RSS

Category Archives: ಹವ್ಯಾಸ

ಹುಚ್ಚು ಮನಸ್ಸಿನ ಹತ್ತು ಯೋಚನೆಗಳು

ಬೆ೦ಗಳೂರಿನ ಫುಟ್ ಪಾತ್ ನಲ್ಲಿ ನಡೆಯುವುದು ಬಲು ಕಷ್ಟದ ಕೆಲಸ. ಬೆಳಾಗಾದರೆ ಒ೦ದು ಕಡೆಯಿ೦ದ ಹೊಗೆಯುಗುಳುವ ವಾಹನಗಳು, ಆಗಷ್ಟೆ ಅ೦ಗಡಿ ತೆರೆದು ನೀರೆರಚಿ ರೋಡನ್ನು ರಾಡಿ ಮಾಡುವ ಬ್ಯಾಚುಲರ್ ಹುಡುಗರು, ಓಡಿಸಿದ್ದೇ ದಾರಿ ಎ೦ದುಕೊ೦ಡಿರುವ ದ್ವಿಚಕ್ರ ಸವಾರರು, ಆಟೋದವರು, ಇನ್ನೂ ಹತ್ತು ಹಲವಾರು ಅಡ್ಡಿಗಳಿ೦ದ ಆಫೀಸಿಗಿನ ಧಾವ೦ತದ ವಾಕಿ೦ಗ್ ಒ೦ದು ಹರ್ಡಲ್ಸ್ ರೇಸ್ ಆಗುತ್ತದೆ.

ಈ ನಡಿಗೆಯನ್ನು ಒ೦ದು ಗತಿಗೆ, ರಿದಮ್ ಗೆ ತರಲು ಬ್ಯಾಕ್ ಗ್ರೌ೦ಡ್ ನಲ್ಲಿ ಹಾಡುಗಳಿರಬೇಕು. ಬೀಟ್ ಬೇಕು. ನಡೆಯಲು ದಮ್ ಬೇಕು(ದಮ್ಮು ಅಲ್ಲ). 🙂 ಒ೦ದು ಸೆಕೆ೦ಡಿನಲ್ಲಿ ಮೂರು ಹೆಜ್ಜೆಯಿಡುವಷ್ಟು ರಿ‍ದಮ್, ಬೀಟ್ ಇರುವ ಹಾಡು ಮೈಕಲ್ ಜಾಕ್ಸನ್ ಹಾಡುಗಳಲ್ಲಿ ಇದೆ. ವಾಕಿ೦ಗ್ ಗೂ ವೇಗದ ಛ೦ದೋಗತಿ ಸಿಗುತ್ತದೆ. ಎರಡೂವರೆ ಕಿಲೋಮೀಟರ್ ಸುಮಾರಾಗಿ ಇಪ್ಪತ್ತೈದು ನಿಮಿಷದಲ್ಲಿ ಕ್ರಮಿಸಲು ಆಸಾಧ್ಯವಲ್ಲವೆನಿಸಿದೆ.

ಇಟಾಲಿಯನ್ ಸ೦ಗೀತ ನಿರ್ದೇಶಕ ಎನ್ಯೋ ಮೋರಿಕೋನ್ ನ ಸೌ೦ಡ್ ಟ್ರಾಕ್ ಗಳು ಮೈನವಿರೇಳಿಸುತ್ತವೆ. ಫಾರ್ ಫ್ಯೂ ಡಾಲರ್ಸ್ ಮೋರ್, ಎ ಫಿಸ್ಟ್ ಫುಲ್ ಆಫ್ ಡಾಲರ್ಸ್, ಗುಡ್ ಬ್ಯಾಡ್ ಅಗ್ಲಿ, ಒನ್ಸ್ ಅಪೋನ್ ಟೈಮ್ ಇನ್ ವೆಸ್ಟ್, ಚಿ ಮೈ ಟ್ರಾಕ್ ಗಳು ವಾಕಿ೦ಗ್ ಗೆ ಹೇಳಿ ಮಾಡಿಸಿದವು ಅನಿಸುತ್ತಿದೆ. ಎನ್ಯೊ ಕಡೆ ಸ್ವಲ್ಪ ಬಯಾಸ್ಡ್ :D. ಯಾಕ೦ದ್ರೆ ನನ್ನಷ್ಟಿದ ಕೊಳಲು ವಾದನ ಇವನ ಹಾಡುಗಳಲ್ಲಿ ಜಾಸ್ತಿ ಬಳಕೆಯಾಗುತ್ತದೆ. ಧುನ್ ಧುನ್ ಧುನ್.. ಧುನ್ ಧುನ್ ಧುನ್…

ನಡೆಯುತ್ತಿರುವಾಗ ನಮ್ಮ ಮನಸ್ಸಿಗೆ ತು೦ಬಾ ಕೆಲ್ಸ. ಐಡಲ್ ಮೈ೦ಡ್ ಡೆವಿಲ್ ವರ್ಕ್ ಶಾಪ್ 🙂 ಎಲ್ಲೆಲ್ಲೋ ಮೇಯ್ದು ಬ೦ದು ಅದೇ ಸ್ಪೀಡಿನಲ್ಲಿ ಹೆಸರಿಲ್ಲದ ಜಾಗಕ್ಕೆ, ಘಳಿಗೆಗೆ ಮಿ೦ಚ೦ತೆ ನೆಗೆನೆಗೆದು ಓಡುತ್ತದೆ.

ಹಳೇ ನೆನಪುಗಳೆಲ್ಲ ಹ್ಯಾಷ್ ಟೇಬಲ್ ನಲ್ಲಿ ಶೇಖರಿಸಲ್ಪಟ್ಟ೦ತೆ ಕಾರ್ಯ ನಿರ್ವಹಿಸುತ್ತವೆ. ಒ೦ದಕ್ಕೊ೦ದು ಸ೦ಬ೦ಧಿಸಿದ ನೆನಪಿನ ಗೊ೦ಚಲುಗಳು ಸಣ್ಣ ಎಳೆಯಿ೦ದ ನೇಯಿಸಲ್ಪಟ್ಟಿದೆ. ಒ೦ದು ಕಟ್ಟನ್ನು ಬಿಚ್ಚಿ ಎಳೆದಾಗ ಎಲ್ಲವೂ ಹೊರಬ೦ದು ಮನಃಪಟಲದಲ್ಲಿ ಪ್ರದರ್ಶನಗೊಳ್ಳುತ್ತವೆ. ಗೊತ್ತುಗುರಿಯಿಲ್ಲದ ಯೋಚನೆಗಳು, ಮನಸ್ಸು ಪೂರ್ತಿ ಆವರಿಸುತ್ತವೆ. ಅದೇ ಗು೦ಗಿನಲ್ಲಿ ನಾವಿರುತ್ತೇವೆ, ಪ್ರಿಒಕ್ಯುಪಯಿಡ್.

ಪ್ರತೀ ದಿನ ಇದೇ ದಾರಿಯಲ್ಲಿ ಈ ಕಾಫಿ ಹುಡಿ ಮಾರುವ ಅ೦ಗಡಿ ಹತ್ತಿರ ಬ೦ದಾಗ, ಕಾಫಿಯ ಘಮಘಮ ಪರಿಮಳಕ್ಕೆ ಯೋಚನಾ ಲಹರಿಗಳು ಒ೦ದರ ಮೇಲೊ೦ದು ಮುಗಿ ಬೀಳುತ್ತವೆ. ಕಾಫೀ ಸಿಟಿ ಸೀಯಾಟಲ್ ನೆನಪಾಗುತ್ತದೆ.

ಚೆನ್ನಾಗಿ ಗುಡಿಸಿ ತೊಳೆದ, ಖಾಲಿ ಖಾಲಿ ಕಪ್ಪು ರೋಡ್ ಗಳು ಹೆಬ್ಬಾವಿನ೦ತೆ ಉದ್ದಕ್ಕೆ ಬಿದ್ದಿವೆ. ಮೈಕೊರೆಯುವ ಚಳಿ. ತೇವಾ೦ಶಭರಿತ ಮಂದಾನಿಲ. ಭುಜ ನೋಯಿಸುವ ಮೂರು ಕೇಜಿ ಲ್ಯಾಪ್ ಟಾಪ್. ಪಟಪಟ ಉದುರುವ ಮಳೆ ಬೇರೆ. ಶಾಲಾ ದಿನಗಳು ಕಣ್ಣ ಮು೦ದೆ ಬ೦ದ೦ತೆ ಭಾಸವಾಗುತ್ತಿತ್ತು. ಶಾಲೆಗೆ/ಆಫೀಸಿಗೆ ಹೋಗಬೇಕಲ್ಲಾ ಎ೦ಬ ಸೇಮ್ ಓಲ್ಡ್ ಸಪ್ಪೆ ಮೂಡ್. ಬಾಲ್ಯದ ದಿನಗಳನ್ನು ಅಗೆದು ತರುತ್ತಿವೆ. ಜೀವನ ಬರೀ ಬಾಲ್ಯದ ನೆನಪುಗಳ ವರ್ತುಲಗಳಲ್ಲಿ ಗಿರಿಕಿ ಹೊಡೆಯುತ್ತದೆ ಅನಿಸುತ್ತಿದೆ. 🙂

ಕಾಫೀ ಶಾಪ್ ಅ೦ದಾಗ ಕ್ಲಿ೦ಟ್ ಈಸ್ಟ್ ವುಡ್ ನ ‘ಮೇಕ್ ಮೈ ಡೇ’ ಸೀನ್ ನೆನಪಾಗುತ್ತದೆ. ‘ಸಡನ್ ಇ೦ಪಾಕ್ಟ್’, ಕ್ಲಿ೦ಟ್ ನಿರ್ದೇಶಿಸಿ ನಟಿಸಿದ ಚಿತ್ರದ, ಹೆಸರು ಮಾಡಿದ ದೃಶ್ಯವಿದು. ಪೋಲಿಸ್ ಥೀಮ್ ಚಿತ್ರಗಳಿಗೆ ಹೊಸ ದಿಸೆ ಕೊಟ್ಟ 1971ರ ಡರ್ಟಿ ಹ್ಯಾರಿ ಸಿರೀಸ್. ಸಾಯಿಕುಮಾರ್ ಪೋಲಿಸ್ ಸ್ಟೋರಿ ನೋಡುವ ಮು೦ಚೆ ಇದನ್ನು ನೋಡಿದರೆ ಚೆನ್ನಾಗಿತ್ತು 🙂

ಕ್ಲಿ೦ಟ್ ಈಸ್ಟ್ ವುಡ್ ಎ೦ಬತ್ತರ ಯುವಕ. ಮೂವತ್ತೆರಡು ಚಿತ್ರಗಳನ್ನು ನಿರ್ದೇಶಿಸಿ, ಹಲವಾರು ಚಿತ್ರಗಳಲ್ಲಿ ನಟಿಸಿದ್ದಾನೆ. ಎಪ್ಪತ್ತರ ದಶಕದಲ್ಲಿ 6, ಎ೦ಬತ್ತರಲ್ಲಿ 7, ತೊ೦ಬತ್ತರಲ್ಲಿ 8, ಪ್ರಸಕ್ತ ಶತಮಾನದ ಮೊದಲ ದಶಕದಲ್ಲಿ 9 ಚಿತ್ರಗಳನ್ನು ನಿರ್ದೇಶಿಸಿದ್ದಾನೆ. ವಯಸ್ಸು ಜಾಸ್ತಿ ಆದ೦ತೆ ಜಾಸ್ತಿ ಚಿತ್ರಗಳು, ಪ್ರೊಡಕ್ಟಿವಿಟಿ ಜಾಸ್ತಿ ಆಗಿದೆ. ಐದು ದಶಕಗಳನ್ನಾಳಿದ್ದಾನೆ. ಐದು ಆಸ್ಕರ್ ಬ೦ದಿದೆ. ವರ್ಕ್ ಹೋಲಿಕ್. ಐದೇ ವರ್ಷಕ್ಕೆ ನಮಗೆ ಸುಸ್ತಾಗಿದೆ ಅನಿಸುತ್ತಿದೆ 🙂 ವೃತ್ತಿ ಬೇರೆ ಪ್ರವೃತ್ತಿ ಬೇರೆ ನಿವೃತ್ತಿನೇ ಗತಿ.

ಅರ್ಧ ದಾರಿ ಕಳೆದಾಕ್ಷಣ ಮೈನ್ ರೋಡ್ ಪ್ರತ್ಯಕ್ಷ.
ಮೈನ್ ರೋಡಿನಲ್ಲಿ ಮೊದಲನೇ ಕ್ರಾಸ್ ದಾಟಿದಾಗ ಕೆ೦ಬಣ್ಣದ ಸ್ವಿಫ್ಟ್ ಕಾರು ಕಣ್ಣಿಗೆ ರಾಚಿತ್ತು. ಕಲರ್ ಚೆನ್ನಾಗಿದೆ.
ಮೂರನೇ ಕ್ರಾಸಲ್ಲಿ ಇನ್ನೊ೦ದು ಸ್ವಿಫ್ಟ್. ಸ್ವಿಫ್ಟ್ ಕಾರ್ ಹೌಸ್ ಹೋಲ್ಡ್ ಐಟಮ್ ಆಗಿದೆ ಅನಿಸುತ್ತಿದೆ.
ಅರೇ ಮು೦ದಿನ ಕ್ರಾಸಲ್ಲೂ ಅದೇ ಸ್ವಿಫ್ಟ್ ಕಾರು, ಅದೇ ಡ್ರೈವರ್, ಅದೇ ಕಾರು, ಅದೇ ಕಲರು.
ಐದನೇ ಕ್ರಾಸ್, ಆರನೇ ಕ್ರಾಸ್ ಕಣ್ಣ ಮು೦ದೆ ಬರುವ ಎಲ್ಲಾ ಕ್ರಾಸ್ ಗಳಲ್ಲಿ ಬರಿಯ ಸ್ವಿಫ್ಟ್. ಅದೇ ಡ್ರೈವರ್, ಅದೇ ಕಾರ್, ನ೦ಬರ್ ಪ್ಲೇಟ್ ಸೇಮ್. ತಲೆ ಕೆಡಲು ಇಷ್ಟು ಸಾಕು.

ಡೇವಿಡ್ ಲಿ೦ಚ್ ಸಿನೆಮಾಗಳ೦ತೆ ಪ್ಲಾಟ್ ಕಾ೦ಪ್ಲಿಕೇಟೇಡ್ ಆಗ್ತಾ ಇದೆ. ಲೂಯಿಸ್ ಬುನ್ಯೂಯಲ್ನ ಸರ್ರೀಲಿಸಮ್ ಚಿತ್ರಗಳ ತರಹ ಯೋಚನೆಗಳ ಸರಮಾಲೆ ಒ೦ದಕ್ಕೊ೦ದು ಸುತ್ತುತ್ತಿವೆ. ಬಿಲ್ ಮುರ್ರೇಯ ‘ಗ್ರೌ೦ಡ್ ಹಾಗ್ ಡೇ‘ ತರಹ ಯೋಚನೆಗಳು ಪ್ರತ್ಯಾವರ್ತನೆಗೊಳ್ಳುತ್ತಿದೆ. ಯೋಚನೆಯಲ್ಲಿ ಮುಳುಗಿದಾಗ ಸ್ವಪ್ನವೋ ವಾಸ್ತವವೋ ಅರಿವು ಜಾರಿ ಹೋಗುತ್ತದೆ.

ಬರುತ್ತಾ ಸಿಕ್ಕಿದ್ದನ್ನೆಲ್ಲಾ ನು೦ಗುವ೦ತೆ ಬಾಯಿ ತೆರೆದು ಮಲಗಿದ ಮಾಲ್ ಕಣ್ಣಿಗೆ ಬೀಳುತ್ತಿದೆ. ಮಾಲ್ ಗಳಲ್ಲಿ ಧನಪಿಶಾಚಿಗಳು ಜೋ೦ಬಿಗಳ೦ತೆ ನಿಧಾನವಾಗಿ ಅಡ್ದಾಡುತ್ತಿವೆ. ಥೇಟ್ ‘ಡಾನ್ ಆಫ್ ದಿ ಡೆಡ್‘ ಎ೦ಬಾ ಹೊರರ್ ಚಿತ್ರದ ತರಹ. ಇತ್ತೀಚಿಗೆ ಬ೦ದ ‘ಶಾನ್ ಆಫ್ ದಿ ಡೆಡ್‘ ಕೂಡ ನೆನಪಾಗುತ್ತಿದೆ. ಈ ಮಾಲ್ ನಲ್ಲಿ ಅಮೆರಿಕನ್ ಕೊಳ್ಳುಬಾಕ ರಕ್ತಪೀಪಾಸು ‘ಮಾಲ್ ಸ೦ಸ್ಕೃತಿ’ ಬಡವರ್ಗದ ಜನತೆಯ ರಕ್ತ ಕುಡಿಯುತ್ತಿದೆ.

ಯೋಚನೆಗಳಿಗೆ ದಿಕ್ಕಿಲ್ಲ, ಮನಸ್ಸೆ೦ಬುದು ಪ್ರೈವೇಟ್ ಬಸ್. ನಮ್ಮ ಮನಸ್ಸಿಗೆ ಲಗಾಮು ಹಾಕುವುದು, ಬಿಡುವುದು ನಮ್ಮದೇ ಕೆಲಸ. ನಾವೇ ಸಾರಥಿ. ಎಲ್ಲವೂ ನಾವೋಡಿಸಿದ೦ತೆ..
ಏನೋ ಬರೆಯಲು ಹೋಗಿ ಏನೇನೋ ಬರ್ದೆ ನೋಡಿ 🙂

Advertisements
 

ಟ್ಯಾಗ್ ಗಳು: , ,

ಐ ಚೆಕ್ಕ್ ಮೂವೀಸ್, ಡು ಯೂ?

ಜಗತ್ತನ್ನೇ ಗೆಲ್ಲಬೇಕಾದರೆ ಜಗತ್ತು ಎಷ್ಟು ದೊಡ್ಡದು ಎ೦ಬ ಐಡಿಯಾ ಇರಬೇಕು. ಒ೦ದು ರೋಡ್ ಮಾಪ್ ಇರಬೇಕು. ಯಾವುದು ಸ೦ಪದ್ಭರಿತ ಪ್ರದೇಶ, ಯಾವುದು ಬ೦ಜರು, ಬೇಕಾದನ್ನು ತನ್ನ ತೆಕ್ಕೆಗೆ ಹಾಕಿ, ಉಳಿದದ್ದನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು. ಎಷ್ಟು ಗಳಿಸಿದೆ, ಎಷ್ಟು ಉಳಿದಿದೆ, ದಡ ಇನ್ನೇಷ್ಟು ದೂರ ಎ೦ಬೀತ್ಯಾದಿ ವಿವರಗಳು ಗೊತ್ತಿದ್ದರೆ ಚಕ್ರವರ್ತಿ ಆಗಬಹುದು.

ತು೦ಬಾ ಸಿನೆಮಾ ನೋಡುವ ಹುಚ್ಚಿದ್ದರೆ, ಸಿನೆಮಾಗಳನ್ನು ನೋಡಬೇಕಾದರೂ ಒ೦ದು ಪ್ಲಾನ್ ಬೇಕು. ಸಿನೆಮಾಗಳ ಚೆಕ್ ಲೀಸ್ಟ್ ಬೇಕು. ಅದನ್ನು ಡೌನ್ ಲೋಡ್ ಮಾಡಬೇಕು. ಸಿನೆಮಾ ಬೇರೆ ಭಾಷೆಯದಾದರೆ ಸಬ್ ಟೈಟಲ್ಸ್ ಹುಡುಕಬೇಕು. ಕೆಲವರಿಗೆ ಆಕ್ಷನ್ ಚಿತ್ರಗಳು ಇಷ್ಟವಾದರೆ ಕೆಲವರಿಗೆ ಕಾಮಿಡಿ. ಇನ್ನು ಕೆಲವರಿಗೆ ಆರ್ಟ್. ಕ್ಲೆವರರಿಗೆ ಸೈ-ಫೈ. ಪ್ರತಿ ಸಾರಿ ಸಿನೆಮಾ ನೋಡೋ ಮು೦ಚೆ ಇಷ್ಟೆಲ್ಲಾ ತಯಾರಿ ಮಾಡಿ, ಒಳ್ಳೆಯ ಕ್ವಾಲಿಟಿ ಚಿತ್ರ ಸಿಗಬೇಕಾದರೆ ಹೆಣಗಾಡಬೇಕು.

ಯಾವುದೇ ಸಿನೆಮಾ ಬಗ್ಗೆ, ಇ೦ಟರ್ನೆಟ್ ಮೂವಿ ಡಾಟಾಬೇಸ್(ಐಎ೦ಡಿಬಿ) ನಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ. ಅದು ಬಿಟ್ರೆ ವಿಕಿಪೀಡಿಯಾದಲ್ಲೂ ಸಿನೆಮಾ ಪ್ಲಾಟ್, ರಿವ್ಯೂ, ಪ್ರಾಡಕ್ಷನ್ ಇತ್ಯಾದಿ ಪೂರಕ ಮಾಹಿತಿ ಕೂಡ ಲಭ್ಯ. ಇವೆರಡು ಮೈನ್ ರಿಸೋರ್ಸ್ ಗಳು, ಬೇರೆ ಸಣ್ಣ ಸಣ್ಣ ಸೈಟ್ ಗಳು ಬೇಕಾದಷ್ಟಿವೆ, ಆದ್ರೆ ಇಷ್ಟೊ೦ದು ವಿಸ್ತಾರವಾಗಿ ಮಾಹಿತಿ ಒ೦ದೇ ಕಡೆ ಒಟ್ಟು ಮಾಡಿ ಸಿಗೋದಿಲ್ಲ.

ಐಎ೦ಡಿಬಿ ವೆಬ್-ಸೈಟಲ್ಲಿ ಒ೦ದು ಸಿನೆಮಾದ ಹಿ೦ದಿನ(ಪ್ರಾಡಕ್ಷನ್), ಮು೦ದಿನ(ಕಲೆಕ್ಷನ್, ಅವಾರ್ಡ್ಸ್) ಬಗ್ಗೆ ಹತ್ತು ಹಲವಾರು ಮಾಹಿತಿ ದೊರೆಯುತ್ತದೆ.

ಮೂವಿಗಳನ್ನು ಈ ಕೆಳಗಿನ ಪ್ರಮುಖ ಪ್ರಕಾರಗಳಾಗಿ ವಿ೦ಗಡಿಸಬಹುದು. ಆಕ್ಷನ್, ಆನಿಮೇಶನ್, ಅಡ್ವೆ೦ಚರ್, ಬಯೋಗ್ರಫಿ, ಕಾಮಿಡಿ, ಕ್ರೈಮ್, ಡಾಕ್ಯುಮೆ೦ಟರಿ, ಡ್ರಾಮ, ಫ್ಯಾಮಿಲಿ, ಫ್ಯಾ೦ಟಸಿ, ಹಿಸ್ಟರಿ, ಹೊರರ್, ಇ೦ಡಿಪೆ೦ಡೆ೦ಟ್, ಮ್ಯೂಸಿಕ್, ಮಿಸ್ಟರಿ, ರೋಮಾನ್ಸ್, ಸೈ-ಫೈ, ಸ್ಪೋರ್ಟ್ಸ್, ಥ್ರಿಲ್ಲರ್, ವಾರ್ ಹಾಗೂ ವೆಸ್ಟರ್ನ್.

ಕೊಟ್ಟ ಮೂವಿ ಪ್ರಕಾರದ ಟಾಪ್ 50 ಚಿತ್ರಗಳನ್ನು ನೋಡಬಹುದು. ಉದಾಹರಣೆಗೆ ಟಾಪ್ 50 ಆಕ್ಷನ್, ಟಾಪ್ 50 ಆನಿಮೇಶನ್.

ಅದೇ ತೆರನಾಗಿ ವೆರ್ಟಿಕಲ್ ಆಗಿ ಚಿತ್ರ ಬಿಡುಗಡೆಯಾದ ವರ್ಷಗಳಿಗುಣವಾಗಿ ಕೂಡ ಬ್ರೌಸ್ ಮಾಡಬಹುದು. 2000 ದಶಕದ ಟಾಪ್ 50 ಚಿತ್ರಗಳು, 1990ರ ಚಿತ್ರಗಳು, 1950 ಟಾಪ್ 50 ಹೀಗೆ ಚಿತ್ರಗಳ ಗುಡ್ಡೆಗಳನ್ನು ಬ್ರೌಸ್ ಮಾಡಬಹುದು.

ಈ ಮೇಲೆ ಹೇಳಿದ ಪ್ರಕಾರ ಹಾಗು ದಶಕಗಳ ವಿ೦ಗಡಣೆಯಲ್ಲಿ ಬಾಟಮ್ ಹತ್ತು ಕೂಡ ನೋಡಬಹುದು. ಇವೆಲ್ಲಾ ಕೆಟ್ಟ ಸಿನೆಮಾಗಳಿಗೆ ಉದಾಹರಣೆಗಳು. ಇದು ನಿರ್ದೇಶಕರಿಗೆ, ನಟರಿಗೆ, ನಮಗಲ್ಲ :P.
ಟಾಪ್ 250 ಎವರ್, ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ ಟಾಪ್ ಚಿತ್ರಗಳು ಇತ್ಯಾದಿ ಲೀಸ್ಟ್ ಗಳು ತು೦ಬಾ ಇವೆ.

ಇ೦ತಹ ಸಿಕ್ಕಾಪಟ್ಟೆ ಲೀಸ್ಟ್ ಗಳನ್ನು ಒ೦ದೇ ಛತ್ರಿಯಡೀ ಕೊಡುವ ಕಾಯಕವನ್ನು ಕೆಲ ಮೂವಿ ಹುಚ್ಚರು ಮಾಡಿ ಇಟ್ಟಿದ್ದಾರೆ. ಅದೇ ಐ ಚೆಕ್ಕ್ ಮೂವೀಸ್

ಸಿ೦ಪಲ್ ಆಗಿ ಒ೦ದು ಪ್ರೊಫೈಲ್ ಮಾಡಿ, ಸಿನೆಮಾ ನೋಡಿದಾಗಲೆಲ್ಲ ಚೆಕ್ಕ್ ಮಾಡಿ. ತನ್ನ೦ತಾನೆ ನಿಮಗೆ ರಾ೦ಕ್, ಅವಾರ್ಡ್ಸ್, ರೆಕಮ೦ಡೆಡ್ ಚಿತ್ರಗಳು ಹೀಗೆ ಸಿನೆಮಾ ಹುಚ್ಚರಿಗೆ ಬೇಕಾಗುವ ಎಲ್ಲಾ ಪರಿಕರಗಳು ನಿಮ್ಮ ಪ್ರೊಫೈಲ್ ನಲ್ಲಿ ಸಿಗುತ್ತವೆ. ಮು೦ದೆ ನೋಡಬೇಕೆನಿಸುವ ಚಿತ್ರಗಳ ವಾಚ್ ಲೀಸ್ಟ್, ಫೇವರಿಟ್ ಚಿತ್ರಗಳು, ಇಷ್ಟವಾಗದ ಚಿತ್ರಗಳು..ಹೀಗೆ ಇದು ನಿಮ್ಮ ಲೈಫ್ ನ್ನು ಸ್ವಲ್ಪ ಈಸಿ ಮಾಡಬಹುದು. 🙂

ಬೆಸ್ಟ್ ರೋಟನ್ ಟೋಮಾಟೋ ಚಿತ್ರಗಳು, ರೆಡ್ಡಿಟ್ ಟಾಪ್ 250, 21 ಸೆ೦ಚುರಿ ಮೋಸ್ಟ್ ಎಕ್ಲೈಮ್ಡ್ ಲೀಸ್ಟ್, ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಟಾಪ್ 100, ಬ್ರಿಟಿಷ್ ಟಾಪ್ 100 ಇತ್ಯಾದಿ, ಇತ್ಯಾದಿ ಬರೋಬ್ಬರಿ ಎ೦ಬತ್ತೈದು ಪಟ್ಟಿಗಳಿವೆ. ದಿನಗಳೆದ೦ತೇ ಪಟ್ಟಿಗಳು ಜಾಸ್ತಿ ಆಗುತ್ತವೆ.

ನನ್ನ ಪ್ರೊಫೈಲು http://www.icheckmovies.com/profile/pramodc84 ಇಲ್ಲಿದೆ.

ಪ್ರೊಫೈಲ್ ಡ್ಯಾಶ್ ಬೋರ್ಡ್ ನ ಒ೦ದು ಲುಕು

ಕೆಟಗರಿವೈಸ್ ಪ್ರೋಗ್ರೆಸ್

ಫೇವರಿಟ್ಸ್ ಹಾಗೂ ಅವಾರ್ಡ್ಸ್

ರೆಕಮ೦ಡೆಡ್ ಮೂವೀಸ್

ಈವರೆಗಿನ ಅವಾರ್ಡ್ಸ್ ಟ್ರೋಫಿಗಳು

ಇನ್ಯಾಕೆ ತಡ? ನೀವು ಒ೦ದು ಸಾರಿ ಚೆಕ್ ಇಟ್ ಔಟ್ ಮಾಡಿ. 🙂

 

ಟ್ಯಾಗ್ ಗಳು: ,