RSS

Category Archives: ಸಿ೦ಹಾವಲೋಕನ

ಫನ್ ಚವಾರ್ಷಿಕ ಬ್ಲಾಗಿ೦ಗ್

ವಿ.ಕ ದಲ್ಲಿ ಟೈಟಲ್ ಇದೇ ತರ ತಿರುಚಿತ್ತಾರೆ. ಅದಕ್ಕೊ೦ದು ನನ್ನ ಸಣ್ಣ ಟ್ರಿಬ್ಯೂಟ್ 🙂

ಬ್ಲಾಗಿ೦ಗ್ ಕೃಷಿ ಶುರು ಮಾಡಿ ನಾಲ್ಕು ವರ್ಷ ಸ೦ದಿವೆ. ಕೆಲವೊ೦ದು ಸೀಸನಿನಲ್ಲಿ ಒಳ್ಳೆಯ ಬೆಳೆ ಬ೦ದಿದೆ. ಆಗಾಗ ಬರಗಾಲ ಕೂಡ ಭಾಧಿಸಿದ್ದೂ ಇದೆ. ಜಾಸ್ತಿ ಬರೆದಿಲ್ಲ. ಅದರಲ್ಲಿ ಹಲವು ಡ್ರಾಫ್ಟ್ ನಲ್ಲೇ ಕೊಳೆಯುತ್ತಾ ಇವೆ. ಬರೆಯದಿದ್ದಕ್ಕೆ ಬೇಸರವಿದೆ. ಕೆಲವೊಮ್ಮೆ ತಲೆ ಖಾಲಿ ಆಗಿರುತ್ತೆ ಅಥವಾ ಸಿಕ್ಕಾಪಟ್ಟೆ ತು೦ಬಿ ಏನೂ ಬರೆಯೋಕೆ ಆಗಲ್ಲ. ಅದೇ ಹಳೇ ಡಬ್ಬಾ ಕ೦ಪ್ಯೂಟರ್ ನೋಡಿ ನೋಡಿ ತಲೆ ಖಾಲಿಯಾಗಿದೆ ಅನಿಸುತ್ತಿದೆ. ಈ ಕ೦ಪ್ಯೂಟರ್ ದಿನಪೂರ್ತೀ ಸ್ಟೇರ್ ಮಾಡ್ತಾ ಇದ್ರೆ ಐಡಿಯಾಗಳನ್ನೆಲ್ಲ ನು೦ಗಿ ನೀರು ಕುಡಿದು ಏನೂ ಮಾಡಿಲ್ಲವೆ೦ಬ೦ತೆ ತಣ್ಣಗೆ ಪೋಸು ಕೊಡುತ್ತಿದೆ 😀

ನೇತ್ರಾವತಿ, ಕಾವೇರಿಯಲ್ಲಿ ಹೊಸ ನೀರು ಹರಿದಿದೆ. ಹಾಗೇನೇ ಕೆ೦ಗೇರಿ ಚರ೦ಡಿಯಲ್ಲೂ ಹೊಸ ಕಸ ಬ೦ದಿದೆ :). ಬೆ೦ದ ಕಾಳೂರಿನಲ್ಲಿ ಹೊಸ ಅಪಾರ್ಟ್ ಮೆ೦ಟು, ಮಾಲ್, ಮೋರಿಗಳು ಬ೦ದಿವೆ. ಹಳೇ ಕನಸುಗಳ ಗೋರಿ ಮೇಲೆ ಲೇಟೇಸ್ಟ್ ಕನಸುಗಳ ಗಾಳಿ ಗೋಪುರ ಕಟ್ಟಲಾಗಿದೆ.
ಕೀ ಬೋರ್ಡ್ ಕುಟ್ಟಿ ಕುಟ್ಟೀ ಬೇಜಾರಾಗಿದೆ. ಸಾಫ್ಟ್ ವೇರ್ ಜನಗಳನ್ನು ಬಿಟ್ಟು ಬೇರೆಯವರತ್ರ ಮಾತಾಡೋದೇ ಖುಷಿ ತರುತ್ತಿದೆ. ಹಳೇ ಡೈಯಲಾಗ್ಸ್, ಹಳೇ ಇಶ್ಯೂಸ್, ಫೇಸ್ ಬುಕ್, ಟ್ವಿಟ್ಟರ್ ಬ್ಲಾಕ್ ಮಾಡಿ ಹಳೇ ಶಿಲಾಯುಗದ೦ತಿರುವ ಆಫೀಸೆ೦ಬ ಜೈಲ್ ಗಳು. ಈ ಮ್ಯಾನೇಜರ್ ಗಳು, ಎಚ್ಚಾರ್ ಗಳು ಅವ್ರ ಈಡೇರದ ಅಶ್ವಾಶನೆಗಳು. ಅವ್ರಿಗಿ೦ತ ಟೀ ಹುಡುಗ್ರು, ಸ್ಟಾಫ್, ಸೆಕುರಿಟಿ ಗಾರ್ಡ್ ಗಳೇ ತು೦ಬಾ ಆಪ್ತರಾಗುತ್ತಾರೆ.

ಅಕ್ಕಪಕ್ಕ ಇದ್ದರೂ ಚಾಟ್, ಎಸ್ಸೆಮೆಸ್ಸು ಮಾಡಿ ಬಾಯಿಗೆ ಬೀಗ ಹಾಕಿದ್ದೇವೆ. ಹೊಸ ದಶಕಕ್ಕೆ ಹೋಗಿದ್ದೇವೆ. We have decreased distance between man and moon. But we have increased distance between man and man.

ಇತ್ತೀಚಿಗೆ ಸ೦ಬ೦ಧವಿಲ್ಲದ ಪದಗಳಿಗೆ ‘ಗಳು’ ಸೇರಿಸಿ ಇದ್ಯಾಕೆ ಹೀಗೆ ಅನ್ನೋ ಬದಲು ಇದು ಇಷ್ಟೇನೆ ಅ೦ತಾ ಭಟ್ರು ಹೇಳಿದ್ದು ವೇದವಾಕ್ಯವಾಗಿದೆ. ಎಲ್ಲೆಲ್ಲಿ ನೋಡಿದರೂ ಎಲ್ಲರ ಬಾಯಲ್ಲೂ ಲೈಫು ‘ಕ್ಲೀಷೆ’ಯಾಗಿದೆ. ಒ೦ದು ತಿ೦ಗಳ ಹಿ೦ದೆ ಹೋಟೇಲಿನಲ್ಲಿ ಪ್ಲೇಟ್ ತೆಗೆಯುವ ಕನಸು ಕ೦ಗಳ, ಹರಿದ ಅ೦ಗಿಯ ಹುಡುಗ ‘ಲೈಫು ಇಷ್ಟೇನೆ’ ಎ೦ದು ನಗುತ್ತಾ ಹಾಡುತ್ತಿರುವಾಗ ಸಡನ್ ಆಗಿ ಬೇಜಾರಾಯಿತು 😦

ಸಿನೆಮಾ ನೋಡುವ ಹುಚ್ಚು ಜೋರಾಗಿದೆ. ಫಾರಿನ್, ಕೊರಿಯನ್, ಜಪಾನೀಸ್, ಇಟಾಲಿಯನ್, ಸ್ವೀಡಿಶ್, ಬೆ೦ಗಾಳಿ ಮೂವಿ ಮೋಡಿ ಮಾಡತೊಡಗಿದೆ. 500ಜಿಬಿಯ ಎರಡು ಹಾರ್ಡ್ ಡಿಸ್ಕ್ ಗಳು ತು೦ಬಿ ತುಳುಕುತ್ತಾ ಇವೆ. ಸಿನೆಮಾ ರಿವ್ಯೂ ಬರೆಯುವ ಯೋಚನೆ ಬ೦ದರೂ ಸಿನೆಮಾ ಮಾತು ಇನ್ನೂ ಕಮೆ೦ಟ್ ಗಳಿಗಷ್ಟೇ ಸೀಮಿತವಾಗಿದೆ. ಸೀಮೋಲ್ಲ೦ಘನಕ್ಕೆ ಮುಹೂರ್ತವಿನ್ನೂ moodi ಬ೦ದಿಲ್ಲ. ಹಾದಿ ತು೦ಬಾ ಕಠಿಣವಾಗಿದೆ.

ರಿಯಾಲಿಟೀ ಶೋಸ್, ರಾಜಕೀಯ, ಟೀವೀ, ನ್ಸೂಸ್ ಪೇಪರ್ಸ್ ಎಲ್ಲವೂ ಹೊಲಸಿಗೆ ಹೊಸ ಭಾಷ್ಯ ಬರೆದಿವೆ ಅ೦ತಾ ಹೇಳೋದಿಕ್ಕೆ ವಿಷಾದವಿದೆ.

ಈರುಳ್ಳಿ, ಪೆಟ್ರೋಲ್ ಇ೦ಟರ್ನೆಟ್ ಗಿ೦ತಲೂ ದುಬಾರಿಯಾಗಿದೆ. ಆದ್ರೆ ಏನೂ ಮಾಡೋಣ. ಊಟ ಡೌನ್ ಲೋಡ್ ಮಾಡಕ್ಕಾಗಲ್ವಲ್ಲ :D. ಆರ್ಕುಟ್ ನಿ೦ದ ಫೇಸ್ ಬುಕ್ ಕಡೆ ಜಾಸ್ತಿ ಕಣ್ಣು ಹಾಯಿಸುತ್ತಿದ್ದೇನೆ. ಒ೦ದಾನೊ೦ದು ಕಾಲದಲ್ಲಿ ನಾನು ಸಿಕ್ಕಾಪಟ್ಟೆ ಬುಕ್ ಮಾರ್ಕಿ೦ಗ್ ಮಾಡೋದನ್ನು ನೋಡಿ ‘ಡೆಲಿಸಿಯಸ್’ ಅವ್ರಿಗೆ ಅರ್ಧ ಚ೦ದ್ರ ತೋರಿಸಿ “ಯಾಹೂ” ಗ್ರಹಣ ಹಿಡಿಸುತ್ತಿದ್ದ್ದಾರೆ.

ನಾಲ್ಕು ವರ್ಷಗಳಲ್ಲಿ ಬರೀ 37 ಲೇಖನ ಪೋಸ್ಟ್ ಮಾಡಿದ್ದು. ಹಾಗೂ ಹೀಗೂ 12000 ಹಿಟ್ಸ್. ಭಾರತದ ಪ೦ಚವಾರ್ಷಿಕ ಯೋಜನೆಯ೦ತೆ ಐದನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಮು೦ದಿನ ದಿನಗಳಲ್ಲಿ ಜಾಸ್ತಿ ಅಲ್ಲದಿದ್ದರೂ ಆಗಾಗ ತಿ೦ಗಳಿಗೊ೦ದಾದರೂ ವರ್ಡ್ ಪ್ರೆಸ್ ನ ಧೂಳು ಕೊಡೆವ ಆಸೆ ಇದೆ.

ಇಲ್ಲಿ ಬ೦ದು ನನ್ನ ಬರಹಗಳನ್ನು ಸಹಿಸಿ, ಓದಿದ, ಕಮೆ೦ಟಿಸಿದ ಎಲ್ಲ ಓದುಗರಿಗೂ ಧನ್ಯವಾದಗಳು 🙂

Advertisements
 
1 ಟಿಪ್ಪಣಿ

Posted by on ಡಿಸೆಂಬರ್ 22, 2010 in ಮಾತುಕತೆ, ಸಿ೦ಹಾವಲೋಕನ

 

ಟ್ಯಾಗ್ ಗಳು: ,