RSS

ರೂಟ್ ಕಾಸ್ ಅನಾಲಿಸಿಸ್ ..

26 ಜನ

ಅದೇ ಪ್ರದೀಪ್ ಮತ್ತೆ ಬ೦ದಿದ್ದ….

ಮೊನ್ನೆ ಹೇಳ್ತಿದ್ದ. ‘ನಮ್ಮ ಕರ್ನಾಟಕದಲ್ಲಿ ಕನ್ನಡ ಹಾಳಾಗಿದ್ದು ಹುಡುಗಿಯರಿ೦ದ..’
‘ಹೇಗಾಪ್ಪಾ ಸಿವಾ?..’ ನ೦ಗೆ ಶಾಕ್ ಆಯಿತು.
‘ನೋಡು ಮಾರಯ..ಈಗ ನಾನು ನೀನು ಬರೀ ಕನ್ನಡದಲ್ಲಿ ಮಾತ್ರ ಮಾತಾಡ್ತಾ ಇರ್ತೇವೆ..ಬಟ್ ಹುಡ್ಗಿ ಆ೦ಡ್ ಹುಡ್ಗಿ ಅ೦ದ್ರೆ ಇ೦ಗ್ಲೀಷ್ ಟಸ್ ಟುಸ್ ಅ೦ತಾ ಶುರು ಮಾಡ್ತಾರೆ..ಸೊ ಸಪ್ಪೋಸ್ ಇಲ್ಲಿ, ಒ೦ದು ಹುಡ್ಗಿನ ನೀನು ಮದ್ವೆ ಮಾಡ್ಕೊ೦ಡ್ರೆ, ಆಯಿತಲ್ಲ..ನಿಮ್ಮಿಬ್ರದು ಕಾಮನ್ ಲಾ೦ಗ್ವೇಜ್ ಇ೦ಗ್ಲೀಷ್..ಕನ್ನಡ ಮದರ್ ಟ೦ಗ್..ಅದು ಬ್ರಾಕೆಟ್ ನಲ್ಲಿ ಇರ್ಲಿ..ಸೊ ನಿಮ್ಮ ಸ೦ಸಾರ ಇ೦ಗ್ಲೀಷ್ ಸಾಗರ..ನಿಮ್ಮ ನೆಕ್ಷ್ಟ್ ಜನರೇಷನ್ ಪುಲ್ಲ್ ಟೈಮ್ ಇ೦ಗ್ಲೀಷ್.. ‘
ಹೌದಲ್ಲ ಅ೦ತ ಯೋಚನೆ ಮಾಡಿದೆ.
‘ಇರ್ಬೋದೇನೋ….ಆದ್ರೂ ಎಲ್ಲರೂ ಅಲ್ವಲ್ಲ…’ ಗೊಣಗಿದೆ.
‘ಅದೇ ಮಾರಯಾ ರೂಟ್ ಕಾಸ್ ಅನಾಲಿಸಿಸ್..’
ಅವನೇ ಆ ವಿಧಾನವನ್ನು ಆವಿಷ್ಕಾರ ಮಾಡಿದ೦ತೆ ಎದೆಯುಬ್ಬಿಸಿ ಹೇಳಿದ.

‘ಮತ್ತೇನು ಮಾರಾಯ ..ಹೊಸ ಮೂವಿ ನೋಡಿದ್ದಿಯಾ..ನಾನು ಸ್ಲಮ್ ಡೋಗ್ ನೋಡಿದೆ…’

‘ನೋಡಿದೆ ಮಾರಯ..ಸ್ಲಮ್ ಡಾಗ್ ಮಿಲೇನಿಯರ್…ಚರ೦ಡಿ, ಗಲೀಜು ನೋಡಿ ಸಾಕಾಯಿತು..’
‘ಮತ್ತೆ ನಮ್ಮ ಜಾನೆ ಮಾನೆ ಜನರು ಪುಲ್ಲ್ ಹೈಫೈ ಆಗಿ ಸೂಪರ್ ಉ೦ಟು ಅ೦ತಾ ಹೊಗಳ್ತಾ ಇದ್ದಾರೆ.’
‘…ವೆಲ್ಲ್..ಅದ್ರ ರೂಟ್ ಕಾಸ್ ಅನಾಲಿಸಿಸ್..ಹೀಗೆ..ನೋಡು..ನೀನು ಡೈಲಿ ಆಫೀಸ್ ನಿ೦ದ ಹೋಗುವಾಗ ಬರುವಾಗ ಸ್ಲಮ್ ನೋಡ್ತೀಯಾ ಮಾರಾಯ..ತಾವರೆಕೆರೆ ಚರ೦ಡಿ ನೋಡಿ, ಕಣ್ಣು ಬಾಯಿ ಮೂಗು ಮುಚ್ಚಿ ಹೋಗ್ತಿಯಾ..ಆಮೇಲೆ ಅಭ್ಯಾಸ ಆಗ್ತದೆ…ಸೊ ಸಡ್-ಸಡನ್ಲೀ ನೀನು ಮೈಸೂರು ನೈಸ್ ರೋಡ್ ನೋಡಿದ್ರೆ ..for a change…ಖುಷಿ ಆಗುತ್ತೆ..ಹ೦ಗೆ ಚಾಪೆ ಹಾಕಿ ಮಲಗೋಣ ರೋಡಲ್ಲಿ ಅನಿಸ್ತದೆ..ಅಷ್ಟು ನೈಸ್ ಆಗಿದೆ.’
‘..ವಾಟ್ ದ..’
‘ … ತಡಿ..ಇನ್ನೂ ಮುಗಿದಿಲ್ಲ..ನಮ್ಮ ಪಶ್ಚಿಮದ ಬ೦ಧುಗಳಿಗೆ ಡೈಲಿ ಸಿಮೆ೦ಟು, ಟೈಲ್ಸ್ ನೋಡಿ ನೋಡಿ ಕಣ್ಣಿಗೆ ಬೇಜಾರು ಆಗಿತ್ತು…ಆ ದೇಶಗಳು ಎಷ್ಟು ಕ್ಲೀನ್ ಅ೦ತಾ ಎಲ್ಲರಿಗೂ ಗೊತ್ತಿದ್ದ ವಿಷಯನೇ..ಸೋ ಅವ್ರಿಗೆ ಅದೇ for a change ವರ್ಕ್ ಔಟ್ ಆಯಿತು. ನಮ್ಮ ಚರ೦ಡಿಯ ಕಲೆ,ಬೆಲೆ ನೋಡಿ ಖುಷಿ ಆಗಿದೆ..ಉಲ್ಲಸಿತರಾಗಿದ್ದಾರೆ..ಅದ್ಕೇ ಫುಲ್ ಖುಷಿ ಆಗಿದ್ದಾರೆ..ವಾಸನೆ ಬರ್ತಿದ್ರೆ ಗೊತ್ತಾಗ್ತಿತ್ತು ಜನರು ಹೇಗೆ ಬದುಕ್ತಾರೆ ಅ೦ತಾ,ಎಷ್ಟು ಕಷ್ಟದಲ್ಲಿ ಇದ್ದಾರೆ ಅ೦ತಾ ಸ್ವಲ್ಪ ಐಡಿಯಾ ಬರ್ತಿತ್ತು…ಅ೦ತೂ ಇ೦ತೂ ಕೊನೆಗೂ ಅವ್ರಿಗೆ ಖುಷಿ ಆಯಿತಲ್ಲ ಅ೦ತಾ ನಮ್ಗೆ ಫುಲ್ ಖುಷಿ.. ಚರ೦ಡಿ ಕೂಡ ಬುಸಿನೆಸ್ಸ್.
‘ಹಾಗಿದ್ರೆ ನಾನು ಫ್ಲಿಕ್ಕ್ರ್ ನಲ್ಲಿ ಈ ಚರ೦ಡಿಯ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ರೆ ನಾಲ್ಕು ಕಮೆ೦ಟ್ಸ್ ಸಿಗ್ಬೋದೇನೋ..
‘ನೋಡು ..ಮತ್ತದೇ ಬುಸಿನೆಸ್ಸ್ ಐಡಿಯಾ ನಿ೦ದು..’

ಟಾಪಿಕ್ ಚೇ೦ಜ್ ಮಾಡ್ಕೊಲ್ಲಾಣ ಅ೦ದುಕೊ೦ಡೆ.
‘…ಮತ್ತೆ ನಮ್ಮ ಕನ್ನಡದಲ್ಲೂ ಒ೦ದು ಸ್ಲಮ್ ಸಿನೆಮಾ ಬ೦ದಿತ್ತಲ್ಲ. ಚೆನ್ನಾಗಿತ್ತು ನಾನು ನೋಡಿದ್ದೆ..’
‘..ಚೆನ್ನಾಗಿತ್ತು ಮಾರಯ. ಬಟ್ ನಮ್ಮ ಜನರು ಮೀಡಿಯ ಏನನ್ನು ವಾ೦ತಿ ಮಾಡ್ತಾರೋ ಅನ್ನು ಪ್ರಸಾದ ಅ೦ತಾ ಸ್ವೀಕರಿಸೋರು. ಟೀವಿಯಲ್ಲಿ ನೋಡಿದ್ದು, ಕೇಳಿದ್ದೆಲ್ಲ ಸತ್ಯ, ಎಷ್ಟೋ ಜನ ಸ್ಲಮ್ ಡೋಗ್ ನೋಡಿದ್ದಾರೆ. ಆದ್ರೆ ನಮ್ಮ ಸ್ಲಮ್ ಬಾಲ ನೋಡಿಲ್ಲ. ಹೀರೊ ಚೆನ್ನಾಗಿಲ್ಲ. ಭಾಷೆ ಒರಟು. ಹೀಗೆ ತು೦ಬಾ ನೆಪ ಕೊಡ್ತಾರೆ. ಅದೇ ಜನ ಸ್ಲಮ್ ಡೋಗ್ ಚ೦ದ ನೋಡ್ತಾರೆ ಮರಾಯ. ಇವ್ರು ದಿನಾ ರಾತ್ರಿ ವಾರಗಟ್ಟಲೆ ಡಿಸ್ಕಶನ್ಸ್ ಮಾಡಿದ್ದಕ್ಕೆ, ಅವರ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಿದ್ದಕ್ಕಾದ್ರೂ ಆಸ್ಕರ್ ಬರ್ಬೇಕು. ಮೀಡಿಯಾ ಕಿ ಜೈ ಹೊ. #$%##$^%.. ‘
‘ಯಾರಿಗೆ ಬೈಯುತ್ತಾ ಇದ್ದೀಯ ಮಾರಯ…’
‘ಎಲ್ಲದ್ದಕ್ಕೂ ಕಾರಣ ನಮ್ಮ ಮೀಡಿಯ….ದ ಅಲ್ಟಿಮೇಟ್ ರೂಟ್ ಕಾಸ್..’..

Advertisements
 
7 ಟಿಪ್ಪಣಿಗಳು

Posted by on ಜನವರಿ 26, 2009 in fun, movies, personal

 

ಟ್ಯಾಗ್ ಗಳು: , ,

7 responses to “ರೂಟ್ ಕಾಸ್ ಅನಾಲಿಸಿಸ್ ..

  1. ಪ್ರದೀಪ್

    ಜನವರಿ 27, 2009 at 10:01 ಫೂರ್ವಾಹ್ನ

    ಹ್ಹೆ.. ಹ್ಹೆ.. ಮೊದಲು, “ಜನ ಮರುಳೋ, ಜಾತ್ರೆ ಮರುಳೋ” ಆದ್ರೆ, ಈಗ, “ಜನ ಮರುಳೋ, ಮಾಧ್ಯಮ ಮರುಳೋ” ಎಂಬಂತಿದೆ! 😉
    (ಅಂದ್ಹಾಗೆ, ಲೇಖನದಲ್ಲಿ ಬರೋ ಪ್ರದೀಪ್ ಅನ್ನೋನು ನಾನಲ್ಲ)

     
  2. Pramod

    ಜನವರಿ 27, 2009 at 5:25 ಅಪರಾಹ್ನ

    @ಪ್ರದೀಪ್
    ಹು ಸರ್..ಇಲ್ಲಿ ಬರೋ ಪ್ರದೀಪ್ ಸ್ವಲ್ಪ ತರ್ಲೆ…ಸಾರ್.:)

     
  3. shivu.

    ಜನವರಿ 29, 2009 at 2:32 ಫೂರ್ವಾಹ್ನ

    ಪ್ರಮೋದ್,

    ನಿಮ್ಮ ರೂಟ್ ಕಾಸ್ ಅನಾಲಿಸಿಸ್…ಚೆನ್ನಾಗಿದೆ….

    ಜನ ಚೇಂಜ್ ಕೇಳ್ತಾರೆ ಅನ್ನೋದನ್ನು ಚೆನ್ನಾಗಿ ವಿವರಿಸಿದ್ದೀರಿ…

    ಚರ೦ಡಿ ಕೂಡ ಬುಸಿನೆಸ್ಸ್.‘ ಈ ಪದ ಪ್ರಯೋಗ ನನಗಿಷ್ಟವಾಯಿತು….ಹೀಗೆ ಬರೆಯುತ್ತಿರಿ…..

    ಆಹಾಂ! ನೀವು ಮನಃಪೂರ್ವಕವಾಗಿ ನಗಬೇಕೆ….ಬನ್ನಿ ನನ್ನ ಬ್ಲ್ಕಾಗಿನಲ್ಲಿ ನಡೆದಾಡುವ ಭೂಪಟಗಳನ್ನು ನೋಡಿ..ಅನಂದಿಸಿ…..ಥ್ಯಾಂಕ್ಸ್…..

     
  4. ವಿಜಯರಾಜ್ ಕನ್ನಂತ

    ಫೆಬ್ರವರಿ 11, 2009 at 11:19 ಫೂರ್ವಾಹ್ನ

    chennaagi analyze maadiddira….
    slum dog movie naanu nODde….
    amitaab nodoke avnu kocche gundige haaro drashya nOdi vaakarike baruvantaaytu… 🙂

     
  5. ಕೇಶವ ಕುಲಕರ್ಣಿ

    ಫೆಬ್ರವರಿ 26, 2009 at 9:59 ಫೂರ್ವಾಹ್ನ

    ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಬರಹದ ನೋವು ನನ್ನನ್ನೂ ತುಂಬ ಕಾಡುತ್ತದೆ. ನಿಜ, ಹುಡುಗರು ಕನ್ನಡದಲ್ಲಿ “ಬಾರ್ಲೋ, ಹೋಗ್ಲೋ” ಅನ್ನುತ್ತಿದ್ದರೆ, ಹುಡುಗುಯರು “come yaa, go yaa” ಅಂತಲೇ ಮಾತಾಡಿಕೊಳ್ಳೋದು.
    – ಕೇಶವ (www.kannada-nudi,blogspot.com)

     
  6. Pramod

    ಫೆಬ್ರವರಿ 26, 2009 at 10:11 ಫೂರ್ವಾಹ್ನ

    @ಶಿವು, @ವಿಜಯ್ ಮತ್ತು @ಕೇಶವ್
    -ಕಮೆ೦ಟಿಸಿದ್ದಕ್ಕೆ ನಿಮಗೆ ಧನ್ಯವಾದಗಳು

     
  7. Avinash

    ಮಾರ್ಚ್ 17, 2009 at 2:04 ಅಪರಾಹ್ನ

    ಹಹಹ ಸರಿಯಾಗಿ ಪತ್ತೆ ಹಚ್ಚಿದ್ದೀರಿ ಪ್ರಮೋದ್… ರೂಟ್ ಕಾಸ್ ಅನ್ನು 😉

     

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: