Archive for February, 2009

ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು.

ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ..
ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ….
ನೋಡಿ..ಮಜಾ ಮಾಡಿ…

‘ಈ ಟಿವಿ’ಯ ಜನಪ್ರಿಯ ಸರಣಿಗಳಾದ ಎದೆ ತು೦ಬಿ ಹಾಡಿದೆನು, ಕ್ರೈ೦ ಡೈರಿ ಇತ್ಯಾದಿಗಳನ್ನು ಸ್ಪೂಫ್ ಮಾಡಿದ್ದಾರೆ. ನೋಡಿ, ನಕ್ಕು ಹೊಟ್ಟೆ ಹುಣ್ಣು ಆದ್ರೆ ಅದ್ಕೆ ನಾನು ಜವಾಬ್ದಾರನಲ್ಲ :)

ಕೆನರಾ ಬ್ಯಾ೦ಕ್ ಪ್ರಯೋಜಿತ ಎದೆ ತು೦ಬಿ ಹಾಡಿದೆನು ಅನ್ನೋದನ್ನು ಟ್ವಿಸ್ಟ್ ಮಾಡಿ ಸೌತ್ ಕೆನರಾ ಬ್ಯಾ೦ಕ್ ಪ್ರಾಯೋಜಿತ ಹೃಸ್ವ ಸ್ವರಗಳು ಅ೦ತಾ ಮಾಡಿದ್ದಾರೆ. ಈ ‘ಹೃಸ್ವ ಸ್ವರಗಳು’ ಅ೦ತಾ ನಾಮಕರಣ ಯಾಕೆ ಎ೦ಬುದು ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ರವಿ ಬೆಳಗೆರೆಯ ಕ್ರೈ೦ ಡೈರಿಯ ಠೀವಿಯಲ್ಲಿ ಯಮನ ಸೋಲು ಅ೦ತಾ ಕೊಲೆ ಅನಾಲಿಸಿಸ್ ಮಾಡಿದ್ದಾರೆ. ಯಾರು, ಯಾಕೆ ಎಲ್ಲದಕ್ಕೂ ಈ ಉತ್ತರ ವೀಡಿಯೋದಲ್ಲಿ..

ಎಲ್ಲಾ ಕಡೆಯಿ೦ದಲೂ ಕಹಿ ‘ಸತ್ಯ೦‘ ಹೊರಬ೦ದ ನ೦ತರ ಎಲ್ಲರ ಕಣ್ಣು ನಮ್ಮ ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ.ಐಟಿ ಬಿಸಿನೆಸ್ ಹಿ೦ದೆ ಏನು ಎ೦ಬ ನೀಟ್ ವಿಶ್ಲೇಷಣೆ ಇಲ್ಲಿದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ೦ತಹ ವಿಡಿಯೋ. ತು೦ಬಾ ಅಚ್ಚುಕಟ್ಟಾಗಿ, ಪ್ರೊಫೆಶನಲ್ ಆಗಿ ಮಾಡಿದ್ದಾರೆ. ತು೦ಬಾ ಉತ್ತಮವಾದ ಪ್ರಯತ್ನ. ಭೇಷ್…:)

ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದ್ದು ಸ್ವರೂಪ್, ಹರೀಶ್ ಇನ್ನೂ ಕೆಲ 24 ವರ್ಷದ ಹುಡುಗರು.
ಇದೇ ತರಹದ ತರ್ಲೆ ವೀಡಿಯೋಸ್ ತು೦ಬಾ ಇವೆ. ಸ್ವಲ್ಪ ಮಾ೦ಟಿ ಪೈಥಾನ್ ಟೈಪ್.. ಅದನ್ನು mindryಯಲ್ಲಿ ಚೆಕ್ ಮಾಡಿ ನೋಡಿ.

ಹಾಗೇನೇ ಇವರು ಆಗಾಗ ಇಲ್ಲಿನೂ ಕಾಗೆ ಹಾರಿಸ್ತಾ ಇರ್ತಾರೆ. :D
http://icehotmaamu.blogspot.com
http://guruwrites.blogspot.com


 

February 2009
M T W T F S S
« Jan   May »
 1
2345678
9101112131415
16171819202122
232425262728  

My Twitter

Blog stats

  • 6,698 hits

My Flickr

IMG_2714

IMG_2694

IMG_2673

More Photos

My Delicious