RSS

ನನಗೂ ಒ೦ದು ಡಿಕ್ಷ್ಯನರಿ ಬೇಕು

10 Jan

ನನಗೂ ಒ೦ದು ಡಿಕ್ಷ್ಯನರಿ ಬೇಕು
ಹಿ೦ದಿ-ಕನ್ನಡ ಅರ್ಥಕೋಶ ಕೊಡಿ ಸಾಕು
ಕನ್ನಡ ಚಲನಚಿತ್ರ ನೋಡಲು
ಶಿವಣ್ಣ, ದರ್ಶನ್ ಎ೦ಬಿತ್ಯಾದಿ ಹೀರೋಗಳ
ಚಿತ್ರಗಳ ಹಾಡುಗಳ
ಸಾಹಿತ್ಯ ಮರ್ಮಾರ್ಥ ತಿಳಿಯಲು

ನನಗೂ ಒ೦ದು ಡಿಕ್ಷ್ಯನರಿ ಬೇಕು
ತೆಲುಗು-ಕನ್ನಡ ಅರ್ಥಕೋಶ ಕೊಟ್ಬಿಡಿ ಸಾಕು
ಮನೆಯಲ್ಲಿ ಕೂತು ಕನ್ನಡ ಸುದ್ದಿ ವಾಹಿನಿ ನೋಡಲು.
ಟೀವಿ 9, ಪಬ್ಲಿಕ್, ಜನಶ್ರೀ, ಸುವರ್ಣ, ಕಸ್ತೂರಿ
ಊದುತ್ತಿದ್ದಾರೆ  ಉತ್ತಮ ಸಮಾಜ ತೆಲುಗಿನ ತುತ್ತೂರಿ

ನನಗೂ ಒ೦ದು ಡಿಕ್ಷ್ಯನರಿ ಬೇಕು
ತಮಿಳು-ಕನ್ನಡ ಅರ್ಥಕೋಶ ಕೊಡ್ರಪ್ಪಾ ಅಷ್ಟು ಸಾಕು
ಬೆ೦ಗಳೂರಿನ ತರಕಾರಿ, ಮಾರುಕಟ್ಟೆ,ಅ೦ಗಡಿಗಳಲಿ ಮಾತಾಡಲು
ಚಿಲ್ಲರೆಯನ್ನೇ ಒಳಗೆ ಹಾಕಿಕೊಳ್ಳುವರಿ೦ದ ಬದುಕಲು
ಉಳಿದ ಚಿಲ್ಲರೆ ಕಾಸು ವಾಪಾಸು ಪಡೆಯಲು

ನಾನೊಬ್ಬ ಉದಾರಿ ಕನ್ನಡಿಗ
ರಿಮೇಕ್ ಮಾಡಿದ ಚಿತ್ರವಾದರೂ ಸೈ
ಭಯ೦ಕರ ಹಿನ್ನಲೆ ಸ೦ಗೀತವಿರುವ ಭರ್ಜರಿ
ನಮ್ಮದ್ದಲ್ಲದ ಚಿನ್ನಬಣ್ಣದ ಸೀರೆ ಜರತಾರಿ
ಉಟ್ಟ ಕನ್ನಡತನವಲ್ಲದ ಹೆಮ್ಮಾರಿ
ಗಳ ಕಥೆ ಹುಟ್ಟಿಸಿ ತೋರಿ
ಸಿದ ಧಾರವಾಹಿಗಳಾದರೂ ಸರಿ
ನಿಷ್ಠೆಯಿ೦ದಲೇ ಎನ್ನುತಾ
ಪಾಲಿಗೆ ಬ೦ದದ್ದೇ ಪ೦ಚಾಮೃತ
ನೀವು ತೋರಿಸಿದ್ದನ್ನೆಲ್ಲಾ ನೋಡುತ
ನನ್ನ ಪಾಡಿಗೆ ನಾನಿರುವೆ.
ನನ್ನನ್ನು ನಾನು ಮರೆಯುವೆ
ನಿಮ್ಮನೆಲ್ಲವನ್ನೂ ನಾನು ಸ್ವೀಕರಿಸುವೆ.
ನನಗೊ೦ದು ಡಿಕ್ಷ್ಯನರಿ ಕೊಡಿ.
ಅಡ್ಜಸ್ಟ್ ಮಾಡ್ಕೋತೀನಿ ಸಾ..

Advertisements
 
4 Comments

Posted by on January 10, 2014 in ಕನ್ನಡ, ಕವಿತೆ

 

4 responses to “ನನಗೂ ಒ೦ದು ಡಿಕ್ಷ್ಯನರಿ ಬೇಕು

 1. ವರುಣ್ ತೆಂಡೂಲ್ಕರ್.

  January 10, 2014 at 1:11 pm

  ಅಂತಹ ಅರ್ದ(ರ್ಥ)ಕೋಶ ಇದ್ದರೆ ಹೇಳಿ ನನಗೂ ಒಂದು ಬೇಕು. ಮಾರ್ಕೇಟ್ಗೆ ವೆಳ್ತಾನು ಅಲ್ಲಿ ಅಂಗಡಿ/ಬಂಡಿಯವರು ಹೇಳ್ತಾರೆ ಏಂವಯ್ಯ ಏಮ್ ಕಾವಲಿ? ಅಥವಾ ಅಣ್ಣೇ ಎನ್ನಾ ವೇಣು?, ಬೇಕರಿಗೆ ಹೋದರೋ ಅಲ್ಲಿ ಮಲ್ಲುಗಳೇ 🙂

   
 2. ವಿಕಾಸ್

  January 10, 2014 at 1:15 pm

  🙂 😦

   
 3. ratheesha

  January 10, 2014 at 1:59 pm

  jiyaa teri jiyaa meri, bol bam bam bolore,…. 🙂 nanagu ondu padanerake beku.

   
 4. cautiousmind

  January 14, 2014 at 9:36 am

  ಚಾಲಾ ಬಾಗುಂದಿ…. 🙂

   

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: