ಕೇವಲ ಚಿತ್ರ ಬಿಡಿಸೋ ಕಲೆ ಮಾತ್ರ ಗೊತ್ತಿದ್ರೆ ಸಾಲದು. ಸ್ವಲ್ಪ ‘ಭಾಷೆ’ ಇರ್ಬೇಕು. ಖರ್ಚಿಗೆ ಎರಡು ಅಕ್ಷರ ಬರಬೇಕು.
ಕೆಳಗಿನ ಚಿತ್ರಗಳಲ್ಲಿ ಮಿ.ಪೈ೦ಟರ್ ಕನ್ನಡದಲ್ಲಿ ಚೆನ್ನಾಗಿಯೇ ಬರೆದಿದ್ದಾನೆ. ಇ೦ಗ್ಲೀಷ್ ಮಾತ್ರ ಇನ್ನೇನೋ ಆಗಿದೆ.
ಬಹಳ ಸಲ ಇ೦ಗ್ಲೀಷ್ ಸರಿ ಬರೆದು ಕನ್ನಡದ ಕೊಲೆ ಮಾಡೋದು ಹೆಚ್ಚಿನ ಬೆ೦ಗಳೂರಿನವರ ವಾಡಿಕೆ. ಆದ್ರೆ ಇಲ್ಲೇಕೋ ಜನ ‘ಡಿಫೆರೆ೦ಟ್‘ ಆಗಿದ್ದಾರೆ.




ಅ೦ದ ಹಾಗೆ ಇವು ನನ್ನ ಗೆಳೆಯನೊಬ್ಬ ಕಳಿಸಿದ ಚಿತ್ರಗಳು.
Language is a River. Grammar is Damn. Damn it. – ಯಾರೋ ಹೇಳಿದ ನೆನಪು.



ಅಕಟಕಟ.. ಈ ಬೋರ್ಡು ಗಳು ಎಲ್ಲಿವೆ ಸಿವ? ಈ ಪೈಂಟರ್ ನ ಪಾದದ ಜೆರಾಕ್ಸ ಪ್ರತಿಗಳು ಬೇಕು ..
ಭಾಷೆಯ ಮೇಲಿನ ಹಿಡಿತ ಅತೀ ಅಗತ್ಯ ಬರೆಯುವವರಿಗೆ. ಅವರಿಗೆ ತಿಳಿಯದಿದ್ದರೆ ಬರೆಸುವವರಾದರೂ ಅತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಭಾಷೆಯ ಕಗ್ಗೊಲೆ.
nice work from your side
ಇದನ್ನು ಬರೆದವನು ಬಟ್ಲರ್ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದಾತನೆಂದು ತಿಳಿಯುತ್ತದೆ… ಪುಣ್ಯಕ್ಕೆ ಕನ್ನದವಾದರು ಸರಿಯಾಗಿದೆಯಲ್ಲ! ಬೆಂಗಳೂರಿನಲ್ಲಿ ಈ ತರಹದ ಫಲಕವೊಂದರಲ್ಲಿ ಬರೆದ ಕನ್ನಡವನ್ನು ಓದಿದರೆ, ಬರೆದವನು, ಬರೆಸಿದವನೆಲ್ಲಾದರೂ ಸಿಕ್ಕರೆ ಅದೇ ಕೆರೆಗೆ ನೂಕಿಬಿಡುತ್ತೀರಿ! ಸಧ್ಯಕ್ಕೆ ಅದರ ಚಿತ್ರವಿಲ್ಲ. ತೆಗೆದ ಮೇಲೆ ಕಳಿಸುವೆನು!!