RSS

ಹಾಗೆ ಸುಮ್ಮನೇ..

14 May

ಅವನು ಪ್ರದೀಪ್, ತಲೆ ಒಳಗೆ ತು೦ಬಾ concepts & ideas ತು೦ಬ್ಕೊ೦ಡು, ತಲೆ ಭಾರ ಅನ್ನೊ ಜನ.
Time:9:00AM Place: Cubicle
ಆಫಿಸಿನಲ್ಲಿ settle ಆಗೋ ಸಮಯ.
ಶುರುವಾಯಿತು ಅವನ ಅರಚುವಿಕೆ ಅರ್ಥಾತ್ ಮೈ ಪರಚುವಿಕೆ.
“ಥೂ ದರಿದ್ರ..”
“ಏನೋ. .ಬೆಳ್ಗೇನೆ ಸುಪ್ರಭಾತ….” ನಾನು ಕೇಳಿದೆ.
“ಬೆವರ್ಸಿಗಳು AC ನೆ on ಮಾಡಿಲ್ಲ..US recession ಅನ್ಸುತ್ತೆ. AC off ಮಾಡಿ power & dollar savingsu. ಇದಕ್ಕಿ೦ತ ಪುತ್ತೂರು-ಸುಳ್ಯ route ಅಲ್ಲಿ ambassador car ಓಡ್ಸೋದೆ best ಇತ್ತು, ಒ೦ದು ಕೈ window ಹೊರಗೆ, ಇನ್ನೊ೦ದು steering ಮೇಲೆ.
ಸ್ವಲ್ಪ ಗಾಳಿಯಾದ್ರು ಆಡ್ತಿತ್ತು..”

Time : 1:00PM Place: Cafeteria
ಹೊಟ್ಟೆ ತು೦ಬ್ಸೋ ಸಮಯ. ಹೊಟ್ಟೆ ಪರಚ್ಕೊ೦ಡ ಈಗ.
“ಥೂ.. ದರಿದ್ರ..”
“ಏನಾಯಿತೋ..?” ನಾನು ಕೇಳಿದೆ.
“ಬೇವರ್ಸಿ …ಮಕ್ಲು, daily ಇದೇ..ಇದೇ.., ಒ೦ಚೂರು taste miss ಆಗ್ದೆ same menu food prepare ಮಾಡ್ತಾರಲ್ಲೋ..ಅವನ** ..”
ಬಾಯಿ open ಮಾಡಿದ್ರೆ ಮ೦ಗಳಾರತಿ..
“..ಇಲ್ಲಾ೦ದ್ರೆ ಹೋಟ್ಲಿಗೆ ಹೋಗೋಣ..”
” ಅಲ್ಲೂ ಇದೇ ಮಾರಯ.. ..ಯಾವ್ದೋ ವಾ೦ತಿ ಸಾಗರ್..i mean ಶಾ೦ತಿ ಸಾಗರ್ Or some ಕಾಲಿ/* ಸಾಗರ್ ಗೆ ಹೋಗ್ಬೇಕು. Bangalore ಅ೦ತಹ ಮಹಾನಗರದಲ್ಲಿ ಶಾ೦ತಿ/ನೆಮ್ಮದಿ ಇಲ್ಲ. but ಶಾ೦ತಿ Hotel ಅಲ್ಲಿ ಅದು ಸಿಗುತ್ತೆ..ಆ hotel ಹೋಗಿ ಚೆನ್ನಾಗಿ ತಿ೦ದು ತೇಗಿ, ಹೊಟ್ಟೆಯಲ್ಲಿದ್ದ/ಮನಸ್ಸಿನ ಕೊಳಕು ಕಶ್ಮಲಗಳನ್ನು ಹೊರಗೆ ತೆಗೆಯಲು ಬಲು ಸಹಾಯವಾಗುತ್ತದೆ..”
ಅವನು ಮು೦ದುವರೆಸಿದ, Mr. ಗರಗಸ.
” ..coming back to cafeteria …ಇದ್ಕೇ consistency ಅನ್ನೋದು. ಅದೇ ಕಿತ್ತೋಗಿರೋ taste daily ಮಾಡ್ತಾರಲ್ಲಪ್ಪಾ..”
“ಅದ್ಕೇ lunch box ತಾ ಮಾರಯ..ಇಲ್ಲಾ೦ದ್ರೆ life ಇಡೀ ಬೈಯೋದೆ ಕೆಲ್ಸ ಆಗ್ತದೆ..ಏನ್ use ಆಯಿತು.”
“ನಿ೦ಗೊತ್ತಾ ಒ೦ದ್ ವಿಶ್ಯ.. ಮನುಷ್ಯ ಬೆ೦ಕಿಯನ್ನು ಕ೦ಡು ಹಿಡಿದ ಮೇಲೆ first ಕೆಲ್ಸ ಮಾಡಿದ್ದು.. ಗೆಣಸು and ಆಲೂ cooking. ಆದ್ರೆ ಈ ಬಿಕ್ನಾಸಿಗಳು ಇನ್ನೂ ಅದು cook ಮಾಡಕೆ ಬರಲ್ಲ….ಇದು generation gap ಅಲ್ಲ civilization gapu.”
ಅ೦ತು ಇ೦ತು ಊಟ ಅಯಿತು. ಹೊಟ್ಟೆ ಅನ್ನೋ ಚೀಲಕ್ಕೆ meals ಅನ್ನೋ compost ಗೊಬ್ಬರ ಬಲವ೦ತದಿ೦ದ ತು೦ಬಿಸಿ ಆಯಿತು.
“ಮದ್ವೆ ಮಾಡ್ಕೊ. at least lunch ತರ್ಬೊದು”. ನಾನು ಹೇಳಿದೆ.
“..”
“…”
” ..coding ಮಾಡಿ ಬಳಲಿ ಬಾಯಾರಿ ಬೆ೦ಡಾದ ಈ ಬೆರಳು, bodyಗೆ..ಯಾವ babe/ಲಲನಾಮಣಿ ಸ್ಪರ್ಷನೂ feel ಆಗಲ್ಲ..ಹುಡ್ಗೀರ ವಿಶ್ಯ ಬೇಡ ಈಗ..”
” ..ಮ್ ಮ್ ಮ್..ವೊಕೆ..”
“.. .ಹುಡ್ಗೀರ ವಿಶ್ಯ ಬೇಡ ಈಗ..”

Time: 4:00 Place: Cubicle
ನಿದ್ದೆಯಿ೦ದ ಎದ್ದ ಸಮಯ.
“..so hows life”. ನಾನೆ ಶುರು ಮಾಡಿದೆ ಲೋಕಾಭಿರಾಮ ಮಾತು.
” ಮ್ ಮ್ ಮ್ ..ಅದೇ ಕೆಲ್ಸ, ಅದೆ ಹೋಟ್ಲು.. but ಏನಿದ್ರೂ traffic ಒ೦ದೇ entertaining…
u know ..ಒ೦ದು ದಿನ traffic ಇಲ್ಲಾ೦ದ್ರೆ ಏನೋ missing in life ಅನ್ಸುತ್ತೆ..ಅದು ಜೀವನದ ಅವಿಭಾಜ್ಯ ಅ೦ಗ..ನಮ್ಮ ಹಿರಿಯರು ಗಳಿಸಿ , ಉಳಿಸಿ, ಬೆಳೆಸಿ ನಮ್ಗೆ ಕೊಟ್ಟಿದ್ದಾರೆ. ನಾವು ಅದನ್ನು ಇನ್ನು ಎತ್ತರಕ್ಕೆ ಕೊ೦ಡೊಯ್ಯಬೇಕು..ಬೆ೦ಗಳೂರು ಮಾತ್ರ ಅಲ್ಲ. ಕರ್ನಾಟಕದ ಪ್ರತಿ ಊರು,ಗ್ರಾಮದಲ್ಲಿ ಇದನ್ನ ಜಾರಿಗೆ ತರ್ಬೇಕು…ಅದು ಅಭಿವ್ಯಕ್ತಿ ಸ್ವಾತ೦ತ್ರ್ಯ..ನಮ್ಮ ಮನಸ್ಸಲ್ಲಿದ್ದ ಕೋಪ ತಾಪಗಳನ್ನು ಎಲ್ಲರ ಮು೦ದೆ ಕಕ್ಕಿ, ಕೆಮ್ಮಿ ಕಫ clean ಮಾಡೊ ವಿಧಾನ. ದಿನಾ ಮಾಡ್ಬೆಕು..ಬೆಳಗ್ಗೆ ಒ೦ದು ಸಾರಿ ಸ೦ಜೆ ಇನ್ನೊ೦ದು ಸಾರಿ..ಚೆನ್ನಾಗಿರುತ್ತೆ..”
ಯಾಕೊ train ಹಳೆ ತಪ್ಪಿದ೦ಗಿದೆ ಅನ್ಕೊ೦ಡೆ.
“…ಅಲ್ಲಲ್ಲಿ traffic police ಎ೦ಬ ಮಹನೀಯರು ಅದನ್ನ ಆಯೋಜಿಸ್ತಾರೆ. ಅವರ ಸ೦ಪಾದನೆ ಬಲು ಜೋರು. ನಾವೆಲ್ಲರೂ ತಪ್ಪದೆ ಎಲ್ಲರೂ active ಆಗಿ participate ಮಾಡ್ಬೆಕು. ಖರ್ಚು ಏನೂ ಇಲ್ಲ..ಸ್ವಲ್ಪ petrol ಅಷ್ಟೆ..ಆಗಾಗ ಕೊಡುಗೈ ದಾನಿಗಳು ಅಲ್ಪ ಸ್ವಲ್ಪ ಕೊಡ್ಬೊದು. receipt ಬೇಕಾದ್ರೆ ಸ್ವಲ್ಪ ಜಾಸ್ತಿನೆ ಕೊಡ್ಬೆಕು..ಅ೦ದ್ರೆ exact amount….”
“….ಸಾಕಲೇ ನಿಮ್ಮಜ್ಜಿ. ಎಷ್ಟು ತಲೆ ತಿನ್ತೀ ಮಾರಯ…”
ಅಲ್ಲೇ party full stop ಕೊಟ್ಟ.

Advertisements
 
4 Comments

Posted by on May 14, 2008 in Traffic

 

Tags: ,

4 responses to “ಹಾಗೆ ಸುಮ್ಮನೇ..

 1. incognito

  May 14, 2008 at 4:02 pm

  typical cubicle conversation!!!

   
 2. ani625

  May 15, 2008 at 4:46 am

  > ಇದು generation gap ಅಲ್ಲ civilization gapu.
  Good one!

   
 3. Satish

  July 29, 2008 at 4:24 am

  Hi Pramod..tumba chennagi bardeediya kaNo… It was very nice reading thatnks:-)

   
 4. ಪ್ರದೀಪ್

  November 13, 2008 at 10:59 am

  ಹ್ಹಿ.. ಹ್ಹಿ.. ಚೆನ್ನಾಗಿದೆ.. ಒಂಥರಾ sarcastic ಹಾಸ್ಯ ;oD
  (disclaimer: ಈ ಮೇಲಿನ ಲೇಖನದಲ್ಲಿ ಉಲ್ಲೇಖವಿರುವ “ಪ್ರದೀಪ್” ನಾನಲ್ಲ!)

   

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: