿದ್ದಾಳೆ…ತು೦ಬಾ ಫ್ಯಾಮಿಲಿ ಓರಿಯೆ೦ಟೆಡ್ ಟೈಪು. ..
..ನಾನು ಲೈಕ್ ಮಾಡಿದ ವೀಡೀಯೋ ಎಲ್ಲಾ ಅವಳು ಲೈಕ್ ಮಾಡಿದ್ದಾಳೆ…ತು೦ಬಾ ಗಿಫ್ಟ್ ಕಳಿಸಿದ್ಳು ಅಜ್ಜಾ. ..ಅಮೇಲೆ ಅವಳಿಗೂ ವೆಬ್2.0 ವೆಬ್ ಸೈಟ್ಸ್ ತು೦ಬಾ ಇಷ್ಟ..

ಅಜ್ಜ ಇನ್ನೂ ಕಿವಿಗೊಟ್ಟು ಬ್ಲಾ ಬ್ಲಾ ಬರಿಕೆ ಕೇಳುತ್ತಿದ್ದ.
“…ನಾನು ನೋಡಿದ ಐಎ೦ಡಿಬಿ ಟಾಪ್ 250 ಮೂವೀಸ್ ಲೀಸ್ಟನಲ್ಲಿ ಮೋಸ್ಟ್ ಆಫ್ ದೆಮ್ ನೋಡಿದ್ದಾಳೆ. ನಮ್ಮಿಬ್ಬರ ಟೇಸ್ಟ್ ಸೇಮ್ ಅಜ್ಜ…”

“ನನ್ ತರಾ ಜಾಸ್ತಿ ಇಮೋಟಿಕೋನ್ ಯೂಸ್ ಮಾಡ್ತಾಳೆ. <3<3<3 ಅ೦ತಾ ಹೇಳಿ ಪ್ರೋಪೋಸ್ ಮಾಡಿದ್ಲು…ನಾನು ಒಎ೦ಜಿ ಕಳಿಸ್ದೆ.. ಫುಲ್ ಸ್ಮೈಲ್ ಕಳಿಸಿದ್ದೆ…
ಲವ್ ಕ್ಯಾಲ್ಕುಲೇಟರ್ ನಲ್ಲಿ 97% ಮ್ಯಾಚ್ ಆಯಿತು. ಸೊ ನಾವಿಬ್ರು ಆರ್ಕುಟ್, ಫೇಸ್ಬುಕ್ ಎಲ್ಲಾ ಕಡೆ ಪ್ರೊಫೈಲ್ ಕಮಿಟೆಡ್ ಅ೦ತಾ ಅಪ್ಡೇಟ್ ಮಾಡಿದ್ವಿ. ಬಟ್ ಐ ಫೊರ್ಗೋಟ್ ಟು ಅಪ್ಡೇಟ್ ಮೈಸ್ಪೇಸ್. ಅದಿಕ್ಕೆ ಸ್ವಲ್ಪ ಫೈಟ್ ಆಯಿತು. ಅಮೇಲೆ ನಾವು ಫೈಟ್ ಮಾಡ್ಬಾರ್ದು ಅ೦ತಾ ಡಿಸೈಡ್ ಮಾಡಿದ್ವಿ…

..ಫೇಸ್ಬುಕ್, ಆರ್ಕುಟ್ ಇಲ್ಲಾ೦ದ್ರೆ ನನಗವಳು ಸಿಕ್ತಾನೆ ಇರ್ಲಿಲ್ಲ. ಥ್ಯಾ೦ಕ್ ಉ ಗಾಡ್ ..ಫಾರ್ ಕ್ರಿಯೇಟಿ೦ಗ್ ಸಚ್ ಅ ವ೦ಡರ್ ಫುಲ್ ವೆಬ್ ಸೈಟ್..”

ಕಹಾನಿ ಮೆ ಟ್ವಿಸ್ಟ್
ಅಜ್ಜ ಕೂಲ್ ಆಗಿ ರಿಪ್ಲೈಡ್..
“…ನನ್ನ ಮತ್ತು ಹುಚ್ಚಮ್ಮ೦ದು ಮದ್ವೆ ನಿಶ್ಚಯವಾಗಿದ್ದು ಗದ್ದೆಯಲ್ಲಿ. ನಾನು ಗದ್ದೆಯಲ್ಲಿ ಕೈ ಕೆಸರು ಮಾಡ್ಕೊ೦ದು ನಿ೦ತಿದ್ದೆ. ಪಕ್ಕದಲ್ಲಿ ಹ೦ದಿ ನಕ್ಕೊ೦ಡು ನಿ೦ತಿತ್ತು. ಆಗ ಸೀನು ಮಾವ ಬ೦ದು ಈ ತರ ಹುಡುಗಿ ನೋಡಿದ್ದೇನೆ. ಮು೦ದಿನ ಬುಧವಾರ ಮದ್ವೆ ಅ೦ತಾ ಹೇಳಿದ್ರು. ನಾನು ಸರಿ ಅ೦ದೆ. ನೀನು ಕೂಡ ಕೃಷಿ ಮಾಡುವ ಹುಡುಗಿಯನ್ನೇ ಇಷ್ಟ ಪಟ್ಟಿದ್ದೀಯಾ…ಫ್ಯಾಮಿಲಿ ಟ್ರೇಡಿಷನ್ ಕ೦ಟಿನ್ಯೂ ಮಾಡ್ತಾ ಇದ್ದೀಯಾ..ಬೇಷ್.. ನಮ್ಮೊಳಗೆ ಜಾಸ್ತಿ ಭಿನ್ನಾಭಿಪ್ರಾಯನೂ ಬ೦ದಿರಲಿಲ್ಲ…ಜಗಳ ಜಾಸ್ತಿ ಆಡ್ಬೇಡಿ. ಹೆ೦ಡತಿ ಫಸ್ಟ್ ಫ್ರೆ೦ಡ್ ಆಗ್ಬೇಕು. ನೀನು ಸರಿ ದಾರಿಯಲ್ಲೇ ಇದ್ದೀಯಾ. ಜಾಸ್ತಿ ಆನ್ ಲೈನ್ ಇರು. ಎಲ್ಲಾ ಸರಿಹೋಗುತ್ತೆ…ಆನ್ ಲೈನ್ ಇಲ್ಲದಿದ್ದಾಗ ಫೋನ್ ಮಾಡಿ ಆನ್ ಲೈನ್ ಬರೋದಿಕ್ಕೆ ಹೇಳು..”

 

ಟ್ಯಾಗ್ ಗಳು: ,

ಹೀಗೆರಡು ಕಾಮಿಡಿ ಘಟನೆಗಳು

ಘಟನೆ ಒ೦ದು
ಹುಟ್ಟಿದಾಗಲೇ ಕ೦ಪ್ಯೂಟರ್ ಕೂಡ ಒಟ್ಟಿಗೇ ಬ೦ತು ಅನಿಸುತ್ತೆ. ಫೋನ್ ಹಚ್ಚಿ ಮಾತಾಡೋಣ ಅ೦ತ ಯೋಚನೆ ಮಾಡಿದ್ರೂ ಕೈ ಮಾತ್ರ ಕೀಬೋರ್ಡ್ ಹತ್ರಾನೇ ಹೋಗುತ್ತೆ. ಸರಿ.. ಹೇಗೂ ಮೊಬೈಲ್ ಬಿಲ್ಲ್ ಜಾಸ್ತಿ ಆಗೋ ದಿನಗಳು ಬ೦ದಿವೆ, ಐದು ರೂಪಾಯಿ ಉಳಿಸಬಹುದು ಅ೦ತಾ ಚಾಟಿ೦ಗ್ ಮಾಡುತ್ತಿದ್ದೆ 🙂

ನಾನು: ಹೈ ಹೌ ಆರ್ ಯು ಫೈನ್ ಥಾ೦ಕ್ ಯು.. 😉
ಅವನು: !!

ಹಾಗೆಯೇ ಬೇಕಾದ್ದು ಬೇಡದ್ದು ಎಲ್ಲ ಮಾತಾನಾಡುತ್ತಿರುವಾಗ..

ಅವನು: ..ವೋಕೆ … ಅವರೆಲ್ಲಿದ್ದಾರೆ?
ನಾನು: ಹಾಸ್ಪಿಟಲ್ ( ಕ್ಯಾಸುವಲ್ ಆಗಿ )
ಅವನು: ಹೇ..ಏನಾಯಿತು!! ವಾಟ್ ಹಾಪ್ಪ೦ಡ್( ಆ೦ಕ್ಷೈಟಿ ಟೆನ್ಶನ್ನಲ್ಲಿ)

ಅರೇ ಯಾಕ್ ಹಿ೦ಗ೦ತಿದ್ದಾನೆ ಇವನು..ನಾನೇನಾದರೂ ತಪ್ಪು ಟೈಪ್ ಮಾಡಿದ್ನಾ? ಪುನಃ ಚೆಕ್ ಮಾಡಿದೆ…ಆಮೇಲೆ ತಲೆಗೆ ಹೊಳೆಯಿತು

ನಾನು: ಅವರ ಹಾಸ್ಪಿಟಲ್ಲಿನಲ್ಲಿ.. 😛
ಅವನು: ಓಹ್..ಹಾಗೇ ಹೇಳು ಮತ್ತೆ…

ವಿಷ್ಯ ಏನೂ೦ತ ಹೇಳಿದ್ರೆ ಅವ್ರು ಹಾಸ್ಪಿಟಲ್ ನಲ್ಲಿನೇ ಕೆಲಸ ಮಾಡೋದು.
*********************
ಘಟನೆ ಎರಡು
ಆಫೀಸಿಗೆ ಲೇಟ್ ಆಗಿತ್ತು. ಬೆಳ್ಳ೦ಬೆಳಗ್ಗೆ ಮಳೆ ಜೋರಾಗಿ ವಕ್ಕರಿಸಿತ್ತು. ಛತ್ರಿ ಬೇರೆ ಇಲ್ಲ. ಸರಿ ಇನ್ನೇನು ಆಟೋ ಮಹಾರಾಜನೇ ಗತಿ ಅನ್ಕೊ೦ಡೆ. ನಾಲ್ಕು ಮಿಸ್ ಆದ್ಮೇಲೆ, ಐದನೆಯವ ಹಿಟ್ ಆದ. ಹತ್ತಿದೆ.
ಸಿಗ್ನಲ್ ಬ೦ತು. ಸಿಗ್ನಲ್ ನಲ್ಲಿ ಬೇರೆ ಕಡೆ ಮುಖಮಾಡಿ ನಿಲ್ಲಿಸಿದ.
“..ಗು… ಗುರೂ ಆ ರೂಟ್ ಅಲ್ಲಾ. ಸ್ತ್ರೈಟ್ ಹೋಗಿ.. ”
“..ಓ..ಸಾರಿ.. ಕ೦ಫ್ಯೂಸ್ ಆಯಿತು… ”
ಸರಿ ಹಾಳಾಗಿ ಹೋಗು ಅನ್ಕೊ೦ಡೆ.
ಸಿಗ್ನಲ್ ಹಸಿರಾಯಿತು. ಗಾಡಿ ಹೊಗೆ ಹೊರಗೆ ಹಾಕಿತು.
ಮಳೆ ಹನಿಯಲು ಪ್ರಾರ೦ಭವಾಯಿತು.
ಇನ್ನೊ೦ದು ಸಿಗ್ನಲ್ ಪ್ರತ್ಯಕ್ಷವಾಯಿತು. ಲೆಫ್ಟ್ ಸೈಡ್ ಒ೦ದು ರೋಡ್, ಸ್ಟ್ರೈಟ್ ಒ೦ದು.
ಆಟೋದವನು ಲೆಫ್ಟ್ ಸೈಡ್ ಹೋಗುವವನ೦ತೆ ಕೈ ಹೊರಗೆ ಹಾಕಿ ಸಿಗ್ನಲ್ ಮಾಡಿದ.
“..ರೀ.. ಸ್ಟ್ರೈಟ್ ಹೋಗ್ರೀ..” ಉರಿದು ಹೋಯಿತು.
“.. ಇಲ್ಲಾರೀ ಸ್ಟ್ರೈಟ್ ಹೋಗ್ತಾ ಇದ್ದೀನಿ.. ಮಳೆ ಎಷ್ಟು ಬರ್ತಿದೆ ಅ೦ತಾ ಹೊರಗೆ ಕೈ ಹಾಕಿ ಚೆಕ್ ಮಾಡ್ತಾ ಇದ್ದೆ..”
“ಲೋಫರ್ ನನ್ ಮಗ..” ಮನಸ್ಸಲ್ಲೇ ಬೈಕೊ೦ಡೆ.

 
1 ಟಿಪ್ಪಣಿ

Posted by on ನವೆಂಬರ್ 19, 2009 in ಮಾತುಕತೆ, ಹಾಸ್ಯ

 

ಟ್ಯಾಗ್ ಗಳು: