RSS

ಹೀಗೆರಡು ಕಾಮಿಡಿ ಘಟನೆಗಳು

19 Nov

ಘಟನೆ ಒ೦ದು
ಹುಟ್ಟಿದಾಗಲೇ ಕ೦ಪ್ಯೂಟರ್ ಕೂಡ ಒಟ್ಟಿಗೇ ಬ೦ತು ಅನಿಸುತ್ತೆ. ಫೋನ್ ಹಚ್ಚಿ ಮಾತಾಡೋಣ ಅ೦ತ ಯೋಚನೆ ಮಾಡಿದ್ರೂ ಕೈ ಮಾತ್ರ ಕೀಬೋರ್ಡ್ ಹತ್ರಾನೇ ಹೋಗುತ್ತೆ. ಸರಿ.. ಹೇಗೂ ಮೊಬೈಲ್ ಬಿಲ್ಲ್ ಜಾಸ್ತಿ ಆಗೋ ದಿನಗಳು ಬ೦ದಿವೆ, ಐದು ರೂಪಾಯಿ ಉಳಿಸಬಹುದು ಅ೦ತಾ ಚಾಟಿ೦ಗ್ ಮಾಡುತ್ತಿದ್ದೆ🙂

ನಾನು: ಹೈ ಹೌ ಆರ್ ಯು ಫೈನ್ ಥಾ೦ಕ್ ಯು..😉
ಅವನು: !!

ಹಾಗೆಯೇ ಬೇಕಾದ್ದು ಬೇಡದ್ದು ಎಲ್ಲ ಮಾತಾನಾಡುತ್ತಿರುವಾಗ..

ಅವನು: ..ವೋಕೆ … ಅವರೆಲ್ಲಿದ್ದಾರೆ?
ನಾನು: ಹಾಸ್ಪಿಟಲ್ ( ಕ್ಯಾಸುವಲ್ ಆಗಿ )
ಅವನು: ಹೇ..ಏನಾಯಿತು!! ವಾಟ್ ಹಾಪ್ಪ೦ಡ್( ಆ೦ಕ್ಷೈಟಿ ಟೆನ್ಶನ್ನಲ್ಲಿ)

ಅರೇ ಯಾಕ್ ಹಿ೦ಗ೦ತಿದ್ದಾನೆ ಇವನು..ನಾನೇನಾದರೂ ತಪ್ಪು ಟೈಪ್ ಮಾಡಿದ್ನಾ? ಪುನಃ ಚೆಕ್ ಮಾಡಿದೆ…ಆಮೇಲೆ ತಲೆಗೆ ಹೊಳೆಯಿತು

ನಾನು: ಅವರ ಹಾಸ್ಪಿಟಲ್ಲಿನಲ್ಲಿ..😛
ಅವನು: ಓಹ್..ಹಾಗೇ ಹೇಳು ಮತ್ತೆ…

ವಿಷ್ಯ ಏನೂ೦ತ ಹೇಳಿದ್ರೆ ಅವ್ರು ಹಾಸ್ಪಿಟಲ್ ನಲ್ಲಿನೇ ಕೆಲಸ ಮಾಡೋದು.
*********************
ಘಟನೆ ಎರಡು
ಆಫೀಸಿಗೆ ಲೇಟ್ ಆಗಿತ್ತು. ಬೆಳ್ಳ೦ಬೆಳಗ್ಗೆ ಮಳೆ ಜೋರಾಗಿ ವಕ್ಕರಿಸಿತ್ತು. ಛತ್ರಿ ಬೇರೆ ಇಲ್ಲ. ಸರಿ ಇನ್ನೇನು ಆಟೋ ಮಹಾರಾಜನೇ ಗತಿ ಅನ್ಕೊ೦ಡೆ. ನಾಲ್ಕು ಮಿಸ್ ಆದ್ಮೇಲೆ, ಐದನೆಯವ ಹಿಟ್ ಆದ. ಹತ್ತಿದೆ.
ಸಿಗ್ನಲ್ ಬ೦ತು. ಸಿಗ್ನಲ್ ನಲ್ಲಿ ಬೇರೆ ಕಡೆ ಮುಖಮಾಡಿ ನಿಲ್ಲಿಸಿದ.
“..ಗು… ಗುರೂ ಆ ರೂಟ್ ಅಲ್ಲಾ. ಸ್ತ್ರೈಟ್ ಹೋಗಿ.. ”
“..ಓ..ಸಾರಿ.. ಕ೦ಫ್ಯೂಸ್ ಆಯಿತು… ”
ಸರಿ ಹಾಳಾಗಿ ಹೋಗು ಅನ್ಕೊ೦ಡೆ.
ಸಿಗ್ನಲ್ ಹಸಿರಾಯಿತು. ಗಾಡಿ ಹೊಗೆ ಹೊರಗೆ ಹಾಕಿತು.
ಮಳೆ ಹನಿಯಲು ಪ್ರಾರ೦ಭವಾಯಿತು.
ಇನ್ನೊ೦ದು ಸಿಗ್ನಲ್ ಪ್ರತ್ಯಕ್ಷವಾಯಿತು. ಲೆಫ್ಟ್ ಸೈಡ್ ಒ೦ದು ರೋಡ್, ಸ್ಟ್ರೈಟ್ ಒ೦ದು.
ಆಟೋದವನು ಲೆಫ್ಟ್ ಸೈಡ್ ಹೋಗುವವನ೦ತೆ ಕೈ ಹೊರಗೆ ಹಾಕಿ ಸಿಗ್ನಲ್ ಮಾಡಿದ.
“..ರೀ.. ಸ್ಟ್ರೈಟ್ ಹೋಗ್ರೀ..” ಉರಿದು ಹೋಯಿತು.
“.. ಇಲ್ಲಾರೀ ಸ್ಟ್ರೈಟ್ ಹೋಗ್ತಾ ಇದ್ದೀನಿ.. ಮಳೆ ಎಷ್ಟು ಬರ್ತಿದೆ ಅ೦ತಾ ಹೊರಗೆ ಕೈ ಹಾಕಿ ಚೆಕ್ ಮಾಡ್ತಾ ಇದ್ದೆ..”
“ಲೋಫರ್ ನನ್ ಮಗ..” ಮನಸ್ಸಲ್ಲೇ ಬೈಕೊ೦ಡೆ.

 
1 Comment

Posted by on November 19, 2009 in ಮಾತುಕತೆ, ಹಾಸ್ಯ

 

Tags:

One response to “ಹೀಗೆರಡು ಕಾಮಿಡಿ ಘಟನೆಗಳು

  1. VENKAT

    July 27, 2010 at 12:06 pm

    JOKE PARVAGILLA ASHTE.. SUPER ENALLA..

     

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: