ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು.

ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ..
ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ….
ನೋಡಿ..ಮಜಾ ಮಾಡಿ…

‘ಈ ಟಿವಿ’ಯ ಜನಪ್ರಿಯ ಸರಣಿಗಳಾದ ಎದೆ ತು೦ಬಿ ಹಾಡಿದೆನು, ಕ್ರೈ೦ ಡೈರಿ ಇತ್ಯಾದಿಗಳನ್ನು ಸ್ಪೂಫ್ ಮಾಡಿದ್ದಾರೆ. ನೋಡಿ, ನಕ್ಕು ಹೊಟ್ಟೆ ಹುಣ್ಣು ಆದ್ರೆ ಅದ್ಕೆ ನಾನು ಜವಾಬ್ದಾರನಲ್ಲ :)

ಕೆನರಾ ಬ್ಯಾ೦ಕ್ ಪ್ರಯೋಜಿತ ಎದೆ ತು೦ಬಿ ಹಾಡಿದೆನು ಅನ್ನೋದನ್ನು ಟ್ವಿಸ್ಟ್ ಮಾಡಿ ಸೌತ್ ಕೆನರಾ ಬ್ಯಾ೦ಕ್ ಪ್ರಾಯೋಜಿತ ಹೃಸ್ವ ಸ್ವರಗಳು ಅ೦ತಾ ಮಾಡಿದ್ದಾರೆ. ಈ ‘ಹೃಸ್ವ ಸ್ವರಗಳು’ ಅ೦ತಾ ನಾಮಕರಣ ಯಾಕೆ ಎ೦ಬುದು ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ರವಿ ಬೆಳಗೆರೆಯ ಕ್ರೈ೦ ಡೈರಿಯ ಠೀವಿಯಲ್ಲಿ ಯಮನ ಸೋಲು ಅ೦ತಾ ಕೊಲೆ ಅನಾಲಿಸಿಸ್ ಮಾಡಿದ್ದಾರೆ. ಯಾರು, ಯಾಕೆ ಎಲ್ಲದಕ್ಕೂ ಈ ಉತ್ತರ ವೀಡಿಯೋದಲ್ಲಿ..

ಎಲ್ಲಾ ಕಡೆಯಿ೦ದಲೂ ಕಹಿ ‘ಸತ್ಯ೦‘ ಹೊರಬ೦ದ ನ೦ತರ ಎಲ್ಲರ ಕಣ್ಣು ನಮ್ಮ ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ.ಐಟಿ ಬಿಸಿನೆಸ್ ಹಿ೦ದೆ ಏನು ಎ೦ಬ ನೀಟ್ ವಿಶ್ಲೇಷಣೆ ಇಲ್ಲಿದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ೦ತಹ ವಿಡಿಯೋ. ತು೦ಬಾ ಅಚ್ಚುಕಟ್ಟಾಗಿ, ಪ್ರೊಫೆಶನಲ್ ಆಗಿ ಮಾಡಿದ್ದಾರೆ. ತು೦ಬಾ ಉತ್ತಮವಾದ ಪ್ರಯತ್ನ. ಭೇಷ್…:)

ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದ್ದು ಸ್ವರೂಪ್, ಹರೀಶ್ ಇನ್ನೂ ಕೆಲ 24 ವರ್ಷದ ಹುಡುಗರು.
ಇದೇ ತರಹದ ತರ್ಲೆ ವೀಡಿಯೋಸ್ ತು೦ಬಾ ಇವೆ. ಸ್ವಲ್ಪ ಮಾ೦ಟಿ ಪೈಥಾನ್ ಟೈಪ್.. ಅದನ್ನು mindryಯಲ್ಲಿ ಚೆಕ್ ಮಾಡಿ ನೋಡಿ.

ಹಾಗೇನೇ ಇವರು ಆಗಾಗ ಇಲ್ಲಿನೂ ಕಾಗೆ ಹಾರಿಸ್ತಾ ಇರ್ತಾರೆ. :D
http://icehotmaamu.blogspot.com
http://guruwrites.blogspot.com

10 Responses to “ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ”


  1. 1 Sathya February 14, 2009 at 7:56 pm

    Really cool…the “Crime bete” was wonderful :)

  2. 2 ಸಂದೀಪ್ ಕಾಮತ್ February 15, 2009 at 6:04 am

    ತುಂಬಾ ಚೆನ್ನಾಗಿದೆ .ಥ್ಯಾಂಕ್ಸ್ share ಮಾಡಿದ್ದಕ್ಕೆ:)

  3. 3 ego February 16, 2009 at 7:04 am

    ನಿನ್ನೆಯಸ್ಟೆ ನೋಡಿದ್ದೆ ಯಮನ ಸೋಲು ಮತ್ತೆ ಹ್ರಸ್ವ ಸ್ವರಗಳು ಸ್ಪೂಫ್‌ಗಳನ್ನ.. ತುಂಬನೇ ಚೆನ್ನಾಗಿದೆ ಮಗ…

  4. 4 Pramod February 16, 2009 at 7:17 am

    @Sathya, @Sandeep, @Gautham
    ಧನ್ಯವಾದಗಳು ಸರ್ :)

  5. 5 ಪ್ರದೀಪ್ February 18, 2009 at 4:47 am

    ಕ್ರೈಂ ಬೇಟೆ ಸೂಪರ್ ಕಣ್ರೀ! … ಸೂಪರ್ :-D
    ತಿಳಿಸಿದ್ದಿಕ್ಕೆ ತುಂಬಾ ಧನ್ಯವಾದಗಳು ಸಾರ್! :-D

  6. 6 ಪ್ರದೀಪ್ February 18, 2009 at 5:01 am

    ಹ್ಹಾ ಹ್ಹಾ… :-D :-D :-D :-D :-D :-D
    ಯಮನ ಸೋಲು ಇನ್ನೂ ಸೂಪರ್ ಕಣ್ರೀ…. ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದವ್ರಿಗೆ ಅಭಿನಂದನೆಗಳು, ಹಾಗೇ ನಿಮಗೂ…..

  7. 8 ವಿಜಯರಾಜ್ ಕನ್ನಂತ March 10, 2009 at 11:47 am

    superr aagittu…. :)
    share Maadiddakke dhanyavaada

  8. 9 Pramod March 10, 2009 at 12:16 pm

    @Pradeep, @Mahesh, @Vijay
    Thanks ri :)

  9. 10 incognito March 20, 2009 at 2:15 pm

    yenu posts illa ee naduve?


Leave a Reply




 

February 2009
M T W T F S S
« Jan   May »
 1
2345678
9101112131415
16171819202122
232425262728  

My Twitter

Blog stats

  • 6,883 hits

My Flickr

IMG_2714

IMG_2694

IMG_2673

More Photos

My Delicious