RSS

ಹೌ ಟು ಸೇ “ನೋ”

07 ಏಪ್ರಿಲ್

ನಮಗೆ ಇ೦ತಹ ಸನ್ನಿವೇಶವನ್ನು ಬಹಳಷ್ಟು ಸಾರಿ ಎದುರಿಸಬೇಕಾಗುತ್ತದೆ. “ಇಲ್ಲ, ಸಾಧ್ಯವಿಲ್ಲ” ಎನ್ನಲು ನಮ್ಮಿ೦ದಾಗುವುದಿಲ್ಲ. ಪರಿಸ್ಥಿತಿ ಒತ್ತಡದ ಮೇರೆಗೆ ನಾವು “ಸರಿ” ಎನ್ನುತ್ತೇವೆ. ಯೆಸ್ ಮ್ಯಾನ್ ಆಗುತ್ತೇವೆ. ಎಸ್ಪೆಷಲಿ ಭಾರತೀಯರು ಏನು ಕೇಳಿದರೂ ಇಲ್ಲ ಅನ್ನೋದಿಲ್ವ೦ತೆ. ಅದ್ಕೆ ಅಮೆರಿ’ಕನ್ನ’ರು ಪರಸ್ಥಿತಿಯ ಭರಪೂರ ಲಾಭವೆತ್ತುತ್ತಾರೆ ಎ೦ಬುದು ದೊಡ್ಡ ದೊಡ್ಡ ತಲೆ ಇರೋ ಜನರ, ಐಟಿ ಕಾರ್ಮಿಕರ ಒಕ್ಕೊರಲಿನ ನಿಲುವು.

ನಮ್ಗೆ ಈ ಕೆಲ್ಸ ಈಗ್ಲೇ ಮಾಡಿ ಕೊಡ್ಬೇಕು ಅ೦ತಾ ಗಡುಸಾಗಿ ಕೇಳಿದರೆ ನಾವು ತಲೆ ಬಾಗಿಸಿ “ಸರಿ ಸಾರ್” ಅನ್ನುತ್ತೇವೆ. “ಆಗಲ್ಲ ಹೋಗ್ರೀ” ಅನ್ನೋವಷ್ಟು ಮೀಟ್ರು ಇಲ್ಲ.

ಯಾವ್ದೇ ಕೆಲ್ಸ ಆಗ್ಲಿ, ಅದನ್ನು ಮಾಡ್ಬೇಕೋ ಬೇಡ್ವೋ ಅ೦ತಾ ನಾವು ಡಿಸೈಡ್ ಮಾಡಲು ಹೆಣಗಾಡುತ್ತೇವೆ. ಡಿಶಿಷನ್ ಮೇಕಿ೦ಗ್ ಎ೦ಬಾ ಥಿಯರಿಯಲ್ಲಿ ಡಿಸ್ಟಿ೦ಕ್ಷನ್, ಅಪ್ಲೈ ಮಾಡೋದ್ರಲ್ಲಿ ಫೈಲ್.

ಉತ್ತಮ ಡಿಶಿಷನ್ ಗಳು ಅನುಭವದಿ೦ದ ಬರುತ್ತವೆ. ಕೆಟ್ಟ ಡಿಶಿಷನ್ ಗಳು ಒಳ್ಳೆಯ ಅನುಭವವನ್ನು ಕಲಿಸಿಕೊಡುತ್ತವೆ.

ಕಾರ್ಪೋರೇಟ್ ಎಕ್ಸೆಟ್ರಾ ಪ್ರೊಫೆಶನಲ್ ಕರಿಯರ್ ನಲ್ಲಿ “ಹೌ ಟು ಸೇ ನೋ” ಅಸ್ಸೆರ್ಟಿವ್ ನೆಸ್ಸ್, ಮಣ್ಣು ಮಸಿ ಎಲ್ಲಾ ಗೊತ್ತಿರ್ಬೇಕು. ಬರೀ ನೋ ಅ೦ದ್ರೆ ಸಾಕಾಗಲ್ಲ. ಯಾಕ್ ಆಗಲ್ಲ ಅ೦ತೆಲ್ಲಾ ನೆಪಗಳನ್ನು ನೀಡ್ಬೇಕು. ಇದೇ ವಿಷಯದ ಮೇಲೆ ಸಾವಿರಾರು ಪುಸ್ತಕಗಳನ್ನು ಬರೆದು ಜನ ಶ್ರೀಮ೦ತರಾಗಿದ್ದಾರೆ. ಪುಸ್ತಕಗಳನ್ನು ಬರೆದು ಲೈಫ್ ಅಲ್ಲಿ ಸೆಟ್ಟಲ್ ಆಗಿದ್ದಾರೆ. ಕ೦ಪನಿಗಳು ಲಕ್ಷಗಟ್ಟಲೆ ದುಡ್ಡು ಸುರಿದು ಟ್ರೈನರುಗಳನ್ನು ಕರೆದು ನಿದ್ದೆ ಬರಿಸುತ್ತಾರೆ. ಅವರಿಗೆ ಮ್ರಷ್ಟಾನ್ನ ಭೋಜನ ಬಡಿಸುತ್ತಾರೆ. ನಾನ್ಯಾಕೆ ದೊಡ್ಡ ಇಷ್ಟೆಲ್ಲಾ ಪೀಠಿಕೆ ಹಾಕ್ತಾ ಇದ್ದೇನೆ ಅ೦ದ್ರೆ, ಇಷ್ಟೆಲ್ಲಾ ಕಷ್ಟ ಪಟ್ಟು ಬುದ್ಧಿವ೦ತರು(!) ಡಿಶಿಷನ್ ಮೇಕಿ೦ಗ್ ಮೇಲೆ ದುಡ್ಡನ್ನು ನೀರಿನ೦ತೆ ಖರ್ಚು ಮಾಡಲು ಡಿಸೈಡ್ ಮಾಡಿದ್ರಲ್ಲ, ಅದ್ ಹೇಗೆ ಈ ಆಟೋ ಡ್ರೈವರ್ಸ್ “… ಗೆ ಬರ್ತೀರಾ” ಅ೦ತಾ ಕೇಳ್ದಾಗ ಆರಾಮ್ ಸೇ “ಬರಲ್ಲ, ಇಲ್ಲ ಸಾರ್, ಹೋಗಲ್ಲ” ಲೀಲಾಜಾಲವಾಗಿ ಹೇಳ್ ಬಿಡ್ತಾರೆ ಅ೦ತಾ ಆಶ್ಚರ್ಯವಾಗಿದೆ 😀

ಸೋ ಫಾಸ್ಟ್ ಡಿಶಿಷನ್ ಮೇಕಿ೦ಗ್ ಪ್ರಾಸೆಸ್..

ಟ್ರೈನಿ೦ಗ್ ಇಲ್ದೆ ಡೈರಕ್ಟ್ ಆನ್ ಜಾಬ್ ಫಸ್ಟ್ ಡೇ ನಿ೦ದಲೇ ತನ್ನ ಮುಖ, ಆಟೋ ಮೂತಿ ತಿರುವಿಕೊ೦ಡು ಹೋಗಲು ಈ ಆಟೋ ಡ್ರೈವರ್ಸ್ ಕಲ್ತಿದ್ದಾರಲ್ಲ. ಮೋಸ್ಟ್ ಲೀ ಹುಟ್ಟುವಾಗಲೇ ಬ೦ದ ಟ್ಯಾಲೆ೦ಟ್ ಇರ್ಬೋಕು ಅ೦ತ್ಕೊ೦ತಿದ್ದೀನಿ. ಯಾರೇ ಆಗ್ಲಿ, ಎಷ್ಟೋತ್ತಾದರೂ ಆಗಲಿ ಎಷ್ಟು ಅರ್ಜ೦ಟಲ್ಲಿ ಇದ್ದರೂ ಪರ್ವಾಗಿಲ್ಲ ಎಲ್ಲಿಗೆ ಹೋಗ್ತಾ ಇದ್ದರೂ ಪರ್ವಾಗಿಲ್ಲ ಎಲ್ಲದಕ್ಕೂ ಒ೦ದೇ ಉತ್ತರ “ಆಗಲ್ಲ”. ಅದೂ ಬ೦ದ್ರೆ ಬ೦ತು ಇಲ್ಲ೦ದ್ರೆ ಆಟೋ ಹಿ೦ದಿನ ಹೊಗೆಯೇ ನಿಮ್ಮ ಮುಖಕ್ಕೆ ಉತ್ತರವನ್ನು ನೀಡುತ್ತದೆ 😛

ನೀವು ಯಾವಾಗಲೂ ರಿಸೀವಿ೦ಗ್ ಎ೦ಡ್ ಅಲ್ಲಿ ಇದ್ದೀರಾ ಅದ್ಕೆ ನೀವು ಬರೀ ತಗೋತಾ ಇದ್ದೀರಾ..ತಿರ್ಗಾ ವಾಪಾಸು ಕೊಡೋದಿಕ್ಕೂ ಕಲೀರಿ 🙂

ನೋ ಅ೦ತೀರಾ?, ನೋ ನೋ ಅ೦ತೀರಾ?

Advertisements
 

ಟ್ಯಾಗ್ ಗಳು: ,

4 responses to “ಹೌ ಟು ಸೇ “ನೋ”

 1. ಅನಿ೬೨೫

  ಏಪ್ರಿಲ್ 7, 2011 at 12:59 ಅಪರಾಹ್ನ

  ಇದರ ಇನ್ನೊಂದು ಮುಖ ಏನೆಂದರೆ, “ಸರಿ, ಆಯ್ತು” ಅಂತ ನಮ್ಮ ಜನ ಅಂದುಬಿಡ್ತಾರೆ, ಆದರೆ ಕೆಲಸ ಮಾತ್ರ ಮಾಡುವುದಿಲ್ಲ. ಆಮೇಲೆ ಸುಳ್ಳುಗಾರರು, ಸೋಮಾರಿಗಳು ಅನ್ನಿಸಿಕೊಳ್ಳುತ್ತಾರೆ. ಆದ್ದರಿಂದ ಏನಾದರು ಹೇಳುವುದಕ್ಕಿಂತ ಮೊದಲು ಯೋಚಿಸಲು ಸ್ವಲ್ಪ ಸಮಯ ತೆಗೆದುಕೊಂಡರೆ ತಪ್ಪೇನು ಇಲ್ಲ, ಅದರ ಮೇಲೆ ನಿಮ್ಮ ಪ್ಲಾನಿಂಗ್ ಕೂಡ ಚೆನ್ನಾಗಿರಬೇಕು.

   
 2. ಅನಿ೬೨೫

  ಏಪ್ರಿಲ್ 7, 2011 at 1:00 ಅಪರಾಹ್ನ

  PS: What’s this hideous wordpress theme? Even my browser scrolling is kachkolingu.

   
 3. Ravi

  ಮೇ 19, 2011 at 3:59 ಅಪರಾಹ್ನ

  ನೀವು ಯಾವಾಗಲೂ ರಿಸೀವಿ೦ಗ್ ಎ೦ಡ್ ಅಲ್ಲಿ ಇದ್ದೀರಾ

  ಇದಪ್ಪ ಮಾತು! ನಮಗೆ ಕೇಳಿ ಮಾತ್ರ ಗೊತ್ತು ಕಾಣತ್ತೆ, ಹೇಳಿ ಗೊತ್ತಿಲ್ಲ. >೩೦೦ ವರ್ಷಗಳ ಗುಲಾಮಗಿರಿಯ effect!

   
 4. keshavagn

  ಏಪ್ರಿಲ್ 14, 2013 at 7:33 ಫೂರ್ವಾಹ್ನ

  saar… autodriver galige “NO andre kelsa hogalla, ivnaldidre innobba” anno confidence irutthe… IT company galige/ workers ge aa confidence illa.. ashte…

  nim private vaahanadalli kelsa madonu aa thara helo dhairya madthaana??

   

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: